ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ವಾಸ್ಥ್ಯ ಸೌಖ್ಯ

Last Updated 22 ಜುಲೈ 2011, 19:30 IST
ಅಕ್ಷರ ಗಾತ್ರ

ರಾಮು, ಬೆಂಗಳೂರು
ವಯಸ್ಸು 77. ನನ್ನ ಸಮಸ್ಯೆ ಏನೆಂದರೆ ಸರಿಯಾಗಿ ಮಲವಿಸರ್ಜನೆ ಆಗುವುದಿಲ್ಲ. ಬಹಳ ಕಾಲದಿಂದಲೂ ಇದು ಹೀಗೇ ಇದೆ. ಇದರ ಸಲುವಾಗಿ ಸಿಗ್ಟೆಕೋಗ್ರಾಫಿ  ವಿಶೇಷವಾದ ಮಲವಿಸರ್ಜನೆಯ ಕೃತಕ ಪದ್ಧತಿಯನ್ನು ಅನುಸರಿಸುತ್ತಿದ್ದೇನೆ. ಇದು 15 ವರ್ಷಗಳ ಹಿಂದೆ ಸೆಂಟ್ ಜಾನ್ ಆಸ್ಪತ್ರೆಯಲ್ಲಿ ಅವರ ಹೇಳಿಕೆ ಪ್ರಕಾರ ಬಳಸುತ್ತಿದ್ದೆ. ಏನೂ ತೊಂದರೆ ಕಾಣಿಸಲಿಲ್ಲ. ಇತ್ತೀಚೆಗೆ ಇದಕ್ಕೆ ಸಂಬಂಧಿಸಿದ ಪರೀಕ್ಷೆಯನ್ನು ಮಾಡಿಸಿದೆ. ಏನೂ ಪ್ರಯೋಜನವಿಲ್ಲ. ಎಲ್ಲಾ ಸರಿಯಾಗಿದೆ. ಆಯುರ್ವೇದ ಔಷಧಗಳನ್ನೂ ಪ್ರಯತ್ನಿಸಿದೆ. ಅವುಗಳಿಂದಲೂ ಏನೂ ಪ್ರಯೋಜನವಿಲ್ಲ. ಶರೀರದಾದ್ಯಂತ ಇದೇ ಸ್ಥಿತಿ ಇದೆ. ಅಲ್ಲಲ್ಲಿ ಉರಿ  ಕಾಣಿಸುತ್ತೆ. ಕಿವಿಯಲ್ಲಿ ಶಬ್ದ. ಅಂಗಾಲುಗಳ ಉರಿ, ತೊಡೆಗಳ ನೋವು ಇತ್ಯಾದಿ. ಆದ್ದರಿಂದ ತಾವು ಏನಾದರೂ ಒಂದು ಒಳ್ಳೆಯ ಔಷಧವನ್ನು ಸೂಚಿಸಬೇಕಾಗಿ ಪ್ರಾರ್ಥನೆ. ತಾವು ಬೆಂಗಳೂರಿನಲ್ಲಿ ವಾಸವಿದ್ದರೆ ತಮ್ಮ ವಿಳಾಸವನ್ನು ತಿಳಿಸಬೇಕಾಗಿ ವಿನಂತಿ.
ನಿಮ್ಮ ಕಥೆ ಕೇಳಿ ದುಃಖವಾಯಿತು. ನೀವು ಬೇರೆ ಏನೆಲ್ಲಾ ಔಷಧಿಗಳನ್ನು ಸೇವಿಸುತ್ತೀರಿ ಎಂದು ತಿಳಿಯದೆ ಸಲಹೆ ಕೊಡುವುದು ಕಷ್ಟ. ಈ ರೀತಿಯ ಮಲಬದ್ಧತೆಗೆ ಮನಸ್ಸಿನ ಜಟಿಲತೆ ಕಾರಣ. ಮನಸ್ಸನ್ನು ಸಡಿಲಿಸಿ. ಈ ಕಾಯಿಲೆಗಳನ್ನೆಲ್ಲಾ ಮರೆತು ಆಹಾರದಲ್ಲಿ ಸ್ವಲ್ಪ ಬದಲಾವಣೆ ಮಾಡಿದರೆ ಸರಿ ಹೋಗುತ್ತದೆ.
ಪ್ರತಿದಿನ ಸಾಕಷ್ಟು ನೀರು ಸೇವನೆ.
ದಿನಕ್ಕೆ 1-2 ಸೀಬೆ ಹಣ್ಣು.
ಆಹಾರದಲ್ಲಿ ಹಣ್ಣು, ತರಕಾರಿ ಹೆಚ್ಚಿರಲಿ, ಮಾಂಸಾಹಾರ ಬೇಡ.
ಮನಸ್ಸಿನಲ್ಲಿ ಸಮಾಧಾನ, ಸಂತಸ, ಪ್ರೀತಿ ಇರಲಿ. ದಿನಾ ಒಂದು ಗಂಟೆ ವಾಕಿಂಗ್ ಮಾಡಿ.  ಔಷಧಿ ಇದ್ದರೆ ನಿಮ್ಮ ವೈದ್ಯರ ಸಲಹೆ ಪಡೆದು ನಿಧಾನವಾಗಿ ಕಡಿಮೆ ಮಾಡುವ ಪ್ರಯತ್ನ ಮಾಡಿ. ಮಲಬದ್ಧತೆಗೆ ದಯವಿಟ್ಟು ಔಷಧಿ ತೆಗೆದುಕೊಳ್ಳಬೇಡಿ.

ರಮೇಶ್, ಬೆಂಗಳೂರು
ನನಗೆ ಅನೇಕ ವರ್ಷಗಳಿಂದ ನೆಗಡಿ ಇದೆ. ಅದು ಪೂರ್ತಿ ವಾಸಿಯಾಗಲು ಯಾವುದಾದರೂ ಔಷಧಿ ಇದ್ದರೆ ದಯವಿಟ್ಟು ತಿಳಿಸಬೇಕೆಂದು ವಿನಂತಿ.

ನೆಗಡಿಗೆ ಒಂದು ಔಷಧಿಯನ್ನು ಹುಡುಕಿದ್ದರೆ ಅವನ ಹಣವನ್ನು ಇಡಲು ಜಾಗ ಇರಲಿಕ್ಕಿಲ್ಲ. ನಿಮಗೇ ಬರೇ ನೆಗಡಿಯ ಯಾ ಸೈನಸ್ ಇದೆಯೇ ಎಂಬುದನ್ನು ಪರೀಕ್ಷಿಸಿ ಬೇಕಾದ ಉಪಶಮನ ಪಡೆಯಿರಿ.

ಪ್ರದೀಪ್ ಕುಮಾರ್, ಸಿರಾ
ಕೆಲವು ತಿಂಗಳ ಹಿಂದೆ ನೆಗಡಿಯಾದಾಗ ಮೂಗಿನ ಮೇಲೆ ಹಾಗೂ ಕೆಳಗೆ ಮಾರುಕಟ್ಟೆಯಲ್ಲಿ ದೊರೆಯುವ ಕ್ರೀಂ ಹಚ್ಚಿಕೊಂಡೆ. ನಂತರ ಆ ಜಾಗದಲ್ಲಿ ಬಿಳಿ ಕೂದಲಂತಹದ್ದು ಬೆಳೆಯುತ್ತಿದೆ. ಹಲವು ವೈದ್ಯರಿಗೆ ತೋರಿಸಿದರೂ ಮೂಗಿನ ಮೇಲಿನ ಚರ್ಮ ಮೊದಲಿನಂತಾಗಿಲ್ಲ. ಇದು ಯಾವ ರೀತಿಯ ಚರ್ಮರೋಗ ಹಾಗೂ ಪರಿಹಾರವನ್ನು ತಿಳಿಸಿ.

ಇದಕ್ಕೆ Contact dermotities ಎಂದು ಹೇಳುತ್ತಾರೆ. ಇದಕ್ಕೆ ಇನ್ನೊಂದು ಔಷಧ ಬೇಡ. ಸ್ವಲ್ಪ ಸಮಯದಲ್ಲಿ ತನ್ನಷ್ಟಕ್ಕೆ ತಾನು ಸರಿಯಾಗಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT