ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಿಯು ವಿದ್ಯಾರ್ಥಿಗಳಿಗಾಗಿ ಪ್ರಜಾವಾಣಿಯಿಂದ ಆನ್‌ಲೈನ್ ಬೋಧನಾ ಸರಣಿ

Last Updated 7 ಮಾರ್ಚ್ 2022, 12:19 IST
ಅಕ್ಷರ ಗಾತ್ರ

ಬೆಂಗಳೂರು:ಪಿಯುಸಿ ವಿದ್ಯಾರ್ಥಿಗಳು ಮುಂಬರುವ ಪರೀಕ್ಷೆಗಳಲ್ಲಿ ಉತ್ತಮ ಸಾಧನೆ ಮಾಡುವಂತಾಗಲುಪ್ರಜಾವಾಣಿಯು ಈ ಬಾರಿಯೂ ತನ್ನ ಫೇಸ್‌ಬುಕ್, ಟ್ವಿಟರ್ ಹಾಗೂ ಯೂಟ್ಯೂಬ್ ತಾಣಗಳಲ್ಲಿ ಕರ್ನಾಟಕದ AIDSO ಸಹಯೋಗದಲ್ಲಿ, ನಾಡಿನ ಪ್ರಮುಖ ಉಪನ್ಯಾಸಕರಿಂದ ಬೋಧನಾ ಸರಣಿಯನ್ನು ಆರಂಭಿಸಿದೆ. ಪರೀಕ್ಷೆಗೆ ಸಜ್ಜಾಗುತ್ತಿರುವ ದ್ವಿತೀಯ ಪಿಯು ವಿದ್ಯಾರ್ಥಿಗಳು ಹೆಚ್ಚು ಅಂಕ ಗಳಿಸುವಂತಾಗಲು ಈ ಸರಣಿ ನೆರವಾಗಲಿದೆ.

ಪ್ರಜಾವಾಣಿಯ ಫೇಸ್‌ಬುಕ್ (fb.com/prajavani.net), ಯೂಟ್ಯೂಬ್ (youtube.com/prajavani) ಹಾಗೂ ಟ್ವಿಟರ್ (twitter.com/prajavani) ತಾಣಗಳಲ್ಲಿ ಸೋಮವಾರ ಆರಂಭವಾಗಿರುವ ಸರಣಿಯು ಮಾರ್ಚ್ 21ರವರೆಗೆ ಪ್ರತಿ ದಿನ ಸಂಜೆ 4ರಿಂದ 6 ಗಂಟೆಯವರೆಗೆ ಪ್ರಸಾರವಾಗಲಿದೆ.

ದಾವಣಗೆರೆಯ ಇಂಗ್ಲಿಷ್ ಉಪನ್ಯಾಸಕ ಟಿ.ವಿ.ಸುಬ್ಬರಾಜು ಅವರಿಂದ ಮಾರ್ಚ್ 8, 9 ರಂದು ಇಂಗ್ಲಿಷ್ ಟಿಪ್ಸ್, ಮಾ.10, 11, 12ರಂದು ರಾಯಚೂರಿನ ವಿದ್ಯಾನಿಧಿ ಪಿಯು ಕಾಲೇಜಿನ ಉಪಪ್ರಾಂಶುಪಾಲರಾದ ಶಂಕರ್ ಎ. ಅವರಿಂದ ಅಕೌಂಟೆನ್ಸಿ ಟಿಪ್ಸ್ ಲಭ್ಯವಾಗಲಿದೆ.

ಮಾ.13, 14, 15ರಂದು ರಾಯಚೂರಿನ ವಿದ್ಯಾನಿಧಿ ಪಿಯು ಕಾಲೇಜಿನ ಪ್ರಾಂಶುಪಾಲರಾದ ಡಾ.ಚಂದ್ರಗಿರೀಶ್ ಅವರಿಂದ ಜೀವಶಾಸ್ತ್ರ ಟಿಪ್ಸ್, ಮಾ.16, 17, 18ರಂದು ಕಲಬುರಗಿಯ ಅಶ್ವಿನಿ ಎ. ಅವರಿಂದ ರಸಾಯನಶಾಸ್ತ್ರ ಟಿಪ್ಸ್ ಹಾಗೂ ಮಾ.19, 20 ಹಾಗೂ 21ರಂದು ಕಲಬುರಗಿಯ ಗಣಿತಶಾಸ್ತ್ರ ಉಪನ್ಯಾಸಕ ಮಂದಾರ ಹುಕ್ಕೇರಿ ಅವರಿಂದ ವಿದ್ಯಾರ್ಥಿಗಳಿಗೆ ಗಣಿತದ ಟಿಪ್ಸ್ ಲಭ್ಯವಾಗಲಿದೆ.

ಇದರ ವಿಡಿಯೊಗಳು ಪ್ರಜಾವಾಣಿಯ ಫೇಸ್‌ಬುಕ್, ಯೂಟ್ಯೂಬ್ ಮತ್ತು ಟ್ವಿಟರ್ ಪುಟಗಳಲ್ಲಿ ನೋಡಲು ಲಭ್ಯವಿರುತ್ತವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT