ಮಂಗಳವಾರ, 21 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ದಿನ
ವಾರ
ಮಾಸ
ವಾರ್ಷಿಕ
31/03/2024 - 06/04/2024
ವಾರ ಭವಿಷ್ಯ:ಈ ರಾಶಿಯವರಿಗೆ ವೃತ್ತಿಯಲ್ಲಿ ಅನಿರೀಕ್ಷಿತ ಸಮಸ್ಯೆ ಎದುರಾಗುವ ಸಾಧ್ಯತೆ
Published 6 ಏಪ್ರಿಲ್ 2024, 23:30 IST
ಡಾ. ಎಂ.ಎನ್.ಲಕ್ಷ್ಮೀನರಸಿಂಹ ಸ್ವಾಮಿ
author
ಜ್ಯೋತಿಷ್ಯ ವಿಶಾರದ, ಮಾದಾಪುರ ಸಂಪರ್ಕ ಸಂಖ್ಯೆ: 8197304680
ಮೇಷ
ಬಹಳ ಸೌಮ್ಯವಾಗಿ ಕಂಡರೂ ಮನಸ್ಸಿನಲ್ಲಿ ವ್ಯವಹಾರಿಕವಾಗಿ ಚಿಂತೆ ಮಾಡುತ್ತಿರುವಿರಿ. ಹಣದ ಒಳಹರಿವು ಮಂದಗತಿಯಲ್ಲಿರುತ್ತದೆ. ನಿಮ್ಮೆಲ್ಲಾ ನಡ ವಳಿಕೆಗಳು ನಿಮ್ಮ ವೈಯುಕ್ತಿಕ ಅಭಿವೃದ್ಧಿಗೆ ಸೀಮಿತವಾಗಿರುತ್ತದೆ. ಸಂಸಾರದಲ್ಲಿ ಸುಖವಿದ್ದರೂ ಅದನ್ನು ಅನುಭವಿಸುವ ಮನಸ್ಸಿರುವುದಿಲ್ಲ. ವಿದ್ಯಾರ್ಥಿಗಳಿಗೆ ಅಧ್ಯಯನದಲ್ಲಿ ಮಧ್ಯಮ ಫಲಿತಾಂಶವಿರುತ್ತದೆ. ದೇಹದಲ್ಲಿ ಅನಾರೋಗ್ಯವಿದ್ದರೂ ಸಾಕಷ್ಟು ಚೇತರಿಕೆಯನ್ನು ಕಾಣಬಹುದು. ಸಂಗಾತಿಯ ಸೌಕರ್ಯಕ್ಕಾಗಿ ಹೆಚ್ಚು ಹಣ ಖರ್ಚಾಗುತ್ತದೆ. ತಂದೆಯಿಂದ ಸಹಾಯ ದೊರೆಯುತ್ತದೆ. ವೃತ್ತಿಯಲ್ಲಿ ನಿಮಗರಿವಿಲ್ಲದೆ ಹಿತಶತ್ರುಗಳು ಹೆಚ್ಚಾಗಿ ತೊಂದರೆ ಕೊಡುವರು. ಕಬ್ಬಿಣದಗಣಿಗಾರಿಕೆ ಮಾಡುವವರಿಗೆ ಆದಾಯ ಇರುತ್ತದೆ. ಕೀಲು ನೋವು ಗಳು ಕೆಲವರನ್ನು ಬಾಧಿಸಬಹುದು. ವ್ಯಾಪಾರ ವ್ಯವಹಾರಗಳಲ್ಲಿ ಸಾಮಾನ್ಯ ಅಭಿವೃದ್ಧಿ ಇರುತ್ತದೆ.
ವೃಷಭ
ವಿದೇಶಿ ಮೋಹಕ್ಕೆ ಹೆಚ್ಚು ಒಳಗಾಗುವಿರಿ ಹಾಗೂ ಅಲ್ಲಿನಆಚರಣೆಗಳನ್ನು ಅನುಸರಿಸಲು ಯತ್ನ ಮಾಡುವಿರಿ. ಕೆಲವೊಮ್ಮೆ ನಿಮ್ಮ ಬುದ್ಧಿವಂತಿಕೆಗಳು ಕಳೆದು ಹೋದಂತೆ ಅನಿಸುತ್ತದೆ. ಧನದಾಯವು ನಿರೀಕ್ಷಿತ ಮಟ್ಟದಲ್ಲಿ ಇರುವುದಿಲ್ಲ. ವಂಶದ ಹಿರಿಯರು ನಿಮ್ಮಬಗ್ಗೆ ಬಹಳಗೌರವವನ್ನು ಇಟ್ಟುಕೊಂಡಿರುತ್ತಾರೆ. ಸರ್ಕಾರ ಅಥವಾ ಸಂಘ ಸಂಸ್ಥೆಗಳ ಕಡೆಯಿಂದ ಭೂಮಿ ಅಥವಾ ನಿವೇಶನ ಹೊಂದುವ ಯೋಗವಿದೆ. ವಿದ್ಯಾರ್ಥಿಗಳಿಗೆ ಅಧ್ಯಯನದಲ್ಲಿ ಮಧ್ಯಮ ಗತಿಯ ಫಲಿತಾಂಶವಿರುತ್ತದೆ. ಪ್ರಸೂತಿ ತಜ್ಞರಿಗೆ ಹೆಚ್ಚು ಬೇಡಿಕೆ ಬರುತ್ತದೆ. ಸಂಗಾತಿಯಸಲಹೆಯಂತೆಸಾಂಪ್ರದಾಯಿಕ ಕೃಷಿಯನ್ನು ಮಾಡುವಿರಿ. ಕವಿಗಳಿಗೆ ಹೆಚ್ಚು ಗೌರವ ದೊರೆಯುತ್ತದೆ. ತಂದೆಯಿಂದ ವ್ಯಾಪಾರ ವಹಿವಾಟುಗಳ ಬಗ್ಗೆ ತಿಳುವಳಿಕೆ ದೊರೆಯುತ್ತದೆ. ಹಣಕಾಸಿನ ವ್ಯವಹಾರ ಮಾಡುವವರಿಗೆ ಕೈ ಕಚ್ಚುವ ಸಾಧ್ಯತೆಗಳಿವೆ.
ಮಿಥುನ
ವ್ಯವಹಾರಿಕತೆಯಲ್ಲಿ ಬಹಳ ಉತ್ಸುಕತೆಯನ್ನು ತೋರುವಿರಿ. ಧನದಾಯವು ಮಧ್ಯಮ ಗತಿಯಲ್ಲಿ ಇರುತ್ತದೆ. ಉತ್ತಮವಾಗಿ ಮಾತನಾಡುವವರಿಗೆ ಹೊಸ ಹೊಸವೇದಿಕೆಗಳುದೊರೆಯುತ್ತವೆ. ಉದ್ಯೋಗಮಾಡು ವಸ್ಥಳದಲ್ಲಿ ನಿಮ್ಮಚಟುವಟಿಕೆಯಿಂದ ಎಲ್ಲರ ಗಮನ ಸೆಳೆಯುವಿರಿ. ಸ್ಥಿರಾಸ್ತಿಗಳಬಗ್ಗೆಹೆಚ್ಚುತಲೆಕೆಡಿಸಿಕೊಳ್ಳುವುದು ಬೇಡ. ವಿದ್ಯಾರ್ಥಿಗಳಿಗೆ ಅಧ್ಯಯನದಲ್ಲಿ ಹೆಚ್ಚು ಅನುಕೂಲ ಉಂಟಾಗುತ್ತದೆ. ತಂದೆಯವರ ಆರೋಗ್ಯ ದಲ್ಲಿ ವ್ಯತ್ಯಾಸವನ್ನು ಕಾಣಬಹುದು. ಸಂಗಾತಿಯ ಜೊತೆ ಕೂಡಿ ಮಾಡಿದ ವ್ಯವಹಾರಗಳಲ್ಲಿ ಹೆಚ್ಚು ಲಾಭವಿರುತ್ತದೆ. ಕೃಷಿಯಿಂದ ಆದಾಯ ಹೆಚ್ಚುವ ಸಾಧ್ಯತೆಗಳಿವೆ. ಯಾವುದೇ ಸಮಸ್ಯೆಯನ್ನು ಸಹ ಧೈರ್ಯವಾಗಿ ಎದುರಿಸುವಿರಿ. ವೃತ್ತಿಯಲ್ಲಿ ಅನಿರೀಕ್ಷಿತ ಸಮಸ್ಯೆಗಳು ಎದುರಾಗುವ ಸಾಧ್ಯತೆ ಇದೆ.
ಕರ್ಕಾಟಕ
ಒಂದು ರೀತಿಯ ನಿಧಾನ ಗತಿಯ ನಡವಳಿಕೆ ನಿಮ್ಮಲ್ಲಿ ಇರುತ್ತದೆ. ಧನದಾಯವು ಸಾಮಾನ್ಯ ಗತಿಯಲ್ಲಿ ಇರುತ್ತದೆ. ಯಾವುದೇ ಕೆಲಸವನ್ನು ಮಾಡುವಾಗ ಧರ್ಮ ಸೂಕ್ಷ್ಮವಾಗಿ ನಿಮ್ಮವರು ನಿಮಗೆ ಅಡ್ಡಿಮಾಡುವರು. ನಿಮ್ಮ ಸ್ಥಿರಾಸ್ತಿ ಮಾಡುವ ಆಸೆಗೆ ಹಿರಿಯರು ಸಹಕಾರ ನೀಡುವರು. ವಿದ್ಯಾರ್ಥಿಗಳಿಗೆ ನಿರೀಕ್ಷೆಗಿಂತ ಕಡಿಮೆ ಯಶಸ್ಸು ಇರುತ್ತದೆ. ವೃತ್ತಿಯ ಸ್ಥಳದಲ್ಲಿದ್ದ ಸಾಲಸೋಲಗಳನ್ನು ಈಗ ತೀರಿಸಿಕೊಳ್ಳಬಹುದು. ಸಂಗಾತಿಯ ಸಹಕಾರಗಳು ನಿಮಗೆ ಕಡಿಮೆಯಾಗಬಹುದು. ಉದ್ಯೋಗ ಸ್ಥಳದಲ್ಲಿ ಇದ್ದ ಗೊಂದಲಗಳು ನಿವಾರಣೆಯಾಗುತ್ತವೆ. ವ್ಯಾಪಾರ ವ್ಯವಹಾರಗಳಲ್ಲಿ ನಿರೀಕ್ಷಿತ ಮಟ್ಟದ ಪ್ರಗತಿ ಇರುತ್ತದೆ. ಕಣ್ಣಿನ ತೊಂದರೆ ಇರುವವರು ಎಚ್ಚರವಹಿಸಿರಿ. ರಾಜಕೀಯದಲ್ಲಿರುವ ವರಿಗೆ ಅನಿರೀಕ್ಷಿತವಾಗಿ ಬೆಂಬಲ ದೊರೆತು ಸ್ಥಾನ ಸಿಗಬಹುದು.ವಿದೇಶದಲ್ಲಿರುವವರಿಗೆ ಸಂಪಾದನೆಗಾಗಿ ಹೊಸ ಮಾರ್ಗ ದೊರೆಯುತ್ತದೆ.
ಸಿಂಹ
ಜನಸಮೂಹದಲ್ಲಿ ಗುರುತಿಸಿಕೊಳ್ಳಲು ಪ್ರಯತ್ನ ಪಡುವಿರಿ. ಧನಾದಾಯವು ಮಂದಗತಿಯಲ್ಲಿರುತ್ತದೆ. ಮಾತನಾಡುವಾಗ ಮಾತಿನ ಬಗ್ಗೆ ಎಚ್ಚರ ವಿರಲಿ. ನಿಮ್ಮ ಕೆಲಸಕಾರ್ಯಗಳಿಗೆ ಸ್ತ್ರೀಯರಿಂದಅಡ್ಡಿ ಬರಬಹುದು. ಕೃಷಿ ಭೂಮಿಯನ್ನು ಕೊಳ್ಳುವ ಯೋಗ ವಿದೆ. ವಿದ್ಯಾರ್ಥಿಗಳಿಗೆ ಸೂಕ್ತ ಗುರುಗಳು ದೊರೆತು ಅಧ್ಯಯನದಲ್ಲಿ ಯಶಸ್ಸು ಪಡೆಯಲು ಕಾರಣರಾಗುವರು. ಮೂಳೆಮುರಿತ ಆಗಿರುವವರಿಗೆ ಪರಿಹಾರ ಸ್ವಲ್ಪ ನಿಧಾನವಾಗಬಹುದು. ಸಂಗಾತಿಯ ನಡವಳಿಕೆಗಳಲ್ಲಿ ವ್ಯತ್ಯಾಸಗಳನ್ನು ಕಾಣಬಹುದು.ಉದ್ಯೋಗ ಸ್ಥಳದಲ್ಲಿ ನೀವು ಮಾಡುವ ಕೆಲಸಗಳಿಗೆ ಹೆಚ್ಚಿನ ಬೆಲೆ ಬರುತ್ತದೆ. ಕಬ್ಬಿಣದ ಕಚ್ಚಾಮಾಲುಗಳನ್ನು ತಯಾರಿಸು ವವರಿಗೆ ಬಹಳಬೇಡಿಕೆ ಬರುತ್ತದೆ. ಅದಿರನ್ನು ಉತ್ಪಾ ದಿಸುವವರಿಗೆ ಹೊಸ ಉತ್ಪಾದಕ ಆದೇಶಗಳು ದೊರೆಯುತ್ತವೆ.
ಕನ್ಯಾ
ಧರ್ಮ ಕಾರ್ಯಗಳ ಬಗ್ಗೆ ಹಾಗೂ ಧರ್ಮ ಆಚರಣೆಯ ಬಗ್ಗೆ ಆಸಕ್ತಿ ಹೆಚ್ಚುತ್ತದೆ. ಧನದಾಯವು ಸಾಮಾನ್ಯ ಗತಿಯಲ್ಲಿರುತ್ತದೆ. ಮಾತನಾಡುವಾಗ ಬಳ ಸುವ ಕೆಲವು ಭಾಷೆಗಳು ಕೆಲವರನ್ನು ನಿಮ್ಮಿಂದ ದೂರ ಮಾಡುತ್ತದೆ. ಬಂಧುಗಳ ಸಂಬಂಧಗಳನ್ನು ಸುಧಾರಿಸಿಕೊಳ್ಳುವುದು ನಿಮಗೆ ಒಳಿತು. ಆಸ್ತಿ ವಿಚಾರಗಳಲ್ಲಿ ಬಂಡವಾಳ ಹೆಚ್ಚಾಗುವಸಾಧ್ಯತೆ ಇದೆ.ವಿದ್ಯಾರ್ಥಿಗಳಿಗೆ ನಿರೀಕ್ಷಿತ ಪಲಿತಾಂಶ ಈಗ ದೊರೆಯುವುದು ಅಸಾಧ್ಯ. ಸಂಗಾತಿಯ ಆದಾಯಕ್ಕಿಂತಲೂ ವೆಚ್ಚವು ಸಾಕಷ್ಟು ಹೆಚ್ಚಾಗುವ ಸಾಧ್ಯತೆಗಳಿವೆ. ಹಾಲು ಉತ್ಪನ್ನಗಳನ್ನು ಮಾರಾಟ ಮಾಡುವವರಿಗೆ ಹೆಚ್ಚಿನ ಲಾಭವಿರುತ್ತದೆ. ಹೈನುಗಾರಿಕೆ ಮಾಡುವವರಿಗೆ ಹೆಚ್ಚಿನ ಲಾಭವಿರುತ್ತದೆ. ಹಿರಿಯರಿಗಾಗಿ ಹಣ ಖರ್ಚಾಗುತ್ತದೆ. ಬಂದ ಹಣವು ಅನಿರೀಕ್ಷಿತ ಖರ್ಚುಗಳಿಗೆ ದಾರಿಮಾಡಿ ಕೊಡುತ್ತದೆ. ಉಪಾಧ್ಯಾಯರುಗಳಿಗೆ ನಿರೀಕ್ಷಿತ ವರಮಾನ ಬರದಿರಬಹುದು.
ತುಲಾ
ಜನಸಮೂಹದಲ್ಲಿ ಉತ್ತಮವಾಗಿ ಮಾತನಾಡಿ ಅವರನ್ನು ಸೆಳೆಯುವ ಯತ್ನ ಮಾಡುವಿರಿ. ಧನಾದಾಯವು ನಿರೀಕ್ಷೆಯ ಮಟ್ಟಕ್ಕೆ ಇರುವುದಿಲ್ಲ. ನಿಮ್ಮ ನಡ ವಳಿಕೆಗಳಲ್ಲಿ ಸಾಕಷ್ಟು ವ್ಯವಹಾರಿಕತೆಯನ್ನು ಕಾಣಬಹುದು. ಕೃಷಿ ಭೂಮಿಯನ್ನು ಕೊಳ್ಳುವ ಯೋಗವಿದೆ. ವಿದ್ಯಾರ್ಥಿಗಳಿಗೆ ಅಷ್ಟು ಯಶಸ್ಸು ಇರುವುದಿಲ್ಲ, ಕೃಷಿ ಅಧ್ಯಯನ ಮಾಡುತ್ತಿರುವವರಿಗೆ ಮತ್ತು ಕೃಷಿಸಂಶೋ ಧಕರಿಗೆ ಹೆಚ್ಚಿನಯಶಸ್ಸು ಇರುತ್ತದೆ.ಕೆಲವೊಂದು ಸಾಲಗಳನ್ನು ತೀರಿಸಬೇಕಾದ ಅನಿವಾರ್ಯ ಪರಿಸ್ಥಿತಿ ಎದು ರಾಗುತ್ತದೆ. ಸಂಗಾತಿಯು ಜಾಣತನದಿಂದ ನಿಮ್ಮಿಂದ ಹಣ ವಸೂಲು ಮಾಡಲು ಪ್ರಯತ್ನ ಪಡುವರು. ಸಂಗಾತಿಗೆ ವಿದೇಶಯಾನಯೋಗ ದೊರೆಯಬಹುದು. ಸಂಗಾತಿಯಿಂದ ನಿಮಗೆ ಬಳುವಳಿ ದೊರೆಯುವ ಸಾಧ್ಯತೆ ಇದೆ. ಉದ್ಯೋಗದಲ್ಲಿ ಕಿರಿಕಿರಿ ಇದ್ದರೂ ಸಹ ಕಿರಿಯ ಅಧಿಕಾರಿಗಳ ಕೃಪಾಶೀರ್ವಾದ ನಿಮಗೆ ದೊರೆಯುತ್ತದೆ.
ವೃಶ್ಚಿಕ
ಸ್ವಲ್ಪ ಆತ್ಮ ಗೌರವ ಜಾಸ್ತಿ ಇರುತ್ತದೆ. ಧನಾದಾಯವು ಮಂದಗತಿಯಲ್ಲಿರುತ್ತದೆ. ಬಹಳ ಕಷ್ಟಪಟ್ಟು ಕೆಲಸ ಮಾಡುವಿರಿ. ಕೃಷಿ ಪಂಡಿತರಿಗೆ ಉತ್ತಮ ಬೇಡಿಕೆ ಬರುತ್ತದೆ. ನಿಮ್ಮೊಡನೆ ಇರುವ ನೆಂಟರುಗಳೇ ನಿಮಗೆ ಶತ್ರುಗಳಾಗುವರು. ವಿದ್ಯಾರ್ಥಿಗಳಿಗೆ ಅಧ್ಯಯನದಲ್ಲಿ ಮಧ್ಯಮ ಫಲಿತಾಂಶ ಇರುತ್ತದೆ. ರಕ್ತದಲ್ಲಿ ವ್ಯತ್ಯಾಸಗ ಳಿರುವವರು ಚಿಕಿತ್ಸೆಪಡೆಯುವುದುಒಳ್ಳೆಯದು.ಸಂಗಾ ತಿಯ ಸಹಕಾರಗಳು ನಿಮ್ಮ ಕೆಲಸಕ್ಕೆ ಸ್ವಲ್ಪ ಮಟ್ಟಿಗೆ ದೊರೆಯುತ್ತವೆ. ಆಭರಣ ತಯಾರಕರಿಗೆ ವ್ಯವಹಾರ ದಲ್ಲಿ ಏರಿಳಿತ ವಿರುವುದಿಲ್ಲ.ತಂದೆಯು ಪೂರಕವಾಗಿ ನಿಂತು ನಿಮ್ಮಆದಾಯವನ್ನು ಹೆಚ್ಚಿಸಲು ಪ್ರಯತ್ನಿಸುತ್ತಾರೆ. ವೃತ್ತಿಯಲ್ಲಿದ್ದ ದ್ವಂದ್ವಗಳು ದೂರವಾಗುತ್ತವೆ. ಸರ್ಕಾರಿ ವೃತ್ತಿಯಲ್ಲಿರುವವರಿಗೆ ಅವರ ನಡವಳಿಕೆಯಂತೆ ಮುಂಬಡ್ತಿ ಅಥವಾ ಹಿಂಬಡ್ತಿ ದೊರೆಯುತ್ತದೆ.
ಧನು
ಹೊಸ ಹುಮ್ಮಸ್ಸಿನಿಂದ ಕಾರ್ಯಪ್ರವೃತ್ತರಾಗುವಿರಿ. ಧನಾದಾಯವು ಕಡಿಮೆ ಇದ್ದರೂ ಸಹ ಅದನ್ನು ಸರಿಯಾಗಿ ನಿಭಾಯಿಸುವಿರಿ. ನಿಮ್ಮ ಕೆಲಸ ಕಾರ್ಯಗಳಿಗೆ ಅಡ್ಡಿಬರುವವರನ್ನು ಸದ್ದಿಲ್ಲದೆ ಹಿಂತಿರುಗುವಂತೆ ಮಾಡುವಿರಿ. ಆಸ್ತಿವಿಚಾರದಲ್ಲಿ ಸ್ವಲ್ಪ ಮುಂದುವರಿಯಬಹುದು. ವಿದ್ಯಾರ್ಥಿಗಳಿಗೆ ಉತ್ತಮ ಯಶಸ್ಸು ಇರುತ್ತದೆ. ಪ್ರಸೂತಿ ಕಾರ್ಯ ಮಾಡುವರು ಹೆಚ್ಚು ಎಚ್ಚರವಹಿಸಿರಿ. ಸಂಗಾತಿಯ ಆದಾಯ ಸ್ವಲ್ಪ ಹೆಚ್ಚುವ ಸಾಧ್ಯತೆ ಇದೆ..ಸಿದ್ದ ಉಡುಪುಗಳನ್ನು ತಯಾರಿಸುವವರಿಗೆ ಕಾರ್ಮಿಕರ ಸಮಸ್ಯೆ ಕಾಡಬಹುದು. ಬೆಳ್ಳಿವ್ಯಾಪಾರಿಗಳಿಗೆ ಹಿನ್ನಡೆ ಆಗುವ ಸಂದರ್ಭವಿದೆ. ಹಿರಿಯರಿಂದ ಆಸ್ತಿದೊರೆಯುವ ಸಾಧ್ಯತೆ ಇದೆ. ತಾಯಿಯ ಸಹಕಾರ ನಿಮಗೆ ದೊರೆಯುತ್ತದೆ.ವೃತ್ತಿಯಲ್ಲಿದ್ದ ಕೆಲವು ಗೊಂದಲಗಳು ನಿವಾರಣೆಯಾಗಬಹುದು. ಸರ್ಕಾರಿ ಸಂಸ್ಥೆಗಳ ಜೊತೆಗಿನ ವ್ಯವಹಾರಗಳಲ್ಲಿ ಇದ್ದ ತೊಂದರೆಗಳು ನಿವಾರಣೆಯಾಗುತ್ತವೆ.
ಮಕರ
ನೀವು ದೃಢಮನಸ್ಕರಾಗಿ ಕೆಲಸ ಮಾಡುತ್ತಿದ್ದರೂ ನಿಮ್ಮನ್ನು ಕೆಣಕುವಕೆಲಸವನ್ನುಕೆಲವರುಮಾಡುವರು. ಯಾವುದಕ್ಕೂ ತಲೆ ಕೆಡಿಸಿಕೊಳ್ಳದೆ ನಿಮ್ಮ ಕೆಲಸವನ್ನು ಮುಂದುವರಿಸಿರಿ. ಧನಾದಾಯವು ಕಡಿಮೆ ಇದ್ದರೂ ಅದರಲ್ಲೇ ತೂಗಿಸುವಿರಿ. ಹಿರಿಯರುನಿಮ್ಮಸಹಕಾರಕ್ಕೆ ಬಂದರೂ ಕೆಲವು ಕಿರಿಯರು ಅದನ್ನು ಅಡ್ಡಿಪಡಿಸು ವರು. ಭೂಮಿ ವ್ಯಾಪಾರವನ್ನು ಮಾಡುವರಿಗೆ ಅಧಿಕ ಲಾಭವಿರುತ್ತದೆ. ಸಂಗಾತಿಯ ಕಡೆಯವರಿಗಾಗಿ ಸ್ವಲ್ಪ ಹಣ ಖರ್ಚಾಗುತ್ತದೆ. ವಿದ್ಯಾರ್ಥಿಗಳಿಗೆ ಅಧ್ಯಯನದಲ್ಲಿ ಸಾಮಾನ್ಯ ಫಲಿತಾಂಶವಿರುತ್ತದೆ. ಸಂಗಾತಿ ವ್ಯವಹಾರಗಳಲ್ಲಿ ಸಾಕಷ್ಟಚೇತರಿಕೆಯನ್ನು ಕಾಣಬಹುದು. ಮಹಿಳೆಯರ ಸಿದ್ಧ ಉಡುಪುಗಳು ಮತ್ತು ಅಲಂಕಾರಿಕ ವಸ್ತುಗಳನ್ನು ತಯಾರಿಸುವವರಿಗೆ ಹೆಚ್ಚಿನ ವ್ಯವಹಾರ ಲಾಭವಿರುತ್ತದೆ.
ಕುಂಭ
ಬಲಯುತವಾದ ದೇಹವನ್ನು ಪಡೆಯುವ ಕಡೆಗೆ ಗಮನಹರಿಸುವಿರಿ. ಹಿರಿಯರ ಮಾತಿನಲ್ಲಿ ದೃಢತೆ ಇದ್ದರೂ ಸಹ ಅದರಲ್ಲಿ ವ್ಯಂಗ್ಯವಿರುವುದಿಲ್ಲ. ಹಿರಿಯರು ಸಮಾಜಕ್ಕೆ ಸಹಕಾರಿಯಾಗುವ ರೀತಿಯಲ್ಲಿ ನಡೆದುಕೊಳ್ಳುವರು. ವಿದೇಶಿಗರಿಗೆ ರಿಯಲ್ ಎಸ್ಟೇಟ್ ವ್ಯವಹಾರವನ್ನು ಮಾಡಿಸುವವರಿಗೆ ಲಾಭವಿರುತ್ತದೆ. ವಿದ್ಯಾರ್ಥಿಗಳಿಗೆ ಉತ್ತಮ ಫಲಿತಾಂಶದ ಯೋಗವಿದೆ. ಶ್ವಾಸಕೋಶದ ತೊಂದರೆ ಮತ್ತು ಕಪದ ತೊಂದರೆ ಇರುವವರು ಎಚ್ಚರವಹಿಸಿರಿ. ಸಂಗಾತಿಯಿಂದ ಸ್ವಲ್ಪ ಆದಾಯ ಬರುವ ನಿರೀಕ್ಷೆ ಇದೆ. ಅಲಂಕಾರಿಕ ವಸ್ತುಗಳನ್ನು ತಯಾರಿಸಿ ಮಾರುವವರಿಗೆ ಹೆಚ್ಚಿನ ವ್ಯವಹಾರ ವಿರುತ್ತದೆ. ವೃತ್ತಿಯಲ್ಲಿ ಕಠಿಣ ನಿಲುವುಗಳನ್ನು ತೆಗೆದು ಕೊಳ್ಳುವುದು ಉತ್ತಮ. ಉಪಾಧ್ಯಾಯರುಗಳಿಗೆ, ಉಪನ್ಯಾಸಕರುಗಳಿಗೆ ಮತ್ತು ಭಾಷಣಕಾರರಿಗೆ ಹೆಚ್ಚು ಗೌರವ ದೊರೆಯುತ್ತದೆ. ಸರ್ಕಾರಿ ಕಂಪನಿಗಳಲ್ಲಿ ಹಿರಿಯ ಅಧಿಕಾರಿಗಳಿಗೆ ಸ್ಥಾನ ಮೌಲ್ಯ ಹೆಚ್ಚುತ್ತದೆ.
ಮೀನ
ಮನಸ್ಸಿನಲ್ಲಿ ಸಾಕಷ್ಟು ದ್ವಂದ್ವಗಳಿರುತ್ತವೆ. ಹಣದ ಒಳಹರಿವು ನಿಮ್ಮ ನಿರೀಕ್ಷೆಯಷ್ಟಿರುತ್ತದೆ. ಹೆಚ್ಚು ಅಲಂಕಾರಿಕವಾಗಿ ಕಾಣಿಸಿಕೊಳ್ಳುವ ಪ್ರಯತ್ನ ಮಾಡುವಿರಿ. ಆಸ್ತಿ ವ್ಯವಹಾರ ಮಾಡುವವರಿಗೆ ಹೆಚ್ಚು ಲಾಭ ವಿರುತ್ತದೆ. ವಿದ್ಯಾರ್ಥಿಗಳಿಗೆ ನಿರೀಕ್ಷೆ ಮಾಡಿದ ಮುಕ್ಕಾಲು ಭಾಗ ಯಶಸ್ಸು ದೊರೆಯುತ್ತದೆ. ಉಸಿರಾಟದ ತೊಂದರೆ ಇರುವವರು ಹೆಚ್ಚು ಎಚ್ಚರ ವಹಿಸಿರಿ. ಸಂಗಾತಿ ಆದಾಯದಲ್ಲಿ ಕಡಿಮೆಯಾಗಬಹುದು. ಅನಿರೀಕ್ಷಿತವಾಗಿ ಒಡವೆ ಕೊಳ್ಳುವ ಯೋಗವಿದೆ. ತಂದೆಯೊಡನೆ ನಿಮ್ಮ ಸಂಬಂಧಗಳು ಹಳಸಬಹುದು. ಯಾತ್ರೆ ಹೋಗಲು ದ್ವಂದ್ವ ಮನಸ್ಸು ಇರುತ್ತದೆ. ಸಂಗಾತಿಯು ನಿಮ್ಮ ಧರ್ಮ ಕಾರ್ಯಗಳಲ್ಲಿ ಸಹಾಯ ಮಾಡುವರು. ಒಡವೆಗಳನ್ನು ತಯಾರಿಸುವವರಿಗೆ ಆದಾಯ ಕಡಿಮೆಯಾಗಬಹುದು. ತಾಯಿಯು ನಿಮ್ಮ ಬಗ್ಗೆ ಅಸಮಾಧಾನವನ್ನು ತೋಡಿಕೊಳ್ಳುವರು. ನಿಮ್ಮ ವೃತ್ತಿಯಲ್ಲಿ ಆದಾಯ ಹೆಚ್ಚಿದರು ಸಹ ತೃಪ್ತಿ ಇರುವುದಿಲ್ಲ.