ಸಂಜೆಯಾಗುತ್ತಲೇ ನಗರದ ಜನತೆಗೆ ಚಾಟ್ಸ್ ಕಡೆ ಗಮನ. ತಿಂಡಿಪ್ರಿಯರ ಅಭಿರುಚಿ ಬದಲಾದಂತೆಲ್ಲಾ ಹೋಟೆಲ್‌ಗಳಲ್ಲಿ ಖಾದ್ಯಗಳ ಪಟ್ಟಿಯೂ ಬೆಳೆಯುತ್ತಿದೆ. ನಾವು ಸಂಜೆಯ ಹೊತ್ತು ಮೆಲ್ಲುವ ಸವಿರುಚಿ ಚಾಟ್ಸ್‌ಗಳ ತಯಾರಿ ಮುಂಜಾನೆಯಿಂದಲೇ ನಡೆಯುತ್ತಿರುತ್ತದೆ.

‘ವಾರದಲ್ಲಿ ಮೂರು ಬಾರಿಯಾದರೂ ಚಾಟ್ಸ್ ತಿನ್ನದಿದ್ದರೆ ನಾಲಿಗೆ ಸಪ್ಪೆ ಎನಿಸುತ್ತದೆ’ ಎಂದು ನನ್ನ ಅನೇಕ ಫ್ರೆಂಡ್ಸ್ ಹೇಳುತ್ತಿರುತ್ತಾರೆ. ಇಂಥವರ ಗುಂಪಿನೊಂದಿಗೆ ನಾನು ಎನ್.ಆರ್.ಕಾಲೊನಿಯ ಮುಖ್ಯರಸ್ತೆ ಸುತ್ತುತ್ತೇನೆ. ಬೀದಿಬದಿಯ ಹಲವು ತಿನಿಸುಗಳು ನಮ್ಮನ್ನು ಕೈಬೀಸಿ ಕರೆಯುತ್ತವೆ.

ಬಸ್‌ನಿಲ್ದಾಣದ ಸಮೀಪವಿರುವ ಹಳದಿ ಬಣ್ಣದ ಶಾಪ್ ಗಮನ ಸೆಳೆಯಿತು. ನೋಡಲು ಆಕರ್ಷಕವಾಗಿ ಕಂಡ ಈ ಶಾಪ್‌ನ ಹೆಸರು ‘ಜ್ಯೂಸ್ ಅಂಡ್ ಚಾಟ್ಸ್ ಸೆಂಟರ್’.

ಬಾಗಿಲಿಗೆ ಬರುತ್ತಿದ್ದಂತೆಯೇ ಮಸಾಲೆಯ ಘಮ ಬಾಯಲ್ಲಿ ನೀರೂರಿಸಿತು.

ಮೆನು ಪಟ್ಟಿಯಲ್ಲಿ ಫ್ರೆಶ್ ಫ್ರೂಟ್ ಜ್ಯೂಸ್, ಮಿಲ್ಕ್‌ಶೇಕ್, ಐಸ್‌ಕ್ರೀಂ ಸ್ಪೆಷಾಲಿಟೀಸ್, ಅವರ್ ಸ್ಪೆಷಾಲಿಟೀಸ್ ಇತ್ಯಾದಿ ಕಾಣಿಸಿತು. ಏನು ಆರ್ಡರ್ ಮಾಡುವುದು ಎಂಬ ಗೊಂದಲ ನನ್ನನ್ನು ಕಾಡಿತು. ಅಕ್ಕಪಕ್ಕ ನೋಡಿದೆ. ಕೆಲವರು ಫ್ರೂಟ್ ವಿತ್ ಐಸ್‌ಕ್ರೀಂ, ಮ್ಯಾಂಗೊ ವಿತ್ ಐಸ್, ಆ್ಯಪಲ್ ಪೈ ಸೇರಿದಂತೆ ಹಲವು ಐಸ್‌ಕೇಕ್‌ಗಳನ್ನು ಸವಿಯುತ್ತಿದ್ದರು.

ಕೂತು ಹರಟೆ ಹೊಡೆಯುತ್ತಿದ್ದ ಫ್ಯಾಮಿಲಿಯೊಂದು ಮಸಾಲೆಪುರಿ, ಸೇವ್, ಪಾವ್‌ಬಾಜಿ, ಡೆತ್‌ಬೈ ಚಾಕ್‌ಲೇಟ್, ಫ್ರೂಟ್ ವಿತ್ ಐಸ್ ಸಲಾಡ್ ಟೇಬಲ್ ಮೇಲೆ ಇರಿಸಿಕೊಂಡು ಹರಟೆಯಲ್ಲಿ ಮುಳುಗಿತ್ತು. ಮಾತಿನ ಜೊತೆಗೇ ಪ್ಲೇಟ್‌ಗಳನ್ನು ಖಾಲಿ ಮಾಡಿ ಎಲ್ಲರೂ ಎದ್ದು ಹೊರಟರು.

ಮ್ಯಾಂಗೋ ಜ್ಯೂಸ್ ಕುಡಿದು ಹಳದಿ ಮೀಸೆ ಬರಿಸಿಕೊಂಡಿದ್ದ ಹುಡುಗನನ್ನು ನೋಡಿದ ನಾನು ಅದನ್ನೇ ಆರ್ಡರ್ ಮಾಡಿದೆ. ಜ್ಯೂಸ್ ಕುಡಿದು ಮುಗಿದ ಮೇಲೂ ಗ್ಲಾಸ್ ಕೆಳಗೆ ಇಡಲು ಮನಸು ಬರಲಿಲ್ಲ.

ಟೈಂಪಾಸ್‌ಗಾಗಿ ತಿನ್ನಬೇಕೋ ಅಥವಾ ತಿನ್ನುವುದಕ್ಕಾಗಿ ಟೈಂಪಾಸ್ ಮಾಡಬೇಕೋ ಎಂಬ ಗೊಂದಲದಲ್ಲಿ ಮುಳುಗಿದ್ದ ಸೀನಿಯರ್ ಸಿಟಿಜನ್ಸ್ ಗುಂಪೊಂದು ಪಾವ್‌ಬಾಜಿಯನ್ನು ಚಪ್ಪರಿಸುತ್ತಿದ್ದುದು ಕಣ್ಣಿಗೆ ಬಿತ್ತು. ನಾನೂ ಅದರ ರುಚಿ ನೋಡಿದೆ ಅನ್ನಿ.

ಈ ಮಧ್ಯೆ ಡ್ಯಾನ್ಸ್‌ಕ್ಲಾಸ್ ಮುಗಿಸಿ ಬಂದಿದ್ದ ಯುವತಿಯರ ತಂಡವೊಂದು ಮಾತಿಗೆ ಸಿಕ್ಕಿತು. ‘ನಾವು ಕ್ಲಾಸ್ ಮುಗಿಸಿದ ಮೇಲೆ ಇಲ್ಲಿಗೆ ಬಂದು ಮಿಲ್ಕ್‌ಶೇಕ್, ಲೈಮ್ ಜ್ಯೂಸ್ ಕುಡಿಯದೆ ಮನೆಗೆ ಹೋಗುವುದೇ ಇಲ್ಲ. ನಾಲಿಗೆಗೆ ರುಚಿ, ದೇಹಕ್ಕೂ ಒಳ್ಳೆಯದು’ ಎಂದು ಆ ತರುಣಿಯರು ಉಲ್ಲಾಸದಿಂದ ಹೇಳಿಕೊಂಡರು.

ಅಂದ ಹಾಗೆ ಈ ‘ಜ್ಯೂಸ್ ಅಂಡ್ ಚಾಟ್ಸ್ ಸೆಂಟರ್’ ಶುರುವಾಗಿ ಕೇವಲ 6 ತಿಂಗಳು ಮಾತ್ರವೇ ಆಗಿದೆ. ರುಚಿಯ ಜೊತೆಗೆ ಶುಚಿತ್ವದ ಖಾತ್ರಿಯಿಂದಲೂ ಇದು ಗ್ರಾಹಕರನ್ನು ಸೆಳೆದಿದೆ.

‘ವಾರಕ್ಕೆ ಮೂರು ಬಾರಿಯಾದರೂ ಇಲ್ಲಿಗೆ ಬರುತ್ತೇವೆ. ನನಗೆ ಇಲ್ಲಿ ಶುಚಿತ್ವ ಮತ್ತು ಅವರು ಬಳಸುವ ಪದಾರ್ಥಗಳ ಗುಣಮಟ್ಟ ಇಷ್ಟವಾಗುತ್ತದೆ. ನಮ್ಮ ಕುಟುಂಬ ಸದಸ್ಯರಿಗೆ ಇಲ್ಲಿನ ಡೆತ್ ಬೈ ಚಾಕ್‌ಲೇಟ್ ಫೇವ್‌ರೆಟ್’ ಎಂದು ಚಾಟ್ಸ್ ತಿನ್ನುವಾಗ ಮಾತಿಗೆ ಸಿಕ್ಕ ಎನ್.ಆರ್.ಕಾಲೊನಿಯ ಕವಿತಾ ನಗುತ್ತಲೇ ತುಟಿ ಒರೆಸಿಕೊಂಡರು.

‘ಜನಜಂಗುಳಿ ಹೆಚ್ಚಾಗಿರುವ ಈ ಜಾಗದಲ್ಲಿ ಕಾದು ನಿಂತು, ನಮಗೆ ಬೇಕಾದ ಚಾಟ್ಸ್ ಸವಿಯುವುದರಲ್ಲಿ ಖುಷಿ ಸಿಗುತ್ತದೆ’ ಎನ್ನುತ್ತಾರೆ ಅವರು. ಚಾಟ್ಸ್, ಜ್ಯೂಸ್, ಐಸ್‌ಕ್ರೀಂ, ಕೇಕ್ ಹೀಗೆ ಬಹುವಿಧದ ಹಾಟ್ ಅಂಡ್ ಕೋಲ್ಡ್ ಐಟಂಗಳು ಒಂದೇ ಸ್ಥಳದಲ್ಲಿ ಸಿಗುವುದು ‘ಜ್ಯೂಸ್ ಅಂಡ್ ಚಾಟ್ಸ್ ಸೆಂಟರ್’ ವಿಶೇಷ.

(ಸುಳಿವು ಕೊಟ್ಟ ಓದುಗರು: ಎನ್.ಸ್ವಾತಿ)

ನೀವೂ ಮಾಹಿತಿ ಕೊಡಿ
ನಿಮ್ಮಿಷ್ಟದ ಚಾಟ್ಸ್ ಅಡ್ಡಾ, ಫುಡ್ ಸ್ಟ್ರೀಟ್, ಹೋಟೆಲ್, ರೆಸ್ಟೊರೆಂಟ್, ಬೇಕರಿ, ದರ್ಶಿನಿಗಳ ಬಗ್ಗೆ ವಿಳಾಸ ಸಹಿತ ಮಾಹಿತಿ ಕೊಡಿ. ವಾಟ್ಸ್‌ಆ್ಯಪ್– 9513322931

ವಿಭಿನ್ನ ರೀತಿಯಲ್ಲಿ ಒಳ್ಳೆಯ ಟೇಸ್ಟ್ ನೀಡಿದಾಗ ಗ್ರಾಹಕರು ರೆಗ್ಯುಲರ್ ಆಗಿ ಬರ್ತಾರೆ. ಒಳ್ಳೆಯ ಟೇಸ್ಟ್ ನಮ್ಮ ಪ್ಲಸ್ ಪಾಯಿಂಟ್
–ಪ್ರದೀಪ್, ಜ್ಯೂಸ್ ಅಂಡ್ ಚಾರ್ಟ್ ಸೆಂಟರ್ ಮ್ಯಾನೇಜರ್

ನಗರದ ಇತರೆ ಹೋಟೆಲ್‌ಗಳಿಗೆ ಹೋಲಿಸಿದರೆ ಬೆಲೆ ಕಡಿಮೆ ಇದೆ. ತಾಜಾ ಆಗಿ ಚಾಟ್ಸ್ ಮಾಡಿಕೊಡುತ್ತಾರೆ. ಪಾರ್ಕಿಂಗ್ ವ್ಯವಸ್ಥೆಯೂ ಇರುವುದರಿಂದ ಕಿರಿಕಿರಿಯಾಗುವುದಿಲ್ಲ
–ವಿನೀತ್, ಸಾಫ್ಟ್‌ವೇರ್ ಉದ್ಯೋಗಿ

ರೆಸ್ಟೊರೆಂಟ್: ‘ಜ್ಯೂಸ್ ಅಂಡ್ ಚಾಟ್ಸ್ ಸೆಂಟರ್’
ವಿಶೇಷ: ಬಗೆ ಬಗೆ ಜ್ಯೂಸ್, ಚಾಟ್ಸ್
ಸಮಯ: ಬೆಳಗ್ಗೆ 11.30ರಿಂದ ರಾತ್ರಿ 10.30
ಸ್ಥಳ: ಎನ್‌ಆರ್ ಕಾಲೋನಿ, ಸುಬ್ಬರಾಮಚೆಟ್ಟಿ ರಸ್ತೆ ಬಸವನಗುಡಿ ಬೆಂಗಳೂರು 560019

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್‌ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.