ಶನಿವಾರ, 16 ಆಗಸ್ಟ್ 2025
×
ADVERTISEMENT
ದಿನ
ವಾರ
ಮಾಸ
ವಾರ್ಷಿಕ
ದಿನ ಭವಿಷ್ಯ: ಈ ರಾಶಿಯವರು ಪ್ರಭಾವಿ ವ್ಯಕ್ತಿಗಳನ್ನು ಸಂಧಿಸಬೇಕಾಗಬಹುದು..
Published 15 ಆಗಸ್ಟ್ 2025, 23:30 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ಬದುಕನ್ನು ಒಂದು ವ್ಯವಸ್ಥೆಗೆ ತರಲು ದಿನದ ಅಲ್ಪ ಸಮಯವನ್ನು ಮೀಸಲಿಡಿ.  ಮನಸ್ಸಿಗೆ ಅಪಾರ ಸಂತಸ ದೊರಕಲಿದೆ. ವಾಹನಗಳು ಅಥವಾ ನಿತ್ಯ ಬಳಕೆಯ ಯಂತ್ರೋಪಕರಣಗಳು ರಿಪೇರಿಗೆ ಬರಲಿವೆ. 
ವೃಷಭ
ಗಂಭೀರ ಹಂತದಲ್ಲಿರುವ ವೈಯಕ್ತಿಕ ಹಾಗೂ ಔದ್ಯೋಗಿಕ ಸಂಬಂಧಗಳನ್ನು ಸರಿಗೊಳಿಸುವುದರಲ್ಲಿ ಯಶಸ್ವಿಯಾಗುವಿರಿ. ನಾಲ್ಕು ಜನರ ಮಧ್ಯದಲ್ಲಿ  ನಾಯಕತ್ವ ಪಟ್ಟ ಸಿಗಲಿದೆ.
ಮಿಥುನ
ಹಳೆಯ ತಪ್ಪುಗಳು ಪುನರಾವರ್ತನೆಯಾಗದಂತೆ ಎಚ್ಚರವಹಿಸುವಿರಿ. ವಿದೇಶದಲ್ಲಿ ಉದ್ಯೋಗದ ಅನ್ವೇಷಣೆಗೆ ಒಳ್ಳೆಯ ದಿನ. ಪ್ರಯಾಣ  ಸುಗಮವಾಗಿರುವುದಿಲ್ಲ. ಅನಿವಾರ್ಯವಿದ್ದರಷ್ಟೆ ಪ್ರಯಾಣ ಮಾಡಿ.
ಕರ್ಕಾಟಕ
ವಿದ್ಯಾರ್ಥಿಗಳು ಶಿಕ್ಷಣ ಮುಂದುವರಿಸಲು ತೀರ್ಮಾನಿಸಿ, ಬಂಧುಗಳ ಸಹಾಯ ಸಿಗಲಿದೆ. ತಾಯಿಯ ಆರೋಗ್ಯ ಸುಧಾರಿಸಲಿದೆ. ರಿಯಲ್ ಎಸ್ಟೇಟ್ ವ್ಯವಹಾರಗಳಿಂದ ವರಮಾನವನ್ನು ಹೆಚ್ಚಿಸಿಕೊಳ್ಳುವಿರಿ.
ಸಿಂಹ
ಯೋಜನೆಗಳು ಮೇಲಧಿಕಾರಿಗಳಿಂದ ಪ್ರಶಂಸೆಗೆ ಒಳಗಾಗಲಿವೆ. ವಾಹನ ಚಾಲನೆಯಂಥ ಕಾರ್ಯದಲ್ಲಿ ಯಾವುದೇ ರೀತಿಯ ಆತುರ  ಒಳ್ಳೆಯದಲ್ಲ. ಹಣ್ಣು ಮಾರಾಟಗಾರರಿಗೆ ಲಾಭ ಇರುವುದು.
ಕನ್ಯಾ
ಪ್ರಭಾವಿ ವ್ಯಕ್ತಿಗಳನ್ನು ಸಂಧಿಸಬೇಕಾಗಬಹುದು. ಹೆಚ್ಚಿನ ಮಾಹಿತಿಗಳನ್ನು ಪಡೆಯುವಿರಿ.  ಸ್ಪರ್ಧಾತ್ಮಕ ವಾತಾವರಣವಿರುತ್ತದೆ.   ಕೆಲವು ವಿಷಯಗಳು ಬೇಸರ ಹುಟ್ಟಿಸುವಂತಾಗಲಿದೆ.
ತುಲಾ
ಮನೆಗಾಗಿ ವಿಲಾಸಿ ಸಾಮಗ್ರಿಗಳನ್ನು ಖರೀದಿಸುವುದು ಖರ್ಚಿಗೆ ದಾರಿಯಾಗಲಿದೆ. ದೈವಾನುಗ್ರಹದಿಂದ  ಒಳ್ಳೆಯ ಲಾಭವನ್ನು ಪಡೆಯುವಿರಿ. ದೂರ ದೃಷ್ಟಿ ಇಟ್ಟುಕೊಂಡು ಕಾರ್ಯ ಪ್ರವೃತ್ತರಾಗಿ.
ವೃಶ್ಚಿಕ
ಆದಾಯದಲ್ಲಿ ಸಣ್ಣ ಪುಟ್ಟ ಸಾಲದ ಹಣವನ್ನು ಹಿಂತಿರುಗಿಸುವ ಬಗ್ಗೆ ತೀರ್ಮಾನಿಸಿ. ಮದುವೆಯ ವಿಷಯಗಳು ಪ್ರಸ್ತಾಪಕ್ಕೆ ಬರಲಿವೆ. ಮಕ್ಕಳ ಮತ್ತು ಮನೆಯವರ ಆರೋಗ್ಯ ಕಡೆಗೆ ಕಾಳಜಿ ವಹಿಸಿ.
ಧನು
ಹಿರಿಯರ ಆರೋಗ್ಯ ಸುಧಾರಿಸುವುದರಿಂದ ಸಂತಸವಿರುವುದು.  ಸ್ನೇಹಿತರೊಂದಿಗೆ ಭೂಖರೀದಿಗಾಗಿ ಪ್ರಯತ್ನ ನಡೆಸುವಿರಿ. ಮನೆಯಲ್ಲಿ ಸ್ವಲ್ಪ ಮಟ್ಟಿನ ಹೊಂದಾಣಿಕೆ ಅಗತ್ಯ ಎನಿಸಲಿದೆ.
ಮಕರ
ಉತ್ತಮ ಗುಣಗಳು  ಪರಿಸ್ಥಿತಿಯೊಂದಿಗೆ ಹೊಂದಾಣಿಕೆ ಮಾಡಿಕೊಳ್ಳಲು ಸಹಾಯ ಮಾಡುವುದು. ವಿಷಯವನ್ನು ಮುಂದೂಡುವುದು ಸರಿಯಲ್ಲ. ನಿರ್ಮಾಣ ಕಾರ್ಯದಲ್ಲಿರುವವರಿಗೆ  ಆಶಾಕಿರಣ ದೊರೆಯುತ್ತದೆ.
ಕುಂಭ
ಇಷ್ಟು ದಿನಗಳ ಕಠಿಣ ಪರಿಶ್ರಮದಿಂದ ಬಿಡುಗಡೆ ಬೇಕೆನಿಸಲಿದೆ. ಅರ್ಧಕ್ಕೆ ನಿಂತ ಎಲ್ಲಾ ಕಾರ್ಯಗಳಿಗೆ ಇಂದು ಪುನಃ ಚಾಲನೆ ದೊರೆಯಲಿವೆ. ಸ್ನೇಹಿತರೊಂದಿಗಿನ ಪ್ರವಾಸ ಯೋಜನೆ ಯೋಚನೆಯಾಗಿ ಉಳಿಯುವುದು.
ಮೀನ
ವೃತ್ತಿ ಬದುಕಿನ ಯೋಜನೆಯ ಸುಳಿವು ಯಾರಲ್ಲೂ ಹಂಚಿಕೊಳ್ಳಬೇಡಿ. ನಂಬಿಸಿ ಮೋಸ ಮಾಡುವವರು  ಸುತ್ತಲೂ ಇರುವರು. ವ್ಯವಹಾರದಲ್ಲಿ ಲಾಭನಷ್ಟಗಳನ್ನು ಸುಧಾರಿಸಿಕೊಂಡು ಹೋಗುವ ಮನಸ್ಸು ಬರಲಿದೆ.
ADVERTISEMENT
ADVERTISEMENT