ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ವಾಸ್ಥ್ಯ- ಸೌಖ್ಯ

Last Updated 8 ಜೂನ್ 2012, 19:30 IST
ಅಕ್ಷರ ಗಾತ್ರ

ಉಮಾದೇವಿ, 52 ವರ್ಷ, ಬೆಂಗಳೂರು
ನನ್ನ ಸಮಸ್ಯೆ ಏನೆಂದರೆ ನನಗೆ ಇನ್ನೂ ಮುಟ್ಟು ನಿಂತಿಲ್ಲ. 25 ದಿನಕ್ಕೆಲ್ಲ ಮುಟ್ಟು ಆಗುತ್ತದೆ. ನಾಲ್ಕು ದಿನ ಬ್ಲೀಡಿಂಗ್ ಆಗುತ್ತೆ. ಮುಟ್ಟಿನ ಸ್ವಲ್ಪ ದಿನ ಬೆನ್ನು ನೋವು, ನಿಶ್ಶಕ್ತಿ ಇರುತ್ತದೆ. ನನಗೆ ಬೇರೆ ಯಾವುದೇ ಕಾಯಿಲೆಗಳಿಲ್ಲ. ದಿನ ಒಂದು ಗಂಟೆ ಯೋಗ, ಪ್ರಾಣಾಯಾಮ ಮಾಡುತ್ತೇನೆ. ಈ ವಯಸ್ಸಿನಲ್ಲಿ ಮುಟ್ಟು ನಿಂತಿಲ್ಲ. ವೈದ್ಯರ ಹತ್ತಿರ ತೋರಿಸಲಿಕ್ಕೆ, ಅಕ್ಕ, ತಂಗಿಯರು, ಅಮ್ಮನ ಒತ್ತಾಯ. ಆದರೆ ನನಗೆ ವೈದ್ಯರ ಹತ್ತಿರ ಹೋಗುವುದೆಂದರೆ ಯಾಕೋ ಭಯ. ದಯವಿಟ್ಟು ನನಗೆ ಸಲಹೆ ಕೊಡಿ.

52ನೇ ವಯಸ್ಸಿನಲ್ಲಿ ಮುಟ್ಟು ನಿಲ್ಲಬೇಕೆಂದು ಕಡ್ಡಾಯವೇನಿಲ್ಲ. ಮನುಷ್ಯ ದೇಹದಲ್ಲಿ ಮುಟ್ಟಿನ ಪ್ರಕ್ರಿಯೆ ಮಾತ್ರ ಪಾಣಾಯಾಮ, ಯೋಗದಿಂದ ಹೊರಗಿದೆ. ಉತ್ತಮ ಸ್ತ್ರೀರೋಗ ತಜ್ಞರನ್ನು ಭೇಟಿ ಮಾಡಿ. ಅದು ನಿಮ್ಮ ಕುಟುಂಬದವರ ಉತ್ತಮ ಸಲಹೆ. ಆದರೆ ಉತ್ತಮ ವೈದ್ಯರನ್ನು ಹುಡುಕಿ ಸಲಹೆ ಪಡೆಯಿರಿ.

ರಾಜು, 28 ವರ್ಷ, ಮಾಲೂರು
ನಾನು ಎರಡು ವರ್ಷಗಳಿಂದ ಒಂದು ಸಮಸ್ಯೆಯನ್ನು ಎದುರಿಸುತ್ತಿದ್ದೇನೆ. ಅದು ಮನೋರೋಗದ ಸಮಸ್ಯೆ. ಒಂದು ಭಯದಿಂದ ಈ ಸಮಸ್ಯೆ ಉದ್ಭವವಾಗಿದೆ. ನಾನು ಮನೋರೋಗ ತಜ್ಞರ ಬಳಿ ಹೇಳಿಕೊಂಡಾಗ ಇದೊಂದು `ಗೀಳು ಮನೋರೋಗ~ ಎಂದು ಪರಿಗಣಿಸಿ ಕೆಲವು ಮಾತ್ರೆಗಳನ್ನು ಬರೆದುಕೊಟ್ಟರು. ಅದನ್ನು ಸುಮಾರು ಒಂದು ವರ್ಷದಿಂದ ಸೇವಿಸುತ್ತಿದ್ದೆ. ಈಗ ಅದನ್ನು ನಿಲ್ಲಿಸಿದ್ದೇನೆ. ನಿಲ್ಲಿಸಿದ ನಂತರ ನನ್ನ ದೇಹ ತುಂಬ ಹಗುರವಾಗಿದ್ದು ಆರೋಗ್ಯವಾಗಿದ್ದೇನೆ.

ಸಮಸ್ಯೆ ಎಂದರೆ ನಾನು ಒಬ್ಬ ಹೆಂಗಸಿನ ಬಳಿ ಲೈಂಗಿಕ ಸಂಬಂಧ ಮಾಡಿದ್ದೆ. ಮಾಡಿದಾಗ ನಿರೋಧ್ ಬಳಸಿದ್ದೆ. ತದನಂತರ ಏನಾದರೂ ಸೊಂಕು ತಗಲಿದ್ದರೆ ಎಂದು ಸುಮಾರು 4-5 ತಿಂಗಳ ಕಾಲ ಭಯದಿಂದ ನರಳಿ ನಿದ್ದೆ ಸರಿಯಾಗಿ ಮಾಡುತ್ತಿರಲಿಲ್ಲ. ನಂತರ 8 ತಿಂಗಳ ನಂತರ ರಕ್ತಪರೀಕ್ಷೆ ಮಾಡಿಸಿದ ನಂತರ ನನಗೆ ಯಾವುದೇ ಕಾಯಿಲೆ ಇಲ್ಲ ಎಂದು ತಿಳಿದು ಬಂದಿತು.

ಇದರಿಂದ ನನಗೆ ಮನೋರೋಗ ಉಂಟಾಯಿತು. ನಂತರ ಚಿಕ್ಕಂದಿನಲ್ಲಿ ಸೋದರಿಯರ ಜೊತೆ ಆಡಿದ ಲೈಂಗಿಕ ಚೇಷ್ಟೆಗಳು ಎಲ್ಲಾ ನನ್ನ ಮನಸ್ಸನ್ನು ಹದಗೆಡಿಸಿವೆ. ಇದರಿಂದ ಮನೋರೋಗ ಬೇರೆ ಕಡೆ ತಿರುಗಿ ಗೀಳು ಮನೋರೋಗವಾಗಿದೆ.  ನಾನು ಮಾತ್ರೆಗಳನ್ನು ಸೇವಿಸಬೇಕೆ ಅಥವಾ ನಿಲ್ಲಿಸಲೆ? ಮದುವೆಯಾದರೆ ಏನೂ ತೊಂದರೆ ಇಲ್ಲವೆ ತಿಳಿಸಿ.

ನಿಮ್ಮ ಪತ್ರಮುಖೇನ ತಿಳಿದಂತೆ ಇದೊಂದು ದೊಡ್ಡ ಕಾಯಿಲೆ ಎಂದು ಅನಿಸುವುದಿಲ್ಲ. ಯಾವ ಕಾಯಿಲೆಯೂ ಮಾತ್ರೆಯಿಂದ ಗುಣವಾಗುತ್ತದೆಂದು ತಿಳಿಯುವುದು ತಪ್ಪು. ತಾವು ದಯವಿಟ್ಟು ಒಬ್ಬ ಉತ್ತಮ ಮನೋಶಾಸ್ತ್ರಜ್ಞರನ್ನು ಸಂಪರ್ಕಿಸಿ. ಇದು ಸಮಸ್ಯೆ ಅಲ್ಲ. ಇದರಿಂದ ನಿಮ್ಮ ವೈವಾಹಿಕ ಜೀವನಕ್ಕೆ ಏನೂ ತೊಂದರೆಯಿಲ್ಲ.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT