ಸವಿಯಿರಿ 'ಬೆಂಗಳೂರು ಟು ಕನ್ಯಾಕುಮಾರಿ’ ರುಚಿ

7

ಸವಿಯಿರಿ 'ಬೆಂಗಳೂರು ಟು ಕನ್ಯಾಕುಮಾರಿ’ ರುಚಿ

Published:
Updated:
Deccan Herald

ಕೇರಳ ಶೈಲಿಯಲ್ಲಿ ಸಿಂಗಾರಗೊಂಡ ರೆಸ್ಟೊರೆಂಟ್‌, ಬಿಳಿ ಧೋತಿ, ಪೈಜಾಮ, ಶಾಲು ಧರಿಸಿ ಅಪ್ಪಟ ಮಲಯಾಳಿಗಳಂತೆ ಕಾಣುವ ಸಪ್ಲೈಯರ್‌ಗಳು, ಹೋಟೆಲ್‌ ಒಳ ಹೊಕ್ಕಾಗ ದಕ್ಷಿಣ ಭಾರತದ ಖಾದ್ಯಗಳ ಘಮಲು...

ಇದು ಯಶವಂತಪುರದ ದಿ ಫರ್ನ್ ರೆಸಿಡೆನ್ಸಿಯ ಟಿಂಗ್ ಲಿಂಗ್ ಸ್ಪೈಸ್ ರೆಸ್ಟೋರೆಂಟ್‌ನಲ್ಲಿ ಆಯೋಜಿಸಿರುವ 'ಬೆಂಗಳೂರು ಟು ಕನ್ಯಾಕುಮಾರಿ ಎಕ್ಸ್‌ಪ್ರೆಸ್‌’ ದಕ್ಷಿಣ ಭಾರತ ಆಹಾರೋತ್ಸವಕ್ಕೆ ಕಾಲಿಟ್ಟರೆ ಮೊದಲ ನೋಟಕ್ಕೆ ಈ ಅನುಭವವಾಗುತ್ತದೆ. 

ಮಾಂಸಾಹಾರದಲ್ಲಿ ಸ್ಪೆಷಲ್ ಏನಿದೆ ಎಂದು ಕೇಳಿದಾಗ ಬಿದಿರಿನ ಕೊಳವೆ ತಂದು ಅದರ ಮುಚ್ಚಳ ತೆಗೆದರು. ಇದೇನಪ್ಪಾ? ಎಂದು ನೋಡುತ್ತಿದ್ದಂತೆ ಅದರೊಳಗೆ ಹಬೆಯಾಡುತ್ತಿದ್ದ ಬಿಸಿ ಬಿಸಿ ಬಾಂಬೂ ಬಿರಿಯಾನಿಯನ್ನು ಬಾಳೆಎಲೆಗೆ ಸುರಿದರು. ಅಹಾ ಎನ್ನುವಂತಹ ರುಚಿ. ಹದವಾದ ಖಾರ ಬೆರೆತ ಕೋಳಿ ಮಾಂಸ ಬೆಂದು ಮೃದುವಾಗಿ ನಾಲಿಗೆಗೆ ಹಿತ ನೀಡಿತು.

ನಂತರ ಬಂದಿದ್ದು ಘಮಘಮಿಸುವ ಚೆಟ್ಟಿನಾಡು ಬಿರಿಯಾನಿ. ಅದರ ಸುವಾಸನೆಯೇ ರುಚಿನೋಡುವಂತೆ ಹಪಹಪಿಸಿತು. ಅನ್ನದೊಳಗೆ ಹದವಾಗಿ ಬೇಯಿಸಿದ್ದ ಮಾಂಸ. ಸ್ವಲ್ಪ ಖಾರವಾದರೂ ರುಚಿಕರವಾಗಿತ್ತು. ಸೋರೆ ಕಾಯಿ ಫ್ರೈ ತಿಂದರೆ ಇನ್ನೊಮ್ಮೆ ತಿನ್ನಬೇಕು ಅನಿಸುತ್ತದೆ. ಸೋರೆ ಕಾಯಿಯೊಳಗೆ ಪನೀರ್ ತುಂಬಿಸಿ ಪ್ರೈ ಮಾಡಿದ ಕಾರಣ ಅದರ ರುಚಿ ಇಮ್ಮಡಿಗೊಂಡಿತ್ತು.

ಮಂಗಳೂರು ಬೋಂಡಾ, ಮಲಬಾರ್ ಪರೋಟ, ತಮಿಳುನಾಡಿನ ಮಾವು ಕರಿ, ದಂಟಿನ ಸೊಪ್ಪಿನ ಸಾರು, ಸಲಾಡ್, ಹಲವು ಬಗೆಯ ಚಟ್ನಿ, ಹೈದರಾಬಾದ್ ಧಮ್ ಬಿರಿಯಾನಿ ಈ ಆಹಾರೋತ್ಸವದಲ್ಲಿ ಸವಿಯಬಹುದು. ಸಸ್ಯಾಹಾರ ಮತ್ತು ಮಾಂಸಾಹಾರ ಎರಡೂ ಬಗೆಯ ಖಾದ್ಯಗಳನ್ನು ಸವಿಯಬಹುದು. 35ಕ್ಕೂ ಹೆಚ್ಚು ಬಗೆಯ ಆಹಾರಗಳನ್ನು ಪ್ರತಿನಿತ್ಯ ಸಿದ್ಧಪಡಿಸುವುದು ಈ ಉತ್ಸವದ ವಿಶೇಷ. 

ಸಸ್ಯಾಹಾರ ಪ್ರಿಯರಿಗಾಗಿ ವಿವಿಧ ಭಕ್ಷ್ಯಗಳು ಇಲ್ಲಿ ಇದ್ದು, ಬಗೆ ಬಗೆಯ ಕರಿದ ತಿಂಡಿ, ಮೊಸರನ್ನ, ಮೆಂತೆ ರೈಸ್ ಇದೆ. 

‘ಈ ಆಹಾರೋತ್ಸವದಲ್ಲಿ ದಕ್ಷಿಣ ಭಾರತದ ಪ್ರಮುಖ ನಗರಗಳಲ್ಲಿ ಸಿಗುವ ಆಹಾರ ಪದಾರ್ಥಗಳನ್ನು ಆಸ್ವಾದಿಸುವ ಅವಕಾಶವನ್ನು ಗ್ರಾಹಕರಿಗೆ ನೀಡುತ್ತಿದ್ದೇವೆ. ಮಳೆಗಾಲದಲ್ಲಿ ಹಿತ ನೀಡುವ ಖಾದ್ಯಗಳನ್ನು ಸಿದ್ಧಪಡಿಸುತ್ತೇವೆ. ಮೀನಿನ ಖಾದ್ಯ ಪ್ರಿಯರಿಗೆ ಕೇರಳ ಶೈಲಿಯ ಖಾದ್ಯ, ಫಿಶ್ ಫ್ರೈ ಲಭ್ಯವಿದೆ' ಎನ್ನುತ್ತಾರೆ ಜನರಲ್ ಮ್ಯಾನೇಜರ್ ಅರಿಂದಮ್‌ ಸರ್ಕಾರ್.

* 5 ಕೆ.ಜಿ. ಪರೋಟ, ಸಿಲೋನ್ ಪರೋಟ, ಕಾಯಿನ್ ಪರೋಟ, ಆಪಂ, ಪನಿಯಾರಂ, ಪುದೀನ ಪೂರಿ ಈ ಬಾರಿಯ ಪ್ರಮುಖ ಆಕರ್ಷಣೆ. ದಕ್ಷಿಣ ಭಾರತದ ಆಹಾರ ಖಾದ್ಯಗಳ ಸವಿಯನ್ನು ಬೆಂಗಳೂರಿನ ಜನರಿಗೂ ಉಣಬಡಿಸುವ ಉದ್ದೇಶದಿಂದ ಆಹಾರೋತ್ಸವ ಹಮ್ಮಿಕೊಂಡಿದ್ದೇವೆ.

–ಬಲ್ವೀರ್ ಸಿಂಗ್, ಮುಖ್ಯ ಶೆಫ್

ರೆಸ್ಟೋರೆಂಟ್: ಟಿಂಗ್ ಲಿಂಗ್ ಸ್ಪೈಸ್ 
ಸಮಯ: ಸಂಜೆ 7.30 ರಿಂದ ರಾತ್ರಿ 11.30
ಸ್ಥಳ: ದಿ ಫರ್ನ್ ರೆಸಿಡೆನ್ಸಿ, ಯಶವಂತಪುರ
ಕೊನೆಯ ದಿನಾಂಕ: ಆಗಸ್ಟ್ 5
ಮಾಹಿತಿಗೆ: 96861 99949

ಮಾಂಸಾಹಾರ ಊಟಕ್ಕೆ ₹650, ಸಸ್ಯಾಹಾರಕ್ಕೆ ₹550

ಟೇಬಲ್ ಕಾಯ್ದಿರಿಸಲು: 96861 99949

 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !