ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂದು ‘ನೀಟ್‌’ ಪರೀಕ್ಷೆ ಡ್ರೆಸ್‌ ಕೋಡ್‌ ಕಡ್ಡಾಯ

Last Updated 5 ಮೇ 2018, 19:40 IST
ಅಕ್ಷರ ಗಾತ್ರ

ಬೆಂಗಳೂರು: ವೈದ್ಯಕೀಯ ಹಾಗೂ ದಂತ ವೈದ್ಯಕೀಯ ಕೋರ್ಸ್‌ಗಳಿಗೆ ನಡೆಸಲಾಗುವ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ (ನೀಟ್‌) ಭಾನುವಾರ (ಮೇ6) ದೇಶದಾದ್ಯಂತ ನಡೆಯಲಿದೆ.

ಪರೀಕ್ಷೆಗೆ 13,26,725 ವಿದ್ಯಾರ್ಥಿಗಳು ನೋಂದಣಿ ಮಾಡಿಕೊಂಡಿದ್ದು 136 ನಗರಗಳ 2,255 ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ. ಕರ್ನಾಟಕದಿಂದ 96,377 ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಿದ್ದು 187 ಕೇಂದ್ರಗಳಿವೆ.

ಡ್ರೆಸ್‌ ಕೋಡ್‌:  ಅಭ್ಯರ್ಥಿಗಳು ತೆಳುವಾದ ಅರ್ಧ ತೋಳಿನ ಧಿರಿಸು ತೊಟ್ಟಿರಬೇಕು. ಧಿರಿಸಿಗೆ ದೊಡ್ಡ ಬಟನ್‌, ಬ್ಯಾಡ್ಜ್‌ ಇರಬಾರದು. ದುಪಟ್ಟಾ ಧರಿಸಿರ
ಬಾರದು. ಶೂ ಧರಿಸುವಂತಿಲ್ಲ. ವ್ಯಾಲೆಟ್‌, ಗಾಗಲ್ಸ್‌, ಹ್ಯಾಂಡ್‌ಬ್ಯಾಗ್‌, ಬೆಲ್ಟ್‌, ಟೋಪಿ, ಕೈಗಡಿಯಾರ, ಬ್ರೇಸ್‌ಲೆಟ್‌, ಕ್ಯಾಮೆರಾ, ಕಿವಿಯೋಲೆ, ಉಂಗುರ, ಮೂಗುತಿ, ನೆಕ್ಲೆಸ್‌, ಪೆಂಡೆಂಟ್‌ ಇವುಗಳನ್ನು ಧರಿಸಿ ಪರೀಕ್ಷಾ ಕೊಠಡಿಗೆ ಪ್ರವೇಶಿಸುವಂತಿಲ್ಲ.

ಪರೀಕ್ಷಾ ಕೇಂದ್ರ ಪ್ರವೇಶ– ಬೆಳಿಗ್ಗೆ 7.30

ಪರೀಕ್ಷಾ ಕೇಂದ್ರಕ್ಕೆ 9.30ರ ನಂತರ ಪ್ರವೇಶಕ್ಕೆ ಅವಕಾಶವಿಲ್ಲ

ಹಾಲ್‌ ಟಿಕೆಟ್‌ ತಪಾಸಣೆ– ಬೆಳಿಗ್ಗೆ 7.30– 9.45

ಪರೀಕ್ಷೆ ಪ್ರಾರಂಭ– ಬೆಳಿಗ್ಗೆ 10

ಪರೀಕ್ಷೆ ಮುಕ್ತಾಯ– ಮಧ್ಯಾಹ್ನ 1

ಫಲಿತಾಂಶ ಪ್ರಕಟ– ಜೂನ್‌ 5

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT