ಗುರುವಾರ , ಏಪ್ರಿಲ್ 9, 2020
19 °C
ಫಟಾಫಟ್‌

ಹೋರಿಗೂ ಡಯಟ್‌ ಮುಖ್ಯ!

ಯತೀಶ್‌ ಕುಮಾರ್‌ ಎಸ್‌.ಕೆ. Updated:

ಅಕ್ಷರ ಗಾತ್ರ : | |

* ಈ ಬಾರಿಯ ಬೆಂಗಳೂರು ಕೃಷಿಮೇಳಕ್ಕೆ ಬಂದವರು ‘ಪರಮೇಶ್ವರ’ನೇ ಸ್ಟ್ರಾಂಗು ಗುರು ಎನ್ನುತ್ತಿದ್ದರು...!

ದೇಶಿ ತಳಿ ಅಭಿವೃದ್ಧಿ ಮಾಡಬೇಕೆಂಬುದು ನಮ್ಮ ಉದ್ದೇಶ. ಹಾಗಾಗಿ, ಗುಜರಾತ್‌ನಿಂದ ಎರಡು ವರ್ಷಗಳ ಹಿಂದೆ ₹ 24 ಲಕ್ಷ ಕೊಟ್ಟು ಗಿರ್‌ ತಳಿಯ ಈ ‘ಪರಮೇಶ್ವರ’ ಹೋರಿಯನ್ನು ತಂದಿದ್ದೇನೆ. ಇದರ ವೀರ್ಯಕ್ಕೆ ತುಂಬಾ ಬೇಡಿಕೆ ಇದೆ. ಒಂದು ಸ್ಟ್ರಾ ವೀರ್ಯಕ್ಕೆ (6 ಎಂ.ಎಲ್.) ₹1,200 ನಿಗದಿ ಮಾಡಿದ್ದೇವೆ. ಗ್ರಾಹಕರು ಕನಿಷ್ಠ 10 ಸ್ಟ್ರಾಗಳಷ್ಟು ವೀರ್ಯವನ್ನು ಖರೀದಿಸಲೇಬೇಕಾಗುತ್ತದೆ. 

* ಪರಮೇಶ್ವರನ ‘ಪವರ್‌’ ರಹಸ್ಯವೇನು?

ನೈಸರ್ಗಿಕವಾಗಿಯೇ ಇದು ಬಲಿಷ್ಠವಾದ ತಳಿ. ದಿನಕ್ಕೆ 100 ಕೆ.ಜಿ. ಆಹಾರ, 60 ಲೀಟರ್‌ ನೀರು ಕೊಡುತ್ತೇವೆ. ಜೊತೆಗೆ ಎರಡು ಕೆ.ಜಿ. ಬೆಲ್ಲ ನೀಡುತ್ತೇವೆ. ಒಂದು ಬಾರಿಗೆ ಸುಮಾರು 60 ಕೆ.ಜಿ.ಯಷ್ಟು ಆಹಾರವನ್ನು ಇದು ಸೇವಿಸುತ್ತದೆ. ತಿಂಗಳಿಗೆ ₹ 80,000 ಇದಕ್ಕೇ ಖರ್ಚಾಗುತ್ತದೆ. ಇದರ ಜೊತೆಗೆ 90 ಹಸುಗಳನ್ನೂ ನಾವು ಸಾಕಿದ್ದೇವೆ. ಅವುಗಳ ಜೊತೆಗೆ ಸಹಜ ಲೈಂಗಿಕ ಕ್ರಿಯೆಯಲ್ಲಿಯೂ ಪರಮೇಶ್ವರ ತೊಡಗುತ್ತಾನೆ.

* ಇಷ್ಟೊಂದು ತಿಂದರೆ ಅವನಿಗೆ ಬೊಜ್ಜು ಬರುವುದಿಲ್ಲವೇ? ನಿರಂತರವಾಗಿ ಅದೇ ‘ಸಾಮರ್ಥ್ಯ’ ಕಾಯ್ದುಕೊಳ್ಳಲು ಸಾಧ್ಯವಾಗುತ್ತದೆಯೇ?

ವರ್ಷಕ್ಕೆ ಸುಮಾರು 4,000 ಸ್ಟ್ರಾನಷ್ಟು ವೀರ್ಯವನ್ನು ಅವನಿಂದ ಸಂಗ್ರಹಿಸುತ್ತೇವೆ. ಹೀಗಿದ್ದಾಗ, ಅವನ ಆರೋಗ್ಯವನ್ನೂ ನಾವು ಕಾಪಾಡಬೇಕಾಗುತ್ತದೆ. ಅವನು ‘ಡುಮ್ಮಣ್ಣ’ ಆಗುತ್ತಿದ್ದಂತೆ ಆಹಾರ ಕಡಿಮೆ ಮಾಡಿಸಿ ಸುಮಾರು 200 ಕೆ.ಜಿ.ಯಷ್ಟು ತೂಕ ಇಳಿಸುತ್ತೇವೆ. ಬೆಳಿಗ್ಗೆ ಮತ್ತು ಸಂಜೆ ಒಂದು ತಾಸು ವಾಯುವಿಹಾರಕ್ಕೆ ಕರೆದುಕೊಂಡು ಹೋಗುತ್ತೇವೆ. ಹೋರಿಗಳಿಗೂ ‘ಡಯಟ್‌’ ಮುಖ್ಯ. 

* ಈ ಹೋರಿಯ ‘ಕ್ವಾಲಿಟಿ’ ಹೇಗಿದೆ?

ಅದರ ‘ಗುಣಮಟ್ಟ’ ಎಂಥದ್ದು ಎಂಬುದಕ್ಕೆ ಭಾರಿ ಬೇಡಿಕೆಯೇ ಸಾಕ್ಷಿ! ಈ ಗುಣಮಟ್ಟವನ್ನು ಕಾಯ್ದುಕೊಳ್ಳುವ ಸಲುವಾಗಿಯೇ ತಿಂಗಳಿಗೆ ಬದಲಾಗಿ, ಎರಡು ತಿಂಗಳಿಗೊಮ್ಮೆ ಅದರಿಂದ ವೀರ್ಯವನ್ನು ಸಂಗ್ರಹಿಸುತ್ತೇವೆ. 

–ಯತೀಶ್‌ ಕುಮಾರ್‌ ಎನ್‌.ಕೆ. , ಮಧುಬನ್‌ ಅರ್ಗ್ಯಾನಿಕ್‌ ಫಾರ್ಮ್‌ ವ್ಯವಸ್ಥಾಪಕ ನಿರ್ದೇಶಕ

ಸಂದರ್ಶನ: ಗುರು ಪಿ.ಎಸ್.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು