ಸಂಸ್ಕೃತಿ ಪಸರಿಸುವಲ್ಲಿ ಸಮ್ಮೇಳನ ಯಶಸ್ವಿ

ಭಾನುವಾರ, ಮಾರ್ಚ್ 24, 2019
34 °C
ಡಾ.ಗಿರಿಧರ ಕಜೆ ಅಭಿಪ್ರಾಯ

ಸಂಸ್ಕೃತಿ ಪಸರಿಸುವಲ್ಲಿ ಸಮ್ಮೇಳನ ಯಶಸ್ವಿ

Published:
Updated:
Prajavani

ಬೆಂಗಳೂರು: ‘ನಗರದಲ್ಲಿ ಕಳೆದ ಡಿಸೆಂಬರ್‌ನಲ್ಲಿ ನಡೆದ ದ್ವಿತೀಯ ವಿಶ್ವ ಹವ್ಯಕ ಸಮ್ಮೇಳನ ನಮ್ಮ ಸಮುದಾಯದ ಸಂಸ್ಕೃತಿಯನ್ನು ನಾಡಿನಾದ್ಯಂತ ಪಸರಿಸುವಲ್ಲಿ ಯಶಸ್ವಿಯಾಗಿದೆ’ ಎಂದು ಅಖಿಲ ಹವ್ಯಕ ಮಹಾಸಭೆಯ ಅಧ್ಯಕ್ಷ ಡಾ.ಗಿರಿಧರ ಕಜೆ ಹೇಳಿದರು. 

ಮಲ್ಲೇಶ್ವರದಲ್ಲಿ ಭಾನುವಾರ ಸಂಘಟನೆಯ 75ನೇ ವಾರ್ಷಿಕ ಮಹಾಸಭೆಯಲ್ಲಿ ಅವರು ಮಾತನಾಡಿದರು.

‘ಪುಲ್ವಾಮ ದಾಳಿಯ ನಂತರ ದೇಶಾದ್ಯಂತ ಯೋಧರ ಜಾತಿ ಲೆಕ್ಕಾಚಾರ ಚರ್ಚೆಯಾಯಿತು. ಇಂತಹ ಕೀಳುಮಟ್ಟದ  ಚರ್ಚೆಗಳಿಗೆ ವಿಶ್ವ ಹವ್ಯಕ ಸಮ್ಮೇಳನದ‘ಹವ್ಯಕ ದೇಶ ರತ್ನ’ ಪುರಸ್ಕಾರ ಸ್ಪಷ್ಟ ಉತ್ತರ. ಯೋಧರನ್ನು ವಿಶೇಷವಾಗಿ ಗೌರವಿಸಿದ ಕೀರ್ತಿ ನಮ್ಮದು.
ಇದೀಗ ಅನ್ಯರಿಗೂ ಆದರ್ಶವಾಗಿದೆ’ ಎಂದರು.

‘ಸಮ್ಮೇಳನವನ್ನು ಬಹಿಷ್ಕರಿಸುವಂತೆ ಕೆಲವರು ಕರೆ ನೀಡಿದ್ದರು. ಆದರೆ ಅದಕ್ಕೆ ಸಮಾಜ ಸೊಪ್ಪು ಹಾಕಲಿಲ್ಲ. ಮೂರು ದಿನಗಳಲ್ಲಿ 75 ಸಾವಿರಕ್ಕಿಂತಲೂ ಹೆಚ್ಚು ಜನ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಇದು ಹವ್ಯಕ ಸಮಾಜದ ನಿಲುವೇನು ಎಂಬುದನ್ನು ಸೂಚಿಸುತ್ತದೆ’ ಎಂದು ಅಭಿಪ್ರಾಯಪಟ್ಟರು.ಮಾಜಿ ಅಧ್ಯಕ್ಷ ಶ್ರೀಧರ ಭಟ್ ಕಲಸಿ ಮಾತನಾಡಿದರು.

ಅಧ್ಯಕ್ಷರಾಗಿ ಡಾ.ಕಜೆ ಪುನರಾಯ್ಕೆ

ಡಾ. ಗಿರಿಧರ ಕಜೆ ಮಹಾಸಭೆಯ ಅಧ್ಯಕ್ಷರಾಗಿ ಪುನರಾಯ್ಕೆಯಾದರು. ಈ ಮೂಲಕ ಅವರು ನಾಲ್ಕನೇ ಬಾರಿಗೆ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಆರ್.ಎಂ. ಹೆಗಡೆ ಬಾಳೆಸರ ಹಾಗೂ ಕೆಕ್ಕಾರು ಶ್ರೀಧರ್ ಭಟ್ (ಉಪಾಧ್ಯಕ್ಷರು), ಸಿಎ ವೇಣುವಿಘ್ನೇಶ್ ಸಂಪ (ಪ್ರಧಾನ ಕಾರ್ಯದರ್ಶಿ), ಪ್ರಶಾಂತ ಭಟ್ ಯಲ್ಲಾಪುರ, ಶ್ರೀಧರ್ ಭಟ್ ಸಾಲೇಕೊಪ್ಪ (ಕಾರ್ಯದರ್ಶಿಗಳು) ಹಾಗೂ ಕೃಷ್ಣಮೂರ್ತಿ ಭಟ್ ಯಲಹಂಕ (ಕೋಶಾಧಿಕಾರಿ) ಆಯ್ಕೆಯಾದರು. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !