ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರಸ್ವತಿ ಪೂಜೆಗೆ ಸಬ್ಬಕ್ಕಿ ಹೆಸರುಬೇಳೆ ಖೀರು, ಕಜ್ಜಾಯ

Last Updated 8 ಅಕ್ಟೋಬರ್ 2021, 19:30 IST
ಅಕ್ಷರ ಗಾತ್ರ

ಸಬ್ಬಕ್ಕಿ ಹೆಸರುಬೇಳೆ ಖೀರು

ಬೇಕಾಗುವ ಸಾಮಗ್ರಿಗಳು: ಹೆಸರುಬೇಳೆ – 1ಕಪ್‌, ಸಬ್ಬಕ್ಕಿ – 1ಕಪ್‌, ಬೆಲ್ಲ – 2 ಕಪ್‌, ಒಣದ್ರಾಕ್ಷಿ – 20 ರಿಂದ 30, ಗೋಡಂಬಿ – 15, ಬಾದಾಮಿ – 15, ಏಲಕ್ಕಿ – 4 (ಕುಟ್ಟಿ ಪುಡಿ ಮಾಡಿದ್ದು), ತುಪ್ಪ– 2 ಟೇಬಲ್ ಚಮಚ
ತಯಾರಿಸುವ ವಿಧಾನ: ಸಬ್ಬಕ್ಕಿಯನ್ನು ಅರ್ಧ ಗಂಟೆಗಳ ಕಾಲ ನೆನೆಸಿಡಿ. ನಂತರ ಹೆಸರುಬೇಳೆ ತೊಳೆದು ಇರಿಸಿಕೊಳ್ಳಿ. ಈಗ ಸ್ಟವ್‌ ಮೇಲೆ ಕುಕರ್‌ ಇರಿಸಿ ಅದಕ್ಕೆ ತುಪ್ಪ ಹಾಕಿ. ಅದಕ್ಕೆ ಹೆಸರುಬೇಳೆ ಹಾಕಿ ಕೆಂಬಣ್ಣ ಬರುವವರೆಗೂ ಹುರಿದುಕೊಳ್ಳಿ. ಇದಕ್ಕೆ 7ಕಪ್‌ ನೀರು ಸೇರಿಸಿ. ನಂತರ ಅದಕ್ಕೆ ನೆನೆದ ಸಬ್ಬಕ್ಕಿ ಹಾಕಿ 4 ವಿಷಲ್ ಕೂಗಿಸಿ. ಈಗ ಪಾತ್ರೆಯೊಂದಕ್ಕೆ ಬೆಲ್ಲ ಹಾಕಿ 1 ಕಪ್ ನೀರು ಹಾಕಿ ಕರಗಿಸಿ ಶೋಧಿಸಿಕೊಳ್ಳಿ. ಈಗ ಕುಕರ್‌ಗೆ 4 ಕಪ್ ಹಾಲು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ ಕುದಿಸಿ. ಅದಕ್ಕೆ ಬೆಲ್ಲ ಕರಗಿಸಿದ ನೀರು ಹಾಕಿ ಕುದಿಸಿ. ಈಗ ಸ್ಟವ್ ಆರಿಸಿ ಅದಕ್ಕೆ ಏಲಕ್ಕಿ ಪುಡಿ ಸೇರಿಸಿ ಮಿಶ್ರಣ ಮಾಡಿ. ಈಗ ತುಪ್ಪದಲ್ಲಿ ಒಣಹಣ್ಣುಗಳನ್ನು ಹುರಿದು ಪಾಯಸಕ್ಕೆ ಸೇರಿಸಿ. ಈಗ ನಿಮ್ಮ ಮುಂದೆ ದೇವರ ನೈವೇದ್ಯಕ್ಕೆ ಇರಿಸುವ ಸಬ್ಬಕ್ಕಿ ಹೆಸರುಬೇಳೆ ಪಾಯಸ ರೆಡಿ.

ಕಜ್ಜಾಯ

ಬೇಕಾಗುವ ಸಾಮಗ್ರಿಗಳು: ಎಳ್ಳು – 2 ಚಮಚ, ಗಸೆಗಸೆ – 2 ಚಮಚ, ಏಲಕ್ಕಿ – 4, ಅಕ್ಕಿ – 1ಕಪ್‌, ಬೆಲ್ಲ – ಮುಕ್ಕಾಲು ಕಪ್‌, ನೀರು, ತುಪ್ಪ– 1 ಚಮಚ, ಎಣ್ಣೆ – ಕರಿಯಲು
ತಯಾರಿಸುವ ವಿಧಾನ: ಅಕ್ಕಿಯನ್ನು ಚೆನ್ನಾಗಿ ತೊಳೆದು ಒಂದೂವರೆ ದಿನ ನೆನೆಸಬೇಕು. ಒಂದೂವರೆ ದಿನದಲ್ಲಿ 3 ಬಾರಿ ನೀರು ಬದಲಿಸಿರಬೇಕು. ನೀರನ್ನು ಚೆನ್ನಾಗಿ ಬಸಿದು ಅಕ್ಕಿಯನ್ನು ಗಾಳಿಗೆ ಹರಡಿ ಆರಿಸಬೇಕು (ಇದನ್ನು ಬಿಸಿಲಿನಲ್ಲಿ ಒಣಗಿಸಬಾರದು). ನಂತರ ಅಕ್ಕಿಯನ್ನು ನೀರು ತಾಕಿಸದೇ ಮಿಕ್ಸಿಯಲ್ಲಿ ನುಣ್ಣಗೆ ಪುಡಿ ಮಾಡಿಕೊಳ್ಳಬೇಕು. ಇದನ್ನು ಜರಡಿಯಲ್ಲಿ ಗಾಳಿಸಿ, ಉಳಿದ ತರಿಯನ್ನು ಮಿಕ್ಸಿಗೆ ಹಾಕಿ ಮತ್ತೆ ಪುಡಿ ಮಾಡಿಕೊಳ್ಳಬೇಕು. ನಂತರ ಎಲ್ಲಾ ಪುಡಿಯನ್ನು ಮುಚ್ಚಿಟ್ಟುಕೊಳ್ಳಬೇಕು. ನಂತರ ಪ್ಯಾನ್‌ ಬಿಸಿ ಮಾಡಿ ಬೆಲ್ಲ ಹಾಕಿ, ಕಾಲು ಕಪ್‌ ನೀರು ಸೇರಿಸಿ ಕರಗಿಸಿ. ಚಿಕ್ಕ ಪಾತ್ರೆಯಲ್ಲಿ ಗಸೆಗಸೆ ಹಾಗೂ ಎಳ್ಳನ್ನು ಹುರಿದುಕೊಳ್ಳಿ. ಬೆಲ್ಲ ಚೆನ್ನಾಗಿ ಪಾಕ ಬಂದ ಮೇಲೆ ಸ್ಟವ್ ಆರಿಸಿ. ಆ ಪಾಕಕ್ಕೆ ಸ್ವಲ್ಪ ಸ್ವಲ್ಪ ಹಿಟ್ಟನ್ನು ಸೇರಿಸಿ ತಿರುಗಿಸುತ್ತಲೇ ಇರಿ. ನಂತರ ಅದಕ್ಕೆ ಎಳ್ಳು, ಗಸೆಗಸೆ, ಏಲಕ್ಕಿ ಸೇರಿಸಿ ಮಿಶ್ರಣ ಮಾಡಿ. ಅದಕ್ಕೆ ತುಪ್ಪ ಹಾಕಿ ಮಿಶ್ರಣ ಮಾಡಿ ಇಡೀ ರಾತ್ರಿ ಇಡಿ. ನಂತರ ಬೆಳಿಗ್ಗೆ ಇದು ಗಟ್ಟಿಯಾದ ಮೇಲೆ ಕಜ್ಜಾಯದ ಆಕಾರಕ್ಕೆ ತಟ್ಟಿಕೊಂಡು ಮಧ್ಯೆ ತೂತು ಮಾಡಿಕೊಳ್ಳಿ. ಇದನ್ನು ಎಣ್ಣೆಯಲ್ಲಿ ಕರಿಯಿರಿ. ಕಜ್ಜಾಯದ ಒಂದು ಬದಿ ಕಾದ ನಂತರವಷ್ಟೇ ಇನ್ನೊಂದು ಬದಿ ತಿರುವಿ ಹಾಕಿ.

(ಲೇಖಕಿ: ಅನು ಸ್ವಯಂ ಕಲಿಕೆ ಯೂಟ್ಯೂಬ್‌ ಚಾನೆಲ್‌ ನಿರ್ವಾಹಕಿ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT