ಮಳೆಗಾಲಕ್ಕೆ ಚಿಕನ್‌, ಮಟನ್‌

7

ಮಳೆಗಾಲಕ್ಕೆ ಚಿಕನ್‌, ಮಟನ್‌

Published:
Updated:

ಮುರ್ಗ್ ಅನಾರ್ಕಲಿ

ಬೇಕಾಗುವ ಸಾಮಗ್ರಿಗಳು: ಬೋನ್ ಲೆಸ್ ಚಿಕನ್ 200 ಗ್ರಾಂ, ಗೋಡಂಬಿ, ಕುಂಬಳಕಾಯಿ ಬೀಜ, ಈರುಳ್ಳಿ ಪೇಸ್ಟ್‌ 100 ಗ್ರಾಂ, ಹಾಲು 50 ಎಂ.ಎಲ್., ಅಮೂಲ್ ಕ್ರೀಮ್ 50 ಎಂ.ಎಲ್., ಎಲಕ್ಕಿ 5 ಗ್ರಾಂ, ಕೋವಾ 50 ಗ್ರಾಂ, ದಾಳಿಂಬೆ 50 ಗ್ರಾಂ, ರುಚಿಗೆ ತಕ್ಕಷ್ಟು ಉಪ್ಪು ಖಾರ.

ಮಾಡುವ ವಿಧಾನ: ಬಾಣಲೆಗೆ ಎಣ್ಣೆ ಹಾಕಿ ಬಿಸಿ ಮಾಡಬೇಕು. ಅದಕ್ಕೆ ಶುಂಠಿ ಹಾಗೂ ಬೆಳ್ಳುಳ್ಳಿ ಪೇಸ್ಟ್, ಮೆಣಸಿನ ಕಾಯಿ ಪೇಸ್ಟ್, ಈರುಳ್ಳಿ ಗ್ರೇವಿ, ಗೋಡಂಬಿ ಪೇಸ್ಟ್, ಅಮೂಲ್ ಕ್ರೀಮ್ ಹಾಗೂ ತುಪ್ಪ ಹಾಕಿ ಸ್ಪಲ್ಪ ಸಮಯದ ವರೆಗೆ ಬಿಸಿ ಮಾಡಬೇಕು. ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಬೇಯಿಸಿದ ಚಿಕನ್ ಅನ್ನು ಬಾಣಲೆಗೆ ಹಾಕಿ ಬೆರೆಸಬೇಕು. ಅದಕ್ಕೆ ಕೊಂಚ ಕೋವಾ, ಹಾಲು, ವೈಟ್‌ ಗ್ರೇವಿ, ದಾಳಿಂಬೆ ಹಣ್ಣಿನ ರಸ ಹಾಗೂ ಏಲಕ್ಕಿ ಪುಡಿ ಸೇರಿಸಿ 10 ನಿಮಿಷಗಳ ಕಾಲ ಬಿಸಿ ಮಾಡಬೇಕು. ಅಡುಗೆ ಸಿದ್ಧ. ಅದನ್ನು ತಟ್ಟೆಗೆ ಹಾಕಿದ ಮೇಲೆ ಖಾದ್ಯದ ಮೇಲೆ ದಾಳಿಂಬೆ ಹಾಕಿ ಗಾರ್ನಿಶ್ ಮಾಡಬೇಕು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !