ಮನುಷ್ಯ ಶರೀರ ಕಾರ್ಯನಿರ್ವಹಣೆಗೆ ಶಕ್ತಿಯ ಅವಶ್ಯವಿದೆ. ಆದರೆ ಶಕ್ತಿಯನ್ನು ಸೃಷ್ಟಿಸಲು ಸಾಧ್ಯವಿಲ್ಲ. ಕೇವಲ ವರ್ಗಾಯಿಸಬಹುದಷ್ಟೇ. ಶಕ್ತಿಯ ಕೊರತೆಯೇ ಅನಾರೋಗ್ಯದ ಮೂಲ. ಈ ಶಕ್ತಿಯ ಲಾಭ ಹಾಗೂ ಹಾನಿಗಳ ಬಗ್ಗೆ ತಿಳಿದುಕೊಂಡಲ್ಲಿ ನಾವು ಎಷ್ಟೋ ರೋಗಗಳನ್ನು ತಡೆಗಟ್ಟಬಹುದು. ದೈಹಿಕ, ಮಾನಸಿಕ, ಭಾವನಾತ್ಮಕ ಸಮಸ್ಯೆಗಳ ಬಗ್ಗೆಯೂ ಅರಿಯಬಹುದು.

ನಮಗೆ ಶಕ್ತಿ ಎಲ್ಲಿಂದ ಬರುತ್ತದೆ?
ನಾವು ಉಪಯೋಗಿಸುವ ಜೈವಿಕ ಶಕ್ತಿಯಲ್ಲಿ ಆಹಾರ ಮತ್ತು ನೀರು ಶೇಕಡ 18ರಷ್ಟು ಶಕ್ತಿಯನ್ನು, ಗಾಳಿಯು ಶೇಕಡ 54ರಷ್ಟು, ಪ್ರಕೃತಿಯಿಂದ 28ರಷ್ಟನ್ನು (ಅಂದರೆ ಸೂರ್ಯ, ಆಹಾರ, ಮರಗಿಡಗಳಿಂದ) ಶಕ್ತಿ ಪಡೆಯುತ್ತೇವೆ. ಈ ಶಕ್ತಿಯ ಉಪಯೋಗ ಹೇಗಾಗುತ್ತದೆಂದು ಕೂಡಾ ತಿಳಿದಿರಬೇಕಲ್ಲವೇ? ನಮ್ಮ ಶರೀರದ ಅಂಗಗಳ ಪ್ರತಿಯೊಂದು ಚಲನವಲನಗಳಿಗೂ, ಎಲ್ಲ ಕೆಲಸ ಕಾರ್ಯಗಳಿಗೂ ಶಕ್ತಿಯ ವ್ಯಯವಾಗುತ್ತದೆ.

ಶಕ್ತಿಯ ವ್ಯಯ ಹೇಗಾಗುತ್ತದೆ?
ನಾವು ಶಕ್ತಿಯನ್ನು ಯಾವುದೇ ಒಂದು ಯುನಿಟ್‌ಗಳಿಂದ ವ್ಯಕ್ತಪಡಿಸುತ್ತೇವೆ ಅಂದುಕೊಂಡರೆ ಕೈಚಲನೆಗೆ 1ಯುನಿಟ್ ಶಕ್ತಿ ವ್ಯಯವಾದರೆ, ಕಾಲುಗಳ ಚಲನೆಯಿಂದ 2 ಯುನಿಟ್ ಶಕ್ತಿ ವ್ಯಯವಾಗುತ್ತದೆ. ಮಾತನಾಡುವುದಕ್ಕೆ 4 ಯುನಿಟ್ ಶಕ್ತಿ ವ್ಯಯವಾಗುತ್ತದೆ. ನೋಡುವುದಕ್ಕೆ 8 ಯುನಿಟ್ ಶಕ್ತಿ ವ್ಯಯವಾಗುತ್ತದೆ. ಯೋಚನೆಗೆ 16 ಯುನಿಟ್ ಶಕ್ತಿ ವ್ಯಯವಾಗುತ್ತದೆ. ನಕಾರಾತ್ಮಕ ಚಿಂತನೆಗೆ 128 ಯುನಿಟ್ ಶಕ್ತಿ ವ್ಯಯವಾಗುತ್ತದೆ. ಅಂದರೆ ಸಕಾರಾತ್ಮಕ ಕ್ರಿಯೆಗಳಿಗಿಂತ ನಕಾರಾತ್ಮಕ ಚಿಂತನೆಗೆ ಹೆಚ್ಚು ಶಕ್ತಿಯ ವ್ಯಯವಾಗುತ್ತದೆ ಎಂದಾಯಿತಲ್ಲವೇ? ಹಾಗಾದರೆ ಅನಗತ್ಯ ಶಕ್ತಿಯನ್ನು ವ್ಯಯಮಾಡುವ ಬದಲು ನಮಗೆ ದೊರಕುವ ಶಕ್ತಿಗಳಿಂದಲೇ ಅದರ ಗರಿಷ್ಟತೆಯನ್ನು ತಲುಪಲು ನಾವು ಮಾಡಬೇಕಾದ್ದೇನು?

ಗಾಳಿಯಿಂದಲೇ ಶೇಕಡ 54ರಷ್ಟು ಶಕ್ತಿ ನಮಗೆ ದೊರಕುವುದರಿಂದ ನಾವು ದೀರ್ಘ ಉಸಿರಾಟದ ಅಭ್ಯಾಸಗಳನ್ನು ಅಥವಾ ಪ್ರಾಣಾಯಾಮವನ್ನು ನಿಯಮಿತವಾಗಿ ಮಾಡಬೇಕು. ಇದರಿಂದ ನಮ್ಮ ದೇಹಕ್ಕೆ ಹೆಚ್ಚಿನ ಶಕ್ತಿ ದೊರೆತು ಚೈತನ್ಯ ಪೂರ್ಣವಾಗಿ ಇಡೀ ದಿನ ಚಟುವಟಿಕೆಯಿಂದಿರಲು ಸಾಧ್ಯ. ಪ್ರಾಣಾಯಾಮವನ್ನು ಸೂಕ್ತ ತಜ್ಞರ ಮಾರ್ಗದರ್ಶನದಲ್ಲಿ ಕಲಿತು ಮಾಡಬೇಕು. ಮುಖ್ಯವಾಗಿ ಮಾಡಬೇಕಾದ ಪ್ರಾಣಾಯಾಮಗಳೆಂದರೆ ಭಸ್ತ್ರೀಕಾ ಪ್ರಾಣಾಯಾಮ, ಕಪಾಲಭಾತಿ, ಅನುಲೋಮ, ವಿಲೋಮ ಅಥವಾ ನಾಡಿಶೋಧನಾ ಪ್ರಾಣಾಯಾಮ, ಭೃಮರಿ, ಶೀತಲಿ, ಶೀತಕಾರಿ ಪ್ರಾಣಾಯಾಮ ಇತ್ಯಾದಿ.

ಇನ್ನು ಶೇಕಡ 18ರಷ್ಟು ಶಕ್ತಿಯನ್ನು ಆಹಾರದಿಂದ ಪಡೆಯುತ್ತೇವೆಯಾದರೂ ತಿಂದ ಆಹಾರ ಜೀರ್ಣಿಸಿಕೊಳ್ಳಲು ಹೆಚ್ಚು ಶಕ್ತಿ ವ್ಯಯವಾಗುತ್ತದೆ. ಆದ್ದರಿಂದ ನಾವೆಲ್ಲರೂ ಯಾವ ಆಹಾರವನ್ನು ಸೇವಿಸಿದಾಗ ಅದರ ಜೀರ್ಣಕ್ರಿಯೆಗೆ ಹೆಚ್ಚು ಶಕ್ತಿಯ ವ್ಯಯವಾಗುವುದಿಲ್ಲವೋ ಅಂತಹ ಆಹಾರಗಳನ್ನು ಹೆಚ್ಚು ಹೆಚ್ಚು ಸೇವಿಸಬೇಕು.

ಆಹಾರ ಜೀರ್ಣವಾಗಲು ವ್ಯಯವಾಗುವ ಶಕ್ತಿಯ ಆಧಾರದ ಮೇಲೆ ಆಹಾರಗಳನ್ನು ಮೂರು ರೀತಿಯಾಗಿ ವಿಂಡಿಸಬಹುದು.
ಶೂನ್ಯ ಮೌಲ್ಯದ ಆಹಾರ -ಯಾವ ಆಹಾರ ತಿಂದಾಗ ಅದರಿಂದ ದೊರಕುವ ಶಕ್ತಿಗೂ ಅದರ ಜೀರ್ಣಕ್ರಿಯೆಗೆ ವ್ಯಯವಾಗುವ ಶಕ್ತಿಗೂ ಸಮಾನವಾಗುವ ಅಹಾರ ಶೂನ್ಯ ಮೌಲ್ಯದವು. ಇವುಗಳಿಂದ ಹೆಚ್ಚು ಶಕ್ತಿಯ ಲಾಭವಿಲ್ಲ. ಉದಾಹರಣೆಗಳೆಂದರೆ ಆಲೂಗಡ್ಡೆ, ಟೊಮೆಟೊ ಇತ್ಯಾದಿ.

ಋಣಾತ್ಮಕ ಮೌಲ್ಯದ ಆಹಾರ -ಯಾವ ಆಹಾರದಿಂದ ನಮಗೆ ಕಡಿಮೆ ಶಕ್ತಿ ದೊರಕಿ ಅದರ ಜೀರ್ಣಕ್ರಿಯೆಗೆ ಹೆಚ್ಚು ಶಕ್ತಿಯ ವ್ಯಯವಾಗುತ್ತದೆಯೋ ಅವು ಋಣಾತ್ಮಕ ಮೌಲ್ಯದ ಆಹಾರಗಳು. ಅದಕ್ಕೆ ಉದಾಹರಣೆಗಳು ಚಹ, ಕಾಫಿ, ಎಣ್ಣೆ, ಸಂಸ್ಕರಿಸಿದ ಆಹಾರಗಳು, ಬೇಕರಿ ತಿನಸುಗಳು ಇತ್ಯಾದಿ.

ಧನಾತ್ಮಕ ಮೌಲ್ಯದ ಆಹಾರಗಳು- ಯಾವ ಆಹಾರದಿಂದ ಹೆಚ್ಚಿನ ಶಕ್ತಿಯು ದೊರಕಿ ಅದರ ಜೀರ್ಣಕ್ರಿಯೆಗೆ ಕಡಿಮೆ ಶಕ್ತಿ ವ್ಯಯವಾಗುತ್ತದೆಯೋ ಅಂತಹ ಆಹಾರಗಳು ಧನಾತ್ಮಕ ಮೌಲ್ಯದ ಆಹಾರಗಳು ಎಂದು ಕರೆಸಿಕೊಳ್ಳುತ್ತವೆ. ಉದಾಹರಣೆಗೆ: ಎಲ್ಲಾ ಹಣ್ಣುಗಳು, ಹಸಿರು ತರಕಾರಿಗಳು, ಸೋರೆಕಾಯಿ, ಬೂದು ಕುಂಬಳಕಾಯಿ, ಹೀರೆಕಾಯಿ ಇತ್ಯಾದಿಗಳು. ಎಲ್ಲ ಧಾನ್ಯ, ಬೇಳೆಕಾಳು ಅದರಲ್ಲೂ ಮೊಳಕೆ ಬರಿಸಿದ ಧಾನ್ಯಗಳು. ಇವೆಲ್ಲ ಧನಾತ್ಮಕ ಮೌಲ್ಯದ ಆಹಾರಗಳಾಗಿರುತ್ತವೆ. ಆದ್ದರಿಂದ ನಾವೆಲ್ಲರು ಹೆಚ್ಚು ಹೆಚ್ಚು ಅವುಗಳನ್ನೇ ಸೇವಿಸಿದರೆ ನಮಗೆ ಹೆಚ್ಚಿಗೆ ಶಕ್ತಿಯೂ ದೊರಕುವುದೆಂದು ಅರಿವು ಮೂಡಿಸಿಕೊಂಡು ಅಂತಹ ಆಹಾರಗಳನ್ನು ಹೆಚ್ಚು ಹೆಚ್ಚು ಸೇವಿಸಬೇಕು.

ಋಣಾತ್ಮಕ ಮೌಲ್ಯದ ಆಹಾರಗಳಾದ ಜಂಕ್‌ಪುಡ್, ಕಾಫಿ, ಟೀ ಇತರ ಕೃತಕ ಪೇಯಗಳ ಬಳಕೆ ಕಡಿಮೆ ಮಾಡಬೇಕು. ಧೂಮಪಾನ, ಮದ್ಯಪಾನ ತ್ಯಜಿಸಬೇಕು. ನೀರು ಹೆಚ್ಚು ಕುಡಿಯಬೇಕು. ಅತ್ಯಂತ ಹೆಚ್ಚು ಯುನಿಟ್ ಶಕ್ತಿ ವ್ಯಯವಾಗುವ (128 ಯುನಿಟ್‌ಗಳು) ನಕಾರಾತ್ಮಕ ಚಿಂತನೆಯನ್ನು ಬಿಡಲೇಬೇಕು. ಸಕಾರಾತ್ಮಕ ಚಿಂತನೆ, ನಿಯಮಿತ ಉಸಿರಾಟದ ಅಭ್ಯಾಸ ಮಾಡುತ್ತ, ಹೆಚ್ಚು ಹೆಚ್ಚು ಧನಾತ್ಮಕ ಮೌಲ್ಯದ ಆಹಾರಗಳನ್ನು ಸೇವಿಸಬೇಕು. ಆರೋಗ್ಯ ಪೂರ್ಣವಾಗಿರಲು, ಚಟುವಟಿಕೆಯಿಂದಿರಲೂ ಇಂದೇ ನಿರ್ಧರಿಸಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.