ಭಾರತದ ಮೂಲದಲ್ಲವಾದರೂ ಶತಮಾನಗಳಿಂದ ಚಹಾ ಮತ್ತು ಕಾಫಿ ಭಾರತೀಯರ ಜೀವನದಲ್ಲಿ ಬೆರೆತು ಹೋಗಿವೆ. ಚಹಾ ಮತ್ತು ಕಾಫಿಗಳಿಗಾಗಿಯೇ ಪಾಶ್ಚಾತ್ಯ ಮಾದರಿಯ ಟಿ–ಪಾಯಿಂಟ್ ಮತ್ತು ಕೆಫೆಗಳು ತಲೆ ಎತ್ತುತ್ತಿವೆ. ಇತ್ತೀಚೆಗೆ ಚರ್ಚ್ಸ್ಟ್ರೀಟ್–ಮ್ಯೂಸಿಯಂ ರಸ್ತೆ ಜಕ್ಷಂನ್ನಲ್ಲಿ ‘ಟೀ ವಿಲ್ಲಾ ಕೆಫೆ‘ ಹೊಸ ಸೇರ್ಪಡೆ. ಈ ಹೊಟೆಲ್ನಲ್ಲಿ ದೇಶ, ವಿದೇಶಗಳ ನೂರಕ್ಕೂ ಹೆಚ್ಚು ಬಗೆಯ ಚಹಾ ಮತ್ತು 25ಕ್ಕೂ ಹೆಚ್ಚು ವೈವಿಧ್ಯಮಯ ಕಾಫಿಗಳ ರುಚಿಯನ್ನು ಆಸ್ವಾದಿಸಬಹುದು.

ಎಚ್ಎಸ್ಆರ್ ಲೇ ಔಟ್ ಮತ್ತು ಜಯನಗರದ ನಂತರ ಚರ್ಚ್ಸ್ಟ್ರೀಟ್ನಲ್ಲಿ ಆರಂಭವಾಗಿರುವ ‘ಟೀ ವಿಲ್ಲಾ ಕೆಫೆ’ ಪಕ್ಕಾ ಯುರೋಪಿಯನ್ ಕೆಫೆಗಳ ಶೈಲಿಯಲ್ಲಿಯೇ ವಿನ್ಯಾಸಗೊಂಡಿದೆ. ಒಳ ಹೊಕ್ಕರೆ ಆಕರ್ಷಕ ಲಾಂಜ್, ಅದಕ್ಕೆ ಹೊಂದಿಕೊಂಡಿರುವ ಓಪನ್ ಕಿಚನ್ ಕಾಣುತ್ತದೆ.

ಒಂದೇ ಸೂರಿನ ಅಡಿ ಪಕ್ಕಾ ದೇಶಿ ಚಹಾಗಳದಿಂದ ವಿದೇಶಿ ಬ್ರಾಂಡ್ಗಳನ್ನೂ ಸವಿಯುವ ಜತೆಗೆ ಮೆಕ್ಸಿಕನ್, ಇಟಾಲಿಯನ್, ಥಾಯ್, ಲೆಬನೀಸ್, ಏಷ್ಯನ್, ಚೈನೀಸ್, ಮೆಡಿಟೇರಿಯನ್, ಬರ್ಮೀಸ್, ಉತ್ತರ ಭಾರತೀಯ ಮತ್ತು ಜೈನ್ ಸಂಸ್ಕೃತಿಯ ಆಹಾರದ ರುಚಿಯನ್ನೂ ಸವಿಯಬಹುದು.

ಹತ್ತಾರು ಬಗೆಯ ದೇಶಿ, ವಿದೇಶಿ ಚಹಾ

ಶ್ರೀಲಂಕಾ, ಬರ್ಮಾ, ಮೊರಕ್ಕೊ, ಚೀನಾ, ಲೆಬನಾನ್ ಚಹಾದಿಂದ ಹಿಡಿದು ಕಾಶ್ಮೀರದ ಕೇಸರಿ, ಹೈದರಾಬಾದ್ನ ಸುಲೇಮಾನ್ ಮಸಾಲಾ, ಹರ್ಬಲ್, ಗ್ರೀನ್, ಲೆಮನ್, ಬ್ಲ್ಯಾಕ್, ಪುದಿನಾ, ಶುಂಠಿ ಹೀಗೆ ಹೀಗೆ ಹತ್ತಾರು ಬಗೆಯದೇಶಿ ಮತ್ತು ವಿದೇಶಿ ಸ್ವಾದದ ಚಹಾ ಇಲ್ಲಿ ಸಿಗುತ್ತವೆ.

ಮೆನು ನೋಡಿದರೆ ಚಿತ್ರವಿಚಿತ್ರವಾದ ಮತ್ತು ಅಪರಿಚಿತವಾದ ಚಹಾ ಮತ್ತು ಕಾಫಿ ಹೆಸರು ಕಾಣುತ್ತವೆ. ನಾವು ನಿತ್ಯ ಕುಡಿಯುವ ಚಹಾ, ಕಾಫಿಯಲ್ಲಿ ಇಷ್ಟೊಂದು ಬಗೆಗಳಿವೆಯಾ! ಎಂದೆನ್ನಿಸದಿರದು.

ಸದ್ಯಕ್ಕೆ 64 ಬಗೆಯ ಚಹಾ ಮತ್ತು 25 ತರಹದ ಕಾಫಿ ಲಭ್ಯ. ಇನ್ನೂ ಕೆಲವು ಋತುಮಾನಗಳಿಗೆ ಅನುಗುಣವಾಗಿ ದೊರೆಯುತ್ತವೆ. ಜೇನು, ಐಸ್ ಕ್ರೀಂ, ಕೇಸರಿ, ಮಸಾಲೆ, ಹೂಗಳ ಪರಿಮಳ ಬೆರೆಸಿದ ಚಹಾ ಕುಡಿಯುವುದು ಇನ್ನೂ ಆಹ್ಲಾದಕರವಾಗಿರುತ್ತದೆ.ಶ್ರೀಲಂಕಾ, ಅಸ್ಸಾಂ, ಅರುಣಾಚಲ ಪ್ರದೇಶ, ನೀಲಗಿರಿ ಚಹಾ ತೋಟಗಳಲ್ಲಿ ಬೆಳೆಯುವ ಗೋಲ್ಡನ್ ನೀಡಲ್ಸ್ ತಳಿಯ ಚಿನ್ನದಂಥ ಬಣ್ಣದ ಚಿಗುರು ಅತ್ಯುತ್ತಮ ಸುವಾಸನೆ ಹೊಂದಿದ್ದು ಇವುಗಳಿಂದ ತಯಾರಿಸಿದ ಚಹಾ ಅತ್ಯಂತ ದುಬಾರಿ.

ಇಲ್ಲಿ ₹65 ನಿಂದ ₹450 ವರೆಗಿನ ದುಬಾರಿ ಟೀ, ಕಾಫಿ ಕೂಡ ಲಭ್ಯ. ಕಪ್, ಮಗ್ ಮತ್ತು ಪಾಟ್ಗಳಲ್ಲಿ ಸರ್ವ್ ಮಾಡಲಾಗುತ್ತದೆ. ಆಯ್ಕೆ ನಿಮಗೆ ಬಿಟ್ಟಿದ್ದು.ಚಹಾ ಮತ್ತು ಕಾಫಿ ಮಾಡಲು ಮಷಿನ್ ಬಳಸುವುದಿಲ್ಲ. ಆರ್ಡರ್ ನೀಡಿದ ಬಳಿಕವಷ್ಟೇ ತಾಜಾ ಚಹಾ, ಕಾಫಿ ರೆಡಿ ಮಾಡಿಕೊಡುವುದು ಇಲ್ಲಿನ ವಿಶೇಷ.

ಚಿಗುರು ಎಲೆಯಲ್ಲಿದೆ ನೈಜ ಆಸ್ವಾದ

ತಾಜಾ ಚಹಾ ಸವಿಯುವ ಮಜವೇ ಬೇರೆ. ಚಹಾದ ಸ್ವಾದ ಇರುವುದೇ ಎಲೆ ಚಿಗುರುಗಳಲ್ಲಿ. ಹಾಲು ಬೆರೆಸಿ ಕುಡಿದರೆ ಚಹಾದ ಸ್ವಾದ ಹೊರಟು ಹೋಗುತ್ತದೆ ಎನ್ನುವುದು ಕೆಫೆಯ ಮಾಲೀಕ ಕಿರಣ್ ಕುಮಾರ್ ಜೈನ್ ವಾದ.

ಇಟಲಿ, ಬ್ರೇಜಿಲ್ ಕಾಫಿಗಳಲ್ಲದೇ ಚಾರ್ಕೋಲ್ ಲಾತೆ ನಮ್ಮ ಕೆಫೆಯ ಸಿಗ್ನೇಚರ್ ಕಾಫಿ. ಇದು ದೇಹದಲ್ಲಿನ ವಿಷಕಾರಿ ಅಂಶಗಳನ್ನು ತೆಗೆದು, ಜೀವಕೋಶಗಳಲ್ಲಿ ಹೊಸ ಚೈತನ್ಯ ತುಂಬುತ್ತದೆ. ಕಾಶ್ಮೀರಿ ಶುದ್ಧ ಕೇಸರಿ ಬೆರೆಸಿದ ಕೇಸರ್ ಟೀ ಕೂಡ ನಮ್ಮ ವಿಶೇಷತೆ ಎನ್ನುತ್ತಾರೆ.

