ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಗತ್ತನ್ನು ಸಂಕಷ್ಟಕ್ಕೆ ದೂಡಿರುವ ‘ಸೂಪರ್ ಬಗ್ಸ್’

Last Updated 6 ಜನವರಿ 2022, 2:05 IST
ಅಕ್ಷರ ಗಾತ್ರ

ಹಲವು ವರ್ಷಗಳಿಂದ ಪ್ರಪಂಚವನ್ನು ಆವರಿಸಿರುವ ಕಾಯಿಲೆಗಳಿಗೆ ಮುಖ್ಯ ಕಾರಣವೆಂದರೆ ಸೂಕ್ಷ್ಮಜೀವಿಗಳು. ಹಿಂದೆಂದೂ ಕೇಳದ ಅರಿಯದ ಈ ಜೀವಿಗಳು ಜನಜೀವನವನ್ನು ಅಸ್ಥಿರಗೊಳಿಸಿದೆ. ಆಧುನಿಕ ವೈದ್ಯಕೀಯ ವಿಜ್ಞಾನವು ಮುಂದುವರಿದಂತೆ ಈ ರೋಗಾಣುಗಳ ವಿರುದ್ಧ ಔಷಧಿಗಳನ್ನು ಆವಿಷ್ಕರಿಸಿ ಅನೇಕ ಜನರ ಪ್ರಾಣವನ್ನು ಉಳಿಸಿವೆ. ಆದರೆ ಈ ಸೂಕ್ಷ್ಮಜೀವಿಗಳು ಸಹ ತಾವೇನು ಕಡಿಮೆಯಿಲ್ಲವೆಂಬಂತೆ ತಮ್ಮ ಯುದ್ಧವನ್ನು ಮುನುಷ್ಯರ ಮೇಲೆ ಸಾಧಿಸುತ್ತಿವೆ. ಆಧುನಿಕ ವಿಜ್ಞಾನವು ಆವಿಷ್ಕರಿಸಿದ ಔಷಧಿಗಳಿಗೆ ತಾವುಗಳು ಸೋಲುವುದಿಲ್ಲ ಎಂಬಪ್ರತ್ಯುತ್ತರ ನೀಡುತ್ತಿವೆ. ಇಂತಹ ಸೂಕ್ಷ್ಮಜೀವಿಗಳನ್ನು ‘ಸೂಪರ್ ಬಗ್ಸ್’ಎನ್ನಬಹುದಾಗಿದೆ.

*ಮನುಷ್ಯನಲ್ಲಿನ ಅನೇಕ ಸೋಂಕುಗಳಿಂದಾಗುವ ಸಾವಿಗೆ ಮುಖ್ಯ ಕಾರಣವೆಂದರೆ ಅದು ಬ್ಯಾಕ್ಟೀರಿಯಗಳಿರಬಹುದು, ವೈರಾಣುಗಳಿರಬಹುದು ಪರಾವಲಂಬಿ ಜೀವಿಗಳಿರಬಹುದು ಅಥವಾಶಿಲೀಂಧ್ರಗಳಿರಬಹುದು. ಆದರೆ, ಮನುಷ್ಯನ ಆವಿಷ್ಕಾರಗಳಲ್ಲಿ ಒಂದಾದ ಆ್ಯಂಟಿಬಯಾಟಿಕ್‌ಗಳು ಈ ಸೂಕ್ಷ್ಮಜೀವಿಗಳ ವಿರುದ್ಧ ಇರುವ ರಾಮಬಾಣ. ಆದರೆ ಇತ್ತೀಚಿನ ದಿನಗಳಲ್ಲಿ ಈ ಸೂಕ್ಷ್ಮಜೀವಿಗಳು ಆ್ಯಂಟಿಬಯಾಟಿಕ್‌ಗಳ ವಿರುದ್ಧ ಸಮರ ಸಾರಿ ಜಯಗಳಿಸಲಾರಂಭಿಸಿವೆ. ಇದನ್ನು ‘ಆ್ಯಂಟಿಬಯಾಟಿಕ್ ರೆಸಿಸ್ಟೆನ್ಸ್’ ಅಥವಾ ಆ್ಯಂಟಿಬಯಾಟಿಕ್ ಪ್ರತಿರೋಧ ಎನ್ನಬಹುದಾಗಿದೆ.

*ಇದರಿಂದಾಗಿ ಅನೇಕ ಸೋಂಕುಗಳ ಚಿಕಿತ್ಸೆಗಾಗಿ ಬಳಸುತ್ತಿದ್ದ ಆ್ಯಂಟಿಬಯಾಟಿಕ್ ಗಳು ನಿಷ್ಪಯೋಜಕವಾಗುತ್ತಿವೆ.

ಏನಿದು ಸೂಪರ್ ಬಗ್ಸ್ ?

*ಇವುಗಳು ಸೂಕ್ಷ್ಮಜೀವಿಗಳ ತಳಿಗಳಾಗಿದ್ದು ಇವುಗಳ ನಾಶಕ್ಕೆ ಹಿಂದೊಮ್ಮೆ ಬಳಸುತ್ತಿದ್ದ ಆ್ಯಂಟಿಬಯಾಟಿಕ್‌ಗಳ ವಿರುದ್ಧ ಪ್ರತಿರೋಧವನ್ನು ಬೆಳಸಿಕೊಂಡಿರುವಂತಹದ್ದು.

*ಉದಾಹರಣೆಗೆ ನ್ಯೂಮೋನಿಯಾ ಮುಂತಾದ ಕಾಯಿಲೆಗೆ ಕಾರಣವಾದ ಸ್ಟೆಫೈಲೋಕಾಕಲ್ ಆರಿಯಸ್ಸೂಕ್ಷ್ಮಜೀವಿಯು ಮೆತಸಿಲಿನ್ ಎಂಬ ಔಷಧಿಗೆ ಅಂದರೆ ಈ ರೋಗವನ್ನು ಗುಣಪಡಿಸಲು ಬಳಸುತ್ತಿದ್ದ ಔಷಧಿಗೆ ಪ್ರತಿರೋಧವನ್ನು ಬೆಳಸಿಕೊಂಡಿರುವುದು ಅಂತೆಯೇ ಟಿ.ಬಿ ಯಂತಹ ಶ್ವಾಸಕೋಶದ ಸಂಬಂಧಿ ಸೋಂಕನ್ನು ನಿವಾರಿಸಲು ದಕ್ಷವಾಗಿ ಬಳಸುತ್ತಿದ್ದ ಕ್ಷಯ ವಿರೋಧಿ ಔಷಧಿಗಳ ವಿರುದ್ಧವು ಪ್ರತಿರೋಧವನ್ನು ಬೆಳಸಿಕೊಂಡಿವೆ.

ಈ ಸೂಕ್ಷ್ಮಜೀವಿಗಳು ಆ್ಯಂಟಿಬಯಾಟಿಕ್‌ಗಳ ವಿರುದ್ಧ ಪ್ರತಿರೋಧವನ್ನು ಬೆಳಸಿಕೊಳ್ಳಲು ಕಾರಣಗಳೇನು?

* ಆ್ಯಂಟಿಬಯಾಟಿಕ್‌ಗಳನ್ನು ಸಮಯೋಚಿತವಾಗಿ ಬಳಸದೇ ಇರುವುದು

* ಶುದ್ಧವಾದ ಕುಡಿಯುವ ನೀರು ಹಾಗೂ ನೈರ್ಮಲ್ಯದ ಕೊರತೆ

* ಕೈಗಾರಿಕಾ ಹರಿವುಗಳು ಹಾಗೂ ಅದರ ನಿರ್ವಹಣೆಯಲ್ಲಿ ವ್ಯತ್ಯಯ

* ಸೂಕ್ಷ್ಮಜೀವಿಗಳಲ್ಲಾಗುವ ರೂಪಾಂತರ / ಜೆನಿಟಿಕ್ ಮ್ಯುಟೇಷನ್‌ಗಳು

‌ಸೂಪರ್‌ಬಗ್‌ಗಳು ಹರಡುವುದನ್ನು ತಡೆಯುವ ಬಗೆ

* ಆ್ಯಂಟಿಬಯಾಟಿಕ್‌ಗಳನ್ನು ಅವಶ್ಯಕತೆಯಿದ್ದಲ್ಲಿ ಹಾಗೂ ಸಮಯೋಚಿತವಾಗಿ ಬಳಸುವುದು

* ಆ್ಯಂಟಿಬಯಾಟಿಕ್‌ಗಳು ತಪ್ಪು ಬಳಕೆ ಹಾಗೂ ಅತಿಯಾಗಿ ಬಳಸುವುದನ್ನು ತಪ್ಪಿಸುವುದು, ವೈದ್ಯರ ಸಮಾಲೋಚನೆಯೊಂದಿಗೆ ಎಷ್ಟು ಬಾರಿ, ಎಷ್ಟು ಪ್ರಮಾಣ, ಎಷ್ಟು ದಿನ ತೆಗೆದುಕೊಳ್ಳಬೇಕೆಂಬುದನ್ನು ಪಾಲಿಸುವುದು

* ನೈರ್ಮಲ್ಯತೆ ಹಾಗೂ ಶುದ್ಧ ನೀರಿದ ಸರಬರಾಜು

* ವೈಯಕ್ತಿಕ ಸ್ವಚ್ಛತೆ, ಕೈಗಳ ಸ್ವಚ್ಛತೆಯ ಕಡೆಗೆ ಗಮನ ಹರಿಸುವುದು

* ಆರೋಗ್ಯ ರಕ್ಷಣಾ ಕೇಂದ್ರಗಳಲ್ಲಿ ಸ್ವಚ್ಛತೆಗೆ ಪ್ರಾಮುಖ್ಯತೆ ನೀಡುವುದು

* ಸಾಮಾನ್ಯ ಜನರಿಗೆ ಅರಿವು ಮೂಡಿಸುವುದು

* ಔಷಧಿಗಳ ಬಳಕೆಯಲ್ಲಿ ಧೃಢವಾದ ನೀತಿಗಳನ್ನು ಸ್ಥಳೀಯ, ರಾಷ್ಟ್ರಮಮಟ್ಟ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಅಳವಡಿಸುವುದು.

ಮುಂದೊಂದು ದಿನ ಸೋಂಕಿನ ವಿರುದ್ಧದ ಅತ್ಯಂತ ಪರಿಣಾಮಕಾರಿ ಆ್ಯಂಟಿಬಯಾಟಿಕ್‌ಗಳ ಬಳಕೆಯನ್ನು ನಿಷ್ಪಯೋಜಕ ಮಾಡುವಂತಹ ಶಕ್ತಿಯುಳ್ಳ ಸೂಪರ್ ಬಗ್‌ಗಳ ಬಗ್ಗೆ ಎಚ್ಚರವಿರಲಿ.

ಲೇಖಕಿ: ಓರಲ್ ಮೆಡಿಸಿನ್ ಅಂಡ್ ರೇಡಿಯೋಲಾಜಿ ತಜ್ಞರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT