ಭಾನುವಾರ, 24 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ದಿನ
ವಾರ
ಮಾಸ
ವಾರ್ಷಿಕ
ಮಾಸ ಭವಿಷ್ಯ ಆಗಸ್ಟ್ 2023 | ಈ ರಾಶಿಯವರಿಗೆ ವ್ಯಾಪಾರ, ವ್ಯವಹಾರದಲ್ಲಿ ಉತ್ತಮ ಲಾಭ
Published 31 ಜುಲೈ 2023, 23:30 IST
ಅರುಣ ಪಿ.ಭಟ್ಟ
ಮೇಷ
ಅರ್ದಕ್ಕೆ ನಿಂತ ಕೆಲಸಗಳು ಮುಂದುವರೆಯುತ್ತವೆ. ವಾಹನ ಸೌಖ್ಯ. ವ್ಯಾಪಾರ ವ್ಯವಹಾರದಲ್ಲಿ ಉತ್ತಮ ಲಾಭ. ಭೂ ವ್ಯವಹಾರದಲ್ಲಿ ಉತ್ತಮ ಲಾಭವಿದೆ. ಆರೋಗ್ಯದಲ್ಲಿ ಏರುಪೇರು ಕಂಡುಬರಹುದು. ಸೂಕ್ತ ಎಚ್ಚರಿಕೆವಹಿಸಿ. ಶುಭ: 12, 20, 24 ಅಶುಭ: 11, 22, 26.
ವೃಷಭ
ವಿಶೇಷ ಗೃಹ ಅಲಂಕಾರ ವಸ್ತುಗಳ ಖರೀದಿ. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು. ಯಂತ್ರ ಮತ್ತು ವಾಹನಗಳಿಂದ ಸಮಸ್ಯೆ. ಬಂಧುಬಳಗದಲ್ಲಿ ವೈಮನಸ್ಸು ಮೂಡಬಹುದು. ಕುಟುಂಬಕ್ಕಾಗಿ ಖರ್ಚು ಮಾಡುವಿರಿ. ಚಿಕ್ಕ ಪ್ರವಾಸ ಸಾಧ್ಯತೆ. ಶುಭ: 10, 16, 24 ಅಶುಭ: 9, 13, 23.
ಮಿಥುನ
ಕೌಟುಂಬಿಕ ಸಮಸ್ಯೆಗಳು ಬಗೆಹರಿಯುವವು. ಕೈ ಕಾಲುಗಳಲ್ಲಿ ನರದ ಸೆಳೆತ, ನೋವು ಕಾಣಿಸಿಕೊಳ್ಳಬಹುದು. ವ್ಯಾಪಾರದಲ್ಲಿ ನಷ್ಟ ಸಂಭವ. ವಿನಾಕಾರಣ ಹೆದರಿಕೆ. ಕೋರ್ಟ್ ವ್ಯವಹಾರಗಳಲ್ಲಿ ಜಯ. ಶುಭ: 11, 17, 22 ಅಶುಭ: 15, 18, 25.
ಕರ್ಕಾಟಕ
ಆರೋಗ್ಯ ಸುಧಾರಿಸುವುದು. ಆಕಸ್ಮಿಕ ಖರ್ಚು ಸಂಭವ. ಆಸ್ತಿ ಖರೀದಿ ಬಗ್ಗೆ ಚಿಂತನೆ ನಡೆಸುವಿರಿ. ಕಲಾವಿದರಿಗೆ, ಸಾಹಿತಿಗಳಿಗೆ ಉತ್ತಮ ಸಮಯ. ರಾಜಕಿಯ ಧುರಿಣರಿಗೆ ಅಧಿಕಾರ ಪ್ರಾಪ್ತಿ. ಸಂಘ ಸಂಸ್ಥೆಗಳಿಂದ ಧನಲಾಭ. ಶುಭ: 14, 19, 26 ಅಶುಭ: 12, 22, 27.
ಸಿಂಹ
ದಾನ ಧರ್ಮಕ್ಕಾಗಿ ಖರ್ಚು ಮಾಡುವಿರಿ. ಮಿತ್ರರು ನಿಮ್ಮಿಂದ ಸಹಾಯ ಬಯಸುವರು. ಹಲವು ದಿನಗಳ ಜಾಡ್ಯ ಬಗೆ ಹರಿಯುವುದು. ಮನೆಯಲ್ಲಿ ಸಂಭ್ರಮ. ಭೂಮಿ ಕ್ರಯ ವಿಕ್ರಯ ಯೋಗ. ಶುಭ: 10, 14, 19 ಅಶುಭ: 11, 18, 22.
ಕನ್ಯಾ
ಆಕಸ್ಮಿಕ ಖರ್ಚು, ದೈಹಿಕ ಬಾಧೆ, ಅಪವಾದ ಭಯ, ಅಧಿಕಾರಿಗಳ ಕೆಂಗಣ್ಣು ಮನಸ್ಸಿಗೆ ಅಸಮಾಧಾನವನ್ನುಂಟು ಮಾಡಬಹುದು. ಆದರೆ ವ್ಯಾಪಾರದಲ್ಲಿ ಅಧಿಕ ಲಾಭ. ಹಳೆಯ ಮಿತ್ರರ ಆಗಮನ. ಮಕ್ಕಳಿಂದ ಶುಭವಾರ್ತೆ. ಸಹೋದರರಿಂದ ಸಹಾಯ. ಶುಭ: 14, 18, 28 ಅಶುಭ: 15,20,27.
ತುಲಾ
ವೃತ್ತಿ ವ್ಯವಹಾರದಲ್ಲಿ ಉತ್ತಮ ಲಾಭ. ವ್ಯವಹಾರಿಕ ಅನುಕೂಲತೆ. ಸರಕಾರಿ ಕೆಲಸ ಶೀಘ್ರ ಆಗುವುದು. ತಂದೆ ತಾಯಿಯವರ ಆರೋಗ್ಯದಲ್ಲಿ ಸುಧಾರಣೆ. ಮಾನ ಸನ್ಮಾನ ದೊರೆಯುತ್ತದೆ. ದೂರ ಪ್ರವಾಸ ಸಂಭವ. ಕಲಾವಿದರಿಗೆ ಸಂಗೀತಗಾರರಿಗೆ ಉತ್ತಮ ಸಮಯ. ಶುಭ:13, 18, 22 ಅಶುಭ: 12, 20, 24.
ವೃಶ್ಚಿಕ
ನಿರೀಕ್ಷಿತ ಅಧಿಕಾರ ಲಾಭ. ಅಧಿಕಾರಿಗಳಿಗೆ ಪದೋನ್ನತಿ ಸಿಗುವುದು. ಬರತಕ್ಕ ಬಾಕಿ ಬರುವುದು. ಕೌಟುಂಬಿಕ ಖರ್ಚು. ಕಣ್ಣಿನ ತೊಂದರೆ ಕಾಣಿಸಬಹುದು. ಪುಣ್ಯಕ್ಷೇತ್ರ ದರ್ಶನ. ವಿವಾಹ ಅಪೇಕ್ಷಿತ ಯುವಕ ಯುವತಿಯರಿಗೆ ವಿವಾಹ ಭಾಗ್ಯ. ಶುಭ: 09, 16, 22 ಅಶುಭ: 05, 11, 27.
ಧನು
ತೂಗುಕತ್ತಿಯ ಭಯ ದೂರಾಗುವುದು. ಮಕ್ಕಳ ವಿದೇಶ ಪ್ರವಾಸಕ್ಕೆ ಸಿದ್ದತೆ. ಅಕಸ್ಮಾತ್ ಧನಲಾಭ. ನದಿ–ಸಮುದ್ರ ತೀರಗಳಲ್ಲಿ ಪ್ರಯಾಣಿಸುವಾಗ ಎಚ್ಚರಿಕೆಯಿಂದಿರಿ. ಸಭೆ ಸಮಾರಂಭಗಳಲ್ಲಿ ಮಾನ ಸನ್ಮಾನ ಯೋಗ. ಶುಭ: 11, 14, 19 ಅಶುಭ: 16, 22, 29
ಮಕರ
ಪೋಷಕರಿಗೆ ಅನಾರೋಗ್ಯ. ವಾಹನ ಚಲಾಯಿಸುವಾಗ ಎಚ್ಚರಿಕೆಯಿಂದ ಇರಿ. ಮಿತ್ರರಿಂದ ಅಪವಾದ ನಿಂದನೆ ಸಾದ್ಯತೆ. ಸ್ಟೆಶನರಿ ವ್ಯಾಪಾರಸ್ಥರಿಗೆ ಉತ್ತಮ ಲಾಭ. ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರಿಕ್ಷೆಯಲ್ಲಿ ಯಶಸ್ಸು. ಶುಭ: 11, 15, 21 ಅಶುಭ: 10, 19, 24.
ಕುಂಭ
ಸರ್ಕಾರಿ ಉದ್ಯೋಗಿಗಳಿಗೆ ವರ್ಗಾವಣೆ. ಪತ್ನಿಗೆ ಅನಾರೋಗ್ಯ. ಮನೆ ಬದಲಾವಣೆಗೆ ಸುಸಮಯ. ಸ್ಪರ್ಧೆಯಲ್ಲಿ ಅಪಜಯ. ಕೆಂಪುಬಣ್ಣದ ಯಂತ್ರಗಳಿಂದ ಲಾಭ. ತಿಂಗಳಾಂತ್ಯದಲ್ಲಿ ಧನಲಾಭ. ಆರೋಗ್ಯ ಸ್ಥಿರ. ಶುಭ: 12, 14, 22 ಅಶುಭ:10, 15, 26.
ಮೀನ
ಕೌಟುಂಬಿಕ ವಿರಸ. ಪ್ರಯತ್ನ ಪೂರ್ವಕ ಬರತಕ್ಕ ಬಾಕಿ ಹಣ ಬರುವುದು. ಮಕ್ಕಳಿಂದ ಸುವಾರ್ತೆ. ಷೇರು ವ್ಯವಹಾರಗಳಲ್ಲಿ ಉತ್ತಮ ಲಾಭ. ದೀರ್ಘಕಾಲದ ಖಾಯಿಲೆಯಿಂದ ಬಳಲುತ್ತಿರುವವರಿಗೆ ಸೂಕ್ತ ಚಿಕಿತ್ಸೆ. ಕ್ರೀಡಾಪಟುಗಳಿಗೆ ಯಶಸ್ಸು. ಶುಭ: 11, 21, 28 ಅಶುಭ: 18, 26, 29
ADVERTISEMENT
ADVERTISEMENT