ಗುರುವಾರ, 3 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ದಿನ
ವಾರ
ಮಾಸ
ವಾರ್ಷಿಕ
ದಿನ ಭವಿಷ್ಯ | ಸೆ. 16: ಈ ರಾಶಿಯವರು ಮೊಸಳೆ ಕಣ್ಣೀರಿಗೆ ಸುಲಭವಾಗಿ ಮರುಳಾಗದಿರಿ
Published 16 ಸೆಪ್ಟೆಂಬರ್ 2024, 0:01 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ಬೆಲೆ ಬಾಳುವ ವಸ್ತುವನ್ನು ಕಳೆದುಕೊಳ್ಳಬಹುದು. ಹಾಗಾಗಿ ಈ ದಿನ ಬಂಗಾರ, ದೊಡ್ಡ ಮಟ್ಟದ ಹಣ ಹಿಡಿದುಕೊಂಡು ಸಂಚರಿಸುವುದು ಬೇಡ. ಆದಾಯಕ್ಕೆ ಹಲವು ಹೊಸ ಮೂಲಗಳನ್ನು ಹುಡುಕುವಿರಿ.
ವೃಷಭ
ಸಹೋದರಿಯ ಮದುವೆಯಂಥ ಸಂದರ್ಭಕ್ಕೆ ಆಪ್ತರೊಬ್ಬರು ನೆರವಿಗೆ ನಿಲ್ಲಲಿದ್ದಾರೆ. ಕಾರಣಾಂತರದಿಂದ ಇಂದು ಕೆಲವು ವ್ಯಕ್ತಿಗಳನ್ನು ನಿರ್ಲಕ್ಷಿಸುವಿರಿ. ಸೋದರನ ಓದಿಗಾಗಿ ಖರ್ಚು ಮಾಡಬೇಕಾಗುವುದು.
ಮಿಥುನ
ಜೀವನದಲ್ಲಿನ ಬಹಳ ದಿನಗಳಿಂದ ಕಾಡುತ್ತಿದ್ದ ಸಮಸ್ಯೆಗಳು ದೂರಾಗುವುವು. ಈ ದಿನ ರಾಜಕೀಯ ವ್ಯಕ್ತಿಗಳಿಗೆ ಸ್ಥಾನ ಬಲಪಡಿಸುವ ಕಾರ್ಯದಲ್ಲಿ ಹಿರಿಯ ಅಧಿಕಾರಿಗಳಿಂದ ಉಪಯೋಗವಾಗಲಿದೆ. ಆರ್ಥಿಕವಾಗಿ ಸದೃಢವಾಗಲಿದ್ದೀರಿ.
ಕರ್ಕಾಟಕ
ಬೇರೆಯವರನ್ನು ಮರಳುಗೊಳಿಸುವ ಮಾತಿನ ಕೌಶಲವಿದೆ. ಅದೇ ಈ ದಿನ ನಿಮಗೆ ಮುಳ್ಳಾಗಬಹುದು. ಸಗಟು ಧಾನ್ಯ ವರ್ತಕರಿಗೆ ಈ ದಿನ ಜೋರಾದ ವಹಿವಾಟು ನಡೆದು ಲಾಭ ಬರುವುದು.
ಸಿಂಹ
ಅಧಿಕಾರಿ ವರ್ಗದವರಿಗೆ ಅವರ ತಪ್ಪುಗಳನ್ನು ತಿಳಿಸುವಲ್ಲಿ ಧೈರ್ಯ ಸಾಮರ್ಥ್ಯದ ಜತೆಯಲ್ಲಿ ಸಹೋದ್ಯೋಗಿಗಳ ಉತ್ತೇಜನ ಪಡೆಯುವಿರಿ. ವೃತ್ತಿಯಲ್ಲಿ ಅನುಭವ ಹೊಂದಿದವರಿಂದ ಬೈಗುಳ ಕೇಳಬೇಕಾಗುವುದು.
ಕನ್ಯಾ
ಕಾರ್ಯೊದತ್ತಡ ಕಡಿಮೆಯಾಗಿರುವಂತೆ ತೋರಿ ಮನಸ್ಸಿಗೆ ನಿರಾಳವಾಗುವುದು. ಗಣ್ಯ ವ್ಯಕ್ತಿಗಳಿಗೆ ಸಮಾಜದಲ್ಲಿ ಅಥವಾ ರಾಜಕೀಯ ಕ್ಷೇತ್ರದಲ್ಲಿ ಸ್ಥಾನ-ಮಾನ ಲಭಿಸಲಿದೆ.
ತುಲಾ
ಕಠಿಣ ಪ್ರಯತ್ನಗಳ ನಂತರವೂ ಇಷ್ಟಪಟ್ಟಿದ್ದು ಸಿಗದೇ ಹೆಚ್ಚಿನ ಪ್ರಯತ್ನ ಪಡಬೇಕಾಗುವುದು ಅನಿವಾರ್ಯ. ಗೃಹದಲ್ಲಿನ ಸಮಸ್ಯೆಗಳು ಪತಿ ಪತ್ನಿಯ ಹೊಂದಾಣಿಕೆಯಿಂದ ಪರಿಹಾರವಾಗುವುದು.
ವೃಶ್ಚಿಕ
ಬೇರೆಯವರ ಬಗ್ಗೆ ಅನುಕಂಪ ತೋರುವ ನೀವು ನಿಮ್ಮ ಬಗ್ಗೆ ಗಮನ ಹರಿಸಿ. ಶೈಕ್ಷಣಿಕ ರಂಗದವರಿಗೆ ಪರಸ್ಪರ ವರ್ಗಾವಣೆ ಮಾಡಿಕೊಳ್ಳುವ ಅವಕಾಶ ಸಿಗುವುದು.
ಧನು
ವಿಚಾರಗಳನ್ನು ವಿವಾದಕ್ಕೊಳಗಾಗದಂತೆ ಅರ್ಥ ಮಾಡಿಸುವಲ್ಲಿ ಯಶಸ್ವಿಯಾಗುವಿರಿ. ಪುರುಷ ಪ್ರಯತ್ನದ ಜತೆಯಲ್ಲಿ ದೇವರ ಅನುಗ್ರಹ ಯೋಜನೆಗೆ ಪುಷ್ಟಿ ಕೊಡುವುದು ಸಂತಸದ ವಿಚಾರ.
ಮಕರ
ಹೆಂಡತಿಗೋಸ್ಕರ ಅಥವಾ ಹೆಂಡತಿಯ ತವರು ಮನೆಗೋಸ್ಕರವಾಗಿ ಖರ್ಚು ಮಾಡಬೇಕಾದ ಪರಿಸ್ಥಿತಿ ಬರಬಹುದು. ಆಡಳಿತಾತ್ಮಕ ವಿಚಾರದಲ್ಲಿ ಭಾರಿ ಬದಲಾವಣೆಗಳ ಅಗತ್ಯಗಳನ್ನು ಸಂಸ್ಥಾಪಕರಿಗೆ ಮನವರಿಕೆ ಮಾಡಿಕೊಡುವಿರಿ.
ಕುಂಭ
ಜೀವನದಲ್ಲಿ ಅನಿರೀಕ್ಷಿತ ಬದಲಾವಣೆಗಳನ್ನು ಕಂಡುಕೊಳ್ಳುವ ಸ್ಥಿತಿ ಬರಲಿದೆ. ವಿವಾದಗಳಿಂದ ದೂರ ಉಳಿದು ಕೆಲಸಗಳನ್ನು ನಿಧಾನವಾಗಿ ಪೂರ್ತಿ ಮಾಡುವಂಥ ತೀರ್ಮಾನಕ್ಕೆ ಬರುವುದು ಉತ್ತಮ.
ಮೀನ
ಸಂಬಂಧಗಳಿಗೆ ಬೆಲೆ ಕೊಡುವ ನೀವು ಸಂಬಂಧಿಕರ ಮೊಸಳೆ ಕಣ್ಣೀರಿಗೆ ಸುಲಭವಾಗಿ ಮರುಳಾಗದಿರಿ. ಶಾಸ್ತ್ರೀಯ ಸಂಗೀತ ಕಲಾವಿದರಿಗೆ ಉತ್ತಮ ವೇದಿಕೆ ದೊರಕುವ ಸೂಚನೆ ಸಿಗುತ್ತದೆ.
ADVERTISEMENT
ADVERTISEMENT