ಬುಧವಾರ, 18 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ದಿನ
ವಾರ
ಮಾಸ
ವಾರ್ಷಿಕ
ದಿನ ಭವಿಷ್ಯ: ದ್ವಿಚಕ್ರ ವಾಹನ ಮಾರಾಟಗಾರರಿಗೆ ಲಾಭ
Published 4 ಆಗಸ್ಟ್ 2024, 23:30 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ಯಶಸ್ಸು ಹಿರಿಯರ ಮನಸ್ಸಿಗೆ ನೆಮ್ಮದಿ ಹಾಗೂ ಸಂತೋಷವನ್ನು ತರುತ್ತದೆ. ನಿರೀಕ್ಷಿಸಿದ ಕಾರ್ಯಗಳು ಅವಿಘ್ನವಾಗಿ ನೆರವೇರಿ ನೆಮ್ಮದಿ ಉಂಟಾಗುವುದು. ದ್ವಿಚಕ್ರ ವಾಹನ ಮಾರಾಟಗಾರರಿಗೆ ಲಾಭವಿದೆ.
ವೃಷಭ
ವೃತ್ತಿಗಿಂತ ಪ್ರವೃತ್ತಿಯಲ್ಲಿ ಆಸಕ್ತಿ ಹೆಚ್ಚಲಿದೆ. ಅದರಲ್ಲಿ ಹೆಚ್ಚಿನ ಲಾಭವಿದೆ. ಬೆಂಕಿಯಿಂದ ಅನಾಹುತ ಸಂಭವಿಸಬಹುದು, ಜಾಗ್ರತರಾಗಿರಿ. ಸಾಮಾಜಿಕ ವಿಷಯಗಳನ್ನು ಸೂಕ್ಷ್ಮವಾಗಿ ಅವಲೋಕಿಸಿ.
ಮಿಥುನ
ನಿರುದ್ಯೋಗಿಗಳ ಅಲೆದಾಟ ತಪ್ಪಿ ಹೊಸ ಕೆಲಸ ಪ್ರಾರಂಭ ಮಾಡುವ ಅವಕಾಶ. ಸತ್ಕಾರ್ಯಗಳಲ್ಲಿ ಬಂಧುಗಳ ಸಕ್ರಿಯ ಪಾತ್ರವಿದ್ದು ಸಹಕರಿಸುವರು. ಕೋರ್ಟು ವ್ಯವಹಾರಗಳ ಓಡಾಟ ತಪ್ಪಲಿದೆ.
ಕರ್ಕಾಟಕ
ಆದಾಯದಲ್ಲಿ ಸಣ್ಣ ಹೊಡೆತ ಎದುರಿಸುವಂತಾಗಬಹುದು. ಅದರ ಕಾರಣವನ್ನು ಹುಡುಕಿ ಪಾಠದ ರೀತಿಯಲ್ಲಿ ತೆಗೆದುಕೊಳ್ಳುವುದು ಉತ್ತಮ. ವಾಹನ ರಿಪೇರಿಗಾಗಿ ಖರ್ಚು ಮಾಡಬೇಕಾಗುವುದು.
ಸಿಂಹ
ಮನೆತನದ ವೃತ್ತಿಯನ್ನೇ ಮುಂದುವರಿಸಿಕೊಂಡು ಹೋಗುತ್ತಿರುವವರಿಗೆ ಹಿರಿಯರಿಂದ ಪಡೆದ ಸಲಹೆಯು ಹೊಸ ಬುನಾದಿಯಾಗಲಿದೆ.  ಹವ್ಯಾಸಕ್ಕೆ ಬಿಡುವು ಮಾಡಿಕೊಳ್ಳುವಿರಿ.
ಕನ್ಯಾ
ರಿಯಲ್ ಎಸ್ಟೇಟ್ ವ್ಯವಹಾರ ನಡೆಸುವ ವ್ಯಕ್ತಿಗಳಿಗೆ ಕಲ್ಪನೆಗಿಂತ ಅಧಿಕ ಕಮಿಷನ್‌ ದೊರೆಯಲಿದೆ. ಹೊಸ ಮನೆಯ ನಿರ್ಮಾಣ ಕಾರ್ಯಗಳು ಚುರುಕುಗತಿಯಲ್ಲಿ ಸಾಗುವುದು. ಮಕ್ಕಳ ವಿದ್ಯಾಭ್ಯಾಸದಲ್ಲಿ ಪ್ರಗತಿ ಕಂಡುಬರಲಿದೆ.
ತುಲಾ
ವಿದ್ಯಾರ್ಥಿಗಳಿಗೆ  ನಿರ್ಮಿಸಿಕೊಂಡ ಅನುಕೂಲಕರ ವಾತಾವರಣವು ವಿದ್ಯಾಭ್ಯಾಸದಲ್ಲಿ ಮುನ್ನಡೆ ತಂದುಕೊಡಲಿದೆ. ವೈದ್ಯರಿಗೆ ವೃತ್ತಿಯಲ್ಲಿ ಸವಾಲೆನಿಸುವ ವಿಷಯಗಳಲ್ಲಿ ಯಶಸ್ಸು ಕಂಡುಬರಲಿದೆ.
ವೃಶ್ಚಿಕ
ಸಣ್ಣ ಪುಟ್ಟ ವಿಚಾರವಾಗಿ ಅಥವಾ ಇತರರ ಮಾತುಗಳಿಗೆ ಕಿವಿ ಕೊಟ್ಟು ಅತ್ತೆ ಸೊಸೆಯ ಸಂಬಂಧದಲ್ಲಿ ಭಿನ್ನಾಭಿಪ್ರಾಯ ಮೂಡಲಿದೆ. ವೈಯಕ್ತಿಕ ಕೆಲಸಗಳಿಗೆ ನೀವಂದುಕೊಂಡ ಯಾವುದೇ ಅಡಚಣೆ ಇರುವುದಿಲ್ಲ.
ಧನು
ಕೆಲಸ ಕಾರ್ಯಗಳ ಬಗ್ಗೆ ನಿಗಾ ಕೊಡುವಂತೆ ಅಧಿಕಾರಿಗಳಿಂದ ತೀಕ್ಷ್ಮವಾದ ಸಂದೇಶ ಬರಲಿದೆ. ಧಾನ್ಯಗಳ ಮಾರಾಟಗಾರರಿಗೆ ಉತ್ತಮ ಲಾಭ. ಮನಸ್ಸಿನ ಭಾವನೆಗಳನ್ನು ಹೊರ ಹಾಕುವಂತಾಗಲಿದೆ.
ಮಕರ
ಜವಾಬ್ದಾರಿಯುಕ್ತ ನಡೆ, ದಿಟ್ಟತನದ ಜೊತೆಗೆ ಸ್ವಲ್ಪ ತಂತ್ರಗಾರಿಕೆ ತೋರಿದರೆ ಅಧಿಕಾರಿಗಳ ಗಮನ ಸೆಳೆಯುವುದು ಕಷ್ಟ ಆಗುವುದಿಲ್ಲ. ದೇವರ ಸೇವೆಯಿಂದ ಕೌಟುಂಬಿಕ ಸಮಸ್ಯೆಗಳು ದೂರವಾಗಲಿವೆ.
ಕುಂಭ
ಸ್ವಶಕ್ತಿಯಿಂದ ಜೀವನದಲ್ಲಿ ಮುಂಬರುವ ದಾರಿ ಆರಿಸಿಕೊಳ್ಳಿ. ಪಾರಮಾರ್ಥಿಕ ವಿಷಯಗಳತ್ತ ಮನಸ್ಸು ಹರಿಯುವುದು. ಮಿತ್ರರಿಂದ ಸಹಕಾರ ಒದಗಿ ಬರಲಿದೆ. ಆರೋಗ್ಯದ ಬಗ್ಗೆ ಗಮನ ಹರಿಸಬೇಕಾದೀತು.
ಮೀನ
ಪಿತ್ರಾರ್ಜಿತ ಆಸ್ತಿಗಳ ವಿಚಾರದಲ್ಲಿ ಸಹೋದರರಲ್ಲಿ ಭಿನ್ನಾಭಿಪ್ರಾಯ ಮೂಡಿಬರಲಿದೆ. ಧ್ಯಾನ ಮತ್ತು ಯೋಗದತ್ತ  ಗಮನ ಹರಿಸುವಿರಿ. ವೈಯಕ್ತಿಕ ಆಸೆ ಆಕಾಂಕ್ಷೆಗಳು ಪೂರ್ಣಗೊಳ್ಳುವ ಸಂಭವವಿದೆ.
ADVERTISEMENT
ADVERTISEMENT