ಭಾನುವಾರ, ಡಿಸೆಂಬರ್ 8, 2019
19 °C
ಭಾರತದ 75ನೇ ಸ್ವಾತಂತ್ರ್ಯೋತ್ಸದ ಸಂದರ್ಭದಲ್ಲಿ ಜಾಗತಿಕ ನಾಯಕರಿಗೆ ಆಹ್ವಾನ

ಭಾರತದಲ್ಲಿ 2022ಕ್ಕೆ ಜಿ–20 ಶೃಂಗಸಭೆ: ನರೇಂದ್ರ ಮೋದಿ ಈ ಘೋಷಣೆ

ಪಿಟಿಐ Updated:

ಅಕ್ಷರ ಗಾತ್ರ : | |

Deccan Herald

ಬ್ಯೂನಸ್‌ ಐರಿಸ್‌: ಇದೇ ಮೊದಲ ಬಾರಿ ಭಾರತ ಜಿ–20 ಶೃಂಗಸಭೆಯನ್ನು 2022ರಲ್ಲಿ ಆಯೋಜಿಸಲಿದೆ. ದೇಶದ 75ನೇ ಸ್ವಾತಂತ್ರ್ಯೋತ್ಸವದ ಸಂದರ್ಭದಲ್ಲಿ ಈ ಶೃಂಗಸಭೆ ನಡೆಯುವುದು ವಿಶೇಷವಾಗಿದೆ.

ಇಲ್ಲಿ ನಡೆದ 13ನೇ ಜಿ–20 ಶೃಂಗಸಭೆಯ ಸಮಾರೋಪದಲ್ಲಿ ಪ್ರಧಾನಿ ನರೇಂದ್ರ ಮೋದಿ ಈ ಘೋಷಣೆ ಮಾಡಿದರು. 14ನೇ ಶೃಂಗ ಸಭೆ ಜಪಾನ್‌ನಲ್ಲಿ ಮತ್ತು 15ನೇ ಶೃಂಗಸಭೆ ಸೌದಿ ಅರೇಬಿಯಾದಲ್ಲಿ ನಡೆಯಲಿದೆ.

‘75ನೇ ಸ್ವಾತಂತ್ರ್ಯೋತ್ಸವ ಸಂದರ್ಭದಲ್ಲಿ ಭಾರತವು ಜಾಗತಿಕ ನಾಯಕರನ್ನು ಜಿ–20 ಶೃಂಗಸಭೆಗೆ ಆಹ್ವಾನಿಸಲು ಬಯಸುತ್ತದೆ. ಭಾರತಕ್ಕೆ ಬನ್ನಿ. ನಮ್ಮದು ಜಗತ್ತಿನಲ್ಲೇ ಅತ್ಯಂತ ವೇಗದಲ್ಲಿ ಬೆಳೆಯುತ್ತಿರುವ ಮತ್ತು ಅತಿ ದೊಡ್ಡ ಆರ್ಥಿಕತೆ ಹೊಂದಿರುವ ದೇಶವಾಗಿದೆ. ಭಾರತದ ಇತಿಹಾಸ ಮತ್ತು ವೈವಿಧ್ಯತೆಯನ್ನು ಅರಿತುಕೊಳ್ಳಿ. ಜತೆಗೆ ಭಾರತದ ಆತಿಥ್ಯವನ್ನು ಅನುಭವಿಸಿ’ ಎಂದು ನರೇಂದ್ರ ಮೋದಿ ಟ್ವೀಟ್‌ ಮಾಡಿದ್ದಾರೆ.

ಆರ್ಥಿಕತೆ, ಅಭಿವೃದ್ಧಿ ಹೊಂದಿದ ರಾಷ್ಟ್ರಗಳಿಂದ ಉಂಟಾಗುತ್ತಿರುವ ಹಣಕಾಸು ಪರಿಣಾಮಗಳು ಸೇರಿದಂತೆ ಹಲವು ಜಾಗತಿಕ ಸಮಸ್ಯೆಗಳು ಮತ್ತು ಸವಾಲುಗಳ ಕುರಿತು  ಪ್ರಧಾನಿ ನರೇಂದ್ರ ಮೋದಿ ಬ್ಯೂನಸ್‌ ಐರಿಸ್‌ ಶೃಂಗಸಭೆಯಲ್ಲಿ ಚರ್ಚಿಸಿದರು ಎಂದು ಭಾರತದ ನಿಯೋಗದಲ್ಲಿದ್ದ ಹಣಕಾಸು ವ್ಯವಹಾರಗಳ ಮಾಜಿ ಕಾರ್ಯದರ್ಶಿ ಶಕ್ತಿಕಾಂತ್‌ ದಾಸ್‌ ತಿಳಿಸಿದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು