ಶನಿವಾರ, 2 ನವೆಂಬರ್ 2024
×
ADVERTISEMENT
ಈ ಕ್ಷಣ :
ದಿನ
ವಾರ
ಮಾಸ
ವಾರ್ಷಿಕ
ದಿನ ಭವಿಷ್ಯ: ಈ ರಾಶಿಯ ಉದ್ಯಮಿಗಳಿಗೆ ವಿದೇಶ ವ್ಯವಹಾರಗಳಿಂದ ಹೆಚ್ಚಿನ ಲಾಭ..
Published 2 ಅಕ್ಟೋಬರ್ 2024, 23:30 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ಮಾನಸಿಕ ತೊಂದರೆಗಳು ಎದುರಾಗಬಹುದು, ಆದರೆ, ಯಾವುದೇ ರೀತಿಯ ದೊಡ್ಡ ಸಮಸ್ಯೆ ಉಂಟಾಗುವ ಪರಿಸ್ಥಿತಿ ಕಂಡುಬರುವುದಿಲ್ಲ. ಕೈಯಲ್ಲಿ ಹಣ ಇರುವುದರಿಂದ ಬಾಕಿ ಇರಿಸಿದ ಕೆಲಸಗಳ ಬಗ್ಗೆ ಗಮನಹರಿಸಿ. ‌
ವೃಷಭ
ವಿವಾಹಾಪೇಕ್ಷಿಗಳಿಗೆ ಅನಿರೀಕ್ಷಿತವಾಗಿ ಸಹೋದರನ ಮುಖಾಂತರವಾಗಿ ವೈವಾಹಿಕ ಸಂಬಂಧವೊಂದು ಕೂಡಿ ಬರಲಿದೆ. ಕಾರ್ಖಾನೆಯ ವಿದ್ಯುತ್ ಲೋಪಗಳನ್ನು ಸರಿಪಡಿಸಲು ಅಧಿಕ ವೆಚ್ಚವಾಗುವುದು.
ಮಿಥುನ
ನೂತನ ಅಧಿಕಾರಿಗಳ ಆಗಮನದಿಂದ ಕಚೇರಿಯಲ್ಲಿ ಹೆಚ್ಚಿನ ಕೆಲಸಗಳು ತೋರಿಬರಲಿದೆ. ಟ್ರಾವೆಲ್ ಏಜೆನ್ಸಿಯನ್ನು ನಡೆಸುವವರಿಗೆ ಉತ್ತಮವಾಗಿ ಇರಲಿದೆ. ಮನೆಯ ಅಲಂಕಾರಗಳಿಗೆ ಹೇರಳ ಹಣ ವ್ಯಯಿಸುವಿರಿ.
ಕರ್ಕಾಟಕ
ನಿರ್ದಾಕ್ಷಿಣ್ಯ ಕಾರ್ಯವೈಖರಿಯಿಂದ ಅಧಿಕಾರಿಗಳಿಗೂ ನಿಮಗೂ ಸಂಪರ್ಕ ದೂರಾಗುವಂತಾಗಲಿದೆ. ಸ್ನೇಹಿತರೊಬ್ಬರ ಆರೋಗ್ಯ ವಿಚಾರಿಸಲು ಆಸ್ಪತ್ರೆಗೆ ಹೋಗುವ ಸಂಭವ ಬರಬಹುದು.
ಸಿಂಹ
ವೃತ್ತಿರಂಗದಲ್ಲಿ ಸಂದರ್ಭೋಚಿತವಾಗಿ ವರ್ತಿಸುವುದರಿಂದ ಲಾಭವಾಗಬಹುದು. ಈ ದಿನದ ನಿಮ್ಮ ವರ್ತನೆ ನಾಳೆಯ ದಿನ ಕಾಪಾಡಿಕೊಳ್ಳುವುದು ಕಷ್ಟ . ಹಿರಿಯರ ಆಸ್ತಿ ಸ್ವತ್ತುಗಳು ನಿಮ್ಮ ಪಾಲಿಗೆ ಬರಲಿವೆ.
ಕನ್ಯಾ
ಎಲ್ಲಾ ದಾರಿಗಳೂ ಸುಗಮ ಎನಿಸಿ ಎಲ್ಲಾ ಕಷ್ಟ ನಷ್ಟಗಳೂ ನಿವಾರಣೆ ಯಾಗುವ ಹಂತ ತಲುಪುವುದು. ಈ ದಿನದಲ್ಲಾದ ಹೊಸ ಜನರ ಸಂಪರ್ಕವು ಉತ್ತಮ ಧನಲಾಭ ತರಲಿದೆ. ವ್ಯಾಸಂಗಕ್ಕಾಗಿ ಹಣದ ವ್ಯವಸ್ಥೆ ಆಗುವುದು.
ತುಲಾ
ಗೆಳೆಯರ ಗುಂಪಿನಲ್ಲಿ ಮಿತ್ರತ್ವ ಹಾಗೂ ಶತ್ರುತ್ವ ಹೊಂದಿದವರು ಇರುತ್ತಾರೆಂದು ಮರೆಯದಿರಿ. ಗೃಹ ತಾಪತ್ರಯಗಳಿಂದಲೂ ಮುಕ್ತರಾಗಿ ನಿಶ್ಚಿಂತತೆ ತೋರಿಬರುತ್ತದೆ. ಏಕಾಗ್ರತೆಗೆ ಭಂಗವಾಗಲಿದೆ.
ವೃಶ್ಚಿಕ
ಮಕ್ಕಳ ಜತೆ ಸಂತೋಷದಿಂದ ಸಮಯ ಕಳೆಯಲು ಕೆಲ ನಿರ್ಧಾರ ಕೈಗೊಳ್ಳುವಿರಿ. ಆದಾಯಕ್ಕೆ ತಕ್ಕ ಜೀವನ ರೂಪಿಸಿಕೊಳ್ಳುವಲ್ಲಿ ಸಮರ್ಥರಾಗುವಿರಿ. ಗ್ರಂಥ ಪಾಲಕರ ಹುದ್ದೆ ಸಿಕ್ಕರೆ ಶುಭವಾಗುವುದು.
ಧನು
ಗೃಹದಲ್ಲಿ ಹೊಂದಾಣಿಕೆಯ ಕೊರತೆಯಿಂದ ಸಣ್ಣ ಪುಟ್ಟ ಭಿನ್ನಾಭಿಪ್ರಾಯ ಮೂಡಿಬಂದು ದುಗುಡುತನ ಹೆಚ್ಚಾಗಲಿದೆ. ವ್ಯವಹಾರದಲ್ಲಿ ವಂಚನೆಯ ಸಾಧ್ಯತೆ ಇರುವುದರಿಂದ ಜಾಗರೂಕತೆಯಿಂದ ವ್ಯವಹರಿಸಿ.
ಮಕರ
ಸೋಮಾರಿತನ ಇಲ್ಲದೆ ದುಡಿಯಿರಿ, ಆದರೆ ಸಂಪಾದನೆಯ ಮಾರ್ಗ ದೇವರು ಮೆಚ್ಚುವ ರೀತಿಯಲ್ಲಿ ಇರಲಿ. ಕೆಲಸದಿಂದ ಹಿಂತಿರುಗುವ ಆಲೋಚನೆಗಳು ಸರಿಯಲ್ಲ. ಇಂದು ಕೆಲಸಗಳು ಏರುಪೇರಾಗಲಿದೆ.
ಕುಂಭ
ವೃತ್ತಿರಂಗದಲ್ಲಿ ಸಾಮರ್ಥ್ಯ ಈ ದಿನ ಹೆಚ್ಚೇನು ಪ್ರಯೋಜಕಾರಿಯಾಗುವುದಿಲ್ಲ, ಆದ್ದರಿಂದ ಮನುಷ್ಯ ಪ್ರಯತ್ನದ ಜೊತೆಯಲ್ಲಿ ದೇವಬಲವು ಅಗತ್ಯ ಎನ್ನುವ ಕಾರಣದಿಂದಾಗಿ ದೇವರ ಮೊರೆ ಹೋಗುವುದು ಉತ್ತಮ.
ಮೀನ
ಉದ್ಯಮಿಗಳಿಗೆ ವಿದೇಶ ವ್ಯವಹಾರಗಳಿಂದ ಹೆಚ್ಚಿನ ಲಾಭವು ಪ್ರಾಪ್ತಿ. ಆಹಾರದ ಬಳಕೆಯಲ್ಲಿ ನಿಮ್ಮಲ್ಲಿರುವ ತಪ್ಪು ಕಲ್ಪನೆಗಳನ್ನು ಹೋಗಲಾಡಿಸಿಕೊಳ್ಳುವ ಪ್ರಯತ್ನಿಸಿ. ಸಮಸ್ಯೆಯನ್ನು ಎದುರಿಸುವ ಬಗ್ಗೆ ಯೋಚಿಸಿ.
ADVERTISEMENT
ADVERTISEMENT