ಗುರುವಾರ , ಜೂನ್ 24, 2021
21 °C

ಕೊರೊನಾ ಸಾಂತ್ವನ: ‘ಧೂಮಪಾನ ಬಿಡಿ, ಪ್ರಾಣಾಯಾಮ ಮಾಡಿ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋವಿಡ್‌ ಹೆಚ್ಚಾಗುತ್ತಿರುವ ಈ ಹೊತ್ತಿನಲ್ಲಿ ಶ್ವಾಸಕೋಶವನ್ನು ಆರೋಗ್ಯಯುತವಾಗಿ ಇಟ್ಟುಕೊಳ್ಳುವುದು ಬಹಳ ಮುಖ್ಯ. ಧೂಮಪಾನದ ಚಟವಿದ್ದವರು ತಕ್ಷಣ ತ್ಯಜಿಸಬೇಕು. ಇಲ್ಲವಾದರೆ, ಶ್ವಾಸಕೋಶ ಸೋಂಕಿಗೆ ತುತ್ತಾಗುವ ಅಪಾಯ ಹೆಚ್ಚಾಗಿರುತ್ತದೆ.

ವಾಕಿಂಗ್‌ ಅಭ್ಯಾಸ ಇಲ್ಲದವರು ರೂಢಿಸಿಕೊಳ್ಳಿ. ಉಸಿರಾಡಲು ಕಷ್ಟವಾಗದಂತಹ ಮಾಸ್ಕ್‌ ಧರಿಸಿ, ಗಿಡಮರಗಳು ಹೆಚ್ಚಾಗಿರುವ ಕಡೆ ವಾಕ್ ಮಾಡಿ. ದೀರ್ಘ ಉಸಿರು ಎಳೆದುಕೊಂಡು ಮನಸ್ಸಿನಲ್ಲಿ 1ರಿಂದ 10 ಸಂಖ್ಯೆಯನ್ನು ಎಣಿಸಿದ ಬಳಿಕ ಉಸಿರು ಹೊರಗೆ ಬಿಡುವ ಅಭ್ಯಾಸ ಪಾಲಿಸಿ. ಪ್ರಾಣಾಯಾಮ ಕೂಡ ಶ್ವಾಸಕೋಶ ಬಲಗೊಳ್ಳಲು ಸಹಕಾರಿ. ಒಂದೇ ಭಂಗಿಯಲ್ಲಿ ಹೆಚ್ಚು ಹೊತ್ತು ಮಲಗುವ ಅಭ್ಯಾಸ ಬಿಟ್ಟು, ಆಗಾಗ ಭಂಗಿ ಬದಲಿಸಿ. ಸೋಂಕಿತರು ಹೊಟ್ಟೆ ಕೆಳಗಾಗಿ ಮಲಗಿದರೆ ಒಳಿತು.

ಹೆಚ್ಚು ಮಾಲಿನ್ಯವಿರುವ ಪ್ರದೇಶಗಳಿಗೆ ಹೋಗುವುದು ಬೇಡ. ಕಟ್ಟಿಗೆ ಒಲೆ ಉಪಯೋಗ ಕಡಿಮೆ ಮಾಡಿ. ಜಂಕ್‌ ಫುಡ್‌ಗಳ ಸೇವನೆ ಬೇಡ. ಹೆಚ್ಚು ಕಫಕ್ಕೆ ಕಾರಣವಾಗುವ ಆಹಾರಗಳಿಂದ ದೂರವಿರಿ. ನಿತ್ಯ ಬಿಸಿನೀರಿನ ಸೇವನೆ ಇರಲಿ, ಅಡುಗೆಯಲ್ಲಿ ಅರಿಶಿನ, ಕರಿಮೆಣಸು ಬಳಕೆ ಇರಲಿ. ದಿನಕ್ಕೆ ಎರಡು ಬಾರಿ ಸ್ಟೀಮ್‌ ತೆಗೆದುಕೊಳ್ಳಬಹುದು.

ಸೋಂಕಿತರು ಮನೆಯಲ್ಲಿ ಪಲ್ಸ್‌ ಆಕ್ಸಿಮೀಟರ್‌ ಇಟ್ಟುಕೊಂಡು, ದಿನಕ್ಕೆ ಮೂರ್ನಾಲ್ಕು ಸಲ ಆಮ್ಲಜನಕ ಪ್ರಮಾಣ ಪರೀಕ್ಷಿಸಿಕೊಳ್ಳಿ. ಮೇಲಿನ ಕ್ರಮಗಳನ್ನು ಪಾಲಿಸಿದರೆ ಶ್ವಾಸಕೋಶವನ್ನು ಆರೋಗ್ಯವಾಗಿ ಇಟ್ಟುಕೊಳ್ಳಬಹುದು. ಆದರೆ, ಕೋವಿಡ್‌ ಬಾರದಂತೆ ಎಚ್ಚರಿಕೆ ವಹಿಸಬೇಕಾದರೆ, ಮಾಸ್ಕ್ ಧರಿಸಬೇಕು, ಆಗಾಗ ಕೈತೊಳೆಯಬೇಕು, ಕೋವಿಡ್‌ ಲಸಿಕೆ ಹಾಕಿಸಿಕೊಳ್ಳಬೇಕು.
-ಡಾ.ಶಶಿಕಿರಣ್ ಉಮಾಕಾಂತ್‌, ಡಾ.ಟಿಎಂಎ ಪೈ ಆಸ್ಪತ್ರೆಯ ಅಧೀಕ್ಷಕ, ಉಡುಪಿ

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು