ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ದಿನ
ವಾರ
ಮಾಸ
ವಾರ್ಷಿಕ
ದಿನ ಭವಿಷ್ಯ: ಸ್ವಂತವಾಗಿ ಉದ್ಯೋಗ ಮಾಡುವ ಈ ರಾಶಿಯವರು ಪ್ರಗತಿ ಕಾಣಲಿದ್ದೀರಿ
Published 9 ಮಾರ್ಚ್ 2024, 23:15 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ಮನೆಯಲ್ಲಿ ಮಂಗಳಕಾರ್ಯಗಳು ನಡೆಯುವ ಸೂಚನೆ ಕಾಣುತ್ತವೆ. ಸ್ವಂತವಾಗಿ ಉದ್ಯೋಗ ಮಾಡುವವರು ಪ್ರಗತಿ ಕಾಣಲಿದ್ದೀರಿ. ಒಂದು ಶಿಶುವಿನ ಜನನ ಕುಟುಂಬದ ಸರ್ವರ ಸಂತೋಷಕ್ಕೆ ಕಾರಣವಾಗುತ್ತದೆ.
ವೃಷಭ
ಮನೆಯ ನವೀಕರಣಗೊಳಿಸುವ ಕಾರ್ಯಕ್ಕೆ ಕೈ ಹಾಕುವವರು ವಾಸ್ತುಶಾಸ್ತ್ರದ ಬಗ್ಗೆ ಗಮನಕೊಡಿ. ಯಾವುದನ್ನೇ ಆದರೂ ಇಂದು ಷರತ್ತುಗಳ ರೀತಿಯಲ್ಲಿ ವರ್ತಿಸುವಿರಿ. ಮನಸ್ಸು ಉಲ್ಲಾಸದಾಯಕವಾಗಿ ಇರುತ್ತದೆ.
ಮಿಥುನ
ಹೊಸ ಉದ್ಯೋಗಕ್ಕೆ ಸಂಬಂಧಿಸಿದಂತೆ ಯಾವುದೇ ನಿರ್ಧಾರಗಳನ್ನು ಕೈಗೊಳ್ಳುವುದು ಸರಿಯಲ್ಲ. ಈ ದಿನ ನಿಮ್ಮ ಬಾಲ್ಯದ ಕನಸು ನನಸಾಗುವ ದಿನ. ಬಹಳ ದಿನಗಳಿಂದ ನಿರೀಕ್ಷಿಸುತ್ತಿದ್ದ ಹಣ ನಿಮ್ಮ ಕೈ ಸೇರಲಿದೆ.
ಕರ್ಕಾಟಕ
ಮಾತಿನಲ್ಲದೇ ವ್ಯವಹಾರದಲ್ಲಿಯೂ ಚಾಣಾಕ್ಷತನ ತೋರುವುದು ನಿಮ್ಮ ಏಳಿಗೆಗೆ ಕಾರಣವಾಗಲಿದೆ. ವ್ಯಾಪಾರದಲ್ಲಿ ಹಣವನ್ನು ಪಡೆಯಲು ಕಷ್ಟವಾಗಬಹುದು. ಇಂದು ನೀವು ರಾಜಕೀಯದಲ್ಲಿ ಮೇಲ್ದರ್ಜೆಗೇರುವಿರಿ.
ಸಿಂಹ
ಈ ದಿನದ ಕಾರ್ಯಕ್ಕೆ ನಿಮ್ಮ ಆರ್ಥಿಕ ಬಲ ಮತ್ತು ಪ್ರಯತ್ನಬಲ ಎಷ್ಟಿದ್ದರೂ, ಸಹೋದರರ ಅಥವಾ ಸಂಬAಧಿಕರ ಸಹಾಯ ಕೇಳುವುದು ಅನಿವಾರ್ಯವಾಗುವುದು. ಸಾಹಿತಿಗಳಿಗೆ ಹೆಚ್ಚಿನ ಅವಕಾಶಗಳು ಲಭಿಸುವುದು.
ಕನ್ಯಾ
ವಿದೇಶೀ ಗೆಳೆಯನ ಆಗಮನ ಮತ್ತು ಅವನ ಸಹವಾಸದಿಂದ ನಿಮ್ಮ ವ್ಯವಹಾರದಲ್ಲಿ ಉತ್ತಮ ಬದಲಾವಣೆ ಕಾಣುವಿರಿ. ಮಹತ್ವವಾದ ಕೆಲಸದ ಪೂರ್ವತಯಾರಿಗಾಗಿ ದೂರ ಸಂಚಾರದ ಯೋಗವಿದೆ.
ತುಲಾ
ಯಾವುದೇ ರೀತಿಯ ವಾದ ವಿವಾದಗಳು, ಅಸಮಾಧಾನ ನಿಮ್ಮ ಕಾರ್ಯಕ್ಕೆ ಅಡ್ಡಿ ಮಾಡದಂತೆ ಗಮನಹರಿಸಿ. ನಿಮ್ಮ ಸಾಮರ್ಥ್ಯದ ಅರಿವು ನಿಮಗಿರಲಿ. ಯಾವುದೇ ವಿಷಯದಲ್ಲಾದರೂ ನಿಮಗೆ ಜಯ ಇರಲಿದೆ.
ವೃಶ್ಚಿಕ
ದುಡ್ಡಿನ ವಿಷಯದಲ್ಲಿ ಮೋಸ ಹೋಗುವ ಅಥವಾ ಬೇಜವಾಬ್ದಾರಿತನದಿಂದಾಗಿ ಕಳೆದುಕೊಳ್ಳುವ ಸಂಭವವಿದೆ. ಮನೆಯಲ್ಲಿ ಆನಂದದ ವಾತಾವರಣ ಉದಯವಾಗುತ್ತದೆ. ವ್ಯಾಪಾರಿಗಳಿಗೆ ಬಂಡವಾಳ ಹೂಡಿಕೆಯಲ್ಲಿ ಲಾಭ.
ಧನು
ನೀವು ಬೇರೆ ಯಾರಿಗೂ ನಿಮ್ಮ ಯೋಜನೆಯ ಸುಳಿವು ನೀಡಬಾರದು. ಜೀವನದಲ್ಲಿ ಹಣಕ್ಕಿಂತ ಸ್ನೇಹ ಸಂಬಂಧಗಳು ಮುಖ್ಯವೆಂಬುವುದು ತಿಳಿಯುವುದು. ಕುಟುಂಬದಲ್ಲಿ ಅತ್ಯಂತ ಸಂತೋಷದ ವಾತಾವರಣವಿರಲಿದೆ.
ಮಕರ
ತರಕಾರಿ, ಹಣ್ಣು, ಹೂವು ವ್ಯಾಪಾರಿಗಳಿಗೆ ಉದ್ಯೋಗದಲ್ಲಿ ಲಾಭ ಬರುತ್ತದೆ. ಕಲಾವಿದರುಗಳಿಗೆ, ಪತ್ರಕರ್ತರಿಗೆ ಪ್ರಶಂಸೆಯ ಮಾತುಗಳು ಕೇಳಿ ಬರುವವು. ಹೋಟೆಲ್ ಉದ್ದಿಮೆಯವರಿಗೆ ಕ್ಲೇಶ ಕಂಡುಬರಲಿದೆ.
ಕುಂಭ
ಇಂದಿನ ದಿನದ ಪ್ರಾರಂಭದಲ್ಲಿ ಉಂಟಾಗುವ ವಿಫಲತೆ ಬಗ್ಗೆ ನಿರಾಶೆಗೊಳ್ಳಬಾರದು. ಆಹಾರ ಪದಾರ್ಥಗಳ ತಯಾರಕರಿಗೆ, ವ್ಯಾಪಾರಸ್ಥರಿಗೆ ಉತ್ತಮ ಲಾಭ. ಕೇವಲ ಮನರಂಜನೆಗಾಗಿ ದೂರ ಪ್ರಯಾಣ ಸರಿಯಲ್ಲ.
ಮೀನ
ಹಿತಶತ್ರುಗಳು ನಿಮ್ಮ ಹೆಸರನ್ನು ಹಾಳು ಮಾಡುವ ಪ್ರಯತ್ನ ಮಾಡಬಹುದು, ಜಾಗ್ರತರಾಗಿರಿ. ಶತ್ರುಗಳ ಬಲೆಗೆ ಬೀಳದಂತೆ ನೀವು ಎಚ್ಚರ ವಹಿಸಬೇಕು. ನಿರಂತರ ಕೆಲಸ ಕಾರ್ಯಗಳಿಂದ ಹೊರ ಬರಲು ಪ್ರಯತ್ನಿಸುವಿರಿ.