ಬುಧವಾರ, ಏಪ್ರಿಲ್ 1, 2020
19 °C

ಶ್ರವಣದೋಷ ಮುಕ್ತಿಗೆಅದೃಶ್ಯ ಶ್ರವಣಸಾಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಜೀವನಶೈಲಿಯ ಕಾಯಿಲೆಗಳ ಸಾಲಿಗೆ ಶ್ರವಣದೋಷವೂ ಸೇರ್ಪಡೆಯಾಗಿದೆ. 60 ವರ್ಷ ವಯಸ್ಸಿನ 10ರಲ್ಲಿ 3 ಮಂದಿಗೆ, 41 ರಿಂದ 59 ವರ್ಷ ವಯಸ್ಸಿನ 6ರಲ್ಲಿ ಒಬ್ಬರಿಗೆ ಹಾಗೂ 29ರಿಂದ 40 ವರ್ಷ ವಯಸ್ಸಿನ 14ರಲ್ಲಿ ಒಬ್ಬರಿಗೆ ಕಿವುಡತನದ ಸಮಸ್ಯೆ ಕಾಡುತ್ತಿದೆ. ಸಾವಿರದಲ್ಲಿ 3 ನವಜಾತ ಶಿಶುಗಳಲ್ಲಿ ತೀವ್ರತರವಾದ ಶ್ರವಣದೋಷದ ಸಮಸ್ಯೆ ಕಾಣಿಸಿಕೊಳ್ಳುತ್ತಿದೆ. 2022ರಲ್ಲಿ 1.5 ಕೋಟಿಗೂ ಅಧಿಕ ಮಂದಿ ಬೇರೆ ಬೇರೆ ಕಾರಣಗಳಿಂದ ಶ್ರವಣ ದೋಷಕ್ಕೆ ಒಳಗಾಗುವ ಸಾಧ್ಯತೆ ಇದೆ. 

‘ಹಿಯರ್‌ಫೋನ್’ ಸಂಸ್ಥೆಯ ಕ್ಲಿನಿಕಲ್ ಡೈರೆಕ್ಟರ್ ಹಾಗೂ ಆಡಿಯಾಲಜಿಸ್ಟ್ ಜಿ.ಕೃಷ್ಣಕುಮಾರ್ ಅವರ ಪ್ರಕಾರ, ಯುವಜನರು ಅತಿಯಾಗಿ ಬಳಸುವ ಎಲೆಕ್ಟ್ರಾನಿಕ್ಸ್ ಉಪಕರಣ, ಶಬ್ದಮಾಲಿನ್ಯ ಹಾಗೂ ವಯಸ್ಸಿನ ಅಂಶಗಳು ಶ್ರವಣದೋಷಕ್ಕೆ ಮೂಲ ಕಾರಣ.  

‘ನನ್ನ ಕಿವಿಯೊಳಗೆ ಏನೋ ತುಂಬಿರುವ ಹಾಗೆ ಅನ್ನಿಸುತ್ತಿದೆ. ನನಗೆ ಕಿವಿ ಕೇಳುಸುತ್ತಿದೆ. ಆದರೆ ಎಲ್ಲಾ ಸಂದರ್ಭಗಳಲ್ಲಿ ಸ್ಪಷ್ಟವಾಗಿ ಕೇಳಿಸುವುದಿಲ್ಲ’ ಎಂಬುದು ವಯಸ್ಸಾದವರ ಸಾಮಾನ್ಯ ದೂರು. ಅನೇಕರಿಗೆ ತಮ್ಮ ಏಳನೇ ವಯಸ್ಸಿನವರೆಗೂ ಶ್ರವಣದೋಷ ಇದೆ ಎಂಬುದರ ಅರಿವು ಇರುವುದಿಲ್ಲ. ಈಗ ಅತ್ಯಾಧುನಿಕ ತಂತ್ರಜ್ಞಾನದ, ಕಿವಿಯ ನಾಲೆಯೊಳಗೆ ಸರಿಯಾಗಿ ಕೂರುವ ಶ್ರವಣ ಸಾಧನಗಳು ಲಭ್ಯವಿವೆ ಎನ್ನುತ್ತಾರೆ ಜಿ. ಕೃಷ್ಣ ಕುಮಾರ್. 

ಕಿವುಡುತನದ ಸಾಮಾನ್ಯ ಲಕ್ಷಣಗಳು

l→ಮಾತು ಹಾಗೂ ಇತರ ಶಬ್ದಗಳು ಸರಿಯಾಗಿ ಕೇಳಿಸದಿರುವುದು

l→ಶಬ್ದಗಳು ಅರ್ಥವಾಗದಿರುವುದು. ಹಿನ್ನೆಲೆ ಧ್ವನಿ, ಗದ್ದಲವಿದ್ದಾಗ ಕೇಳಿಸದಿರುವುದು

l→ನಿಧಾನವಾಗಿ, ಸ್ವಷ್ಟ ಹಾಗೂ ಗಟ್ಟಿಯಾಗಿ ಮಾತನಾಡಿ ಎಂದು ಪದೇಪದೇ ಹೇಳುವುದು

l→ಟಿ.ವಿ ಅಥವಾ ರೇಡಿಯೊದ ಧ್ವನಿಯನ್ನು ಹೆಚ್ಚಿಸುವಂತೆ ಹೇಳುವುದು

ಸುಧಾರಿತ ತಂತ್ರಜ್ಞಾನದ ಉಪಯೋಗ

ಸುಧಾರಿತ ತಂತ್ರಜ್ಞಾನದ ಉಪಯೋಗ ಜನರಿಗೆ ಸಿಕ್ಕಿದೆಯೇ ಎಂಬ ಪ್ರಶ್ನೆಗೆ ಖಂಡಿತ ಇಲ್ಲ ಎನ್ನುತ್ತಾರೆ ಜಿ.ಕೃಷ್ಣಕುಮಾರ್. ‘ಸಾಮಾಜಿಕ ಹಿಂಜರಿಕೆಗಳ ಕಾರಣದಿಂದ ಶ್ರವಣದೋಷವಿರುವ ಅನೇಕರು ಶ್ರವಣಸಾಧನಗಳನ್ನು ಬಳಸಲು ಹಿಂದೇಟು ಹಾಕುತ್ತಾರೆ. ಆದರೆ ನಮ್ಮ ಹಿಯರ್‌ಫೋನ್‌ ಸಂಸ್ಥೆ ಕೆಲವು ಎನ್‌ಜಿಒಗಳೊಂದಿಗೆ ಸೇರಿ ಉಚಿತ ತಪಾಸಣಾ ಶಿಬಿರಗಳನ್ನು ಏರ್ಪಡಿಸಿ ನಿರಂತರವಾಗಿ ಜಾಗೃತಿ ಮೂಡಿಸುತ್ತಿದೆ’ ಎಂದು ಹೇಳುತ್ತಾರೆ. 

‘ನಮ್ಮ ಉಪಕರಣಗಳನ್ನು ಕಿವಿಯ ಹೊರಗೆ ಕಾಣದಂತೆ ಇರಿಸಬಹುದು. ಕಿವಿಯ ನಾಳದಲ್ಲಿ ಅಳವಡಿಸಬಹುದಾದ ಪ್ರೇಷಕ (ರಿಸೀವರ್) ಸಾಧನಗಳನ್ನು ಕೂಡ ನಾವು ರೂಪಿಸಿದ್ದೇವೆ. ರೀಜಾರ್ಚ್ ಮಾಡುವ ಶ್ರವಣ ಸಾಧನಗಳು ಇವೆ. ಪ್ರತಿದಿನ ಬ್ಯಾಟರಿ ಬದಲಿಸುವ ಪ್ರಮೇಯ ಬರುವುದಿಲ್ಲ. ಬ್ಲೂಟೂತ್ ವ್ಯವಸ್ಥೆ ಇರುವ ಶ್ರವಣ ಸಾಧನದ ಮೂಲಕ ಮೊಬೈಲ್ ಫೋನ್ ಹಾಗೂ ಟಿ.ವಿಗೆ ನೇರವಾಗಿ ಸಂಪರ್ಕ ಕಲ್ಪಿಸಬಹುದು’ ಎನ್ನುವುದು ಅವರ ವಿಶ್ವಾಸದ ಮಾತು.

ಚಿಕಿತ್ಸೆ ನೀಡದಿದ್ದರೆ ಏನೇನು ತೊಂದರೆ?

l→ಪ್ರತ್ಯೇಕಿಸುವ ಭಾವನೆ

l→ಖಿನ್ನತೆ ಮತ್ತು ಆತಂಕ

l→ಸ್ನೇಹಿತರು, ಕುಟಂಬದವರ ಜತೆ ಭಿನ್ನಾಭಿಪ್ರಾಯ

l→ಸಂವಹನದ ಕೊರತೆ

l→ದುರ್ಬಲಗೊಂಡ ನೆನಪಿನ ಶಕ್ತಿ

l→ಸುರಕ್ಷತೆಯ ಕಾಳಜಿ

'ಹಿಯರ್‌ಫೋನ್’ ಕೇಂದ್ರ ಎಲೆಲ್ಲಿವೆ?

ಬೆಂಗಳೂರು, ಮೈಸೂರು, ಹೈದ್ರಾಬಾದ್, ಚೆನೈ, ವಿಶಾಖಪಟ್ಟಣ, ಪುಣೆ ಹಾಗೂ ಮುಂಬೈ ಸೇರಿದಂತೆ ವಿವಿಧ ಭಾಗಗಳಲ್ಲಿ ಸಂಸ್ಥೆಯ 15 ಕೇಂದ್ರಗಳಿವೆ. ಶುಲ್ಕ ರಹಿತ ಸಂಖ್ಯೆ 18001030822 ಹಾಗೂ
info@hearfon.com.www.hearFon.com ಮೂಲಕ ಸಂಪರ್ಕಿಸಬಹುದು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು