ಬಾದಾಮಿ ಮಹತ್ವ...
ದೂರ ಪ್ರಯಾಣದಲ್ಲಿ ನಿಮ್ಮಂದಿಗೆ ಒಂದಿಷ್ಟು ಬಾದಾಮಿ ತೆಗೆದುಕೊಂಡು ಹೋದರೆ ಒಳ್ಳೆಯದು. ಇದನ್ನು ಸುಲಭವಾಗಿ ತೆಗೆದುಕೊಂಡುಹೋಗಬಹುದು. ಇದು ದಣಿದ ದೇಹಕ್ಕೆ ಚೈತನ್ಯ ನೀಡಬಲ್ಲುದು. ಬಾದಾಮಿಯಲ್ಲಿ ಆ್ಯಂಟಿಆಕ್ಸಿಡಂಟ್, ಮ್ಯಾಂಗನೀಸ್ ರಿಬೊಫ್ಲೆವಿನ್ (ವಿಟಮಿನ್ ಬಿ2), ತಾಮ್ರ ಇತ್ಯಾದಿ ಅಂಶಗಳು ಹೇರಳವಾಗಿದ್ದು, ಶಕ್ತಿಯ ಉತ್ಪಾದನೆಗೆ ನೆರವಾಗುತ್ತವೆ.
ನಿಮ್ಮ ಆಹಾರದಲ್ಲಿ ಸಿಗದ ಕೆಲವೊಂದು ಪೌಷ್ಟಿಕಾಂಶಗಳು ಬಾದಾಮಿ ತಿನ್ನುವುದರಿಂದ ಸಿಗುತ್ತವೆ. ಖನಿಜ, ನಾರಿನಂಶ, ವಿಟಮಿನ್ ಇ ಹಾಗೂ ಆರೋಗ್ಯಯುತ ಕೊಬ್ಬಿನ ಅಂಶಗಳನ್ನು ಹೊಂದಿರುವ ಬಾದಾಮಿ ಚರ್ಮದ ರಕ್ಷಣೆಯಲ್ಲಿಯೂ ಪ್ರಮುಖ ಪಾತ್ರ ವಹಿಸುತ್ತದೆ.