‘ಗಾಂಜಾ ಸೇವಿಸಿ ಕಾರು ಓಡಿಸಿದ್ದ ಗೀತಾವಿಷ್ಣು’

7
ಎನ್‌ಡಿಪಿಎಸ್ ಪ್ರಕರಣ * ಸಿಸಿಬಿ ಪೊಲೀಸರಿಂದ ದೋಷಾರೋಪ ಪಟ್ಟಿ ಸಲ್ಲಿಕೆ

‘ಗಾಂಜಾ ಸೇವಿಸಿ ಕಾರು ಓಡಿಸಿದ್ದ ಗೀತಾವಿಷ್ಣು’

Published:
Updated:

ಬೆಂಗಳೂರು: ಆಂಧ್ರಪ್ರದೇಶದ ರಾಜಕಾರಣಿ ದಿ. ಆದಿಕೇಶವಲು ಅವರ ಮೊಮ್ಮಗ ಗೀತಾವಿಷ್ಣು ವಿರುದ್ಧ ದಾಖಲಾಗಿದ್ದ ಅಪಘಾತ ಹಾಗೂ ಎನ್‌ಡಿಪಿಎಸ್ (ಮಾದಕವಸ್ತು ನಿಯಂತ್ರಣ ಕಾಯ್ದೆ) ಪ್ರಕರಣದ ತನಿಖೆ ಪೂರ್ಣಗೊಳಿಸಿರುವ ಸಿಸಿಬಿ ಪೊಲೀಸರು, ಒಂದನೇ ಎಸಿಎಂಎಂ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದಾರೆ.

‌‘ಪ್ರಕರಣದ ಆರೋಪಿ ಗೀತಾವಿಷ್ಣು, ಗಾಂಜಾ ಸೇವಿಸಿ ಕಾರು ಓಡಿಸಿದ್ದ. ಆತನ ಕಾರಿನಲ್ಲಿದ್ದ ಪ್ರಣಾಮ್ ದೇವರಾಜ್, ಮೊಹಮ್ಮದ್ ಫೈಜಲ್ ರಫಿ, ಶಶಾಂಕ್, ಮೊಹಮ್ಮದ್ ಜುನೈದ್ ರಫಿ ಸಹ ಗಾಂಜಾ ಸೇವಿಸಿದ್ದರು. ಆ ಸಂಬಂಧ ವಿಧಿ ವಿಜ್ಞಾನ ಪ್ರಯೋಗಾಲಯದ ವರದಿಯನ್ನು ಲಗತ್ತಿಸಲಾಗಿದೆ’ ಎಂದು ಸಿಸಿಬಿ ಪೊಲೀಸರು ದೋಷಾರೋಪ ಪಟ್ಟಿಯಲ್ಲಿ ಹೇಳಿದ್ದಾರೆ. 

‘ಗೀತಾವಿಷ್ಣು ಜೊತೆ ಪ್ರಣಾಮ್ ದೇವರಾಜ್, ಮಾರತ್ತಹಳ್ಳಿಯ ಶಶಾಂಕ್, ವಿನೋದ್, ಜುನೈದ್, ಫೈಜಲ್, ಸಚಿನ್, ಆದಿತ್ಯ, ಆದಿನಾರಾ
ಯಣ ಅವರು ಪಾರ್ಟಿ ಮಾಡಿದ್ದರು. ಅಲ್ಲಿಯೇ ಮದ್ಯ ಹಾಗೂ ಗಾಂಜಾ ಸೇವಿಸಿದ್ದರು. ಪಾರ್ಟಿ ಬಳಿಕ ಕಾರಿನಲ್ಲಿ 110 ಗ್ರಾಂ ಗಾಂಜಾ ಇಟ್ಟುಕೊಂಡು ಮನೆಯತ್ತ ಹೊರಟಿದ್ದಾಗ ಅಪಘಾತ ಸಂಭವಿಸಿತ್ತು’ ಎಂದು ತಿಳಿಸಿದ್ದಾರೆ. 

ಆಸ್ಪತ್ರೆಯಿಂದ ಪರಾರಿಯಾಗಿದ್ದ ಆರೋಪಿ: 2017ರ ಸೆ. 27ರ ರಾತ್ರಿ ಅಡ್ಡಾದಿಡ್ಡಿಯಾಗಿ ಬೆನ್ಜ್‌ ಎಸ್‌ಯುವಿ ಚಲಾಯಿಸಿಕೊಂಡು ಬಂದಿದ್ದ ಗೀತಾವಿಷ್ಣು, ಜಯನಗರದ ಸೌತ್‌ ಎಂಡ್‌ ವೃತ್ತದಲ್ಲಿ ಓಮಿನಿ ವ್ಯಾನ್‌ಗೆ ಡಿಕ್ಕಿ ಮಾಡಿದ್ದ. ಅಪಘಾತದಲ್ಲಿ ಮೂವರು ಮಕ್ಕಳು ಸೇರಿ ಒಂದೇ ಕುಟುಂಬದ ಆರು ಮಂದಿ ಗಾಯಗೊಂಡಿದ್ದರು. ಫುಟ್‌ಪಾತ್‌ನಲ್ಲಿದ್ದ ಬಿಬಿಎಂಪಿ ನಾಮಫಲಕ ಸಹ ಜಖಂಗೊಂಡಿತ್ತು.

ಅದರಿಂದ ಕೆರಳಿದ್ದ ಸ್ಥಳೀಯರು, ಗೀತಾವಿಷ್ಣುನನ್ನು ಥಳಿಸಿ ಪೊಲೀಸರ ವಶಕ್ಕೆ ಒಪ್ಪಿಸಿದ್ದರು. ಆರೋಪಿಯ ಕಾರಿನಲ್ಲಿ 110 ಗ್ರಾಂ ಗಾಂಜಾ ಸಹ ಸಿಕ್ಕಿತ್ತು. ಥಳಿತದಿಂದ ಗಾಯಗೊಂಡಿದ್ದ ಆರೋಪಿಯನ್ನು ಅವರ ಪೋಷಕರ ಒಡೆತನದ ಮಲ್ಯ ಆಸ್ಪತ್ರೆಗೇ ದಾಖಲಿಸಲಾಗಿತ್ತು. ಎರಡು ದಿನಗಳ ಬಳಿಕ ಆರೋಪಿ ಆಸ್ಪತ್ರೆಯಿಂದಲೂ ಪರಾರಿಯಾಗಿದ್ದ.

ಅಪಘಾತ ಹಾಗೂ ಎನ್‌ಡಿಪಿಎಸ್ ಕಾಯ್ದೆ ಅಡಿ ಗೀತಾವಿಷ್ಣು ಹಾಗೂ ಕಾರಿನಲ್ಲಿದ್ದ ಆತನ ಸ್ನೇಹಿತರ ವಿರುದ್ಧ ಜಯನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆಸ್ಪತ್ರೆಯಿಂದ ತಪ್ಪಿಸಿಕೊಂಡು ಹೋದ ಬಗ್ಗೆ ಕಬ್ಬನ್ ಪಾರ್ಕ್‌ ಠಾಣೆಯಲ್ಲೂ ಎಫ್‌ಐಆರ್‌ ದಾಖಲಾಗಿತ್ತು. ಎರಡೂ ಪ್ರಕರಣದ ತನಿಖೆಯನ್ನು ನಗರ ಪೊಲೀಸ್ ಕಮಿಷನರ್ ಟಿ.ಸುನೀಲ್ ಕುಮಾರ್ ಅವರು ಸಿಸಿಬಿಗೆ ವಹಿಸಿದ್ದರು. 1 ವರ್ಷ 3 ತಿಂಗಳು ತನಿಖೆ ನಡೆಸಿದ ಸಿಸಿಬಿ ಪೊಲೀಸರು, ಇದೀಗ ದೋಷಾರೋಪ ಪಟ್ಟಿ ಸಲ್ಲಿಸಿದ್ದಾರೆ. 

ರಕ್ತದ ಮಾದರಿಯಲ್ಲಿ ಗಾಂಜಾ ಅಂಶ: ‘ಆರೋಪಿ ಗೀತಾವಿಷ್ಣು, ಪ್ರಣಾಮ್ ದೇವರಾಜ್, ಮೊಹಮ್ಮದ್ ಫೈಜಲ್ ರಫಿ, ಶಶಾಂಕ್ ಹಾಗೂ ಮೊಹಮ್ಮದ್ ಜುನೈದ್ ರಫಿಯ ರಕ್ತರ ಮಾದರಿಯನ್ನು ಸಂಗ್ರಹಿಸಿ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಆ ಮಾದರಿಯಲ್ಲಿ ಗಾಂಜಾ ಅಂಶವಿರುವುದು ಸಾಬೀತಾಗಿದ್ದು, ಅದರ ವರದಿಯನ್ನು ದೋಷಾರೋಪ ಪಟ್ಟಿಯೊಂದಿಗೆ ಲಗತ್ತಿಸಲಾಗಿದೆ’ ಎಂದು ಸಿಸಿಬಿ ಅಧಿಕಾರಿಯೊಬ್ಬರು ತಿಳಿಸಿದರು.

‘ಗಾಂಜಾ ಅಮಲಿನಲ್ಲಿ ಕಾರು ಓಡಿಸಿದ್ದರಿಂದ ಅಪಘಾತ ಸಂಭವಿಸಿತ್ತು. ಪ್ರಕರಣ ಸಂಬಂಧ 25 ಸಾಕ್ಷಿಗಳ ಹೇಳಿಕೆ ಸಂಗ್ರಹಿಸಿ ಸುಮಾರು 600 ಪುಟಗಳ ದೋಷಾರೋಪ ಪಟ್ಟಿ ಸಿದ್ಧಪಡಿಸಿದ್ದೇವೆ. ಆರೋಪಿಗಳ ಮೇಲಿನ ಆರೋಪಗಳನ್ನು ಸಾಬೀತುಪಡಿಸಲು ಪುರಾವೆಗಳು ಅದರಲ್ಲಿವೆ’ ಎಂದರು. 

ಗಾಂಜಾ ಅಮಲಿನಲ್ಲಿದ್ದ ನಟ ದೇವರಾಜ್‌ ಮಗ ಪ್ರಣಾಮ್
‘ಅಪಘಾತಕ್ಕೆ ಕಾರಣವಾದ ಗೀತಾವಿಷ್ಣುವಿನ ಕಾರಿನಲ್ಲಿ ಪ್ರಣಾಮ್ ದೇವರಾಜ್ ಸಹ ಇದ್ದ. ಆತ ನಟ ದೇವರಾಜ್ ಮಗ ಎಂಬುದು ಗೊತ್ತಾಗುತ್ತಿದ್ದಂತೆ ವ್ಯಕ್ತಿಯೊಬ್ಬರು, ಕೆರಳಿದ್ದ ಜನರಿಂದ ಪಾರು ಮಾಡಿ ಕಳುಹಿಸಿದ್ದರು’ ಎಂದು ಸಿಸಿಬಿ ಪೊಲೀಸರು ಹೇಳಿದರು.

‘ಗೀತಾವಿಷ್ಣು ಜೊತೆಯಲ್ಲಿ ಪ್ರಣಾಮ್ ಸಹ ಗಾಂಜಾ ಸೇವಿಸಿದ್ದ. ಪಾರ್ಟಿ ಮುಗಿಸಿ ಕಾರಿನಲ್ಲಿ ಹೋಗುವಾಗಲೂ ಸ್ನೇಹಿತರ ಜೊತೆ ಗಾಂಜಾ ನಶೆ ಏರಿಸಿಕೊಳ್ಳುತ್ತಿದ್ದ. ಆತನ ರಕ್ತದ ಮಾದರಿಯಲ್ಲೂ ಗಾಂಜಾ ಅಂಶ ಪತ್ತೆಯಾಗಿದೆ’ ಎಂದರು.

ಮಗ ಅಮಾಯಕ ಎಂದಿದ್ದ ದೇವರಾಜ್: ಪ್ರಕರಣದ ವಿಚಾರಣೆಗಾಗಿ ಸಿಸಿಬಿ ಪೊಲೀಸರು, ಪ್ರಣಾಮ್‌ಗೆ ನೋಟಿಸ್‌ ನೀಡಿ ಕರೆಸಿಕೊಂಡಿದ್ದರು. ಆ ಸಂಬಂಧ ಅಂದಿನ ಸಿಸಿಬಿಯ ಹೆಚ್ಚುವರಿ ಕಮಿಷನರ್ ಸತೀಶ್ ಕುಮಾರ್ ಅವರನ್ನು ಭೇಟಿಯಾಗಿದ್ದ ದೇವರಾಜ್, ‘ಅಪಘಾತವಾದ ದಿನ ಗೀತಾವಿಷ್ಣುವಿನ ಕಾರಿನಲ್ಲಿ ನನ್ನ ಕಿರಿಯ ಮಗ ಪ್ರಣಾಮ್ ಇರಲಿಲ್ಲ. ಆತ ಅಮಾಯಕ. ವಿಚಾರಣೆ ನೆಪದಲ್ಲಿ ಪೊಲೀಸರು ಆತನಿಗೆ ತೊಂದರೆ ಕೊಡುತ್ತಿದ್ದಾರೆ’ ಎಂದು ದೂರಿದ್ದರು.

ಪರಾರಿಯಾಗಲು ಅಕ್ಕ–ಭಾವ ಸಹಕಾರ‌
‘ಮಲ್ಯ ಆಸ್ಪತ್ರೆಗೆ ದಾಖಲಾಗಿದ್ದ ಗೀತಾವಿಷ್ಣು, ಅಲ್ಲಿಂದ ಪರಾರಿಯಾಗಲು ಅಕ್ಕ ಚೈತನ್ಯಾ ಹಾಗೂ ಆಕೆಯ ಪತಿ ಡಾ. ರಾಜೇಶ್ ನಾಯ್ಡು, ಸ್ನೇಹಿತರಾದ ವಿನೋದ್, ಆನಂದನ್ ಸಹಕಾರ ನೀಡಿದ್ದರು’ ಎಂಬ ಸಂಗತಿ ದೋಷಾರೋಪ ಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ.

‘ಪ್ರಕರಣ ಸಂಬಂಧ ಗೀತಾವಿಷ್ಣುನನ್ನು ಮಾತ್ರ ಬಂಧಿಸಲಾಗಿದೆ. ಉಳಿದ ಆರೋಪಿಗಳನ್ನು ವಿಚಾರಣೆಗೆ ಒಳಪಡಿಸಿ ಹೇಳಿಕೆ ಪಡೆಯಲಾಗಿದೆ. ಮುಂದೆ, ನ್ಯಾಯಾಲಯದ ನಿರ್ದೇಶನವನ್ನು ಪಾಲಿಸಲಿದ್ದೇವೆ’ ಎಂದು ಸಿಸಿಬಿ ಪೊಲೀಸರು ಹೇಳಿದರು.

Tags: 

ಬರಹ ಇಷ್ಟವಾಯಿತೆ?

 • 18

  Happy
 • 1

  Amused
 • 2

  Sad
 • 1

  Frustrated
 • 6

  Angry

Comments:

0 comments

Write the first review for this !