ಚಾಮರಾಜನಗರ: ಗಾಂಜಾ ಬೆಳೆದಿದ್ದ ಜಮೀನಿನ ಮಾಲೀಕ ಬಂಧನ

7

ಚಾಮರಾಜನಗರ: ಗಾಂಜಾ ಬೆಳೆದಿದ್ದ ಜಮೀನಿನ ಮಾಲೀಕ ಬಂಧನ

Published:
Updated:
Deccan Herald

ಚಾಮರಾಜನಗರ: ಜಮೀನಿನಲ್ಲಿ ರಾಗಿಯ ಜೊತೆ ಗಾಂಜಾ ಗಿಡವನ್ನು ಬೆಳೆದಿದ್ದ ತಾಲ್ಲೂಕಿನ ಪುಣಜನೂರು ಸಮೀಪದ ಶ್ರೀನಿವಾಸಪುರ ಕಾಲೊನಿಯ ಜಡೇಗೌಡ ಎಂಬಾತನನ್ನು ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ. 

ಖಚಿತ ಮಾಹಿತಿ ಮೇರೆಗೆ ಡಿವೈಎಸ್‌ಪಿ ಸಿ.ಟಿ. ಜಯಕುಮಾರ್‌, ಸರ್ಕಲ್‌ ಇನ್‌ಸ್ಪೆಕ್ಟರ್‌ ರಾಜೇಂದ್ರ, ರಾಮಸಮುದ್ರ ಠಾಣೆಯ ಇನ್‌ಸ್ಪೆಕ್ಟರ್‌ ಪುಟ್ಟಸ್ವಾಮಿ ಹಾಗೂ ಸಿಬ್ಬಂದಿ ಜಡೇಗೌಡನ ಜಮೀನಿನ ಮೇಲೆ ದಾಳಿ ನಡೆಸಿದಾಗ, ರಾಗಿ ಜೊತೆ ಗಾಂಜಾ ಗಿಡಗಳು ಇದ್ದುದು ಪತ್ತೆಯಾಯಿತು.

ಜಡೇಗೌಡನನ್ನು ಬಂಧಿಸಿರುವ ಪೊಲೀಸರು, 60 ಕೆಜಿಯಷ್ಟು ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ.

ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 4

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !