ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಿಮೋಥೆರಪಿ: ಚಿಕಿತ್ಸೆ ನಂತರವೂ ಚೆನ್ನಾಗಿ ನಿದ್ರಿಸಿ

Last Updated 21 ಜೂನ್ 2019, 19:30 IST
ಅಕ್ಷರ ಗಾತ್ರ

ಕ್ಯಾನ್ಸರ್ ಎಂದರೇ ಭಯ, ಆತಂಕಕ್ಕೆ ದೂಡುವಂತಹ ಕಾಯಿಲೆ. ಚಿಕಿತ್ಸೆ ಪಡೆದ ಮೇಲೂ ಅಡ್ಡ ಪರಿಣಾಮಗಳು ಹಲವು. ಸಂಶೋಧನೆಗಳ ಪ್ರಕಾರ ಶೇ 30- 50ರಷ್ಟು ಕ್ಯಾನ್ಸರ್ ರೋಗಿಗಳು ನಿದ್ದೆ ಮಾಡಲು ತೊಂದರೆ ಪಡುತ್ತಾರೆ. ಇದಕ್ಕೆ ಕಾರಣ ಕಿಮೋಥೆರಪಿ ಔಷಧಗಳಲ್ಲಿ ನೂರಾರು ಬಗೆಗಳದ್ದು ಪ್ರತಿಯೊಂದೂ ತನ್ನದೇ ಆದ ರಾಸಾಯನಿಕ ಸಂಯೋಜನೆಯನ್ನು ಹೊಂದಿರುತ್ತದೆ ಹಾಗೂ ಅಡ್ಡ ಪರಿಣಾಮವನ್ನು ಉಂಟುಮಾಡುತ್ತದೆ. ಇದು ನಿದ್ರಿಸಲು ಸಮಸ್ಯೆ ಒಡ್ಡಬಹುದು. ಇದಕ್ಕಾಗಿ ಹತಾಶೆ ಪಡಬೇಕಾಗಿಲ್ಲ.

ನಿದ್ದೆಯು ಗುಣಪಡಿಸುವ ಪ್ರಕ್ರಿಯೆಯನ್ನು ಚುರುಕುಗೊಳಿಸುತ್ತದೆ. ಕತ್ತಲು ವಾತಾವರಣದಲ್ಲಿ ನಿದ್ದೆ ಮಾಡುವುದು ಉತ್ತಮ. ಏಕೆಂದರೆ ಕ್ಯಾನ್ಸರ್ ಅನ್ನು ದೂರ ಇಡಲು ಅಗತ್ಯ ಅಂಶವಾದ ಮೆಲಾಟೊನಿನ್ ಉತ್ಪತ್ತಿಗೆ ಇದು ಕಾರಣವಾಗುತ್ತದೆ. ದುಗ್ಧಕೋಶಗಳ ಪರಿಣಾಮಕಾರಿಯಾದ ಹೆಚ್ಚಳಕ್ಕೆ ಮತ್ತು ಫಾರಿನ್ ಇನ್‌ವೇಡರ್‌ಗಳನ್ನು ದೂರವಿಡಲು ಅಗತ್ಯವಾದ ಬಿಳಿ ರಕ್ತಕಣಗಳನ್ನು ಹೆಚ್ಚು ಮಾಡುತ್ತದೆ. ಈ ಮೂಲಕ ದೇಹದ ರೋಗ ನಿರೋಧಕ ವ್ಯವಸ್ಥೆಯನ್ನು ಉತ್ತಮಪಡಿಸುತ್ತದೆ.

ಕಿಮೋ ಚಿಕಿತ್ಸೆ ಪಡೆಯುತ್ತಿರುವವರು ಉತ್ತಮವಾದ ನಿದ್ದೆ ಮಾಡಲು ಟಿಪ್ಸ್ ಇಲ್ಲಿವೆ

ನೀವು ನಿದ್ದೆ ಮಾಡಬೇಕಾದರೆ ಆತಂಕ ಬಿಡುವುದು ಮುಖ್ಯ. ಈ ಆತಂಕವನ್ನು ದೂರ ಮಾಡುವ ಔಷಧಿಗಳ ಬಗ್ಗೆ ವೈದ್ಯರ ಬಳಿ ಚರ್ಚಿಸಿ. ಏಕೆಂದರೆ ಕಿಮೋಥೆರಪಿ ಕ್ಯಾನ್ಸರ್ ಚಿಕಿತ್ಸೆ ಯಶಸ್ವಿಯಾಗಬೇಕಾದರೆ, ಕ್ಯಾನ್ಸರ್ ವಿರುದ್ಧ ಹೋರಾಟ ನಡೆಸಲು ಶಕ್ತಿ ನೀಡುವುದು ಅಗತ್ಯವಿರುವಷ್ಟು ನಿದ್ರೆ. ನೀವು ಚಿಂತೆಯನ್ನು ಬಿಡಲೂ ಕೂಡ ಈ ನಿದ್ರೆ ನೆರವು ನೀಡುತ್ತದೆ.

ಹಗಲಿನ ವೇಳೆ ಎಚ್ಚರವಾಗಿರಲು ಪ್ರಯತ್ನಿಸಿ. ಹಗಲಿನ ವೇಳೆ ಆದಷ್ಟೂ ಎಚ್ಚರವಾಗಿದ್ದರೆ ನಿದ್ದೆಯ ಕೊರತೆ ಉಂಟಾಗಿ ರಾತ್ರಿ ಬೇಗನೇ ನಿದ್ದೆ ಬರುತ್ತದೆ. ಅದರರ್ಥ ನೀವು ಮಲಗಲೇಬಾರದು ಮತ್ತು ಕೆಲ ಕಾಲ ವಿಶ್ರಾಂತಿ ತೆಗೆದುಕೊಳ್ಳಬಾರದು ಎಂದಲ್ಲ. ಆದರೆ, ಹಗಲಿನ ವೇಳೆ ನಿದ್ದೆ ಮಾಡುವ ಅಭ್ಯಾಸವನ್ನು ಕಡಿಮೆ ಮಾಡಿಕೊಳ್ಳಬೇಕು. ಇದಾಗದಿದ್ದರೆ ರಾತ್ರಿ ವೇಳೆ ನಿದ್ದೆ ಕಡಿಮೆಯಾಗುತ್ತದೆ.

ದೈನಂದಿನ ನಿದ್ದೆಯ ವೇಳಾಪಟ್ಟಿಯನ್ನು ಅನುಸರಿಸಿ. ಮಕ್ಕಳು ಮತ್ತು ಸಾಕು ಪ್ರಾಣಿಗಳು ನಿದ್ರೆಗಾಗಿ ವೇಳಾಪಟ್ಟಿ ಅನುಸರಿಸುತ್ತವೆ. ನಿದ್ದೆಗೆ ಸಮಯ ಮತ್ತು ಜಾಗ ಅತ್ಯಂತ ಪ್ರಮುಖವಾದುದು. ನಿದ್ದೆ ಬಂದಾಗ ನಿಮ್ಮ ದೇಹವು ಸೂಚನೆ ನೀಡುತ್ತದೆ ಮತ್ತು ಶಕ್ತಿಯು ಕುಸಿಯುತ್ತದೆ. ನಿದ್ದೆ ಮಾಡಲು ನೀವು ಸಮಯಕ್ಕಾಗಿ ಗಡಿಯಾರವನ್ನು ಎದುರು ನೋಡುತ್ತಾ ಇರಬೇಡಿ. ಆರಾಮ ಮಾಡಿ ಮತ್ತು ನಿದ್ದೆ ತನ್ನಿಂದ ತಾನೇ ಬರುತ್ತದೆ.

ನಿದ್ದೆಗೆ ಎರಡು ಗಂಟೆ ಮುನ್ನ ಆಹಾರ ಸೇವಿಸಬೇಡಿ ಅಥವಾ ವ್ಯಾಯಾಮ ಮಾಡಬೇಡಿ. ನೀವು ನಿದ್ದೆ ಮಾಡಲು ಹೋಗುವ ಮುನ್ನ ನಿಮ್ಮ ದೇಹವನ್ನು ಹಗುರವಾಗಿಟ್ಟುಕೊಳ್ಳಿ.

ಆಲ್ಕೋಹಾಲ್ ಮತ್ತು ತಂಬಾಕಿನಿಂದ ದೂರವಿರಿ. ಈ ಉತ್ಪನ್ನಗಳು ನಿದ್ರಾ ವ್ಯವಸ್ಥೆಯನ್ನೇ ಛಿದ್ರಗೊಳಿಸುತ್ತವೆ ಮತ್ತು ಕ್ಯಾನ್ಸರ್ ಗೆಡ್ಡೆಯ ಮೇಲೆ ನೀಡುವ ಕಿಮೋ ಔಷಧಿಗಳಿಗೆ ವ್ಯತಿರಿಕ್ತವಾಗಿರುತ್ತವೆ.

ನಿದ್ದೆಯ ದಿನಚರಿ ಇಟ್ಟುಕೊಳ್ಳಿ. ನಿದ್ರಾ ದಿನಚರಿಯನ್ನು ಇಟ್ಟುಕೊಂಡರೆ ನಿಮ್ಮ ಮಲಗುವ ಹವ್ಯಾಸವನ್ನು ಸುಧಾರಿಸಿಕೊಳ್ಳಬಹುದು. ಉದಾಹರಣೆಗೆ ಒಂದು ವೇಳೆ ನಿಮಗೆ ಅತಿಯಾದ ಅಥವಾ ವಿಲಕ್ಷಣವಾದ ನೋವು ಕಾಣಿಸಿಕೊಂಡರೆ, ವಾಕರಿಕೆ ಬಂದರೆ ನಿಮ್ಮ ಕ್ಯಾನ್ಸರ್ ಆರೈಕೆ ತಂಡಕ್ಕೆ ತಿಳಿಸಿ.

ನಿಮ್ಮ ನಿದ್ದೆಯನ್ನು ಸುಧಾರಿಸಿಕೊಳ್ಳಲು ಈ ಕೆಳಗಿನ ಮಾರ್ಗಗಳು ನಿಮಗೆ ನೆರವಾಗುತ್ತವೆ: ಮಾನಸಿಕ ವರ್ತನೆಯ ಚಿಕಿತ್ಸೆಯನ್ನು ನಾನ್-ಫಾರ್ಮಾಕೊಲೊಜಿಕಲ್ ಚಿಕಿತ್ಸೆ ಮಾದರಿಗಳಲ್ಲಿ ಶಿಫಾರಸು ಮಾಡಲಾಗುತ್ತದೆ. ಇದನ್ನು ರೋಗಿಯ ಆಲಸ್ಯ, ಆಶಾವಾದದ ಮಟ್ಟ ಮತ್ತು ನಿದ್ದೆಯ ಮಾದರಿಗಳ ವರ್ತನೆಯನ್ನು ಪರೀಕ್ಷೆ ಮಾಡಲು ಬಳಸಲಾಗುತ್ತದೆ. ಇದು ಕ್ಯಾನ್ಸರ್‌ನಿಂದ ಬದುಕುಳಿದವರಲ್ಲಿನ ನಿದ್ರಾಹೀನತೆಗೆ ಸೂಕ್ತ ಚಿಕಿತ್ಸೆ ಎಂಬುದನ್ನು ವರದಿಗಳು ದೃಢಪಡಿಸುತ್ತವೆ. ಕ್ಯಾನ್ಸರ್‌ನಿಂದ ಬದುಕುಳಿದವರಲ್ಲಿನ ನಿದ್ರಾಹೀನತೆ ಮತ್ತು ಅದಕ್ಕೆ ಸೂಕ್ತ ಚಿಕಿತ್ಸೆ ಕುರಿತು ಹೆಚ್ಚಿನ ಮಾಹಿತಿಯನ್ನು ಈ ಲಿಂಕ್‌ನಲ್ಲಿ ಓದಬಹುದು:-Treating insomnia for cancer survivors - an introduction to cognitive behavioural therapy.

ಚೈನೀಸ್ ಔಷಧದಿಂದ ಬಂದಿರುವ ಸಾಂಪ್ರದಾಯಿಕ ತಾಂತ್ರಿಕತೆಯ ಚಿಕಿತ್ಸೆಯೆಂದರೆ ಆಕ್ಯುಪಂಕ್ಚರ್. ಇದು ನರವೈಜ್ಞಾನಿಕ ಯಾಂತ್ರಿಕ ವ್ಯವಸ್ಥೆಯಾಗಿದ್ದು, ನಿಖರವಾದ ಆಕ್ಯುಪಾಯಿಂಟ್ ಆಗಿ ಕಾರ್ಯನಿರ್ವಹಿಸಿ ವ್ಯಕ್ತಿಯ ದೇಹದಲ್ಲಿನ ನೋವು, ಆತಂಕ ಮತ್ತು ನಿದ್ರಾಹೀನತೆಯಂತಹ ಸಮಸ್ಯೆಗಳನ್ನು ಪರಿಹಾರ ಮಾಡುತ್ತದೆ. ಹಲವಾರು ಅಧ್ಯಯನಗಳು ಇದರ ಗುಣಾತ್ಮಕ ಪರಿಣಾಮಗಳನ್ನು ದೃಢಪಡಿಸಿವೆ. ಈ ಹಿನ್ನೆಲೆಯಲ್ಲಿ ವೈದ್ಯರ ಸಲಹೆಗಳನ್ನು ಪಡೆಯಿರಿ.

ನಿಮ್ಮ ವೈದ್ಯಕೀಯ ತಂಡದ ಜೊತೆ ಸಂಪರ್ಕ ಇಟ್ಟುಕೊಳ್ಳಿ. ಇದಲ್ಲದೇ, ಹರ್ಬಲ್ ಔಷಧಗಳು ಸಹ ಸಹಾಯಕಾರಿಯಾಗಿವೆ.
ನಾನ್-ಫಾರ್ಮಾ ಕೊಲೊಜಿಕಲ್ ಚಿಕಿತ್ಸೆಗಳ ಹೊರತಾಗಿ ನಿದ್ದೆ ಬರುವಂತೆ ಮಾಡಲು ರಿಲಾಕ್ಷೇಶನ್ ಥೆರಪಿ, ಧ್ಯಾನ, ಯೋಗ ಮತ್ತು ಸ್ಟಿಮ್ಯುಲಸ್ ಕಂಟ್ರೋಲ್ ಥೆರಪಿಗಳೂ ಇವೆ. ಒಮ್ಮೆ ನೀವು ಔಷಧಿಗಳನ್ನು, ಅದಕ್ಕೆ ಪೂರಕವಾದ ನೆರವನ್ನು ಮುಂದುವರಿಸಿದ್ದೇ ಆದಲ್ಲಿ ನೀವು ಹಾಸಿಗೆಗೆ ಹೋದ ತಕ್ಷಣ ನಿದ್ದೆಗೆ ಜಾರುತ್ತೀರಿ.

(ಲೇಖಕರು ಅಂಕೋ.ಕಾಂ.ಸಹ ಸಂಸ್ಥಾಪಕರು)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT