ಸೋಮವಾರ, ಸೆಪ್ಟೆಂಬರ್ 16, 2019
21 °C

ಮಹಿಳೆಯರಿಗೆ ಹೊಲಿಗೆ ಯಂತ್ರ ವಿತರಣೆ

Published:
Updated:
Prajavani

ವಿಜಯಪುರ: ನಗರದ ಸಿಕ್ಯಾಬ್‌ ಎ.ಆರ್.ಎಸ್‌ ಇನಾಮದಾರ ಮಹಿಳಾ ಮಹಾವಿದ್ಯಾಲಯದ ಗೃಹ ವಿಜ್ಞಾನ ವಿಭಾಗದಲ್ಲಿ ಬಡವರು, ಅನಾಥರು, ದೌರ್ಜನ್ಯಕ್ಕೆ ಒಳಗಾದ ಹೆಣ್ಣು ಮಕ್ಕಳಿಗೆ ಹೊಲಿಗೆ ತರಬೇತಿ ನೀಡಿ, ಗಣ್ಯರು, ದಾನಿಗಳಿಂದ ಸಂಗ್ರಹಿಸಿದ ಹಣದಿಂದ 23 ಮಹಿಳೆಯರಿಗೆ ಹೊಲಿಗೆ ಯಂತ್ರಗಳನ್ನು ವಿತರಿಸಲಾಯಿತು.

ಪ್ರಾಧ್ಯಾಪಕ ಪ್ರೊ.ನಾಸಿರ್ ಮಾತನಾಡಿ, ‘ಸ್ಥಿತಿವಂತರು ಬಡವರ ಕಲ್ಯಾಣಕ್ಕೆ ಹಣ ಖರ್ಚು ಮಾಡುವುದು ನಿಜವಾದ ದೇವರ ಸೇವೆಯಾಗಿದೆ. ಹೊಲಿಗೆ ತರಬೇತಿ ಜತೆಗೆ ಸನ್ನಡತೆ ಕಲಿಸುವ ಸಿಕ್ಯಾಬ್ ಸಂಸ್ಥೆಯ ಕಾರ್ಯ ಶ್ಲಾಘನೀಯ’ ಎಂದರು.

ರಾಜ್ಯ ಅಲ್ಪಸಂಖ್ಯಾತ ಆಯೋಗದ ಸದಸ್ಯ ರಫಿ ಭಂಡಾರಿ ಮಾತನಾಡಿ, ‘ತರಬೇತಿಯ ಜತೆಗೆ ಅನಾಥ ಹೆಣ್ಣು ಮಕ್ಕಳ ಮದುವೆ ಮಾಡುವ ನಿಟ್ಟಿನಲ್ಲಿ ಸಾಮೂಹಿಕ ವಿವಾಹ ಕಾರ್ಯಕ್ಕೆ ಸಿಕ್ಯಾಬ್‌ ಸಂಸ್ಥೆ ಮುಂದಾಗಬೇಕು’ ಎಂದು ತಿಳಿಸಿದರು.

ಸಿಕ್ಯಾಬ್ ಮಹಿಳಾ ಮಹಾವಿದ್ಯಾಲಯದ ಆಡಳಿತ ಮಂಡಳಿ ಅಧ್ಯಕ್ಷ ರಿಯಾಜ್ ಫಾರೂಖ್ ಮಾತನಾಡಿ, ‘ಸಮಾಜದಲ್ಲಿನ ಬಡತನ, ಹಸಿವು, ದಾರಿದ್ರ್ಯವನ್ನು ಇಂಥ ಕಾರ್ಯಕ್ರಮಗಳ ಮೂಲಕ ತೊಲಗಿಸಲು ಎಲ್ಲರೂ ಕೈಜೋಡಿಸಬೇಕು’ ಎಂದು ಮನವಿ ಮಾಡಿದರು.

ನಿವೃತ್ತ ಪ್ರಾಚಾರ್ಯ ಎ.ಎಂ.ಬಗಲಿ, ಸಂಸ್ಥೆಯ ಗೌರವ ಪ್ರಧಾನ ಕಾರ್ಯದರ್ಶಿ ಎ.ಎಸ್.ಪಾಟೀಲ ಮಾತನಾಡಿದರು.

ನಜೀಬ್ ಭಕ್ಷಿ, ಪ್ರೊ.ರಿಜ್ವಾನ್, ಪ್ರೊ.ಖತೀಬ್, ಪ್ರೊ.ಶಾಕಿರಾಶೇಖ್, ಡಾ.ಎಂ.ಎ.ಲಿಂಗಸೂರ, ಪ್ರೊ.ಚಿದಾನಂದ, ಪ್ರೊ.ಗಂಗಾಧರ ಭಟ್, ಪ್ರೊ.ಖಾದ್ರಿ, ಪ್ರೊ.ಎಚ್.ಕೆ.ಯಡಹಳ್ಳಿ, ಪ್ರೊ.ರಿಸಾಲ್ದಾರ್‌ ಸೇರಿದಂತೆ ಮತ್ತಿತರರು ಇದ್ದರು.

ಪ್ರಾಚಾರ್ಯ ಡಾ.ಮಹಮ್ಮದ್‌ ಅಪ್ಜಲ್‌ ಸ್ವಾಗತಿಸಿದರು. ಗೃಹ ವಿಜ್ಞಾನ ವಿಭಾಗದ ಮುಖ್ಯಸ್ಥ ಪ್ರೊ.ಜೋಹರಾ ತಬಸ್ಸುಮ್‌ ಖಾಜಿ ನಿರೂಪಿಸಿದರು. ಮಹಮ್ಮದಿ ವಂದಿಸಿದರು.

Post Comments (+)