ಬುಧವಾರ, 11 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ದಿನ
ವಾರ
ಮಾಸ
ವಾರ್ಷಿಕ
ದಿನ ಭವಿಷ್ಯ: ಅನಿರೀಕ್ಷಿತವಾಗಿ ಹಳೆಯ ಗೆಳೆಯರ ಭೇಟಿ ಸಾಧ್ಯತೆ
Published 9 ಆಗಸ್ಟ್ 2024, 23:30 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ಬೇರೆ ಯಾರಿಗೂ ನಿಮ್ಮ ಯೋಜನೆಯ ಸುಳಿವು ಸಿಗದಂತೆ ಗೌಪ್ಯತೆಯನ್ನು ಕಾಪಾಡಿ. ದೇಹಕ್ಕೆ ಅತಿಯಾದ ಶ್ರಮವಾದರೂ ಇಷ್ಟ ಪ್ರಾಪ್ತಿಗಾಗಿ ಕಾರ್ಯವನ್ನು ಸಾಧಿಸಿದ ಸಂತೋಷ ಇರುವುದು. ಶುಭ ಸುದ್ದಿ ಕೇಳಿ ಸಂತೋಷವಾಗುವುದು.
ವೃಷಭ
ಜೀವನ ರೂಪಿಸಿಕೊಳ್ಳಲು ನಿರ್ಧರಿಸಿದ ಪ್ರೇಮಿಗಳಿಗೆ ತಮ್ಮ ಸಹೋದರರಿಂದ ಅಥವಾ ಕುಟುಂಬ ವರ್ಗದವರಿಂದ ಸ್ಪಂದನೆ ಸಿಗುವ ಅವಕಾಶಗಳಿವೆ. ರಫ್ತು ವ್ಯಾಪಾರದಲ್ಲಿ ಹೆಚ್ಚಿನ ಅಭಿವೃದ್ಧಿ ಹೊಂದುವಿರಿ.
ಮಿಥುನ
ಯೋಜನೆಗಳನ್ನು ಕಾರ್ಯಗತಗೊಳಿಸಲು ಸಿಬ್ಬಂದಿ ವರ್ಗದವರು ಸಹಕರಿಸಲಿದ್ದಾರೆ. ನವವಿವಾಹಿತರಿಗೆ ಸಂತಾನದ ವಿಚಾರದಲ್ಲಿ ಶುಭ ಸೂಚನೆ ಕಾಣಲಿದೆ. ಅನಿರೀಕ್ಷಿತವಾಗಿ ಹಳೆಯ ಗೆಳೆಯರ ಭೇಟಿ ಸಾಧ್ಯತೆ.
ಕರ್ಕಾಟಕ
ಧೈರ್ಯದಿಂದ ದೊಡ್ಡ ಯೋಜನೆ ಕೈಗೊಳ್ಳಬಹುದು, ಆದರೆ ಹಣದ ವಿಚಾರದಲ್ಲಿ ಎಚ್ಚರ ವಹಿಸಿ. ಬಹಳ ದಿನಗಳ ನಂತರ ಒಂದು ದೃಢವಾದ ನಿರ್ಣಯವನ್ನು ಕೈಗೊಂಡಿರುವ ನಿಮಗೆ ಶುಭವಾಗುವುದು.
ಸಿಂಹ
ಯೋಜನೆಗಳು ಸರಿಯಾದ ಹಾದಿಯಲ್ಲಿ ಸಾಗುತ್ತಿರುವುದರಿಂದ ಸಮಾಧಾನ ಇರಲಿದೆ. ಕೃಷಿ ಹಾಗೂ ಹೈನು ವ್ಯಾಪಾರಗಳಿಂದ ಅಧಿಕ ಲಾಭವಾಗುವುದು. ಆಭರಣಗಳ ಖರೀದಿಯಿಂದ ಸಂತೋಷವಾಗುವುದು.
ಕನ್ಯಾ
ನಿಮ್ಮ ಆಲೋಚನೆಯಲ್ಲಿ, ಸಹೋದ್ಯೋಗಿಗಳ ಯಾವುದೇ ತರಹದ ಒತ್ತಡಕ್ಕೆ ಮಣಿಯದೆ ಕೆಲಸದಲ್ಲಿ ಮುನ್ನುಗ್ಗಿ. ಜೀವನದಲ್ಲಿ ನಾಲ್ಕಾರು ದೋಣಿಯ ಪ್ರಯಾಣ ಬೇಡವೆನಿಸಲಿದೆ. ಶಸ್ತ್ರವೈದ್ಯ ವೃತ್ತಿಯವರಿಗೆ ಸೌಲಭ್ಯಗಳು ಹೆಚ್ಚಲಿದೆ.
ತುಲಾ
ನಿಮ್ಮ ನಿರ್ಧಾರ ಸರಿಯಾದುದೆಂದು ನಿಮಗೆ ಮನವರಿಕೆಯಾಗುವುದು. ಮೀನುಗಾರರು ಅಥವಾ ಸಮುದ್ರ ಪ್ರಯಾಣ ಮಾಡುವವರು ಜಾಗ್ರತರಾಗಿರಿ. ಮಕ್ಕಳ ಓದಿನ ವಿಷಯವಾಗಿ ಹೆಚ್ಚು ಗಮನವಹಿಸುವಿರಿ.
ವೃಶ್ಚಿಕ
ಹಿರಿಯರಿಂದ ತರ್ಜಿಸಿಕೊಂಡ ಸಲುವಾಗಿ ಮನೆಯಲ್ಲಿ ಯಾರ ನೆರವೂ ಇಲ್ಲದೆ ಎಲ್ಲಾ ಕಾರ್ಯಗಳನ್ನು ಸ್ವಯಂ ನೀವೇ ನಿರ್ವಹಿಸುವಿರಿ. ಯಾರಲ್ಲಿಯೂ ಅದರಲ್ಲೂ ಮುಖ್ಯವಾಗಿ ಬಂಧುಗಳಲ್ಲಿ ಆರ್ಥಿಕ ಸಹಾಯ ಕೇಳಬೇಡಿ.
ಧನು
ಪ್ರಯತ್ನಗಳಿಗೆ ವ್ಯಕ್ತಿಯೊಬ್ಬರ ಬೆಂಬಲ ದೊರೆತು ಯಶಸ್ವಿಯಾಗಲಿದೆ. ಎಲ್ಲಾ ವಿಚಾರದಲ್ಲೂ ಸಾವಧಾನವಾಗಿ ಮುಂದುವರಿಯುವುದು ಉತ್ತಮ. ವೃತ್ತಿ ಮತ್ತು ಪ್ರವೃತ್ತಿಗಳಲ್ಲಿ ಸಮತೋಲನ ಕಾಯ್ದುಕೊಳ್ಳಿರಿ.
ಮಕರ
ದೈನಂದಿನ ಖರ್ಚು-ವೆಚ್ಚಗಳಿಗಾಗಿ ಹಾಗೂ ಜೀವನೋಪಾಯಕ್ಕೆ ಪರ್ಯಾಯ ಮಾರ್ಗವನ್ನು ಕಂಡುಕೊಳ್ಳುವಿರಿ. ಹಣಕಾಸಿನಲ್ಲಿ ದಾಕ್ಷಿಣ್ಯದಿಂದ ನಷ್ಟ ಸಂಭವಿಸಬಹುದು. ಆದರೆ ಇದೆಲ್ಲವು ಕ್ಷಣಿಕವಾದ ವಿಚಾರ.
ಕುಂಭ
ವೈಯಕ್ತಿಕ ವಿಚಾರಕ್ಕಾಗಿ ದೂರದ ಊರಿಗೆ ಪ್ರಯಾಣಿಸುವ ಅವಕಾಶ ಒದಗಿ ಬರಬಹುದು. ಯಂತ್ರಗಳನ್ನು ಬಳಸುವಾಗ ತೊಂದರೆಯಾಗುವ ಸಾಧ್ಯತೆ. ಸರಕು ಸಾಗಾಣಿಕೆದಾರರಿಗೆ ಹೆಚ್ಚಿನ ಕೆಲಸ ಇರಲಿದೆ.
ಮೀನ
ಗಣ್ಯವ್ಯಕ್ತಿಗಳನ್ನು ನೋಡುವ ಮತ್ತು ಅವರಲ್ಲಿ ಮಾತನಾಡುವ ಅವಕಾಶ ಸಿಗುವುದು. ಪತ್ರಿಕೋದ್ಯಮಿಗಳಿಗೆ ಕ್ರಿಯಾತ್ಮಕ ಬರವಣಿಗೆಯಿಂದ ಏಳಿಗೆ ದೊರಕುವುದು. ಶ್ರಮಕ್ಕೆ ತಕ್ಕ ಪ್ರತಿಫಲ ಸಿಗಲಿದೆ.