ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಶ್ನದ ಗಾತ್ರಕ್ಕೂ ಲೈಂಗಿಕ ಸುಖಕ್ಕೂ ಸಂಬಂಧವಿಲ್ಲ

Last Updated 30 ಡಿಸೆಂಬರ್ 2016, 19:30 IST
ಅಕ್ಷರ ಗಾತ್ರ

* ಮಹಿಳೆಯರು ದೊಡ್ಡ ಗಾತ್ರದ ಶಿಶ್ನವನ್ನು ಬಯಸುತ್ತಾರೆ ಎನ್ನುವುದು ನಿಜವೇ?
ಸುಳ್ಳು.  ಉದ್ರೇಕದ ಮಟ್ಟವನ್ನು ತಿಳಿಯುವ ಸಲುವಾಗಿ ಸಮೀಕ್ಷೆಯೊಂದನ್ನು ನಡೆಸಲಾಯಿತು. ಮಹಿಳೆಯರಲ್ಲಿ ಉದ್ರೇಕತೆಯ ಮಟ್ಟವನ್ನು ತಿಳಿಯುವ ಉದ್ದೇಶದಿಂದ ಅವರನ್ನು ಕೆಲವೊಂದು ಪ್ರಶ್ನೆಗಳನ್ನು ಕೇಳಲಾಯಿತು. ಶಿಶ್ನದ ಗಾತ್ರಕ್ಕೂ ಆ ಮಹಿಳೆಯರ ಉದ್ರೇಕದ ಪ್ರಮಾಣಕ್ಕೂ ಯಾವುದೇ ಸಂಬಂಧ ಇಲ್ಲ ಎನ್ನುವುದು ಆ ಅಧ್ಯಯನದಿಂದ ಸ್ಪಷ್ಟವಾಯಿತು.

ಲೈಂಗಿಕ ಕ್ರಿಯೆಯ ಕಾಲದಲ್ಲಿ ಪುರುಷಶರೀರದ ಯಾವ ಭಾಗದ ಕಡೆಗೆ ಹೆಚ್ಚು ಸೆಳೆಯಲ್ಪಡುತ್ತಾರೆ ಎಂಬ ಪ್ರಶ್ನೆಯನ್ನೂ ಕೇಳಲಾಯಿತು. ಶೇ. 39ರಷ್ಟು ಮಹಿಳೆಯರು ತಾವು ಪುರುಷರ ಪೃಷ್ಠಭಾಗವನ್ನು ಗಮನಿಸುವುದು ಹೆಚ್ಚು ಎಂದರು; ಶಿಶ್ನದ ಕಡೆಗೆ ನಮ್ಮ ನೋಟ ಎಂದವರು, ಕೇವಲ ಶೇ. 2ರಷ್ಟು ಮಹಿಳೆಯರು ಮಾತ್ರ. ಲೈಂಗಿಕ ಕ್ರಿಯೆಯ ಆರಂಭದಲ್ಲಿಯಾಗಲಿ ಅಥವಾ ಮೈಥುನದ ಅಂತಿಮ ಸ್ಥಿತಿಯಲ್ಲಾಗಲಿ ಮಹಿಳೆಯರಿಗೆ ಶಿಶ್ನದ ಗಾತ್ರ ಮುಖ್ಯ ಎನಿಸುವುದಿಲ್ಲ ಎಂಬುದನ್ನೇ ಹಲವಾರು ಅಧ್ಯಯನಗಳು ದೃಢಪಡಿಸಿವೆ. ಕಾಮಶಾಸ್ತ್ರದ ವಾಙ್ಮಯದಲ್ಲಿ ಎಲ್ಲೂ ಕೂಡ ಮಹಿಳೆಯರು ಶಿಶ್ನಗಾತ್ರದ ಬಗ್ಗೆ  – ಅದು ಸಣ್ಣದೇ, ಮಧ್ಯಮ ಗಾತ್ರವೇ ಅಥವಾ ದೊಡ್ಡದೇ  ಎಂದು ತಲೆಕೆಡಿಸಿಕೊಂಡಂತೆ ಉಲ್ಲೇಖವಿಲ್ಲ.

* ಉದ್ರೇಕಗೊಂಡ ಸಹಜ ಶಿಶ್ನವು ನೇರವಾಗಿರಲೇ ಬೇಕಲ್ಲವೆ?
ಸುಳ್ಳು. ಶೇ.50ರಷ್ಟು ಶಿಶ್ನಗಳು ನೇರವಾಗಿರುವುದು ಕಂಡಬಂದರೆ ಉಳಿದ ಶೇ.50ರಷ್ಟು ಬೇರೆ ಬೇರೆ ದಿಕ್ಕುಗಳಿಗೆ ತಿರುಗಿರುವುದು ಅಧ್ಯಯನದಿಂದ ತಿಳಿದುಬಂದಿದೆ. ಶೇ.30ರಷ್ಟು ಮೇಲ್ಮುಖವಾಗಿ ನೇರವಾಗಿದ್ದರೆ ಶೇ.10ರಷ್ಟು ಶಿಶ್ನಗಳು ಎಡಕ್ಕೆ ತಿರುಗಿರುತ್ತವೆ; ಶೇ. 6ರಷ್ಟು ಕೆಳಮುಖವಾಗಿರುತ್ತವೆ; ಶೇ. 3ರಷ್ಟು ಬಲಕ್ಕೆ ಮುಖಮಾಡಿದ್ದರೆ, ಉಳಿದ ಶೇ. 1ರಷ್ಟು ಇವುಗಳಲ್ಲಿ ಯಾವುದೋ ದಿಕ್ಕುಗಳ ಸಂಯೋಗವಾಗಿರುತ್ತದೆ (ಉದಾ: ಮೇಲ್ಮುಖವಾಗಿ ಎಡಕ್ಕೆ ವಾಲಿರಬಹುದು.)

* ದೊಡ್ಡ ಗಾತ್ರದ ಶಿಶ್ನವು ಉದ್ರೇಕಗೊಂಡಾಗ ಮತ್ತಷ್ಟು ದೊಡ್ಡದಾಗುತ್ತದೆಯೆ?
ಇಲ್ಲ. ಚಿಕ್ಕ ಗಾತ್ರದ ಸಡಿಲ ಶಿಶ್ನವಂತರು ಮತ್ತು ದೊಡ್ಡ ಗಾತ್ರದ ಸಡಿಲ ಶಿಶ್ನವಂತವರು – ಎರಡು ರೀತಿಯ ಪುರುಷರ ಅಧ್ಯಯನವನ್ನು ನಡೆಸಲಾಗಿ ಕಂಡುಬಂದಿರುವ ಅಂಶಗಳು ಎಂದರೆ:
ಸಡಿಲವಾದ ಚಿಕ್ಕ ಗಾತ್ರದ ಶಿಶ್ನಗಳು ಸಡಿಲವಾದ ದೊಡ್ಡ ಗಾತ್ರದ ಶಿಶ್ನಗಳಿಗಿಂತಲೂ ಗಣನೀಯ ಪ್ರಮಾಣದಲ್ಲಿ ಹಿಗ್ಗುತ್ತವೆ. ಇದಕ್ಕೆ ಕಾರಣವೆಂದರೆ ಸಡಿಲವಾಗಿರುವ ಚಿಕ್ಕ ಗಾತ್ರದ ಶಿಶ್ನಗಳಿಗೆ ಇರುವ ಸ್ಥಿತಿಸ್ಥಾಪಕ ಗುಣ. ಈ ಗುಣವೇ ಶಿಶ್ನವನ್ನು ಗಣನೀಯ ಗಾತ್ರಕ್ಕೆ ಕುಗ್ಗಿಸಲೂ ಬಲ್ಲದು, ಹಿಗ್ಗಿಸಲೂ ಬಲ್ಲದು. ಆದರೆ ಸಡಿಲವಾಗಿರು ದೊಡ್ಡ ಗಾತ್ರದ ಶಿಶ್ವಗಳಿಗೆ ಕಡಿಮೆ ಪ್ರಮಾಣದ ಸ್ಥಿತಿಸ್ಥಾಪಕ ಗುಣವಿರುವುದರಿಂದ ಅವು ಉದ್ರೇಕಗೊಂಡಾಗಲೂ ಅವುಗಳ ಗಾತ್ರದಲ್ಲಿ ಗಣನೀಯ ಪ್ರಮಾಣದಲ್ಲಿ ವ್ಯತ್ಯಾಸ ಆಗದು.

