ಆರೋಗ್ಯ ತಪಾಸಣಾ ಉಚಿತ ಶಿಬಿರ ಇಂದು

ಶನಿವಾರ, ಏಪ್ರಿಲ್ 20, 2019
27 °C

ಆರೋಗ್ಯ ತಪಾಸಣಾ ಉಚಿತ ಶಿಬಿರ ಇಂದು

Published:
Updated:

ವಿಜಯಪುರ: ವಿಜಯಪುರ ತಾಲ್ಲೂಕಿನ ಕತ್ನಳ್ಳಿಯಲ್ಲಿ ನಡೆಯುತ್ತಿರುವ ಗುರು ಚಕ್ರವರ್ತಿ ಸದಾಶಿವ ಮಠದ ಜಾತ್ರಾ ಮಹೋತ್ಸವದ ಅಂಗವಾಗಿ ವಿವಿಧ ಸಂಘಟನೆಗಳ ವತಿಯಿಂದ ಸೋಮವಾರ (ಏ.8) ಆರೋಗ್ಯ ತಪಾಸಣಾ ಉಚಿತ ಶಿಬಿರ ಹಮ್ಮಿಕೊಳ್ಳಲಾಗಿದೆ.

ಕತ್ನಳ್ಳಿಯ ಮಾತೋಶ್ರೀ ಶಂಕ್ರೆಮ್ಮ ಪ್ರೌಢಶಾಲೆಯಲ್ಲಿ ಶಿಬಿರ ನಡೆಯಲಿದ್ದು, ನೇತ್ರ ತಪಾಸಣೆ, ಚಿಕ್ಕ ಮಕ್ಕಳ ಆರೋಗ್ಯ ತಪಾಸಣೆ, ಮಧುಮೇಹ, ರಕ್ತದೊತ್ತಡ, ಸ್ತ್ರೀರೋಗ, ಎಲುಬು ಹಾಗೂ ಕೀಲಿಗೆ ಸಂಬಂಧಿಸಿದಂತೆ ತಪಾಸಣೆ ನಡೆಯಲಿದೆ ಎಂದು ಸಿಂದಗಿ ತಾಲ್ಲೂಕಿನ ಕೋರವಾರದ ಸಹ್ಯಾದ್ರಿ ಗ್ರಾಮೀಣಾಭಿವೃದ್ಧಿ ಸಂಸ್ಥೆ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

ಲೀಡ್ ವೆಲಿಡಿಕ್ಟರಿ-2019 ಇಂದು

ವಿಜಯಪುರದ ಲೀಡರ್ಸ್‌ ಎಕ್ಸಲ್ರೇಟಿಂಗ್‌ ಡೆವಲಪ್‌ಮೆಂಟ್‌ ಪ್ರೋಗ್ರಾಮ್ ಮತ್ತು ಬಿ.ಎಲ್.ಡಿ.ಇ ಎಂಜಿನಿಯರಿಂಗ್ ಮಹಾ ವಿದ್ಯಾಲಯದ ಸಹಯೋಗದಲ್ಲಿ ಲೀಡ್ ವೆಲಿಡಿಕ್ಟರಿ-2019 ವಿದ್ಯಾರ್ಥಿ ನಾಯಕರ ಅಭಿನಂದನಾ ಸಮಾರಂಭವನ್ನು ಸೋಮವಾರ (ಏ.8) ಬೆಳಿಗ್ಗೆ 11.30ರಿಂದ 1.30ರವರಗೆ ಬಿ.ಎಲ್.ಡಿ.ಇ ಎಂಜಿನಿಯರಿಂಗ್ ಮಹಾವಿದ್ಯಾಲಯದಲ್ಲಿ ಹಮ್ಮಿಕೊಳ್ಳಲಾಗಿದೆ.

ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ವಿಕಾಸ್‌ ಕಿಶೋರ್‌ ಸುರಳಕರ್‌, ಕೃಷಿ ವಿಸ್ತರಣಾಧಿಕಾರಿ ಡಾ.ಆರ್.ಬಿ.ಬೆಳ್ಳಿ ಪಾಲ್ಗೊಂಡು ವಿಶೇಷ ಉಪನ್ಯಾಸ ನೀಡಲಿದ್ದಾರೆ.

ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರಾದ ಡಾ.ವಿನಾಯಕ ಗ್ರಾಮಪುರೋಹಿತ, ಅಗಸ್ತ್ಯ ವಿಜ್ಞಾನ ಪ್ರತಿಷ್ಠಾನದ ಗೀತಾ ಪಾಟೀಲ, ಲೀಡ್‌ಮ ಅಭಿನಂದನ ಕವ್ವಾಳೆ ಭಾಗಿಯಾಗಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !