ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ವಾಸ್ಯ್ಥ ಸೌಖ್ಯ

Last Updated 30 ಮಾರ್ಚ್ 2012, 19:30 IST
ಅಕ್ಷರ ಗಾತ್ರ

ಹೆಸರು ಬೇಡ

ಬಿಳಿ ಮಚ್ಚೆ ಕಾಯಿಲೆಯು ಚಿಕ್ಕ ಮಕ್ಕಳಿಂದ ವೃದ್ಧರವರೆಗೆ ವ್ಯಾಪಕವಾಗಿ ಹರಡುತ್ತಿರುವ ಕಾಯಿಲೆಯಾಗಿದೆ. ಇದು ಇಬ್ಬರಿಂದ ಮತ್ತೊಬ್ಬರಿಗೆ ಹರಡುತ್ತದೆಯೇ? ಇದು ಯಾವ ಪೋಷಕಾಂಶದ ಕೊರತೆಯಿಂದ ಬರುತ್ತದೆ? ಬಿಳಿ ಮಚ್ಚೆ ಕಾಯಿಲೆಗೆ ಸೂಕ್ತ ಔಷಧ ಯಾವುದು?
ಪತ್ರಿಕೆಗಳಲ್ಲಿ ಬಿಳಿ ಮಚ್ಚೆಗೆ ಔಷಧಿ ಲಭ್ಯವಿದೆ.

ಅದನ್ನು ಉಪಯೋಗಿಸಿದ 6-8 ಗಂಟೆಗಳಲ್ಲಿ ಚರ್ಮದ ಬಣ್ಣ ಬದಲಾಗುತ್ತದೆ ಎಂದು ಬರುತ್ತದೆ. ಈ ಔಷಧಿ ಉಪಯೋಗಿಸಲು ಸೂಕ್ತವಾಗಿದೆಯೇ. ಬಿಳಿ ಮಚ್ಚೆಯ ಬಗ್ಗೆ ಸಂಪೂರ್ಣ ಮಾಹಿತಿ ಕೊಡಿ.
ಬಿಳಿ ಮಚ್ಚೆ ಒಂದು ಕಾಯಿಲೆ ಅಲ್ಲ. ಅದು ಒಬ್ಬರಿಂದ ಒಬ್ಬರಿಗೆ ಹರಡುವುದಿಲ್ಲ, ಅದಕ್ಕೆ ಔಷಧಿ ಅಗತ್ಯವಿಲ್ಲ. ದಯವಿಟ್ಟು ತಲೆ ಬಿಸಿ ಮಾಡಿಕೊಳ್ಳಬೇಡಿ.

ಕುಮಾರಸ್ವಾಮಿ, ಬೆಂಗಳೂರು

ನಾನು ಆರೋಗ್ಯವಾಗಿದ್ದೇನೆ. ಸಾಧಾರಣ ಎತ್ತರವಾಗಿಯೂ ಇದ್ದೇನೆ. ನಾನು 10-15 ವರ್ಷಗಳಿಂದ ಒಂದೇ ಮೈಕಟ್ಟನ್ನು ಹೊಂದಿದ್ದೇನೆ. ಅಂದರೆ 45 ಕೆ.ಜಿ. ಗಿಂತ ಹೆಚ್ಚು. 50 ಕೆ.ಜಿ.ಗಿಂತ ಕಡಿಮೆಯಲ್ಲಿಯೇ ಇರುತ್ತೆನೆ.

ನನಗೆ ಈಗ 28 ವರ್ಷ. ನಾನು ತುಂಬಾ ಸಣ್ಣಗೆ ಕಾಣುತ್ತೇನೆ. ನನ್ನ ದೇಹ ಏಕೆ ಬೆಳವಣಿಗೆಯಾಗುತ್ತಿಲ್ಲ ಎಂದು ಗೊತ್ತಿಲ್ಲ. ಆದರೆ ಸಣ್ಣಗಿದ್ದರೂ ಗಟ್ಟಿಯಾಗಿದ್ದೇನೆ. ನಮ್ಮ ವಂಶಸ್ಥರು ಮೈಕಟ್ಟು ಹೊಂದಿದ್ದಾರೆ. ನನಗೇಕೆ ಹೀಗೆ ದೇಹದ ತೂಕ ಕಡಿಮೆ ಇದೆ ದಯವಿಟ್ಟು ತಿಳಿಸಿ.

ನನ್ನ ವಯಸ್ಸಿಗೆ ಎಷ್ಟು ಕೆ.ಜಿ. ಇರಬೇಕು. ಹೇಗೆ ತೂಕವನ್ನು ಹೆಚ್ಚಿಸಿಕೊಳ್ಳಬೇಕೆಂಬುದನ್ನು ತಿಳಿಸಿ. ನನಗೆ ಸ್ವಲ್ಪ ಲೈಂಗಿಕ ಸಮಸ್ಯೆ ಇದೆ. ಅಂದರೆ ರಾತ್ರಿಯಲ್ಲಿ ಮೊದಲು 4-5 ವರ್ಷಗಳ ಹಿಂದೆ ವೀರ್ಯಸ್ಖಲನವಾಗುತ್ತಿತ್ತು. ಈಗ ತುಂಬಾ ನಿಯಂತ್ರಣವಾಗಿದೆ. ಇದೂ ಸಹ ನನ್ನ ತೂಕದ ಮೇಲೆ ಪರಿಣಾಮ ಬೀರಿದೆಯೆ ತಿಳಿಸಿ. ನಾನು ಈ ಬಗ್ಗೆ ಯಾವುದೇ ವೈದ್ಯರನ್ನು ಕಂಡಿಲ್ಲ.

ಆರೋಗ್ಯದ ಅರ್ಥ ದೇಹದ ತೂಕ ಸರಿ ಇರುವುದು ಎಂದಲ್ಲ. ಆರೋಗ್ಯವೆಂದರೆ ಕೆಲಸ ಮಾಡುವ ಹುರುಪಿದ್ದು ಇನ್ನೊಬ್ಬರಿಗೆ ಏನಾದರೂ ಒಳ್ಳೆಯದನ್ನು ಮಾಡುವ ಹುರುಪಿದ್ದರೆ ಆತ ಆರೋಗ್ಯವಂತ. ಈ ದಿಸೆಯಲ್ಲಿ ನೀವು ತುಂಬಾ ಆರೋಗ್ಯವಂತರಾಗಿದ್ದೀರಿ.
 
ಈ ದೇಹದ ತೂಕಕ್ಕೂ ಇನ್ನೊಬ್ಬರ ತೂಕಕ್ಕೂ ಅಳತೆ ಮಾಡುವುದು ಸರಿಯಲ್ಲ. ನಿಮ್ಮದೇ ಸಂತಾನದಲ್ಲಿ ಬೇರೆಯವರು ಬೇರೆ ರೀತಿ ಇರಬಹುದು. ಅದು ಅನಾರೋಗ್ಯ ಅಲ್ಲ. ದೇಹದ ತೂಕ ಹೆಚ್ಚಿದ್ದರೆ ಕಷ್ಟ. ನಿಮ್ಮ ಕೆಲಸವನ್ನು ಸರಿಯಾಗಿ ಮಾಡಿ. ತಪ್ಪು ಆಲೋಚನೆಗಳಿಂದ ತಲೆ ಕೆಡಿಸಿಕೊಳ್ಳಬೇಡಿ. ನಿಮ್ಮ ಈ ಸಮಸ್ಯೆಗೆ ವೈದ್ಯರ ಸಹಾಯ ಅಗತ್ಯವಿಲ್ಲ.
 
ಸ್ವಪ್ನ ಸ್ಖಲನ ಒಂದು ಕಾಯಿಲೆ ಅಲ್ಲ. ಅದರಿಂದ ನಿತ್ರಾಣ ಬರುವುದಿಲ್ಲ. ಅದು ಒಂದು ನೈಸರ್ಗಿಕ ಪ್ರಕ್ರಿಯೆ. ನಿಮ್ಮ ದೇಹದ ತೂಕದ ಆಲೋಚನೆಗಳನ್ನು ಬಿಟ್ಟು ಕೆಲಸದಲ್ಲಿ ಮಗ್ನರಾಗಿ. ಪೌಷ್ಟಿಕ ಆಹಾರ, ನಿತ್ಯ ವಾಯಾಮ ಹಾಗೂ ಕೆಲಸದಲ್ಲಿ ಹುರುಪು, ರಾತ್ರಿ ಏಳು ಗಂಟೆ ನಿದ್ರೆ, ಧೂಮಪಾನ ಮದ್ಯಪಾನದಿಂದ ದೂರವಿದ್ದು ಜೀವನ ಪರ್ಯಂತ ಆರೋಗ್ಯ ಪಡೆಯಿರಿ.

ಪಿ. ಕೆ. ಉತ್ತಪ್ಪ, 75 ವಷ, ಕೊಡಗು

ನನಗೆ ಕೆಲವು ವರ್ಷಗಳಿಂದ ಕೆಮ್ಮುವಾಗ ನಶ್ಯಚಿಟಿಕೆಗಿಂತಲೂ ಚಿಕ್ಕದಾಗಿ ಕಫ ಬರುತ್ತಿತ್ತು. ಅದು ಕ್ರಮೇಣ ಸುಧಾರಣೆ ಆಗಿ ಈಗ 3-4 ವರ್ಷದಿಂದ ಕಫ ಉತ್ಪತ್ತಿಯಾಗಿ ಕೆಮ್ಮುವಾಗ ಬಹಳ ಕಫ ಬರುತ್ತಿದೆ. ಕಫವು ಮೇಣದಾಕಾರವಾಗಿ ಕೊನೆಯ ಹಂತದಲ್ಲಿ ಬರುತ್ತೆ.

ನಾನು 40 ವರ್ಷಗಳ ಹಿಂದೆ ದೂಮಪಾನ ಮಾಡುತ್ತಿದ್ದೆ. ನನ್ನ ಸ್ನೇಹಿತ ಡಾ. ಡಿ. ಎಂ. ದೇವರಾಜು ತುಮಕೂರು ಅವರ ಬೋಧನೆಯಿಂದ ಬಿಟ್ಟುಬಿಟ್ಟೆ.  ಹೃದಯ ಭಾಗದಿಂದ ಕಫ ಬರುವಂತೆ ನನಗೆ ತೋಚುತ್ತದೆ. ಮೊದಮೊದಲು ಗಂಟಲಿನಿಂದ ಬರುವುದು ಮತ್ತೆ ಹೃದಯ ಭಾಗದಿಂದ ಬಂದಹಾಗೆ ಆಗುವುದು ಇದರಿಂದ ನನಗೆ ಬಹಳಷ್ಟು ಕಿರಿಕಿರಿ ತೊಂದರೆ ಕಾಣುತ್ತಿದೆ. ಕಫ ಶರೀರದದಲ್ಲಿ ಯಾವ ಕಾರಣಕ್ಕೆ ಉತ್ಪತ್ತಿ ಆಗುವುದು ಎಂದು ತಿಳಿಸಿ. ಇದಕ್ಕೆ ಪರಿಹಾರ ತಿಳಿಸಿಕೊಡಿ.

ದಯವಿಟ್ಟು ಒಬ್ಬ ಹೃದಯವಂತ ವೈದ್ಯರನ್ನು ಕಂಡು ಸೂಕ್ತ ಸಲಹೆ ಪಡೆಯುವುದು ಉತ್ತಮ. ಇದರ ವಿಚಾರದಲ್ಲಿ ನೀವು ನಿಮ್ಮಷ್ಟಕ್ಕೆ ಆಲೋಚನೆ ಮಾಡುವುದು ತಪ್ಪು. ವೈದ್ಯರ ಸಲಹೆ ಸೂಕ್ತ. ದೂಮಪಾನ ಮಾಡಿದವರಿಗೆ ಇದು ತಪ್ಪಿದ್ದಲ್ಲ. ಆದರೆ ಕಾರಣ ಕಂಡುಹಿಡಿಯುವುದು ವೈದ್ಯರ ಕೆಲಸ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT