ʻಆರೋಗ್ಯವೇ ಮಹಾಭಾಗ್ಯʼ ಎಂಬ ಮಾತು ನಮಗೆಲ್ಲ ತಿಳಿದದ್ದೇ. ಆದರೆ, ನಿಜವಾದ ಆರೋಗ್ಯ ಎಂದರೇನು? ದೇಹ ಸ್ವಸ್ಥವಾಗಿದ್ದರೆ ಸಾಕೇ? ಖಂಡಿತ ಸಾಲದು. ನಿಜವಾದ ಆರೋಗ್ಯದ ಗುರುತು ಉತ್ಸಾಹದಲ್ಲಿ ಕಾಣಬರುತ್ತದೆ. ಉತ್ಸಾಹವಿಲ್ಲದ ದೇಹ ಕೇವಲ ಒಂದು ಚರ್ಮ-ಎಲುಬಿನ ಗೂಡು. ಉತ್ಸಾಹವೇ ಜೀವದ ಶಕ್ತಿ, ಅದು ನಮ್ಮ ದೇಹ ಮನಸ್ಸುಗಳಿಗೆ ಹುರುಪು ನೀಡುತ್ತದೆ.

ಉತ್ಸಾಹ ಮತ್ತು ಆರೋಗ್ಯದ ನಡುವಣ ಸಂಬಂಧ

ಉತ್ಸಾಹವು ನಮ್ಮ ಒಳಗಿನ ಸೌಖ್ಯದ ದರ್ಪಣ. ನಾವು ಉತ್ಸಾಹದಿಂದ ಇದ್ದಾಗ, ನಮ್ಮ ದೇಹದಲ್ಲಿ 'ಎಂಡಾರ್ಫಿನ್ಸ್' ಎಂಬ ಸಂತೋಷ ಹಾರ್ಮೋನುಗಳು ಹೆಚ್ಚಾಗಿ ಸ್ರವಿಸುತ್ತವೆ. ಇವು ನೋವನ್ನು ಕಡಿಮೆ ಮಾಡಿ, ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತವೆ. ಉತ್ಸಾಹವಿಲ್ಲದ ವ್ಯಕ್ತಿ ಸಣ್ಣ ಸಮಸ್ಯೆಯನ್ನೂ ಸಹಿಸಲಾರ, ಅವನ ರೋಗನಿರೋಧಕ ಶಕ್ತಿಯೂ ಕುಗ್ಗುತ್ತದೆ. ಆದುದರಿಂದಲೇ ಅಂತಹವರಲ್ಲಿ ಖಿನ್ನತೆ ಮತ್ತು ಚಿಂತೆಗಳು ಆವರಿಸಿ ಹಲವಾರು ಶಾರೀರಿಕ ರೋಗಗಳಿಗೆ ಕಾರಣವಾಗುತ್ತವೆ.

ಸ್ವಾಮಿ ವಿವೇಕಾನಂದರು, ʻ ಹಿಂದಿರುಗಿ ನೋಡದಿರಿ – ಮುನ್ನುಗ್ಗಿ; ಅಮಿತ ಶಕ್ತಿ, ಅನಂತ ಉತ್ಸಾಹ,ಅದಮ್ಯ ಸಾಹಸ ಮತ್ತು ಅನಂತ ಸಹನೆ- ಇವಿದ್ದರೆ ಮಾತ್ರವೇ ಮಹತ್ಕಾರ್ಯಗಳನ್ನು ಸಾಧಿಸಬಲ್ಲೆವುʼ ಎಂದಿದ್ದಾರೆ. ಉತ್ಸಾಹವೇ ಜೀವನ. ಉತ್ಸಾಹ ಕಡಿಮೆಯಾದಂತೆಲ್ಲಾ, ಮರಣ ಸನಿಹವಾಗುತ್ತದೆ. ನಿಜವಾಗಿಯೂ, ಉತ್ಸಾಹವುಳ್ಳ ವ್ಯಕ್ತಿ ಬಹಳ ಶಕ್ತಿಯುತವಾಗಿ ಕೆಲಸ ಮಾಡಬಲ್ಲ, ಸವಾಲನ್ನು ಸಮರ್ಥವಾಗಿ ಎದುರಿಸಬಲ್ಲ. ಉತ್ಸಾಹವೇ ದೇಹದ ಮುಖ್ಯ ಇಂಧನ. ಅದಿದ್ದಾಗ ಎಲ್ಲ ಅಂಗಗಳು ಚುರುಕಾಗಿ, ಸರಿಯಾಗಿ ಕೆಲಸ ಮಾಡುತ್ತವೆ. ಆದುದರಿಂದಲೇ ಜೀವನದ ಯಶಸ್ಸು ಬಯಸುವವರು ಮೊದಲಿಗೆ ಉತ್ಸಾಹವನ್ನು ರೂಢಿಸಿಕೊಳ್ಳಬೇಕು.

ಉತ್ಸಾಹದ ವಿರುದ್ಧ ಪದ ನಿರುತ್ಸಾಹ ಅಂದರೆ ಅಶ್ರದ್ಧೆ, ನಿರಾಸಕ್ತಿ. ಕರ್ಮಯೋಗದ ಆಶಯ ಕರ್ಮಕೌಶಲ, ಅಂದರೆ ತಾಮಸವನ್ನು ಮೆಟ್ಟಿ ರಾಜಸಿಕತೆಯನ್ನು ಮೆರೆಯುವ ಸಂಕಲ್ಪ, ಅದರ ಅಭಿವ್ಯಕ್ತಿ. ಭಗವದ್ಗೀತೆಯಲ್ಲಿ ಶ್ರೀಕೃಷ್ಣನು ಅರ್ಜುನನ ಉತ್ಸಾಹವನ್ನು ಪ್ರಚೋದಿಸುವ ಕೆಲಸವನ್ನೇ ಮಾಡಿರುವುದು. ಶ್ರೀಕೃಷ್ಣನು ಅರ್ಜುನನಿಗೆ ಕರ್ಮಯೋಗದ ಬಗ್ಗೆ ಬೋಧಿಸುವಾಗ, ʻಯೋಗಃ ಕರ್ಮಸು ಕೌಶಲಂʼ (ಕರ್ಮಗಳಲ್ಲಿ ನಿಪುಣತೆಯೇ ಯೋಗ) ಎಂದು ಹೇಳುತ್ತಾನೆ. ಕರ್ಮದಲ್ಲಿ ನಿಪುಣತೆ ಬರಬೇಕಾದರೆ ಉತ್ಸಾಹ ಅತ್ಯಗತ್ಯ. ಕರ್ಮವನ್ನು ಉತ್ಸಾಹದಿಂದ, ಶ್ರದ್ಧೆಯಿಂದ ಮಾಡುವುದೇ ಆರೋಗ್ಯಕರ ಮನಸ್ಸಿನ ಲಕ್ಷಣ. ರೋಮನ್ ಚಿಂತಕ ಸಿಸೆರೋ ಹೇಳಿದ್ದಾನೆ, ʻಚೈತನ್ಯಶೀಲ ಆತ್ಮ ದೀರ್ಘಕಾಲ ಬಾಳುತ್ತದೆ.ʼ ಚೈತನ್ಯಶೀಲ ಆತ್ಮ ಎಂದರೆ ಉತ್ಸಾಹಭರಿತವಾದ ಆತ್ಮ. ಇಂತಹ ಆತ್ಮವು ದೇಹವನ್ನು ದೀರ್ಘಕಾಲ ಚೆನ್ನಾಗಿ ಇರಿಸುತ್ತದೆ. ಆಶಾವಾದ ಮತ್ತು ಉತ್ಸಾಹ ಸೋದರರು. ಇವು ನಮ್ಮ ರಕ್ತದೊಳಗೆ ಸಾಗಿ, ರೋಗಗಳನ್ನು ಎದುರಿಸುವ ಶಕ್ತಿಯನ್ನು ನೀಡುತ್ತವೆ.

ಸನಾತನ ಧರ್ಮದ ಲಕ್ಷಣವೇ ಉತ್ಸಾಹ. ಕಠೋಪನಿಷತ್ತಿನ ನಚಿಕೇತ ತನ್ನನ್ನು ಯಮನಿಗೆ ದಾನ ಮಾಡಿದ ವಿಚಾರ ಕೇಳಿ ಎದೆಗುಂದಲಿಲ್ಲ. ತಾನೇ ಮುಂದಾಗಿ ಯಮಲೋಕಕ್ಕೆ ನಡೆದು ಅವನ ಬಾಗಿಲು ಕಾದು ಯಮನನ್ನೇ ಪ್ರಶ್ನಿಸಿದ. ಯಾವ ಉಪನಿಷತ್ತೇ ಆಗಲಿ, ಅಲ್ಲಿನ ಪ್ರಶ್ನೋತ್ತರಗಳನ್ನು ಗಮನಿಸಿ; ಪ್ರಶ್ನಿಕನು ಅತ್ಯಂತ ಉತ್ಸಾಹದಿಂದ ಬೌದ್ಧಿಕ ಉನ್ನತಿಯನ್ನು ಕಾಣುವ ಹವಣಿಕೆಯಲ್ಲಿರುವುದು ಗೋಚರವಾಗುತ್ತದೆ. ನಮ್ಮ ಅಧ್ಯಯನ ಯಾವಾಗಲೂ ಉತ್ಸಾಹಭರಿತವಾಗಿರಬೇಕು. ಉತ್ಸಾಹವನ್ನು ಜ್ಞಾನಾರ್ಜನೆಯ ಅವಿಭಾಜ್ಯ ಅಂಗವಾಗಿ ಕಾಣಲಾಗಿದೆ.

ನಿತ್ಯಜೀವನದಲ್ಲಿ ಉತ್ಸಾಹವನ್ನು ಹೇಗೆ ಕಾಪಾಡಿಕೊಳ್ಳಬೇಕು?

1. ಕೃತಜ್ಞತಾ ಭಾವ: ಪ್ರತಿದಿನ ನಮ್ಮಲ್ಲಿರುವ ಮತ್ತು ನಮಗೆ ದೊರೆಯುವ ಸಣ್ಣ ಸಣ್ಣ ಅನುಕೂಲಗಳಿಗೆ ಧನ್ಯವಾದ ಹೇಳುತ್ತ ಕೃತಜ್ಞತಾ ಭಾವವನ್ನು ವ್ಯಕ್ತಪಡಿಸಿದರೆ, ಅದು ಉತ್ಸಾಹವನ್ನು ಹೆಚ್ಚಿಸುತ್ತದೆ. ಉದಾಹರಣೆಗೆ ನಿತ್ಯ ನಾವು ಕಚೇರಿಗೋ ಶಾಲಾ ಕಾಲೇಜಿಗೋ ಪಯಣಿಸುವಾಗ ಬಸ್ಸಿನ ನಿರ್ವಾಹಕನಿಗೋ ಸಹಪ್ರಯಾಣೀಕನಿಗೋ ಒಂದು ಮುಗುಳನಗೆ ಸಹಿತ ಧನ್ಯವಾದ ಅರ್ಪಿಸಿದರೆ, ಅದರಿಂದ ಅವರ ದಿನವೂ ಉಲ್ಲಸಿತವಾಗಿತ್ತದೆ, ನಮ್ಮ ಮನಸ್ಸಿನಲ್ಲೂ ಉತ್ಸಾಹ ಮೂಡುತ್ತದೆ.

2. ಶಾರೀರಿಕ ಚಟುವಟಿಕೆ: ನಿತ್ಯ ವ್ಯಾಯಾಮ, ಯೋಗಾಸನ ಮತ್ತು ಧ್ಯಾನ ಮನಸ್ಸನ್ನು ಪ್ರಸನ್ನಗೊಳಿಸಿ ಉತ್ಸಾಹವನ್ನು ತರುತ್ತದೆ. ವ್ಯಾಯಾಮದಿಂದ ದೇಹದಲ್ಲಿ ಸಂತೋಷಕಾರಕ ಹಾರ್ಮೋನ್ಗಳು ಉತ್ಪತ್ತಿಯಾಗುತ್ತವೆ ಎಂದು ಮನೋವಿಜ್ಞಾನ ತಿಳಿಸಿದೆ. ಆದುದರಿಂದ ನಮ್ಮ ನಮ್ಮ ವಯೋಮಾನಕ್ಕೆ ತಕ್ಕುದಾದ ಮೈ ಬೆವರುವಂತಹ ವ್ಯಾಯಾಮದಲ್ಲಿ ತೊಡಗುವುದರಿಂದ ಉತ್ಸಾಹವನ್ನು ಕಾಪಾಡಿಕೊಳ್ಳಬಹುದು.

3. ಗುರಿಯಿರಲಿ ಬಾಳ್ಗೆ: ಜೀವನದಲ್ಲಿ ಒಂದು ಗುರಿ ಇರಿಸಿಕೊಳ್ಳುವದರಿಂದ, ಅದನ್ನು ಸಾಧಿಸಲು ಶ್ರಮಿಸುವುದರಿಂದ ಉತ್ಸಾಹವನ್ನು ಕಾಪಾಡಿಕೊಳ್ಳಬಹುದು. ಗುರಿ ಎತ್ತರವಾದಷ್ಟೂ ಉತ್ಸಾಹ ಹೆಚ್ಚು. ಬೆಟ್ಟ ದೊಡ್ಡದಾದಷ್ಟೂ ಹತ್ತುವ ಹುಮ್ಮಸ್ಸು.

4. ಸಕಾರಾತ್ಮಕ ಜನರ ಸಹವಾಸ: ಸಂತೋಷ ಮತ್ತು ಉತ್ಸಾಹದಿಂದ ಇರುವವರ ಸಹವಾಸದಿಂದ ನಮ್ಮಲ್ಲೂ ಅದರ ಪ್ರಭಾವ ಮೂಡುತ್ತದೆ. ರಭಸವಾಗಿ ಹರಿವ ನದಿಗೆ ಝರಿ ಬೆರೆತರೆ ಅದಕ್ಕೂ ವೇಗದ ಓಘ ದಕ್ಕುವಂತೆ ಇದು. ಸಾಧ್ಯವಾದಷ್ಟೂ ಉತ್ಸಾಹಶಾಲಿಗಳೊಂದಿಗೆ ನಮ್ಮ ಒಡನಾಟವಿರಲಿ.

5. ಹವ್ಯಾಸಗಳು: ನಮಗೆ ಇಷ್ಟವಾದ ಕೆಲಸಗಳನ್ನು ಮಾಡುವುದರಿಂದ, ಹವ್ಯಾಸಗಳನ್ನು ಬೆಳೆಸಿಕೊಳ್ಳುವುದರಿಂದ ಮನಸ್ಸಿಗೆ ಮುದ ದೊರೆತು ಉತ್ಸಾಹ ತುಂಬಿಕೊಳ್ಳುತ್ತದೆ.

ನಿಜವಾದ ಆರೋಗ್ಯ ಎಂದರೆ ಕೇವಲ ರೋಗವಿಲ್ಲದಿರುವುದು ಮಾತ್ರವಲ್ಲ. ಅದು ಒಂದು ಪೂರ್ಣವಾದ ಸ್ಥಿತಿ - ದೇಹ, ಮನಸ್ಸು ಮತ್ತು ಆತ್ಮದ ಸಮಗ್ರ ಕ್ಷೇಮ. ಈ ತ್ರಿವೇಣಿ ಸಂಗಮದಲ್ಲಿ ಉತ್ಸಾಹವೇ ಪ್ರವಾಹದ ಶಕ್ತಿ. ಉತ್ಸಾಹವು ನಮ್ಮ ಜೀವನದ ನದಿಗೆ ದಿಕ್ಕು ಮತ್ತು ಗತಿ ನೀಡುತ್ತದೆ. ಆದುದರಿಂದ, ಉತ್ಸಾಹವನ್ನು ಕಳೆದುಕೊಳ್ಳಬಾರದು. ಸವಾಲುಗಳು ಬಂದಾಗ, ಅವುಗಳನ್ನು ಸ್ವಾಗತಿಸಿ. ಜೀವನದ ಪ್ರತಿ ಕ್ಷಣವನ್ನು ಉತ್ಸಾಹದಿಂದ, ಪೂರ್ಣ ಭಾವದಿಂದ ಜೀವಿಸಬೇಕು. ನಮ್ಮ ಉತ್ಸಾಹವೇ ನಮ್ಮ ಆರೋಗ್ಯದ ಸತ್ಯವಾದ ಮತ್ತು ಅತ್ಯುತ್ತಮ ಲಕ್ಷಣವಾಗಿದೆ. ʼಉತ್ಸಾಹೋ ಬಲವಾನ್ ಆರ್ಯಃ, ನಾಸ್ತ್ಯುತ್ಸಾಹಾತ್ ಪರಂ ಬಲಂ। ಸ ಉತ್ಸಾಹಸ್ಸದಾ ಪಥ್ಯಃ, ಸರ್ವಾರೋಗ್ಯಪ್ರದಾಯಕಃ॥ʼ (ಉತ್ಸಾಹವೇ ಪರಮ ಬಲ. ಉತ್ಸಾಹಕ್ಕಿಂತ ಮಿಗಿಲಾದ ಬಲವೇ ಇಲ್ಲ. ಅಂತಹ ಉತ್ಸಾಹವು ಯಾವಾಗಲೂ ಹಿತಕರವಾದುದು ಮತ್ತು ಎಲ್ಲಾ ಆರೋಗ್ಯವನ್ನು ನೀಡುವಂಥದ್ದು.)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.