ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌–19 ದೃಢಪಟ್ಟರೆ ಮಧುಮೇಹವೂ ಅಂಟಿಕೊಳ್ಳುವ ಸಾಧ್ಯತೆ: ತಜ್ಞರು

ಮಧುಮೇಹವಿದ್ದವರಿಗೆ ಸೋಂಕು ತಗುಲಿದರೆ ಹೆಚ್ಚಿನ ಅಪಾಯ: ತಜ್ಞರು
Last Updated 2 ಅಕ್ಟೋಬರ್ 2020, 11:04 IST
ಅಕ್ಷರ ಗಾತ್ರ

ನವದೆಹಲಿ: ಮಧುಮೇಹದಿಂದ ಬಳಲುತ್ತಿರುವವರಿಗೆ ಕೊರೊನಾ ಸೋಂಕು ತಗುಲಿದರೆ ಹೆಚ್ಚಿನ ಅಪಾಯ ಎದುರಾಗಲಿದೆ. ಜೊತೆಗೆ ಕೋವಿಡ್‌ ದೃಢಪಟ್ಟ ರೋಗಿಗಳೂ ಮಧುಮೇಹಿಗಳಾಗುವ ಸಾಧ್ಯತೆ ಇರುತ್ತದೆಎಂದು ತಜ್ಞರು ತಿಳಿಸಿದ್ದಾರೆ.

ಮಧುಮೇಹಿಗಳಿಗೆಕೋವಿಡ್‌–19 ದೃಢಪಟ್ಟರೆ, ಅವರ ದೇಹದಲ್ಲಿರೋಗನಿರೋಧಕ ಶಕ್ತಿ ಕುಗ್ಗಲಿದೆ. ಜೊತೆಗೆ ಕೋವಿಡ್‌ ಚಿಕಿತ್ಸೆ ಸಂದರ್ಭದಲ್ಲಿ, ಮಧುಮೇಹಕ್ಕೆ ಸಂಬಂಧಿಸಿದ ಕೆಲ ಔಷಧಗಳನ್ನೂ ಅವರಿಗೆ ತೆಗೆದುಕೊಳ್ಳಲು ಬಿಡುವುದಿಲ್ಲ.ಇದು ಅವರ ಆರೋಗ್ಯವನ್ನು ಮತ್ತಷ್ಟು ಅಪಾಯಕ್ಕೆ ದೂಡಲಿದೆ ಎಂದು ತಜ್ಞರು ಉಲ್ಲೇಖಿಸಿದ್ದಾರೆ.ಈ ಮಾಹಿತಿಯನ್ನು ದೆಹಲಿ ಸರ್ಕಾರವು, ದೆಹಲಿ ಹೈಕೋರ್ಟ್‌ಗೆ ಇತ್ತೀಚೆಗೆ ಸಲ್ಲಿಸಿದೆ.

‘ಕೋವಿಡ್‌–19 ಶ್ವಾಸಕೋಶಕ್ಕೆ ಮಾತ್ರವಲ್ಲ, ಮೇದೋಜೀರಕ ಗ್ರಂಥಿ ಮೇಲೂ ಪರಿಣಾಮ ಬೀರುತ್ತದೆ. ಕೋವಿಡ್–19 ದೃಢಪಟ್ಟ ಕೆಲವು ರೋಗಿಗಳಲ್ಲಿ ಮೇದೋಜೀರಕದ ಉರಿಯೂತ ಸಮಸ್ಯೆಯೂ ಕಾಣಿಸಿಕೊಂಡಿದೆ. ಮೇದೋಜೀರಕ ಗ್ರಂಥಿಯು ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ನಿಯಂತ್ರಣದಲ್ಲಿ ಇಡುವಇನ್ಸುಲಿನ್‌ ಉತ್ಪತ್ತಿ ಮಾಡುತ್ತದೆ. ಕೊರೊನಾ ವೈರಾಣು, ಇನ್ಸುಲಿನ್‌ ಉತ್ಪತ್ತಿಯನ್ನು ಕಡಿಮೆ ಮಾಡುತ್ತದೆ. ಇದರಿಂದಾಗಿ ರಕ್ತದಲ್ಲಿನ ಸಕ್ಕರೆ ಪ್ರಮಾಣ ಏರಿಕೆಯಾಗುತ್ತದೆ. ಸೋಂಕು ತಗುಲಿದ ಹಲವು ರೋಗಿಗಳು ಮೊದಲ ಬಾರಿಗೆ ಮಧುಮೇಹಿಗಳಾಗಿದ್ದಾರೆ’ ಎಂದು ದೆಹಲಿಯ ವಸಂತ್‌ ಕುಂಜ್‌ ಫೋರ್ಟಿಸ್‌ ಆಸ್ಪತ್ರೆಯ ಹಿರಿಯ ವೈದ್ಯ ವಿಮಲ್‌ ಗುಪ್ತಾ ಮಾಹಿತಿ ನೀಡಿದ್ದಾರೆ.

‘ಭಾರತದಲ್ಲಿನ ಹಲವು ಮಧುಮೇಹಿಗಳು ಬೊಜ್ಜಿನ ಸಮಸ್ಯೆಯನ್ನು ಹೊಂದಿದ್ದಾರೆ. ಇಂಥ ರೋಗಿಗಳಿಗೆ ವೈದ್ಯರು ಸಕ್ಕರೆ ಪ್ರಮಾಣವನ್ನು ನಿಯಂತ್ರಿಸುವ ಔಷಧಗಳ ಜೊತೆಗೆ ತೂಕವನ್ನು ಇಳಿಸುವ ಕೆಲ ಔಷಧಗಳನ್ನು ಶಿಫಾರಸು ಮಾಡಿರುತ್ತಾರೆ. ಇಂಥ ರೋಗಿಗಳಲ್ಲಿ ಕೋವಿಡ್‌ ದೃಢಪಟ್ಟರೆ, ಇವರಿಗೆ ಆ ಔಷಧಗಳನ್ನು ನೀಡಲು ಸಾಧ್ಯವಿಲ್ಲ. ಈ ಪರಿಣಾಮ ಅವರಲ್ಲಿ ಮಧುಮೇಹ ಪ್ರಮಾಣ ಏರಿಕೆಯಾಗುತ್ತದೆ’ ಎಂದು ಗುಪ್ತಾ ತಿಳಿಸಿದರು.

‘ಕೋವಿಡ್‌–19ನಂಥ ರೋಗಗಳು ಮಧುಮೇಹಿಗಳಲ್ಲಿ ಒತ್ತಡವನ್ನೂ ಹೆಚ್ಚಿಸುತ್ತದೆ. ಇಂತಹ ರೋಗಿಗಳ ಮರಣ ಪ್ರಮಾಣವೂ ಹೆಚ್ಚಿದೆ. ಹೀಗಾಗಿ ಇವರ ಆರೋಗ್ಯದ ಮೇಲೆ ಸೂಕ್ಷ್ಮವಾದ ನಿಗಾ ಇರಿಸಬೇಕಾಗುತ್ತದೆ’ ಎನ್ನುತ್ತಾರೆ ರಾಜೀವ್‌ ಗಾಂಧಿ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ.ಬಿ.ಎಲ್‌.ಶೇರ್ವಾಲ್‌.

‘ಇಂತಹ ರೋಗಿಗಳ ಚಿಕಿತ್ಸೆ ಸಂದರ್ಭದಲ್ಲಿ ಹೆಚ್ಚಿನ ಎಚ್ಚರಿಕೆ ವಹಿಸುವುದು ಅಗತ್ಯ. ಸಾವಿನ ಪ್ರಮಾಣದಲ್ಲಿ ಮಧುಮೇಹ ನಿಯಂತ್ರಣದಲ್ಲಿ ಇರದೇ ಇರುವವರ ಸಾವಿನ ಸಂಖ್ಯೆಯೇ ಅಧಿಕವಾಗಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT