ಶನಿವಾರ, 25 ಅಕ್ಟೋಬರ್ 2025
×
ADVERTISEMENT
ದಿನ
ವಾರ
ಮಾಸ
ವಾರ್ಷಿಕ
ದಿನ ಭವಿಷ್ಯ: ಒಳ್ಳೆಯತನ ದುರುಪಯೋಗವಾಗದಂತೆ ಎಚ್ಚರ ವಹಿಸಿ..
Published 24 ಅಕ್ಟೋಬರ್ 2025, 23:30 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ವಿವಾಹ ವಿಚಾರದ ನಿರ್ಧಾರಗಳೆಲ್ಲವೂ ಅಡ್ಡಗೋಡೆಯ ಮೇಲಿನ ದೀಪದಂತೆ ಇರುವುದು ಅಸಮಾಧಾನವನ್ನು ಉಂಟುಮಾಡುತ್ತದೆ. ಕೆಲವೊಂದು ಕಠಿಣ ನಿರ್ಧಾರಗಳನ್ನು ಕೈಗೊಳ್ಳುವ ಪ್ರಸಂಗ ಬರಬಹುದು.
ವೃಷಭ
ಚಿತ್ರಕಲಾ ಸ್ಪರ್ಧೆಗಳಲ್ಲಿ ಭಾಗವಹಿದ್ದರೆ ಬಹುಮಾನವನ್ನು ನಿರೀಕ್ಷಿಸಬಹುದು. ದಂಪತಿಗಳು ಒಟ್ಟಾಗಿ ದೇವರ ದರ್ಶನ ಅಥವಾ ಹರಕೆ ತೀರಿಸುವಂಥ ಕೆಲಸಗಳನ್ನು ಮಾಡುವ ಯೋಗವಿದೆ. ಅಪೇಕ್ಷಿತ ಫಲ ಈಡೇರುವುದು. 
ಮಿಥುನ
ಸ್ನೇಹಿತರೊಂದಿಗೆ ಭೂಮಿ ಖರೀದಿಗಾಗಿ ನಡೆಸಿದ ಪ್ರಯತ್ನ  ಲಾಭ ತರಲಿದೆ. ಮಹಿಳೆಯರು ದೇಹದಲ್ಲಾಗುತ್ತಿರುವ ಅಸಮರ್ಪಕ ಬದಲಾವಣೆಗಳನ್ನು ಕಡೆಗಣಿಸದೆ ವೈದ್ಯರ ಸಲಹೆಯನ್ನು ಪಡೆದುಕೊಳ್ಳಿ. 
ಕರ್ಕಾಟಕ
ಹಣವು ಕೈಸೇರಿತೆಂದಾದರು ದುಂದುವೆಚ್ಚ ಮಾಡದೆ ಹಣದ ಸದ್ವಿನಿಯೋಗ ಮಾಡಿ. ಮೈಮುರಿದು ಕೆಲಸ ಮಾಡುವ ಬದ್ಧತೆ  ನಿಲ್ಲಿಸಬೇಡಿ. ಅದು ಆರೋಗ್ಯವನ್ನು ಕಾಪಾಡುವುದು. 
ಸಿಂಹ
ಮಕ್ಕಳ ಏಳಿಗೆಯನ್ನು ಕಾಣಬೇಕೆಂದು ಬಯಸುವುದು ಅರಿವಿಗೆ ಬಾರದ ವಿಷಯವಾಗಿ ಉಳಿಯುತ್ತದೆ. ಬೇಸರ ಬೇಡ ಶ್ರೀ ಆಂಜನೇಯನ ದರ್ಶನದಿಂದ  ಅಸಾಧ್ಯ ಕಾರ್ಯಗಳು ನೆರವೇರಲಿವೆ. 
ಕನ್ಯಾ
ವ್ಯವಹಾರದಲ್ಲಿ ಎದುರಾಗುವ  ಲಾಭನಷ್ಟಗಳನ್ನು ಸುಧಾರಿಸಿಕೊಂಡು ಹೋಗುವ ಮನಸ್ಸು ಬರಲಿದೆ. ಕಥೆ ಕವನಗಳ ಬರವಣಿಗೆಯಲ್ಲಿ ಅಥವಾ ಪುಸ್ತಕಗಳ ಅಧ್ಯಯನದಲ್ಲಿ ಸಮಯ ಕಳೆಯುವಿರಿ. 
ತುಲಾ
ಒಳ್ಳೆಯತನ ದುರುಪಯೋಗವಾಗದಂತೆ ಎಚ್ಚರ ವಹಿಸಿ. ಅಸೂಯೆ ಪಡುವ ಸಹೋದ್ಯೋಗಿ ಯಾರೆಂಬುವುದು ತಿಳಿಯುವುದು.   ಕೆಲಸಗಳಿಗೆ ಬೇರೆಯವರ ಅತಿಯಾದ ಅವಲಂಬನೆ ಬೇಡ. ಆತ್ಮಸ್ಥೈರ್ಯ ಹೆಚ್ಚಲಿದೆ. 
ವೃಶ್ಚಿಕ
ಅರ್ಧಕ್ಕೆ ನಿಂತ ಸ್ವಂತ ಕಾರ್ಯಗಳು ಪುನಃ ಚಾಲನೆ ದೊರೆಯಲಿದೆ. ವ್ಯವಹಾರದ ವಿಷಯಗಳಿಂದಾಗಿ ಬಿಡುವಿಲ್ಲದ ಕೆಲಸಗಳು ಎದುರಾಗುವುದು. ತಾಮಸ ಗುಣಗಳನ್ನು ಪ್ರದರ್ಶಿಸಿದರೆ ಘನತೆಗೆ ಧಕ್ಕೆ ಉಂಟಾಗುತ್ತದೆ.  
ಧನು
ಯಾತ್ರಿಕರಿಗೆ ದೇವರ ಕೃಪೆಯಿಂದಾಗಿ ಎಲ್ಲಾ ಒಳ್ಳೆಯ ವ್ಯವಸ್ಥೆ  ಪಡೆಯುವಿರಿ. ವಿದ್ಯಾರ್ಥಿಗಳು ಸಾಮಾಜಿಕ ಕಾರ್ಯ ಎಂಬ ನೆಪ ಮಾಡಿಕೊಂಡು ಪಾಠ ಪ್ರವಚನಗಳ ಮೇಲೆ ಗಮನ ಕಡಿಮೆಯಾದರೆ ಕಷ್ಟ  
ಮಕರ
ಜನರ ನಿಂದನೆಗಳು ಕಿವಿಗೆ ಬಿದ್ದು ವಾಸ್ತವತೆಯ ಬಗ್ಗೆ ಅವರಿಗೆ ಪರಿಚಯಿಸುವ ಹಠ ಮೂಡುತ್ತದೆ. ಸಾಮಾಜಿಕ ಜಾಲತಾಣಗಲ್ಲಿ  ವೀಕ್ಷಿಸಿದ ವ್ಯಕ್ತಿಯಿಂದ ಅನುಕೂಲಗಳಾಗುವ ಸಾಧ್ಯತೆ ಇದೆ. 
ಕುಂಭ
ಧನಲಾಭದಲ್ಲಿ ಒಂದು ರೀತಿಯ ಹೊಸ ಅನುಭವ ಹಾಗೂ ಅದೃಷ್ಟವನ್ನು ಕಾಣುವಿರಿ. ಗುರುವಿನ ಆಶೀರ್ವಾದವನ್ನು ಬೇಡಿ ನಿಮ್ಮ ಕೆಲಸವನ್ನು ಆರಂಭಿಸಿ. ಆದಾಯದಷ್ಟೇ ಖರ್ಚು ಇರಲಿದೆ. 
ಮೀನ
ಸಣ್ಣ-ಪುಟ್ಟ ಅನಾರೋಗ್ಯಕ್ಕೆ ಸ್ವಯಂಔಷಧ ಮಾಡಿಕೊಳ್ಳಬೇಡಿ. ವಸ್ತ್ರವಿನ್ಯಾಸಕರ ಹೊಸ ವಿನ್ಯಾಸಕ್ಕೆ ಬೇಡಿಕೆ ಬರುವುದು. ರಾಸಾಯನಿಕ ವಸ್ತುವಿನಿಂದ ