ಮಕ್ಕಳಿಗೆ ಒಂದು ವರ್ಷ ತುಂಬುವಾಗ ಮಕ್ಕಳತಜ್ಞರ ಸಲಹೆಯ ಮೇರೆಗೆ ಚಿಕನ್ ಪಾಕ್ಸ್ ಕಾಯಿಲೆಗೆ ಲಸಿಕೆಯನ್ನು ಕೊಡಿಸಬೇಕು. ಅಂತೆಯೇ ಐವತ್ತು ತುಂಬಿದ ವಯಸ್ಕರಿಗೂ ಹರ್ಪಿಸ್ ಜೋಸ್ಟರ್ ಲಸಿಕೆ ಲಭ್ಯವಿದ್ದು, ವೈದ್ಯರ ಸಲಹೆಯನ್ನು ಪಡೆದು ಲಸಿಕೆಯನ್ನು ಹಾಕಿಸಿಕೊಳ್ಳಬೇಕು. ಪೌಷ್ಟಿಕ ಆಹಾರಸೇವನೆಯಿಂದ ದೇಹದ ರೋಗನಿರೋಧಕ ವ್ಯವಸ್ಥೆಯನ್ನು ಸದೃಢಗೊಳಿಸಿಕೊಳ್ಳುವುದೂ ಮುಖ್ಯ.