ಬೆಂಡೆಕಾಯಿ ಮಜ್ಜಿಗೆಹುಳಿ
ಬೇಕಾಗುವ ಸಾಮಗ್ರಿಗಳು: ಬೆಂಡೆಕಾಯಿ ಹೋಳುಗಳು – 1ಕಪ್, ಕೆಂಪುಮೆಣಸು – 4, ಹುರಿಗಡಲೆ – 1–1/2ಚಮಚ, ಕೊತ್ತಂಬರಿಸೊಪ್ಪು – ಸ್ವಲ್ಪ, ಕರೀಬೇವು – 1ಕಡ್ಡಿ, ಸಾಸಿವೆ – 1/4ಚಮಚ, ಇಂಗು – ಸ್ವಲ್ಪ, ಬೆಳ್ಳುಳ್ಳಿ ಇಳುಕು – 2, ಕರಿಮೆಣಸು – 4, ಜೀರಿಗೆ – 1/4ಚಮಚ, ಅರಿಸಿನ – ಸ್ವಲ್ಪ, ರುಚಿಗೆ ಉಪ್ಪು, ಮಜ್ಜಿಗೆ ಸಾಕಷ್ಟು, ಕಾಯಿತುರಿ – 1/4ಕಪ್, ಹಸಿಶುಂಠಿ ಚೂರು, ಎಣ್ಣೆ ಸ್ವಲ್ಪ.

ತಯಾರಿಸುವ ವಿಧಾನ: ಎಣ್ಣೆ, ಸಾಸಿವೆ, ಬೆಂಡೆಕಾಯಿ ಹೋಳು, ಕರೀಬೇವು ಹಾಗೂ ಮಜ್ಜಿಗೆ ಹೊರತು ಮೇಲೆ ತಿಳಿಸಿದ ಉಳಿದ ಸಾಮಗ್ರಿಗಳನ್ನು ಸ್ವಲ್ಪ ನೀರನ್ನು ಸೇರಿಸಿ ರುಬ್ಬಬೇಕು. ಬೆಂಡೆಕಾಯಿ ಹೋಳುಗಳನ್ನು ಎಣ್ಣೆಯಲ್ಲಿ ಮೆತ್ತಗಾಗುವಂತೆ ಹುರಿದು ತಯಾರಾದ ಮಿಶ್ರಣಕ್ಕೆ ಮೊಸರು ಬೆಂಡೆಹೋಳುಗಳನ್ನು ಸೇರಿಸಿ, ಕರಿಬೇವು ಮತ್ತು ಸಾಸಿವೆಯನ್ನು ಸಿಡಿಸಿ ಹಾಕಿ ಸ್ವಲ್ಪ ಹೊತ್ತು ಕುದಿಸಿದರೆ ರುಚಿಯಾದ ಮಜ್ಜಿಗೆ ಹುಳಿ ಸವಿಯಲು ರೆಡಿ, ಇದು ಅನ್ನಕ್ಕೆ, ಚಪಾತಿಗೆ ಹೊಂದುತ್ತದೆ.

ಬೆಂಡೆಕಾಯಿ ಸಾಂಬಾರು
ಬೇಕಾಗುವ ಸಾಮಗ್ರಿಗಳು: ಬೆಂಡೆಕಾಯಿ ಹೋಳುಗಳು – 1ಕಪ್, ತೊಗರಿಬೇಳೆ – 1/4ಕಪ್, ಅರಿಸಿನ –ಚಿಟಿಕೆ, ತುಪ್ಪ – ಸ್ವಲ್ಪ, ನೀರು ಸಾಕಷ್ಟು, ಕೆಂಪುಮೆಣಸು – 5, ಬ್ಯಾಡಗಿ ಮೆಣಸು – 1 ದನಿಯಾ – 1/2ಚಮಚ, ಕರಿಮೆಣಸು – 5, ಮೆಂತ್ಯ – 12ಕಾಳು, ಜೀರಿಗೆ – 1/4ಚಮಚ, ಸಾಸಿವೆ – ಸ್ವಲ್ಪ, ಕಾಯಿತುರಿ – 1/4ಕಪ್, ರುಚಿಗೆ ಉಪ್ಪು, ಕರೀಬೇವು – 1ಕಡ್ಡಿ, ಹುಣಸೆನೀರು – 3/4 ಚಮಚ, ಬೆಲ್ಲ ಚೂರು, ಎಣ್ಣೆ ಸ್ವಲ್ಪ.

ತಯಾರಿಸುವ ವಿಧಾನ: ನೀರಿಗೆ ಬೇಳೆ, ತುಪ್ಪ, ಅರಿಸಿನ ಹಾಕಿ ಬೇಯಿಸಬೇಕು. ಕೆಂಪುಮೆಣಸು ಹಾಗೂ ಬ್ಯಾಡಗಿ ಮೆಣಸನ್ನು ಒಂದು ಚೂರು ಎಣ್ಣೆಯಲ್ಲಿ ಹುರಿಯಬೇಕು. ದನಿಯಾ, ಸಾಸಿವೆ, ಮೆಂತ್ಯ, ಮೆಣಸು ಹಾಗೂ ಸಾಸಿವೆಯನ್ನು ಎಣ್ಣೆಯೊಂದಿಗೆ ಸೇರಿಸಿ ಹುರಿದು, ತೆಂಗಿನಕಾಯಿ ಹಾಗೂ ಹುರಿದ ಸಾಮಗ್ರಿಗಳನ್ನು ಸೇರಿಸಿ ನುಣ್ಣಗೆ ರುಬ್ಬಿಕೊಳ್ಳಿ. ಹೀಗೆ ರುಬ್ಬಿಕೊಂಡದ್ದನ್ನು ಎಣ್ಣೆಯಲ್ಲಿ ಹುರಿದು ಬೆಂದ ಬೇಳೆಗೆ ಸೇರಿಸಿ. ರುಬ್ಬಿರುವ ಮಿಶ್ರಣ, ಉಪ್ಪು, ಹುಣಸೆನೀರು, ಬೆಲ್ಲ ಹಾಗೂ ಕರೀಬೇವನ್ನು ಸೇರಿಸಿ ಕುದಿಸಿ. ಸಾಸಿವೆಯನ್ನು ಒಗ್ಗರಣೆ ಹಾಕಿದರೆ ಬೆಂಡೆ ಸಾಂಬಾರ್ ಸವಿಯಲು ಸಿದ್ಧ.

ಬೆಂಡೆಕಾಯಿ ಫ್ರೈ
ಬೇಕಾಗುವ ಸಾಮಗ್ರಿಗಳು: ಬೆಂಡೆಕಾಯಿ ಚಿಕ್ಕ ಗಾತ್ರದ್ದು – ಸಾಕಷ್ಟು, ಎಣ್ಣೆ – ಸಾಕಷ್ಟು, ಉಪ್ಪಿನಪುಡಿ ರುಚಿಗೆ, ಕೆಂಪುಮೆಣಸಿನಪುಡಿ ಸ್ವಲ್ಪ ಹಾಗೂ ಇಂಗು ಸ್ವಲ್ಪ.

ತಯಾರಿಸುವ ವಿಧಾನ: ಎಣ್ಣೆಯನ್ನು ಬಾಣಲಿಯನ್ನು ಬಿಸಿ ಮಾಡಿ ಬೆಂಡೆಕಾಯಿಯನ್ನು ಸಣ್ಣ ಉರಿಯಲ್ಲಿ ಮೆತ್ತಗಾಗುವಷ್ಟು ಹುರಿದು, ಉಪ್ಪು, ಮೆಣಸಿನಪುಡಿ ಮತ್ತು ಇಂಗುವನ್ನು ಬೆರೆಸಿ ಬೆಂಡೆಕಾಯಿಯ ಮೇಲೆ ಉದುರಿಸಿದರೆ ರೆಡಿ. ಇದನ್ನು ಬಿಸಿಯಾಗಿರುವಾಗಲೇ ಸೇವಿಸಿದರೆ ಹೆಚ್ಚು ರುಚಿಯಾಗಿರುತ್ತದೆ.

ಬೆಂಡೆಕಾಯಿ ಚಟ್ನಿ
ಬೇಕಾಗುವ ಸಾಮಗ್ರಿಗಳು: ಬೆಂಡೆಕಾಯಿ – 3/4ಕಪ್ ಹೋಳು, ಕಡ್ಲೆಬೇಳೆ ಹಾಗೂ ಉದ್ದಿನಬೇಳೆ ಸೇರಿ – 1ಚಮಚ, ರುಚಿಗೆ – ಉಪ್ಪು, ಹಸಿರುಮೆಣಸು – 2–3, ತೆಂಗಿನತುರಿ – 2ಚಮಚ, ಇಂಗು – ಸ್ವಲ್ಪ, ಮೊಸರು – ಸಾಕಷ್ಟು, ಸಾಸಿವೆ – 1/4ಚಮಚ, ಎಣ್ಣೆ ಸ್ವಲ್ಪ.

ತಯಾರಿಸುವ ವಿಧಾನ: ಬೆಂಡೆಕಾಯಿಯನ್ನು ಎಣ್ಣೆಯಲ್ಲಿ ಹುರಿಯಬೇಕು. ಉದ್ದಿನಬೇಳೆ, ಕಡ್ಲೆಬೇಳೆ ಮತ್ತು ಹಸಿರುಮೆಣಸನ್ನು ಸ್ವಲ್ಪ ಎಣ್ಣೆಯಲ್ಲಿ ಹುರಿದು ತೆಂಗಿನತುರಿ, ಇಂಗು ಮತ್ತು ಹುರಿದ ಬೆಂಡೆಹೋಳುಗಳನ್ನು ಸೇರಿಸಿ ರುಬ್ಬಿ ಮೊಸರನ್ನು ಹಾಕಿ ಬೆರೆಸಿ ಸಾಸಿವೆಯನ್ನು ಒಗ್ಗರಣೆ ಹಾಕಿದರೆ ರುಚಿಯಾದ ಚಟ್ನಿ ರೆಡಿ. ಬಿಸಿ ಅನ್ನಕ್ಕೆ ಹೊಂದುತ್ತದೆ.

ಬೆಂಡೆಕಾಯಿ ಪಲ್ಯ
ಬೇಕಾಗುವ ಸಾಮಗ್ರಿಗಳು: ಬೆಂಡೆಕಾಯಿ ಹೋಳುಗಳು – 1ಕಪ್, ಎಣ್ಣೆ 2–3ಚಮಚ, ಸಾಸಿವೆ – 1/4ಚಮಚ, ಕರೀಬೇವು – 1ಕಡ್ಡಿ, ತೆಂಗಿನತುರಿ – 2ಚಮಚ, ಕೆಂಪುಮೆಣಸು – 2–3, ಬೆಳ್ಳುಳ್ಳಿ ಇಳುಕು – 2, ರುಚಿಗೆ ಉಪ್ಪು.

ತಯಾರಿಸುವ ವಿಧಾನ: ಬಾಣಲಿಯಲ್ಲಿ ಎಣ್ಣೆ ಬಿಸಿಮಾಡಿ ಸಾಸಿವೆ ಕರೀಬೇವನ್ನು ಹಾಕಿ ಸಿಡಿಸಿ ಬೆಂಡೆಕಾಯಿ ಹೋಳುಗಳನ್ನು ಹಾಕಿ ಮೆತ್ತಗಾಗುವಂತೆ ಹುರಿಯಬೇಕು. ಕೆಂಪುಮೆಣಸು, ಕಾಯಿತುರಿ, ಬೆಳ್ಳುಳ್ಳಿ ಹಾಗೂ ಉಪ್ಪನ್ನು ಸೇರಿಸಿ ಮಿಕ್ಸಿಯಲ್ಲಿ ಪುಡಿ ಮಾಡಿ ಹುರಿದ ಬೆಂಡೆಹೋಳುಗಳಿಗೆ ಬೆರೆಸಿ ಸ್ವಲ್ಪ ಹೊತ್ತು ಕೆದಕಿದರೆ ರುಚಿಯಾದ ಬೆಂಡೆಕಾಯಿ ಪಲ್ಯ ಸವಿಯಲು ಸಿದ್ಧ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.