ಸೋಮವಾರ, 26 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ದಿನ
ವಾರ
ಮಾಸ
ವಾರ್ಷಿಕ
ವಾರ ಭವಿಷ್ಯ|ಹಣಕ್ಕಾಗಿ ಸಹವಾಸ ಬಯಸುವ ಸ್ನೇಹಿತರಿಂದ ಈ ರಾಶಿಯವರು ದೂರವಿದ್ದರೆ ಲೇಸು
Published 23 ಸೆಪ್ಟೆಂಬರ್ 2023, 23:30 IST
ಡಾ. ಎಂ.ಎನ್.ಲಕ್ಷ್ಮೀನರಸಿಂಹ ಸ್ವಾಮಿ
author
ಜ್ಯೋತಿಷ್ಯ ವಿಶಾರದ, ಮಾದಾಪುರ ಸಂಪರ್ಕ ಸಂಖ್ಯೆ: 8197304680
ಮೇಷ
ವಿದ್ಯಾಭ್ಯಾಸ ಮಾಡುವ ಸಲುವಾಗಿ ದೂರ ಪ್ರಯಾಣ ಮಾಡುವ ಯೋಗವಿದೆ. ಗಣಿ ಇಲಾಖೆಯಲ್ಲಿ ಕೆಲಸಮಾಡುತ್ತಿರುವವರಿಗೆ ಅದೇ ಕೆಲಸದ ಮೇಲೆ ಬೇರೆ ಊರಿಗೆ ದೂರದೂರಿಗೆ ಹೋಗಬೇಕಾಗಬಹುದು. ಪಾಲುದಾರರೊಂದಿಗೆ ಮಾಡಿಕೊಂಡಿದ್ದ ವ್ಯವಹಾರ ಒಪ್ಪಂದಗಳನ್ನು ಈಗ ನವೀಕರಿಸಿಕೊಳ್ಳಿರಿ. ನೃತ್ಯಪಟುಗಳಿಗೆ ಹೆಚ್ಚಿನ ಅವಕಾಶ ಮತ್ತು ಸಂಪಾದನೆ ಇರುತ್ತದೆ. ಬೇರೆಯವರೊಂದಿಗೆ ಮಾತನಾಡುವಾಗ ಎಚ್ಚರಿಕೆಯಿಂದ ಮಾತನಾಡಿರಿ. ಖರ್ಚು ವೆಚ್ಚಗಳಲ್ಲಿ ಮಿತವ್ಯಯ ಸಾಧಿಸುವುದು ಉತ್ತಮ., ಸ್ವತ್ತು ಖರೀದಿ ಮಾಡುವ ವಿಚಾರದಲ್ಲಿ ಬಂಧುಗಳು, ನಿಮಗೆ ಸಹಾಯ ಮಾಡುವ ರೀತಿ ಬಂದು ಮೋಸ ಮಾಡಲು ಪ್ರಯತ್ನಿಸುವರು. ಧನಾದಾಯವು ನಿರೀಕ್ಷಿತ ಮಟ್ಟಕ್ಕೆ ಇರುತ್ತದೆ. ಹಂಗಾಮಿ ಉದ್ಯೋಗ ಮಾಡುತ್ತಿರುವ ಕೆಲವರಿಗೆ ಈಗ ಖಾಯಂ ಉದ್ಯೋಗ ದೊರೆಯುವ ಸಂದರ್ಭವಿದೆ. ವಿದ್ಯಾರ್ಥಿಗಳಿಗೆ ಉತ್ತಮ ಫಲಿತಾಂಶ ಪಡೆಯುವ ಯೋಗವಿದೆ.
ವೃಷಭ
ಧರ್ಮದ ವಿರುದ್ಧ ಮಾತನಾಡುವ ನಿಮ್ಮ ಬುದ್ಧಿಯನ್ನು ಸಮಾಜದ ಜನರು ಖಂಡಿಸುವರು. ಮಾತನಾಡುವಾಗ ತಾಳ್ಮೆಯಿಂದ ಮಾತನಾಡಿರಿ. ಸಾಕು ಪ್ರಾಣಿಗಳನ್ನು ಮಾರುವವರಿಗೆ ಆದಾಯ ಈಗ ಹೆಚ್ಚಾಗುತ್ತದೆ. ಕಟ್ಟಡ ಕಟ್ಟುವ ಕಾರ್ಮಿಕರಿಗೆ ಹೆಚ್ಚು ಕೆಲಸ ದೊರೆತು ಸಂಪಾದನೆ ಹೆಚ್ಚುತ್ತದೆ. ಕಾರ್ಖಾನೆಗಳಲ್ಲಿ ಕೆಲಸ ಮಾಡುವ ಕಾರ್ಮಿಕರು ಉದ್ದಿಮೆಗಾರೊಡನೆ ಸೌಹಾರ್ದಯುತವಾಗಿ ಇರುವುದು ಒಳ್ಳೆಯದು. ಈಗ ಮನೆಯನಿರ್ಮಾಣಕಾರ್ಯವನ್ನು ಮಾಡಬಹುದು. ನಿಮ್ಮ ಆಸ್ತಿಯನ್ನು ಉಳಿಸಿ ಕೊಳ್ಳುವ ಪ್ರಯತ್ನವನ್ನು ಮಾಡಿರಿ. ತೆರಿಗೆ ತಜ್ಞರಿಗೆ ಹೆಚ್ಚಿನ ಬೇಡಿಕೆ ಬರುತ್ತದೆ ಹಾಗೂ ಹೆಚ್ಚು ಕೆಲಸ ಸಿಕ್ಕಿ ಸಂಪಾದನೆ ಹೆಚ್ಚುತ್ತದೆ. ತಾಯಿಯ ಜೊತೆ ಹಣದ ವಿಚಾರವಾಗಿ ಕಾವೇರಿದ ಮಾತುಗಳಾಗಬಹುದು. ಸಂಗಾತಿಯ ಕೃಷಿಭೂಮಿ ದೊರೆಯುವ ಯೋಗವಿದೆ. ಹಿರಿಯರಿಗೆ ಪುಣ್ಯಕ್ಷೇತ್ರದ ದರ್ಶನದ ಯೋಗವಿದೆ. ಸಾಂಪ್ರದಾಯಕ ಕೃಷಿಯನ್ನು ಮಾಡುತ್ತಿರುವವರಿಗೆ ಸೂಕ್ತಸವಲತ್ತುಗಳು ದೊರೆಯುತ್ತವೆ.
ಮಿಥುನ
ನಿಮ್ಮ ಸ್ವಾಭಿಮಾನ ಮತ್ತು ಗುರಿಯನ್ನು ಬಿಟ್ಟುಕೊಡದೆ ಮುನ್ನಡೆಯುವುದು ಉತ್ತಮ, ನಿಮಗೆ ಇದರಿಂದ ಉತ್ತಮಫಲ ಸಿಗುತ್ತದೆ. ಸ್ನೇಹಿತರು ನಿಮ್ಮ ಹಣಕ್ಕಾಗಿ ನಿಮ್ಮ ಸಹವಾಸ ಮಾಡಲು ಕಾತುರರಾಗಿ ಕಾಯುತ್ತಿರುತ್ತಾರೆ. ಅವರಿಂದ ದೂರವಿರಿ. ವೃತ್ತಿಯಲ್ಲಿ ಹಿರಿಯ ಅಧಿಕಾರಿಗಳ ಜೊತೆ ಧೈರ್ಯದಿಂದ ಮಾತ ನಾಡಿ ನಿಮ್ಮಸಮಸ್ಯೆಯನ್ನು ಪರಿಹರಿಸಿಕೊಳ್ಳಬಹುದು. ಸಾಕಷ್ಟುದಿನಗಳಿಂದ ಆಗದೆ ಉಳಿದಿದ್ದ ಕೆಲವು ಕೆಲಸಗಳು ಈಗ ಆಗುತ್ತದೆ. ಕಟ್ಟಡಕಟ್ಟುವವರ ಕಾರ್ಯಗಳು ಭರದಿಂದ ಸಾಗು ತ್ತವೆ. ವ್ಯವಹಾರದಲ್ಲಿ ಲಾಭದ ಜೊತೆಗೆ ಮನುಷ್ಯತ್ವವು ಇರಲಿ. ವಿದ್ಯಾರ್ಥಿಗಳು ಅಧ್ಯಯನಕ್ಕಾಗಿ ಹೆಚ್ಚು ಶ್ರಮ ವಹಿಸಬೇಕು.ಹಣದಒಳಹರಿವುಉತ್ತಮವಾಗಿರುತ್ತದೆ. ಬಂಧುಗಳಲ್ಲಿ ವ್ಯತ್ಯಾಸಗಳಿದ್ದರೂ ಕೆಲವರಿಂದ ನಿಮಗೆ ಸಹಕಾರ ಸಿಗುತ್ತದೆ. ಆಸ್ತಿ ಮಾಡುವ ವಿಚಾರದಲ್ಲಿಸ್ವಲ್ಪ ಮಟ್ಟಿನ ಮುನ್ನಡೆ ಕಾಣುತ್ತದೆ.
ಕರ್ಕಾಟಕ
ಸಮಾಜದಲ್ಲಿ ನಿಮಗೆ ಗೌರವವು ಹೆಚ್ಚುತ್ತದೆ. ರೈತರಿಗೆ ಕಳ್ಳಕಾಕರಿಂದ ಕಾಟ ಹೆಚ್ಚಾಗುವ ಸಾಧ್ಯತೆ ಇದೆ. ನಿಮ್ಮ ಕುಟುಂಬದ ಜೊತೆ ದೇವರದರ್ಶನ ಪಡೆಯಲು ತೆರಳುವಿರಿ. ಕೆಲವು ಕೆಟ್ಟ ಅಭ್ಯಾಸಗಳು ಮಕ್ಕಳಿಗೆ ಒದಗಬಹುದು. ಇದರಿಂದ ಮಕ್ಕಳ ನಡವಳಿಕೆಯಲ್ಲಿ ಬದಲಾಗಬಹುದು ಎಚ್ಚರ. ವಿದೇಶದಲ್ಲಿ ದುಡಿಯುತ್ತಿ ರುವವರ ಆದಾಯ ಹೆಚ್ಚಾಗುತ್ತದೆ. ಹಿರಿಯಶ್ರೇಣಿಯ ಕೆಲವು ಅಧಿಕಾರಿ ವರ್ಗದವರಿಗೆ ಮುಜುಗರದ ಸನ್ನಿ ವೇಶಗಳು ಬರಬಹುದು. ವೃತ್ತಿಜೀವನಕ್ಕೆ ಪ್ರವೇಶಿಸುವ ಅವಕಾಶ ಕೆಲವರಿಗೆ ದೊರೆಯುತ್ತದೆ. ಹಿರಿಯರು ಬದಲಾದ ಸನ್ನಿವೇಶಕ್ಕೆ ತಕ್ಕಂತೆ ಹೊಂದಿಕೊಳ್ಳುವುದು ಅಗತ್ಯ. ಖಾಸಗಿ ಸಾಲದ ವ್ಯವಹಾರಗಳು ಕಷ್ಟ ತರುತ್ತವೆ. ಹಣದ ಒಳಹರಿವು ಉತ್ತಮವಾಗಿರುತ್ತದೆ. ಹೆಂಗಸರ ಉಡುಪುಗಳನ್ನು ಮಾರುವವರಿಗೆ ಲಾಭ ಹೆಚ್ಚುತ್ತದೆ.
ಸಿಂಹ
ಹಿರಿಯರ ಆಸ್ತಿಯನ್ನು ಕೊಳ್ಳುವ ಮುಂಚೆ ಬಂಧುಗಳ ಬಗ್ಗೆ ಎಚ್ಚರ ವಹಿಸಿರಿ, ಅವರು ಈ ಬಗ್ಗೆ ತಕರಾರು ತೆಗೆಯಬಹುದು. ಹಳೆಯದನ್ನು ಮರೆತು ಹೊಸ ಜೀವನದೊಂದಿಗೆ ಹೊಂದಿಕೊಳ್ಳುವುದು ಉತ್ತಮ. ಇದ್ದಿದ್ದರಲ್ಲಿ ಸಂತಸ ಕಾಣುವುದು ನಿಮಗೆ ಒಳಿತು. ಬದ್ದ ವೈರಿಗಳು ಸಹ ನಿಮ್ಮ ಕಷ್ಟಕ್ಕೆ ಸಹಾಯ ಮಾಡುವಂತೆ ನಟಿಸುವರು. ಆಕಸ್ಮಿಕವಾಗಿ ನಿಮಗೆ ಪರಿಚಯವಾದ ವ್ಯಕ್ತಿಯಿಂದ ನಿಮಗೆ ಸೂಕ್ತ ಸಹಾಯ ದೊರೆಯುತ್ತದೆ. ಹಣದ ಒಳಹರಿವು ನಿರೀಕ್ಷೆಯಷ್ಟು ಇದ್ದರೂ ಅಷ್ಟೇ ಖರ್ಚು ಸಹ ಇರುತ್ತದೆ. ವಿದ್ಯಾರ್ಥಿ ಗಳಿಗೆ ಉತ್ತಮಯಶಸ್ಸು ದೊರೆಯುವ ಸಾಧ್ಯತೆಗಳಿವೆ. ಕೀಲುನೋವುಗಳು ಹೆಚ್ಚಾಗುವ ಸಾಧ್ಯತೆಗಳಿವೆ. ನಿಮ್ಮ ಅಭಿಪ್ರಾಯಗಳಿಗೆ ಸಂಗಾತಿ ಸಮ್ಮತಿಯನ್ನು ನೀಡ ದಿರಬಹುದು. ಹಿರಿಯರು ಮಕ್ಕಳನ್ನು ನೋಡಲು ವಿದೇಶಕ್ಕೆ ಹೋಗಿ ಬರಬಹುದು.
ಕನ್ಯಾ
ರಸಾಯನ ಶಾಸ್ತ್ರದ ಉಪನ್ಯಾಸಕರಿಗೆ ಬೇಡಿಕೆ ಹೆಚ್ಚಾಗುತ್ತದೆ. ಉದ್ಯೋಗ ರಹಿತರು ಸಿಕ್ಕ ಕೆಲಸವನ್ನು ಸೇರಿಕೊಳ್ಳುವುದು ಉತ್ತಮ,ಕಾಯುತ್ತಾ ಕೂರುವುದು ಅಷ್ಟು ಒಳಿತಲ್ಲ. ಸಭೆ ಸಮಾರಂಭಗಳಲ್ಲಿ ಭಾಗವಹಿ ಸುವಾಗ ನಿಮ್ಮ ಮಾತಿನ ಮೇಲೆ ಬಗ್ಗೆ ಎಚ್ಚರ ಇರಲಿ, ನಿಷ್ಟೂರ ಆಗುವ ಸಾಧ್ಯತೆಗಳಿವೆ. ನಿಮ್ಮ ಹರಿತವಾದ ಮಾತುಗಳು ಬೇರೆಯವರಿಗೆ ಬೇಸರತರಿಸಬಹುದು. ಸತತಪ್ರಯತ್ನದಿಂದ ಮಾಡುತ್ತಿದ್ದ ಕೆಲಸಗಳಲ್ಲಿ ಜಯ ವಿರುತ್ತದೆ. ಎಲ್ಲರ ಜೊತೆಯಲ್ಲಿ ಹೊಂದಿಕೊಳ್ಳುವುದು ಬಹಳ ಉತ್ತಮ. ಸಾಮಾನ್ಯವಾಗಿ ರಾತ್ರಿ ಪಾಳಿಯಲ್ಲಿ ಕೆಲಸ ಮಾಡುತ್ತಿದ್ದವರಿಗೆ ಹಗಲಿನಪಾಳಿ ದೊರೆಯುವ ಸಾಧ್ಯತೆ ಇದೆ. ವಿದೇಶಿ ವ್ಯವಹಾರಗಳನ್ನು ಮಾಡುವ ಮೊದಲು ಕಾನೂನು ತೊಡಕುಗಳನ್ನು ಸರಿಯಾಗಿ ನೋಡಿಕೊಳ್ಳಿರಿ. ಸಿದ್ಧ ಉಡುಪುಗಳನ್ನು ತಯಾರಿಸು ವವರಿಗೆ ಹೆಚ್ಚಿನ ವ್ಯವಹಾರ ನಡೆಯುತ್ತದೆ.
ತುಲಾ
ವೃತ್ತಿಯಲ್ಲಿ ನಿಷ್ಠೆಯಿಂದ ಕೆಲಸಮಾಡುತ್ತಿರು ವವರಿಗೆ ಹೆಚ್ಚಿನ ಅನುಕೂಲ ಈಗ ದೊರೆಯುತ್ತದೆ. ಮಕ್ಕಳನಡವಳಿಕೆಯಲ್ಲಿ ಆಗುತ್ತಿರುವ ವ್ಯತ್ಯಾಸವನ್ನು ಪತ್ತೆಹಚ್ಚಿ ಸರಿದಾರಿಗೆ ತನ್ನಿರಿ. ಶುಭ ಸಮಾರಂಭಗಳಲ್ಲಿ ಭಾಗವಹಿಸುವ ಅವಕಾಶಗಳು ದೊರೆಯುತ್ತವೆ.ತೀರ್ಥ ಯಾತ್ರೆಗಳನ್ನು ಮಾಡುವ ಅವಕಾಶ ದೊರೆಯುತ್ತದೆ. ಹೊಸ ವ್ಯಾಪಾರ ಮಾಡಲು ಇಚ್ಚಿಸುವರು ತಮ್ಮ ಹೂಡಿಕೆಬಂಡವಾಳದ ಬಗ್ಗೆ ಸರಿಯಾಗಿ ತಿಳಿದುಕೊಳ್ಳು ವುದು ಒಳ್ಳೆಯದು. ಧನದಾಯವು ಮಂದಗತಿಯಲ್ಲಿ ರುತ್ತದೆ. ಅಧಿಕಾರಿಗಳು ಮಾಡುವ ತಪ್ಪಿನಿಂದ ಅವರೇ ಸಿಕ್ಕಿ ಬೀಳುವ ಸಾಧ್ಯತೆಗಳಿವೆ. ದೊಡ್ಡಮೊತ್ತದ ಬಂಡ ವಾಳವನ್ನು ಈಗ ಹೂಡಲು ಹೋಗಬೇಡಿರಿ. ನಿಮ್ಮ ಬಂಧುಗಳು ನಿಮ್ಮ ವಿರುದ್ಧ ತಿರುಗಿ ಬೀಳುವ ಸಾಧ್ಯತೆ ಗಳಿವೆ. ಆರೋಗ್ಯದ ಕಡೆ ಹೆಚ್ಚಿನ ನಿಗಾ ವಹಿಸಿರಿ.
ವೃಶ್ಚಿಕ
ನಿಮ್ಮ ಕುಟುಂಬದಲ್ಲಿ ನಡೆಯುವ ಕೆಲವು ಘಟನೆಗಳು ನಿಮಗೆ ಬೇಸರ ತರಿಸುತ್ತವೆ. ಹಠ ಹಿಡಿದು ಮಾಡಿದ ಕೆಲಸಗಳಲ್ಲಿ ಉತ್ತಮ ಫಲಿತಾಂಶ ಇರುತ್ತದೆ. ಗುರು ಹಿರಿಯರನ್ನು ಗೌರವಿಸುವುದು ಒಳ್ಳೆಯದು. ನಿಮ್ಮಸಂಪ್ರದಾಯಗಳನ್ನು ತಿಳಿದುಕೊಳ್ಳುವುದು ಒಳ್ಳೆ ಯದು. ಒಡವೆವಸ್ತುಗಳನ್ನು ಕೊಳ್ಳುವ ಅವಕಾಶವಿದೆ. ಹಣದ ಒಳಹರಿವು ನಿರೀಕ್ಷೆಯಷ್ಟಿದ್ದರೂ ಅಷ್ಟೇಖರ್ಚು ಸಹ ಬರುತ್ತದೆ. ಆಸ್ತಿಯನ್ನು ಮಾಡುವ ಯೋಗವಿದೆ. ಹೈನುಗಾರಿಕೆಯನ್ನು ಮಾಡುವವರಿಗೆ ಅಭಿವೃದ್ಧಿಯ ಪಥ ತೆರೆದುಕೊಳ್ಳುತ್ತದೆ. ವ್ಯವಸಾಯದ ಕೆಲಸಗಳು ನಿಧಾನಗತಿಯಲ್ಲಿ ಸಾಗುತ್ತವೆ.ವಿದ್ಯಾರ್ಥಿಗಳಿಗೆ ಶ್ರಮಕ್ಕೆ ತಕ್ಕ ಫಲ ಇರುತ್ತದೆ. ವಿದೇಶಿ ಸಂಸ್ಥೆಗಳೊಂದಿಗೆ ಹಣ ಕಾಸಿನ ವ್ಯವಹಾರ ಮಾಡುವವರು ಸಾಕಷ್ಟು ಎಚ್ಚರಿಕೆ ಯಿಂದ ಪರಿಶೀಲಿಸಿ ನಂತರ ಒಪ್ಪಂದಗಳನ್ನು ಮಾಡಿ ಕೊಳ್ಳಿರಿ. ಹೈನುಗಾರಿಕೆಯನ್ನು ಮಾಡುವವರಿಗೆ ಅಭಿವೃದ್ಧಿಯ ಪಥ ತೆರೆದುಕೊಳ್ಳುತ್ತದೆ.
ಧನು
ಸೌಕರ್ಯಯುತವಾದ ವಾಹನ ಕೊಳ್ಳಲು ಆಲೋಚನೆ ಮಾಡುವಿರಿ. ಆಹಾರ ಅಥವಾ ನೀರಿನಿಂದ ಆರೋಗ್ಯ ವ್ಯತ್ಯಾಸವಾಗಬಹುದು ಎಚ್ಚರ ವಹಿಸಿರಿ. ನೀವು ಮಾಡುವ ನಿಸ್ವಾರ್ಥ ಸೇವೆಗಳು ಉತ್ತಮ ಪ್ರತಿಕ್ರಿಯೆಯನ್ನು ಪಡೆ ಯುತ್ತವೆ. ರಕ್ಷಣಾ ಸೇವೆಯಲ್ಲಿರುವ ಕೆಲವರಿಗೆ ಶಿಸ್ತು ಬದ್ಧ ಜೀವನಕ್ಕೆ ಹೊಂದಿಕೊಳ್ಳಲು ಕಷ್ಟವಾಗಬಹುದು. ಗಣ್ಯ ವ್ಯಕ್ತಿಗಳ ಪರಿಚಯದಿಂದ ನಿಮ್ಮ ಕೆಲಸ ಕಾರ್ಯಗಳು ಬಹಳ ಸುಲಭವಾಗಿ ಆಗುವುದು. ಮಕ್ಕಳಿಗಾಗಿ ಹೊಸಬಟ್ಟೆ ಗಳನ್ನು ಖರೀದಿ ಮಾಡುವಿರಿ. ಹೋಟೆಲ್ ಉದ್ಯಮದ ವರಿಗೆ ವ್ಯಾಪಾರ ಹೆಚ್ಚಾಗಿ ವರಮಾನ ಸಹ ಹೆಚ್ಚುತ್ತದೆ. ಹಣ್ಣು ಬೆಳಗಾರರಿಗೆ ವಿದೇಶಿ ಮಾರುಕಟ್ಟೆ ದೊರೆಯು ತ್ತದೆ. ಬಂಧುಗಳ ನಡೆಸುವ ತೀರ್ಮಾನದಲ್ಲಿ ಆತುರದ ನಿರ್ಧಾರ ಬೇಡ. ನಿಮ್ಮ ಶತ್ರುಗಳು ನಿಮ್ಮಿಂದ ತಾವಾಗಿಯೇ ದೂರವಾಗುವರು.
ಮಕರ
ಭಾಷಣಕಾರರಿಗೆ ಭಾಗವಹಿಸುವ ಸಭೆ ಸಮಾರಂಭಗಳಲ್ಲಿ ಉತ್ತಮಗೌರವ ದೊರೆಯುತ್ತದೆ. ನಿಮ್ಮ ಆಸೆಯಂತೆ ಖರೀದಿಸಿದ ಆಸ್ತಿಯ ಮೌಲ್ಯ ಈಗ ಸಾಕಷ್ಟು ಹೆಚ್ಚಾಗುತ್ತದೆ. ಕಷ್ಟವಾದರೂ ನಿಮ್ಮ ಕೆಲಸ ಗಳನ್ನು ಬಹಳ ಶ್ರದ್ಧೆಯಿಂದ ಮಾಡುವಿರಿ. ಸುಗಂಧ ದ್ರವ್ಯಗಳನ್ನು ತಯಾರು ಮಾಡುವವರ ವ್ಯವಹಾರ ಈಗ ಸಾಕಷ್ಟು ಹೆಚ್ಚಾಗುತ್ತದೆ. ಮಕ್ಕಳ ಆಟಿಕೆ ವಸ್ತು ಗಳನ್ನುತಯಾರಿಸಿ ಮಾರಾಟ ಮಾಡುವವರಿಗೆ ಲಾಭ ವಿರುತ್ತದೆ.ಭಾಷಾಅನುವಾದಕರಿಗೆ ಬೇಡಿಕೆ ಹೆಚ್ಚುತ್ತದೆ. ವಿದೇಶದಲ್ಲಿ ಓದಲು ಇಚ್ಛಿಸುವವರಿಗೆ ಹೆಚ್ಚಿನ ಅನು ಕೂಲತೆ ದೊರೆಯುತ್ತದೆ. ವಿದೇಶದಲ್ಲಿ ನೆಲೆಸಿರುವವ ರಿಗೆ ಆಸ್ತಿ ಮಾಡುವ ಯೋಗವಿದೆ. ಪಿತ್ರಾರ್ಜಿತ ಆಸ್ತಿ ದೊರಕುವ ಸಾಧ್ಯತೆ ಇದೆ ಹಾಗೂ ಸಂಪ್ರದಾಯದ ಬಗ್ಗೆ ಅವರಿಂದ ತಿಳುವಳಿಕೆ ಪಡೆಯುವಿರಿ. ಲೇವಾದೇವಿ ವ್ಯವಹಾರಗಳು ಖಂಡಿತ ಬೇಡ.
ಕುಂಭ
ಸಾಹಸ ಕಲಾವಿದರುಗಳಿಗೆ ಉತ್ತಮಕಾರ್ಯ ಕ್ರಮದಲ್ಲಿ ಭಾಗವಹಿಸುವ ಆಕಾಶವಿದೆ. ಕುಟುಂಬದ ಗೌರವಕ್ಕಾಗಿ ಹಿರಿಯರು ಸಾಕಷ್ಟು ಶ್ರಮಪಡುವರು. ಹೊಸವಾಹನ ಕೊಳ್ಳುವುದಕ್ಕೆ ಮುಂಚೆ ನಿಮ್ಮ ಆರ್ಥಿಕ ಪರಿಸ್ಥಿತಿಯನ್ನು ನೋಡಿಕೊಳ್ಳಿರಿ. ಧಾರ್ಮಿಕ ವಿಚಾರ ಗಳನ್ನು ತಿಳಿಯಲು ಹೆಚ್ಚು ಉತ್ಸುಕರಾಗುವಿರಿ. ದೊಡ್ಡ ದೊಡ್ಡ ಕಾರ್ಯಕ್ರಮಗಳನ್ನು ಆ ಯೋಜನೆ ಮಾಡುವ ಮೊದಲು ಪೂರ್ವ ತಯಾರಿ ಸರಿಯಾಗಿರಲಿ. ನಿಮ್ಮ ಧನದಾಯವು ಮಧ್ಯಮಗತಿಯಲ್ಲಿ ಇರುತ್ತದೆ. ತಮ್ಮ ಸಂತೋಷಕ್ಕಾಗಿ ಪ್ರೇಮಿಗಳು ಹೆಚ್ಚಿನ ಹಣ ಖರ್ಚು ಮಾಡುವಿರಿ. ಸಂಗಾತಿಗೆ ಉದ್ಯೋಗ ಸ್ಥಳದಲ್ಲಿ ಜವಾ ಬ್ದಾರಿ ಹೆಚ್ಚಬಹುದು. ಸರ್ಕಾರದ ಕಂಪನಿಗಳ ಜೊತೆ ಮಾಡಿದ ವ್ಯವಹಾರದಲ್ಲಿ ಲಾಭ ಕಡಿಮೆಯಾಗುವ ಸಾಧ್ಯತೆ ಇದೆ. ಬಿತ್ತನೆ ಬೀಜವನ್ನು ಉತ್ಪಾದಿಸುವವ ರಿಗೆ ಹೆಚ್ಚಿನ ಮಾರುಕಟ್ಟೆ ದೊರೆಯುತ್ತದೆ.
ಮೀನ
ಲೋಹದ ಮೇಲೆ ಕುಸರಿ ಕೆಲಸಗಳನ್ನು ಮಾಡುವವರಿಗೆ ಮಾರುಕಟ್ಟೆ ವಿಸ್ತರಿಸುತ್ತದೆ. ಸರಕು ಸಾಗಣೆ ಮಾಡುವವರಿಗೆ ಹೆಚ್ಚು ಸಾಗಾಣಿಕ ಆದೇಶ ಗಳು ದೊರೆಯುತ್ತದೆ. ನಿಮ್ಮ ಸಂಬಂಧಿಕರೊಡನೆ ಉತ್ತಮ ಸಂಬಂಧ ಇಟ್ಟುಕೊಳ್ಳುವುದು ನಿಮಗೆ ಒಳ್ಳೆಯದು. ಉದ್ಯೋಗ ಸ್ಥಳದಲ್ಲಿ ಕೆಲಸದ ಒತ್ತಡ ಹೆಚ್ಚಾಗಬಹುದು. ಧನಾದಾಯವು ಮಧ್ಯಮ ಗತಿ ಯಲ್ಲಿರುತ್ತದೆ. ವಿದ್ಯಾರ್ಥಿಗಳಿಗೆ ಅಧ್ಯಯನದಲ್ಲಿ ಉತ್ತಮಯಶಸ್ಸು ಇರುತ್ತದೆ. ಮಹಿಳೆಯರು ನಡೆಸುವ ವ್ಯಾಪಾರ ವ್ಯವಹಾರಗಳಲ್ಲಿ ಅಭಿವೃದ್ಧಿಯು ಉತ್ತಮ ವಾಗಿರುತ್ತದೆ. ಸರ್ಕಾರಿ ವ್ಯವಹಾರಗಳಲ್ಲಿ ಆದಾಯ ಬರುವುದು ಕಷ್ಟವಾಗಬಹುದು. ಸಂಗಾತಿಗೆ ತವರಿ ನಿಂದ ಕೃಷಿ ಭೂಮಿ ಸಿಗುವ ಯೋಗವಿದೆ. ಧಾರ್ಮಿಕ ವಿಷಯಗಳಲ್ಲಿ ಗೊತ್ತಿಲ್ಲದೆ ಮೂಗು ತೂರಿಸುವುದು ಸರಿಯಲ್ಲ.