ಮಲ್ಟಿಕ್ಯುಸಿನ್ ಕೆಪೆಯಲ್ಲಿ ಬಗೆ, ಬಗೆಯ ತಿಂಡಿ ಮತ್ತು ಪಾನೀಯ ಸಿದ್ಧಪಡಿಸಲು ನುರಿತ 16 ಬಾಣಸಿಗರು ಇದ್ದಾರೆ. ಹುಕ್ಕಾ ಮತ್ತು ಧೂಮಪಾನಕ್ಕೆ ಅವಕಾಶ ನೀಡದ ಕಾರಣ ಗ್ರಾಹಕರು ಕುಟುಂಬ ಸಮೇತ ಒಳ್ಳೆಯ ಸಮಯ ಕಳೆಯಲು ಇಲ್ಲಿಗೆ ಬರುತ್ತಾರೆ ಎನ್ನುವುದು ಜೈನ್ ವಾದ.

ಬೆಂಗಳೂರಿಗರಿಂದ ಒಳ್ಳೆಯ ಸ್ಪಂದನೆ ದೊರೆತಿದೆ. ಚರ್ಚ್ಸ್ಟ್ರೀಟ್ನಲ್ಲಿರುವ ಕೆಲವೇ ಕೆಲವು ಸಸ್ಯಾಹಾರಿ ಹೋಟೆಲ್ಗಳಲ್ಲಿ ಇದೂ ಒಂದು. ಮುಂದಿನ ದಿನಗಳಲ್ಲಿ ಬೆಂಗಳೂರಿನ ಹಲವೆಡೆ ಹೋಟೆಲ್ ಆರಂಭಿಸಿ ಜನರಿಗೆ ಮತ್ತಷ್ಟು ಬಗೆಯ ಚಹಾ ಮತ್ತು ಕಾಫಿ ಪರಿಚಯಿಸುವ ಉದ್ದೇಶವಿದೆ. ಹಲವು ಬಗೆಯ ಚಹಾ, ಕಾಫಿ ಕುಡಿಯುವುದಕ್ಕಾಗಿಯೇ ಜನರು ನಮ್ಮ ಹೋಟೆಲ್ಗೆ ಬರವಂತಾಗಬೇಕು’ ಎಂದು ಕಿರಣ್ ಕುಮಾರ್ ‘ಮೆಟ್ರೊ’ ಜತೆ ತಮ್ಮ ಕನಸು ಹಂಚಿಕೊಂಡರು.

ಹೊಸ ಉದ್ಯೋಗ

ಔಷಧ ವ್ಯಾಪಾರ ಮಾಡುತ್ತಿದ್ದ ಕುಟುಂಬದಿಂದ ಬಂದಿರುವ ಕಿರಣ್ ಕುಮಾರ್ ಜೈನ್ ಅವರಿಗೆ ಹೋಟೆಲ್ ಉದ್ಯೋಗ ಹೊಸತು. ಎಂಬಿಎ ಮತ್ತು ಪಿಎಚ್.ಡಿ ಪದವೀಧರರಾಗಿರುವ ಅವರುಹತ್ತು ವರ್ಷ ಬಹುರಾಷ್ಟ್ರೀಯ ಕಂಪನಿಯೊಂದರ ಕಾರ್ಯಾಚಾರಣೆ ವಿಭಾಗದ ಮುಖ್ಯಸ್ಥರಾಗಿ ಕೆಲಸ ಮಾಡಿದ್ದಾರೆ.

ಅಲ್ಲಿಂದ ಹೊರಬಂದು ಸ್ವಂತ ಉದ್ಯಮ ಆರಂಭಿಸಬೇಕು ಎಂದಾಗ ಅವರ ಮುಂದೆ ಇದ್ದದ್ದು ಎರಡು ಆಯ್ಕೆ. ಮೊದಲನೆಯದು ಹೈನುಗಾರಿಕೆ (ಡೇರಿ) ಮತ್ತು ಎರಡನೆಯದು ಹೋಟೆಲ್. ಎರಡೂ ಗೊತ್ತಿಲ್ಲದ ಕ್ಷೇತ್ರಗಳೇ. ಖಾದ್ಯ ಮತ್ತು ಪೇಯಗಳ ಬಗ್ಗೆ ಮೊದಲಿನಿಂದಲೂ ಆಸಕ್ತಿ ಹೊಂದಿದ್ದ ಅವರು ಹೋಟೆಲ್ ಉದ್ಯಮ ಆಯ್ಕೆ ಮಾಡಿಕೊಂಡರು. ಮುಂಬೈ ಮೂಲದ ಟೀ ವಿಲ್ಲಾ ಕೆಫೆಯ ಕರ್ನಾಟಕದ ಫ್ರಾಂಚೈಸಿ ಪಡೆದುಒಂದು ವರ್ಷದಲ್ಲಿ ಮೂರು ಕೆಫೆ ಆರಂಭಿಸಿದ್ದಾರೆ.

ಸಂಪರ್ಕ: 7676344244 /kiran98861@gmail.com

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.