ಗುಂಡ್ಲುಪೇಟೆಯಲ್ಲೂ ಮತದಾನ ಸರಾಗ

ಶುಕ್ರವಾರ, ಮೇ 24, 2019
23 °C

ಗುಂಡ್ಲುಪೇಟೆಯಲ್ಲೂ ಮತದಾನ ಸರಾಗ

Published:
Updated:
Prajavani

ಗುಂಡ್ಲುಪೇಟೆ: ಗುಂಡ್ಲುಪೇಟೆ ತಾಲ್ಲೂಕಿನಾದ್ಯಂತ ಗುರುವಾರ ಶಾಂತಿಯುತ ಮತದಾನವಾಗಿದೆ.

ಮತದಾನ ಆರಂಭವಾಗುತ್ತಿದ್ದಂತೆ ತಾಲ್ಲೂಕಿನ ಚಿಕ್ಕತೂಪ್ಪೂರು, ಕಗ್ಗಳ, ಶಿಂಡನಪುರ ಮತ್ತು ಕಗ್ಗಳ ಗ್ರಾಮದಲ್ಲಿ ಕೆಲ ಸಮಯ ಮತದಾನ ಯಂತ್ರ ಕೈ ಕೊಟ್ಟಿತ್ತು. ಬಳಿಕ ತಂತ್ರಜ್ಞರು ‌ಸರಿಪಡಿಸಿದರು.

ಕೂತನೂರು ಗ್ರಾಮದಲ್ಲಿ ಮೂಲ ಸೌಕರ್ಯ ಕಲ್ಪಿಸಿಲ್ಲ ಎಂದು ಕೆಲವರು ಮತದಾನ ಮಾಡದೆ ತಡ ಮಾಡಿದರು. ಬಳಿಕ ಸಂಜೆಯಾಗುತ್ತಿದ್ದಂತೆ ಮತದಾನ ಮಾಡಿದರು. ಚಿಕ್ಕತ್ತೂಪ್ಪೂರು ಗ್ರಾಮದಲ್ಲಿ ಬೆಳಿಗ್ಗೆ 8.30 ಆದರೂ ಮತಯಂತ್ರ ಕೆಟ್ಟಿದ್ದರಿಂದ ಮತದಾರರು ಕಾದರು. 11.30ರ ನಂತರ ಬಿರುಸಿನ ಮತದಾನವಾಯಿತು. ಮಧ್ಯಾಹ್ನದ ಹೊತ್ತು ಮಳೆ ಬಿದ್ದರೂ ಜನ ಮತಗಟ್ಟೆಗೆ ಬಂದರು.

ಶಾಸಕ ಸಿ.ಎಸ್.ನಿರಂಜನಕುಮಾರ್ ಅವರು ಚೌಡಹಳ್ಳಿ ಗ್ರಾಮದಲ್ಲಿ ಮತ್ತು ಮಾಜಿ ಸಚಿವೆ ಎಂ.ಸಿ.ಮೋಹನ ಕುಮಾರಿ ಅವರು ಹಾಲಹಳ್ಳಿ ಗ್ರಾಮದಲ್ಲಿ ಮತ ಚಲಾಯಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !