ಬಿಸಿಲಿನ ಬೇಗೆ ತಣಿಸುವ ಹಣ್ಣಿನ ರಸಗಳು

ಬುಧವಾರ, ಏಪ್ರಿಲ್ 24, 2019
22 °C

ಬಿಸಿಲಿನ ಬೇಗೆ ತಣಿಸುವ ಹಣ್ಣಿನ ರಸಗಳು

Published:
Updated:
Prajavani

ಸೌತೆಕಾಯಿ ಜ್ಯೂಸ್

ಬೇಕಾಗುವ ಸಾಮಗ್ರಿಗಳು:

ಹಸಿರು/ಇಂಗ್ಲಿಷ್ ಸೌತೆಕಾಯಿ – 2

ನೀರು – 2 ಕಪ್,  

ಪುದೀನ – ಸ್ವಲ್ಪ

ನಿಂಬೆರಸ – 1 ಟೇಬಲ್ ಚಮಚ

ಸಕ್ಕರೆ – 3 ಟೇಬಲ್ ಚಮಚ

ಉಪ್ಪು – 1/4 ಟೀ ಚಮಚ

ಕಾಳು ಮೆಣಸಿನಪುಡಿ – 1/4 ಟೀ ಚಮಚ

ಐಸ್ ಕ್ಯೂಬ್ – ಸ್ವಲ್ಪ.

ತಯಾರಿಸುವ ವಿಧಾನ: ಸೌತೆಕಾಯಿಯ ಸಿಪ್ಪೆಯನ್ನು ತೆಗೆದು ಚಿಕ್ಕದಾಗಿ ಕತ್ತರಿಸಿ ಮಿಕ್ಸಿ ಜಾರಿಗೆ ಹಾಕಿ. ಜೊತೆಗೆ ಸಕ್ಕರೆ, ಪುದೀನ, ಕಾಳು ಮೆಣಸಿನ ಪುಡಿ, ಉಪ್ಪು ಮತ್ತು ನಿಂಬೆರಸ ಸೇರಿಸಿ ನುಣ್ಣಗೆ ರುಬ್ಬಿಕೊಳ್ಳಿ. ರುಬ್ಬಿದ ಮಿಶ್ರಣಕ್ಕೆ ನೀರನ್ನು ಸೇರಿಸಿ ಮತ್ತೊಂದು ಸುತ್ತು ರುಬ್ಬಿ. ನಂತರ ಸರ್ವಿಂಗ್ ಗ್ಲಾಸಿನಲ್ಲಿ ಐಸ್ ಕ್ಯೂಬ್ ಸೇರಿಸಿ ಸರ್ವ್ ಮಾಡಿ. ಐಸ್ ಕ್ಯೂಬ್ ಬೇಕಿದ್ದರೆ ಹಾಕಬಹುದು ಇಲ್ಲವಾದರೆ ಹಾಗೇಯೇ ಕುಡಿಯಬಹುದು. ತುಂಬಾ ಆರೋಗ್ಯಕರವಾದ ಮತ್ತು ರುಚಿಕರವಾದ ಸೌತೆಕಾಯಿ ಜ್ಯೂಸ್ ತಯಾರಿಸಿ ಸವಿಯಿರಿ. ಇದು ಅಸಿಡಿಟಿಯಿಂದ ಬಳಲುವವರಿಗೆ, ಮಧುಮೇಹದವರಿಗೆ, ನಿಶಕ್ತಿಯಿಂದ ಬಳಲುತ್ತಿರುವವರಿಗೆ ತುಂಬಾ ಪ್ರಯೋಜನಕಾರಿ.

ಎಳನೀರಿನ ಜ್ಯೂಸ್

ಬೇಕಾಗುವ ಸಾಮಗ್ರಿಗಳು:

ಎಳನೀರು – ಎರಡು

ಸಕ್ಕರೆ  – ರುಚಿಗೆ ತಕ್ಕಷ್ಟು

ಶುಂಠಿ – 1 ಇಂಚು

ಪುದೀನ ಸೊಪ್ಪು – ಸ್ವಲ್ಪ

ನಿಂಬೆರಸ – 1 ಟೀ ಚಮಚ

ತಯಾರಿಸುವ ವಿಧಾನ: ಎಳನೀರನ್ನು ಪಾತ್ರೆಯಲ್ಲಿ ತೆಗೆದು ಅದರ ತಿರುಳನ್ನು ಮಿಕ್ಸಿಯಲ್ಲಿ ಹಾಕಿ. ಅದರೊಂದಿಗೆ ಚಿಕ್ಕದಾಗಿ ಕತ್ತರಿಸಿದ ಶುಂಠಿ, ಸಕ್ಕರೆ ಮತ್ತು ಪುದೀನ ಸೊಪ್ಪನ್ನು ಹಾಕಿ ಪೇಸ್ಟ್ ಮಾಡಿಕೊಳ್ಳಿ. ಈ ಮಿಶ್ರಣಕ್ಕೆ ಎಳನೀರು ಹಾಕಿ ಒಂದು ಬಾರಿ ಮಿಕ್ಸಿಯಲ್ಲಿ ರುಬ್ಬಿಕೊಳ್ಳಿ. ನಿಂಬೆರಸ ಸೇರಿಸಿ. ನಂತರ ಗ್ಲಾಸ್‌ಗೆ ಹಾಕಿ ಪುದೀನ ಸೊಪ್ಪಿನಿಂದ ಅಲಂಕರಿಸಿ. ರುಚಿಯಾದ ಮತ್ತು ಆರೋಗ್ಯಕರವಾದ ಎಳನೀರು ಜ್ಯೂಸ್ ಸವಿಯಿರಿ.

ಕಲ್ಲಂಗಡಿ ಹಣ್ಣಿನ  ಮಸಾಲೆ ಜ್ಯೂಸ್

ಬೇಕಾಗುವ ಸಾಮಗ್ರಿಗಳು:

ಒಂದು ಹಣ್ಣಿನ ಅರ್ಧ ಭಾಗ

ಸಕ್ಕರೆ – ರುಚಿಗೆ

ಕಾಳುಮೆಣಸಿನ ಪುಡಿ – 1/4 ಟೀ ಚಮಚ

ಜೀರಿಗೆ ಪುಡಿ – 1/2 ಟೀ ಚಮಚ

ಚಾಟ್ ಮಸಾಲೆ – 1/4 ಟೀ ಚಮಚ

ಏಲಕ್ಕಿ – 2

ಉಪ್ಪು – ಚಿಟಿಕೆ 

ತಯಾರಿಸುವ ವಿಧಾನ: ಮೊದಲು ಹಣ್ಣಿನಲ್ಲಿರುವ ಬೀಜವನ್ನು ತೆಗೆದುಕೊಳ್ಳಿ. ಸಕ್ಕರೆಯನ್ನು ಪುಡಿ ಮಾಡಿಕೊಳ್ಳಿ. ಮಿಕ್ಸಿಯಲ್ಲಿ ಕಲ್ಲಂಗಡಿ ಹಣ್ಣು, ಸಕ್ಕರೆ ಮತ್ತು ಮಸಾಲ ಪದಾರ್ಥಗಳನ್ನು ಹಾಕಿ ನುಣ್ಣಗೆ ರುಬ್ಬಿಕೊಳ್ಳಿ. ನಂತರ ಒಂದು ಜ್ಯೂಸ್ ಗ್ಲಾಸ್‌ಗೆ ಹಾಕಿ ಸವಿಯಿರಿ. ಬೇಕಿದ್ದರೆ ಐಸ್ ಕ್ಯೂಬ್ ಹಾಕಿಕೊಳ್ಳಬಹುದು. ಇದು ಬೇಸಿಗೆಯಲ್ಲಿ ದಾಹವನ್ನು ತಣಿಸುತ್ತದೆ.

ಅನಾನಸ್ ಹಣ್ಣಿನ ಜ್ಯೂಸ್‌

ಬೇಕಾಗುವ ಸಾಮಗ್ರಿಗಳು:

ಚಿಕ್ಕದಾಗಿ ಕತ್ತರಿಸಿದ ಅನಾನಸ್ ಹಣ್ಣು – 1 ಕಪ್.

ಜೇನುತುಪ್ಪ ಅಥವಾ ಸಕ್ಕರೆ – 2-3 ಟೇಬಲ್ ಚಮಚ

ನಿಂಬೆರಸ – 1 ಟೇಬಲ್ ಚಮಚ

ಶುಂಠಿ – ಒಂದಿಂಚು

ಐಸ್‌ಕ್ಯೂಬ್ – ಸ್ವಲ್ಪ

ನೀರು – 1 ಕಪ್

ತಯಾರಿಸುವ ವಿಧಾನ: ಮಿಕ್ಸಿಯಲ್ಲಿ ಅನಾನಸ್ ಹಣ್ಣು, ಜೇನುತುಪ್ಪ, ನಿಂಬೆರಸ, ಶುಂಠಿ ಇವುಗಳನ್ನು ಹಾಕಿ ನುಣ್ಣಗೆ ರುಬ್ಬಿಕೊಳ್ಳಿ. ನಂತರ ಸೋಸಿಕೊಳ್ಳಿ. ಈ ಮಿಶ್ರಣಕ್ಕೆ ಒಂದು ಕಪ್ ನೀರನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ಸರ್ವಿಂಗ್ ಗ್ಲಾಸಿಗೆ ಐಸ್ ಕ್ಯೂಬ್ ಅನ್ನು ಹಾಕಿ ತಯಾರಿಸಿದ ಜ್ಯೂಸ್ ಅನ್ನು ಹಾಕಿ ಸವಿಯಿರಿ. ಇಲ್ಲಿ ಡಯಟ್ ಮಾಡುವವರು ಜೇನುತುಪ್ಪ ಹಾಕಿ ಕೊಳ್ಳಿ. ಇಲ್ಲವಾದರೆ ಸಕ್ಕರೆ ಬಳಸಬಹುದು.

ನಿಂಬೆ ಶುಂಠಿ ಜ್ಯೂಸ್

ಬೇಕಾಗುವ ಸಾಮಗ್ರಿಗಳು:

ಅರ್ಧ ನಿಂಬೆಹಣ್ಣಿನ ರಸ

ನೀರು – 1ಕಪ್‌

ಸಕ್ಕರೆ – 2 ಟೇಬಲ್ ಚಮಚ 

ಶುಂಠಿ – ಒಂದಿಂಚು.

ಚಾಟ್ ಮಸಾಲೆ ಪೌಡರ್ – 1/2 ಚಮಚ

ಐಸ್‌ಕ್ಯೂಬ್‌ – ಸ್ವಲ್ಪ

ತಯಾರಿಸುವ ವಿಧಾನ: ಮಿಕ್ಸಿಯಲ್ಲಿ ನಿಂಬೆರಸ, ನೀರು, ಸಕ್ಕರೆ, ಹಸಿಶುಂಠಿ ಎಲ್ಲವನ್ನೂ ಹಾಕಿ ಒಂದೆರಡು ನಿಮಿಷಗಳ ಕಾಲ ರುಬ್ಬಿಕೊಳ್ಳಿ. ಈ ಮಿಶ್ರಣವನ್ನು ಸೋಸಿಕೊಂಡ ನಂತರ ಅರ್ಧ ಚಮಚ ಚಾಟ್ ಮಸಾಲೆ ಪೌಡರ್ ಹಾಕಿ ಮಿಶ್ರಣ ಮಾಡಿ. 
ಒಂದು ಗ್ಲಾಸಿನಲ್ಲಿ ಐಸ್‌ಕ್ಯೂಬ್ ಹಾಕಿ ನಿಂಬೆ ಶುಂಠಿ ಜ್ಯೂಸನ್ನು ಸೇರಿಸಿ. ರುಚಿಯಾದ ಮತ್ತು ದೇಹಕ್ಕೆ ಹಿತವಾದ ನಿಂಬೆ ಶುಂಠಿ ಜ್ಯೂಸ್ ಸವಿಯಿರಿ.

ಬರಹ ಇಷ್ಟವಾಯಿತೆ?

 • 6

  Happy
 • 2

  Amused
 • 1

  Sad
 • 0

  Frustrated
 • 0

  Angry

Comments:

0 comments

Write the first review for this !