ಶನಿವಾರ, 24 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ದಿನ
ವಾರ
ಮಾಸ
ವಾರ್ಷಿಕ
ದಿನ ಭವಿಷ್ಯ: ಈ ರಾಶಿಯವರು ಶುಭ ಸಮಾಚಾರ ಕೇಳುವಿರಿ
Published 31 ಡಿಸೆಂಬರ್ 2023, 18:30 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ಯಾವುದೇ ಅನಿವಾರ್ಯತೆಗಳಿಲ್ಲದೆ ಕೇವಲ ಹಿರಿಮೆಗಾಗಿ ವಿಲಾಸಿ ವಸ್ತುಗಳನ್ನು ಖರೀದಿಸುವಿರಿ. ಸಂಜೆ ಮನೆಗೆ ಒಬ್ಬ ಮುಖ್ಯ ಅತಿಥಿ ಬರುವ ಸಾಧ್ಯತೆ ಇದ್ದು, ಶುಭ ಸಮಾಚಾರ ಕೇಳುವಿರಿ. ಎಲ್ಲರನ್ನೂ ಗೌರವಯುತವಾಗಿ ನೋಡಿ.
ವೃಷಭ
ರಾಜಕೀಯದಲ್ಲಿ ತಮ್ಮವರಿಂದಲೇ ತೋರಿ ಬರುವ ವಿರೋಧಗಳನ್ನು ಜಾಣ್ಮೆಯಿಂದ ನಿವಾರಿಸಿಕೊಳ್ಳುವ ತಂತ್ರಗಾರಿಕೆಯನ್ನು ಅಳವಡಿಸಿಕೊಳ್ಳಿರಿ. ಇಂದು ರಿಯಲ್ ಎಸ್ಟೇಟ್ ವ್ಯವಹಾರಗಳಿಂದ ಅಧಿಕ ಲಾಭವನ್ನು ಹೊಂದುವಿರಿ.
ಮಿಥುನ
ವಿದ್ಯಾರ್ಥಿಗಳು ಸರಾಗವಾಗಿ ತಮ್ಮ ಅಭ್ಯಾಸವನ್ನು ಮುಂದುವರಿಸುವುದರಿಂದ ಜಯವನ್ನು ಕಾಣುವರು. ನಿಮಗೆ ವಹಿಸಿದ ಹಣಕಾಸಿನ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸುವಲ್ಲಿ ಯಶಸ್ವಿಯಾಗುವಿರಿ.
ಕರ್ಕಾಟಕ
ಅನಾವಶ್ಯಕ ಪ್ರಯಾಣ ನಾನಾ ರೀತಿಯ ಅನಾವಶ್ಯಕ ಖರ್ಚು-ವೆಚ್ಚ ಹೆಚ್ಚುಮಾಡಲಿದ್ದು, ಆರ್ಥಿಕ ಬಿಕ್ಕಟ್ಟಿನ ಕಡೆಗೆ ಕಂಡೊಯ್ಯುವಂತಾಗಲಿದೆ. ಯಾವುದಕ್ಕೂ ಆತುರ ಪಡದೆ ಸ್ಥಿತಪ್ರಜ್ಞರಾಗಿ ಕಾರ್ಯ ನಿರ್ವಹಿಸಿ.
ಸಿಂಹ
ವಸ್ತುಗಳ ರಫ್ತು ವ್ಯವಹಾರ ಮಾಡುವವರಿಗೆ ಕಾರ್ಯದಲ್ಲಿ ತಾಪತ್ರಯಗಳು ಕಾಣಿಸಿಕೊಳ್ಳಲಿದೆ. ನಿಮ್ಮ ಹಲವು ದಿನಗಳ ಕನಸು ಸ್ನೇಹಿತರ ಸಹಾಯದಿಂದ ನೆರವೇರುವುದು. ಶತ್ರು ಬಾಧೆ ನಿವಾರಣೆ ಆಗಲಿದೆ.
ಕನ್ಯಾ
ಸಾಮಾಜಿಕ ಬದುಕಿನಲ್ಲಿ ಗೌರವಯುತವಾಗಿ ವರ್ತಿಸುವುದನ್ನು ಮರೆಯದಿರಿ. ಸಂಗೀತಗಾರರಿಗೆ ಮತ್ತು ಕ್ರೀಡಾಪಟುಗಳಿಗೆ ಸಾಧನೆಗೆ ಉತ್ತಮ ಅವಕಾಶ ಸಿಗುವುದು. ಸಾಲದ ಹಣ ಈ ದಿನ ಹಿಂತಿರುಗಿ ಬರುವುದು.
ತುಲಾ
ದಾಂಪತ್ಯದಲ್ಲಿ ಯಾವುದೇ ರೀತಿಯ ಬಿರುಕು ಬರದಂತೆ ನೋಡಿಕೊಳ್ಳಿ. ಧನಾಗಮನದಲ್ಲಿ ವ್ಯತ್ಯಯ, ವಿಳಂಬ ತೋರಿಬರಲಿದೆ. ಸಿದ್ಧ ಉಡುಪು ಮಾರಾಟಗಾರರಿಗೆ ಶುಭದಿನ. ಹಂತ ಹಂತವಾಗಿ ಪ್ರಗತಿ ಪ್ರಾಪ್ತಿಯಾಗುವುದು.
ವೃಶ್ಚಿಕ
ನಿಮ್ಮ ತೀಕ್ಷ್ಣ ಮಾತುಗಳಿಂದ ಇನ್ನೊಬ್ಬರ ಮನಸ್ಸಿಗೆ ನೋವಾಗುವ ಸಂಧರ್ಭ ಬರಲಿದೆ. ಕ್ರಿಯಾತ್ಮಕವಾಗಿ, ಸೃಜನಶೀಲತೆಯಿಂದ ಕಾರ್ಯ ನಿರ್ವಹಿಸಿ ಹೆಸರು ಗಳಿಸುವಿರಿ. ಮನರಂಜನೆಗಿಂತ ಕೆಲಸದ ಬಗ್ಗೆ ಗಮನವಿರಲಿ.
ಧನು
ಇಂದು ಪ್ರಭಾವಿ ವ್ಯಕ್ತಿಗಳೊಂದಿಗೆ ಹೆಚ್ಚಿನ ಸಮಯ ಕಳೆಯಬೇಕಾಗುವುದು. ವೈಯಕ್ತಿಕ ಜೀವನದ ಸಮಸ್ಯೆ ಬಗೆಹರಿದು ಮನಸ್ಸಿಗೆ ನೆಮ್ಮದಿ ಮೂಡಲಿದೆ. ನಿಮ್ಮ ಬಹುಕಾಲಿಕ ಯೋಜನೆಗಳು ಅರ್ಧದಲ್ಲಿ ನಿಲ್ಲುವ ಲಕ್ಷಣಗಳಿದೆ.
ಮಕರ
ಆರೋಗ್ಯದ ವಿಷಯದಲ್ಲಿ ನಿಮ್ಮ ಗೋಚರಕ್ಕೆ ಬಂದ ಸಮಸ್ಯೆಗಳನ್ನು ಗುರುತಿಸಿಕೊಂಡು, ಪರಿಹರಿಸುವ ಬಗೆ ಕಂಡುಹಿಡಿದರೆ ಉತ್ತಮ. ದೂರದ ಸಂಚಾರ ತೋರಿಬಂದರೂ ಮುಂದೂಡಿಕೆ ಅನಿವಾರ್ಯವಾಗುವುದು.
ಕುಂಭ
ಒಂದು ಬಾರಿ ನಿರ್ಧರಿಸಿದ ನಿಲುವಿನಿಂದ ಹಿಂದೆ ಸರಿಯುವ ಯೋಚನೆಯನ್ನು ಮಾಡಬೇಡಿ. ಸ್ವಾಧಿಷ್ಟ ಭೋಜನ ಈ ದಿನ ಆರೋಗ್ಯಕ್ಕೆ ಸ್ವಲ್ಪ ತೊಂದರೆ ತರಬಹುದು. ನಿಮ್ಮ ಕೆಲಸಗಳನ್ನು ನೀವೇ ನಿರ್ವಹಿಸುವಂತಾಗಲಿದೆ.
ಮೀನ
ಅತಿ ಉತ್ಸಾಹದಿಂದ ಜೀವನದಲ್ಲಿ ಹೊಸ ತಿರುವೊಂದನ್ನು ಪಡೆದುಕೊಳ್ಳುವಿರಿ. ವಾಹನ ಚಾಲಕರು ಅಥವಾ ಕಬ್ಬಿಣದ ಕೆಲಸ ಮಾಡುವವರು ಜಾಗ್ರತೆಯಿಂದಿರಿ. ಇಂದಿನಿಂದ ಮತ್ತೊಬ್ಬರ ಅವಲಂಬನೆ ಬೇಡವೆನಿಸುತ್ತದೆ.