ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಖದ ಅಂದ ಹೆಚ್ಚಿಸುವ ಮಾವು!

Last Updated 12 ಜುಲೈ 2020, 10:51 IST
ಅಕ್ಷರ ಗಾತ್ರ

ಕಂಡಾಕ್ಷಣ ಬಾಯಲ್ಲಿ ನೀರೂರುವ ಮಾವಿನಹಣ್ಣು ಕೇವಲ ತಿನ್ನಲು ಮಾತ್ರ ರುಚಿಯಲ್ಲ. ಮಾವಿನಹಣ್ಣಿನಿಂದ ಅನೇಕ ಉಪಯೋಗಗಳಿವೆ. ಮಾವು ಸೌಂದರ್ಯವರ್ದಕವೂ ಹೌದು. ಇದರಿಂದ ಅನೇಕ ಚರ್ಮದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು. ಮಾವಿನಹಣ್ಣಿನಲ್ಲಿ ಆ್ಯಂಕಿಆಕ್ಸಿಡೆಂಟ್ ಅಂಶ ಅಧಿಕವಿದ್ದು ಚರ್ಮದ ಸುಕ್ಕನ್ನು ನಿವಾರಿಸುತ್ತದೆ. ಇದು ಕೊಲಾಜನ್‌ ಅಂಶದ ಹಾನಿಯನ್ನು ತಡೆಗಟ್ಟಿ ಚರ್ಮವನ್ನು ಸದಾ ಹೊಳೆಯುವಂತೆ ಮಾಡುತ್ತದೆ. ಮಾವಿನ ಫೇಸ್‌ಪ್ಯಾಕ್‌ ತಯಾರಿಸಿ ಹಚ್ಚಿಕೊಳ್ಳುವುದರಿಂದ ಮುಖದ ಚರ್ಮದ ಅನೇಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು.

ಮಾವಿನಹಣ್ಣು ಹಾಗೂ ಮುಲ್ತಾನಿಮಿಟ್ಟಿ ಫೇಸ್‌ಪ್ಯಾಕ್‌

ಸದಾ ಹೊಳೆಯುವ ಚರ್ಮ ನಿಮ್ಮದಾಗಬೇಕು ಎಂಬ ಆಸೆ ಇದ್ದರೆ ನೀವು ಈ ಪ್ಯಾಕ್ ತಯಾರಿಸಿ ಹಚ್ಚಿಕೊಳ್ಳಬಹುದು. ಮಾವಿನಹಣ್ಣು ಮುಖದ ಚರ್ಮವನ್ನು ಅಂದಗೊಳಿಸುತ್ತದೆ. ಮುಲ್ತಾನಿಮಿಟ್ಟಿ ಮುಖದಲ್ಲಿನ ಎಣ್ಣೆಯಂಶ ಹಾಗೂ ಕಲ್ಮಶವನ್ನು ದೂರ ಮಾಡುತ್ತದೆ. ಈ ಎರಡರ ಪ್ಯಾಕ್ ಹಚ್ಚಿಕೊಳ್ಳುವುದರಿಂದ ಮುಖದಲ್ಲಿನ ಕಲೆಗಳು ನಿವಾರಣೆಯಾಗುತ್ತವೆ. ಅಲ್ಲದೆ ಚರ್ಮವು ಮೃದುವಾಗುತ್ತದೆ.ಈ ಪ್ಯಾಕ್‌ ಅನ್ನು ತಯಾರಿಸಲು ಮಾವಿನಹಣ್ಣಿನ ತಿರುಳಿಗೆ ಒಂದು ಚಮಚ ಮೊಸರು ಹಾಗೂ 3 ಚಮಚ ಮುಲ್ತಾನಿಮಿಟ್ಟಿ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ನಂತರ ಮುಖವನ್ನು ಚೆನ್ನಾಗಿ ತೊಳೆದು ಒರೆಸಿಕೊಂಡು ಪೂರ್ತಿ ಮುಖಕ್ಕೆ ತಯಾರಿಸಿಕೊಂಡ ಪೇಸ್ಟ್‌ ಹಚ್ಚಿಕೊಂಡು 20 ನಿಮಿಷಗಳ ಕಾಲ ಹಾಗೇ ಬಿಡಿ. ನಂತರ ತಣ್ಣೀರಿನಿಂದ ಮುಖ ತೊಳೆದುಕೊಳ್ಳಿ.

ಮಾವಿನಹಣ್ಣು ಹಾಗೂ ಬೆಣ್ಣೆಹಣ್ಣಿನ ಪ್ಯಾಕ್‌

ಈ ಪ್ಯಾಕ್‌ ಮುಖದ ಚರ್ಮವನ್ನು ಮೃದುಗೊಳಿಸುತ್ತದೆ. ಇದನ್ನು ಪ್ರತಿದಿನ ಬಳಸುವುದರಿಂದ ಕಪ್ಪು ಕಲೆಗಳು ಮಾಯವಾಗುತ್ತವೆ. ಚರ್ಮವು ಕಾಂತಿಯುತವಾಗಿ ಹೊಳೆಯುತ್ತದೆ. ಸೂಕ್ಷ್ಮ ಚರ್ಮದವರು ಈ ಫೇಸ್‌ಪ್ಯಾಕ್ ಬಳಸಬಹುದು. ಪ್ಯಾಕ್ ತಯಾರಿಸಲು ಮಾವಿನ ಹಣ್ಣಿನ ತಿರುಳು, ಬೆಣ್ಣೆಹಣ್ಣಿನ ತಿರುಳು ಹಾಗೂ 2 ಚಮಚ ಜೇನುತುಪ್ಪ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ ಪೇಸ್ಟ್ ತಯಾರಿಸಿ. ಅದನ್ನು ಮುಖ ಹಾಗೂ ಕುತ್ತಿಗೆಯ ಭಾಗಕ್ಕೆ ಹಚ್ಚಿ. ಒಣಗಲು ಬಿಡಿ. ಸಂಪೂರ್ಣ ಒಣಗಿದ ಮೇಲೆ ತಣ್ಣೀರಿನಿಂದ ಮುಖ ತೊಳೆದುಕೊಳ್ಳಿ.

ಮಾವು ಹಾಗೂ ಒಟ್ಸ್‌ಹಿಟ್ಟಿನ ಪ್ಯಾಕ್‌

ನಿಮ್ಮ ಮುಖದ ಚರ್ಮದ ಕಾಂತಿ ಹೆಚ್ಚಿ, ಒಣ ಚರ್ಮ ನಿವಾರಣೆಯಾಗಬೇಕು ಎಂದರೆ ಈ ಫೇಸ್‌ಪ್ಯಾಕ್ ತಯಾರಿಸಿ ಹಚ್ಚಿಕೊಳ್ಳಿ. ಓಟ್ಸ್‌ಹಿಟ್ಟು ನೈಸರ್ಗಿಕ ಸ್ಕ್ರಬ್‌ನಂತೆ ಕೆಲಸ ಮಾಡುತ್ತದೆ. ಚರ್ಮದ ಕೊಳಕನ್ನು ನಿವಾರಿಸುತ್ತದೆ. ಈ ಫೇಸ್‌ಪ್ಯಾಕ್ ತಯಾರಿಸಲು ಕಳಿತ ಮಾವಿನಹಣ್ಣು, 3 ಚಮಚ ಓಟ್ಸ್‌‌ಹಿಟ್ಟು, ನೆನೆಸಿಟ್ಟುಕೊಂಡ ಬಾದಾಮಿ ಹಾಗೂ 2 ಚಮಚ ಹಸಿಹಾಲು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ. ಅದನ್ನು ಚರ್ಮಕ್ಕೆ ಹಚ್ಚಿ ಅರ್ಧಗಂಟೆ ಬಿಟ್ಟು ತಣ್ಣೀರಿನಿಂದ ತೊಳೆಯಿರಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT