ಅಮೆರಿಕದಲ್ಲಿ ಆಡಳಿತ ಸ್ಥಗಿತ: ಇತಿಹಾಸ ಸೃಷ್ಟಿ

7
ಪ್ರಥಮ ಬಾರಿ 22 ದಿನಗಳ ಕಾಲ ಸರ್ಕಾರದ ಕಾರ್ಯನಿರ್ವಹಣೆಗೆ ಅಡ್ಡಿ

ಅಮೆರಿಕದಲ್ಲಿ ಆಡಳಿತ ಸ್ಥಗಿತ: ಇತಿಹಾಸ ಸೃಷ್ಟಿ

Published:
Updated:
Prajavani

ವಾಷಿಂಗ್ಟನ್‌: ಅಮೆರಿಕದಲ್ಲಿನ ಆಡಳಿತ ಸ್ಥಗಿತಗೊಂಡು ಶನಿವಾರಕ್ಕೆ 22 ದಿನಗಳಾಗಿವೆ.

ಅಮೆರಿಕದ ಇತಿಹಾಸದಲ್ಲೇ 22 ದಿನಗಳ ಕಾಲ ಆಡಳಿತ ಬಿಕ್ಕಟ್ಟು ಎದುರಾಗಿದ್ದು ಇದೇ ಮೊದಲು. 1995–96ರಲ್ಲಿ ಬಿಲ್‌ ಕ್ಲಿಂಟನ್‌ ಅಧ್ಯಕ್ಷರಾಗಿದ್ದಾಗ 21 ದಿನಗಳ ಕಾಲ ಆಡಳಿತ ಸ್ಥಗಿತಗೊಂಡಿತ್ತು.

ಅಂದಾಜು 8 ಲಕ್ಷಕ್ಕೂ ಹೆಚ್ಚು ಸರ್ಕಾರಿ ನೌಕರರು ಅನಿವಾರ್ಯವಾಗಿ ವೇತನರಹಿತ ರಜೆ ಮೇಲೆ ಮನೆಯಲ್ಲಿ ಉಳಿಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ಮೆಕ್ಸಿಕೊ ಗಡಿಯಲ್ಲಿ ಗೋಡೆ ನಿರ್ಮಿಸುವ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಪ್ರಸ್ತಾವಕ್ಕೆ ಸಂಸತ್‌ ಅನುಮೋದನೆ ನೀಡದ ಕಾರಣ ಈ ಬಿಕ್ಕಟ್ಟು ಸೃಷ್ಟಿಯಾಗಿದೆ. ಡೆಮಾಕ್ರಟಿಕ್‌ ಪಕ್ಷ ಗೋಡೆ ನಿರ್ಮಾಣ ದುಬಾರಿ ಮತ್ತು ಅನಗತ್ಯ ವೆಚ್ಚು ಎಂದು ಪ್ರತಿಪಾದಿಸಿ ಟ್ರಂಪ್‌ ಪ್ರಸ್ತಾವವನ್ನು ತಿರಸ್ಕರಿಸಿದೆ.

ಬರಹ ಇಷ್ಟವಾಯಿತೆ?

 • 10

  Happy
 • 2

  Amused
 • 1

  Sad
 • 2

  Frustrated
 • 2

  Angry

Comments:

0 comments

Write the first review for this !