ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಡುಪಿಯಲ್ಲಿ ನೀಲಗುಳಿ ಪದ್ಮನಾಭ ಬಂಧನ

Last Updated 7 ಜೂನ್ 2018, 17:37 IST
ಅಕ್ಷರ ಗಾತ್ರ

ಉಡುಪಿ: ನಕ್ಸಲ್‌ ಚಳವಳಿಯಲ್ಲಿ ಹಿಂದೆ ಗುರುತಿಸಿಕೊಂಡಿದ್ದ ನೀಲಗುಳಿ ಪದ್ಮನಾಭ ಅವರನ್ನು ಗುರುವಾರ ಜಿಲ್ಲಾ ಪೊಲೀಸರು ಬಂಧಿಸಿದ್ದಾರೆ.

‘ನೀಲಗುಳಿ ಪದ್ಮನಾಭ ಅವರ ವಿರುದ್ಧ 2 ಜಾಮೀನು ರಹಿತ ವಾರೆಂಟ್ ಪ್ರಕರಣಗಳು (ಎನ್‌ಬಿಸಿ) ಹಾಗೂ 2 ಲಾಂಗ್ ಪೆಂಡಿಂಗ್ ಪ್ರಕರಣಗಳು (ಎಲ್‌ಪಿಸಿ) ದಾಖಲಾಗಿದ್ದವು. ಈ ಪ್ರಕರಣಗಳಡಿ ಅವರನ್ನು ಬಂಧಿಸಲಾಗಿದ್ದು, ನ್ಯಾಯಾಲಯಕ್ಕೆ ಹಾಜರು ಪಡಿಸಲಾಗುವುದು’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

ನೀಲಗುಳಿ ಪದ್ಮನಾಭ ಅವರು ಪ್ರಕರಣವೊಂದರ ಸಂಬಂಧ ಇಲ್ಲಿನ ನ್ಯಾಯಾಲಯಕ್ಕೆ ಹಾಜರಾಗಲು ಬಂದಿದ್ದ ವೇಳೆ ಅವರನ್ನು ಬಂಧಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT