ಪ್ರಧಾನಿ ಮೋದಿಯನ್ನು ಟ್ವಿಟರ್‌ನಲ್ಲಿ ಹಾಡಿ ಹೊಗಳಿದ ಕಾಂಗ್ರೆಸ್‌ನ ರೋಷನ್‌ ಬೇಗ್‌!

ಮಂಗಳವಾರ, ಜೂನ್ 18, 2019
28 °C

ಪ್ರಧಾನಿ ಮೋದಿಯನ್ನು ಟ್ವಿಟರ್‌ನಲ್ಲಿ ಹಾಡಿ ಹೊಗಳಿದ ಕಾಂಗ್ರೆಸ್‌ನ ರೋಷನ್‌ ಬೇಗ್‌!

Published:
Updated:

ಬೆಂಗಳೂರು: ಕಾಂಗ್ರೆಸ್‌ ಪಕ್ಷದ ವಿರುದ್ಧ ಹರಿಹಾಯ್ದು ಸುದ್ದಿಯಲ್ಲಿರುವ ಮಾಜಿ ಸಚಿವ ರೋಷನ್‌ ಬೇಗ್‌ ಅವರು ಸದ್ಯ ಮೋದಿ ಅವರನ್ನು ಟ್ವಿಟರ್‌ನಲ್ಲಿ ಹಾಡಿ ಹೊಗಳಿ ಚರ್ಚೆಯಲ್ಲಿದ್ದಾರೆ. ಈ ಮೂಲಕ ಕಾಂಗ್ರೆಸ್‌ಗೆ ಮತ್ತೊಮ್ಮೆ ಇರುಸು ಮುರುಸು ಉಂಟು ಮಾಡಿದ್ದಾರೆ. 

ಶನಿವಾರ ರಾತ್ರಿ ಸರಣಿ ಟ್ವೀಟ್‌ಗಳನ್ನು ಮಾಡಿರುವ ರೋಷನ್‌ ಬೇಗ್‌, ಬಹುಮತ ಪಡೆದ ನರೇಂದ್ರ ಮೋದಿ ಅವರಿಗೆ ಶುಭಾಶಯ ಕೋರಿದ್ದಾರೆ. ಅಲ್ಲದೆ, ಸೋಲಿನಿಂದ ವಿಪಕ್ಷಗಳು ಪಾಠ ಕಲಿಯಬೇಕು ಎಂದಿದ್ದಾರೆ. ಇದರ ಜತೆಗೆ ತಮ್ಮ ಕ್ಷೇತ್ರದಲ್ಲಿ ಕಾಂಗ್ರೆಸ್‌ಗೆ ಮುನ್ನಡೆ ನೀಡಿದ್ದಕ್ಕಾಗಿ ಮತದಾರರಿಗೆ ಅಭಿನಂದನೆ ಸಲ್ಲಿಸಿದ್ದಾರೆ. ಪುನರಾಯ್ಕೆಯಾಗಿರುವ ಪಿ.ಸಿ ಮೋಹನ್‌ ಅವರನ್ನು ಅಭಿನಂದಿಸಿದ್ದಾರೆ.  

ಅವರ ಟ್ವೀಟ್‌ನಲ್ಲೇನಿದೆ? 

‘ಇಷ್ಟು ದೊಡ್ಡ ಬಹುಮತ ಗಳಿಸಿದ ಮೋದಿ ಅವರಿಗೆ ನನ್ನ ಹೃದಯಪೂರ್ವಕ ಅಭಿನಂದನೆಗಳು. ಜನ ಮಾತನಾಡಿದ್ದಾರೆ. ಮೋದಿ ಅವರು ದೇಶವನ್ನು ಸಮಗ್ರವಾಗಿ ಕರೆದುಕೊಂಡು ಹೋಗುತ್ತಾರೆ ಎಂದು ನಾನು ನಂಬಿದ್ದೇನೆ. ವಿರೋಧಪಕ್ಷಗಳು ಈ ದೊಡ್ಡ ನಷ್ಟದಿಂದ ಪಾಠ ಕಲಿಯಬೇಕು. ಯಾವುದೇ ಕ್ಷಮೆ ಇಲ್ಲದೇ ಆತ್ಮಾವಲೋಕನ ಮಾಡಿಕೊಳ್ಳಬೇಕು. ನನ್ನ ಕ್ಷೇತ್ರದಲ್ಲಿ ಕಾಂಗ್ರೆಸ್‌ಗೆ 15000 ಸಾವಿರ ಮತಗಳ ಮುನ್ನಡೆ ಸಿಕ್ಕಿದೆ. ಇದಕ್ಕಾಗಿ ನಾನು ಮತದಾರರಿಗೆ ಆಭಾರಿಯಾಗಿದ್ದೇನೆ. ಕಳೆದ 30 ವರ್ಷಗಳಿಂದಲೂ ಈ ಕ್ಷೇತ್ರದ ಜನತೆ ನನ್ನ ಮೇಲೆ ನಂಬಿಕೆ ಇಟ್ಟಿದ್ದಾರೆ. ಮತ್ತೊಂದು ಬಾರಿಗೆ ಸಂಸದರಾಗಿ ಆಯ್ಕೆಯಾದ ಪಿ.ಸಿ ಮೋಹನ್‌ ಅವರಿಗೆ ಶುಭಾಶಯಗಳು. ನಾವಿಬ್ಬರೂ ಒಟ್ಟುಗೂಡಿ ಕೇಂದ್ರದ ಅನುದಾನಗಳನ್ನು ತಂದು ಶಿವಾಜಿ ನಗರ ಕ್ಷೇತ್ರವನ್ನು ಅಭಿವೃದ್ಧಿಯತ್ತ ಕೊಂಡೊಯ್ಯೋಣ,’ ಎಂದಿದ್ದಾರೆ. 

ಮುಂದುವರಿದು,‘ದೇಶದ ಅಲ್ಪಸಂಖ್ಯಾತರ ಕುರಿತು ನರೇಂದ್ರ ಮೋದಿ ಅವರು ಸಂಸತ್‌ನ ಸೆಂಟ್ರಲ್‌ ಹಾಲ್‌ನಲ್ಲಿ ಆಡಿದ ಮಾತುಗಳು ನನಗೆ ಸಂತೋಷ ತರಿಸಿವೆ. ಅವರು ಪ್ರಮಾಣವಚನ ಸ್ವೀಕರಿಸುವುದಕ್ಕೂ ಮೊದಲೇ ಏಕತೆ ಪ್ರತಿಪಾದಿಸಿದರು. ಇದು ಇಡೀ ಭಾರತವೇ ಒಂದು ಎಂಬುದರತ್ತ ಮೊದಲ ಉತ್ತಮ ಹೆಜ್ಜೆ. ಅಲ್ಲದೆ, ಹಲವು ವರ್ಷಗಳಿಂದ ಅಲ್ಪಸಂಖ್ಯಾತರಲ್ಲಿ ಮನೆ ಮಾಡಿದ್ದ ಭಯವನ್ನು ಅವರು ತಮ್ಮ ಮಾತುಗಳ ಮೂಲಕ ಹೋಗಲಾಡಿಸಿದರು,’ ಎಂದು ಅವರು ಹೇಳಿದ್ದಾರೆ. 

ಸಮಗ್ರ ಭಾರತದಲ್ಲಿ ಅವರು ನುಡಿದಂತೆ ನಡೆಯಲಿದ್ದಾರೆ ಎಂದು ನಾನು ನಂಬಿದ್ದೇನೆ. ಅವರು ತಮ್ಮ ಭಾಷಣವನ್ನು ಯಾವುದೋ ರಾಜಕೀಯ ಉದ್ದೇಶಕ್ಕಾಗಿ, ಮತ ಬ್ಯಾಂಕ್‌ ಭದ್ರಪಡಿಸಲಾಗಲಿ ಹೇಳಿಲ್ಲ. ಚುನಾವಣೆ ಗೆದ್ದ ನಂತರ ಅವರು ಹೇಳಿದ್ದಾರೆ. ಭಾರತೀಯ ರಾಜಕೀಯ ವ್ಯವಸ್ಥೆಯಲ್ಲಾದ ಬದಲಾವಣೆಯನ್ನು ನಾನು ಸ್ವಾಗತಿಸುತ್ತೇನೆ,‘ ಎಂದು ಅವರು ಬರೆದುಕೊಂಡಿದ್ದಾರೆ.  

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 24

  Happy
 • 4

  Amused
 • 1

  Sad
 • 1

  Frustrated
 • 5

  Angry

Comments:

0 comments

Write the first review for this !