* ಪಾದಗಳ ಅಳತೆ ಜಾಸ್ತಿ ಇದ್ದವರ ಶಿಶ್ನದ ಗಾತ್ರವೂ ದೊಡ್ಡಾಗಿರುತ್ತದೆ ಎನ್ನುವುದು ನಿಜವೇ?
ತಪ್ಪು.

* ಶಿಶ್ನವರ್ಧನೆ ಎಂದರೇನು?
ಶಿಶ್ನಗಳ ಹಿಗ್ಗುವಿಕೆಯೇ ‘ಶಿಶ್ನವರ್ಧನೆ.’ ಮನುಷ್ಯನ ಶಿಶ್ನವನ್ನು ದೊಡ್ಡನ್ನಾಗಿಸುವ ತಂತ್ರಕೌಶಲವೇ ಶಿಶ್ನವರ್ಧನೆಯ ಪ್ರಕ್ರಿಯೆ. ಎಂದರೆ ಶಿಶ್ನದ ಉದ್ದದಲ್ಲೂ ಸುತ್ತುಕಟ್ಟಿನಲ್ಲೂ ದೊಡ್ಡದಾಗುವುದು ಎಂದರ್ಥ. ಒಟ್ಟು ಲೈಂಗಿಕ ಕ್ರಿಯೆಯಲ್ಲಿ ಹೆಚ್ಚುವ ಸಾಮರ್ಥ್ಯ ಎಂದೂ ಇದನ್ನು ಅರ್ಥೈಸಬಹುದು.

*ನಿಜವಾಗಿಯೂ ಶಿಶ್ನವರ್ಧನ ವಿಧಾನಗಳು ಫಲಕಾರಿಯೆ?
ಹೌದು, ಖಂಡಿತ. ಆದರೆ ಇದು ವ್ಯಕ್ತಿನಿರ್ದಿಷ್ಟವಾದ ಪ್ರಕ್ರಿಯೆ. ಸಾವಿರಾರು ವರ್ಷಗಳಿಂದ ಜಗತ್ತಿನ ಹಲವಾರು ಸಂಸ್ಕೃತಿಗಳಲ್ಲಿ ಶಿಶ್ನವರ್ಧನ ವಿಧಾನಗಳು ರೂಢಿಯಲ್ಲಿರುವುದಕ್ಕೆ ಆಧಾರಗಳಿವೆ. ಹಲವಾರು ಬುಡಕಟ್ಟು ಜನಾಂಗಗಳಲ್ಲಿ ಶಿಶ್ನ ಚಾಚಿಕೆ ಮತ್ತು ಶಿಶ್ನ ಜೋಲಿಕೆಯ ವಿಧಾನಗಳು ಚಾಲ್ತಿಯಲ್ಲಿವೆ. ಹೀಗಾಗಿ ಈ ವಿಧಾನ ತುಂಬ ಪ್ರಾಚೀನ ಎನ್ನುವುದು ಸ್ಪಷ್ಟವಾಗುತ್ತದೆ. ಶಿಶ್ನವರ್ಧನೆಯ ವಿಷಯದ ವಿವಿಧ ಆಯಾಮಗಳ ಬಗ್ಗೆ ಸುಮಾರು ಮೂವತ್ತು ಸಾವಿರ ಪುಟಗಳಷ್ಟು ಮಾಹಿತಿ ಸಿಗುತ್ತದೆ ಎನ್ನವುದೇ ಇದರ ವ್ಯಾಪಕತೆಗೂ ಫಲವಂತಿಕೆಗೂ ಸಾಕ್ಷಿಯಾಗಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT