ಸೌಲಭ್ಯವಿಲ್ಲದ ಸರ್ಕಾರಿ ಶಾಲೆ

7

ಸೌಲಭ್ಯವಿಲ್ಲದ ಸರ್ಕಾರಿ ಶಾಲೆ

Published:
Updated:
ಹೆಸರಘಟ್ಟ ಹೋಬಳಿ ಕೆಂಪಾಪುರ ಗ್ರಾಮದ  ಶಾಲಾ ಕಟ್ಟಡ

ಬೆಂಗಳೂರು: ಹೆಸರಘಟ್ಟ ಹೋಬಳಿ ಕೆಂಪಾಪುರ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಶಿಕ್ಷಕರ ಕೊರತೆ ಎದುರಿಸುತ್ತಿದೆ.

ಇಬ್ಬರು ಶಿಕ್ಷಕರಿರಬೇಕಾದಲ್ಲಿ ಒಬ್ಬರೇ ಶಿಕ್ಷಕರು ಐದು ತರಗತಿ ನಿಭಾಯಿಸಬೇಕಾಗಿದೆ. ಶಾಲೆಯಲ್ಲಿ ಐವತ್ತು ಮಕ್ಕಳಿದ್ದಾರೆ. ಶಿಕ್ಷಕರ ಕೊರತೆಯಿಂದ ಸುತ್ತಮುತ್ತಲಿನ ಜನ ತಮ್ಮ ಮಕ್ಕಳನ್ನು ಈ ಶಾಲೆಗೆ ಕಳುಹಿಸಲು ಹಿಂದೇಟು ಹಾಕುತ್ತಿದ್ದಾರೆ. ಮಕ್ಕಳು ಚಿಕ್ಕಬಾಣಾವರದ ಶಾಲೆಗೆ ತೆರಳುತ್ತಿದ್ದಾರೆ.

1950–51ರಲ್ಲಿ ಆರಂಭವಾದ ಈ ಶಾಲೆಯ ಕಟ್ಟಡ ಶಿಥಿಲಾವಸ್ಥೆಯಲ್ಲಿದೆ. ಗಾಳಿ–ಬೆಳಕೂ ಸರಿಯಾಗಿಲ್ಲ. ಹೊಸ ಕಟ್ಟಡ ನಿರ್ಮಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ. ವಿದ್ಯುತ್‌, ನೀರು ಪೂರೈಕೆ ವ್ಯವಸ್ಥೆಯೂ ಈ ಶಾಲೆಗಿಲ್ಲ. ಯಲಹಂಕ ಉತ್ತರ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿ ನಾರಾಯಣ್ ಪ್ರತಿಕ್ರಿಯಿಸಿ ‘ಶಾಲೆಯಲ್ಲಿದ್ದ ಶಿಕ್ಷಕಿ ನಿವೃತ್ತರಾಗಿದ್ದಾರೆ. ಅತಿಥಿ ಶಿಕ್ಷಕರನ್ನು ನೇಮಿಸಿಕೊಳ್ಳುತ್ತಿದ್ದೇವೆ’ ಎಂದು ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !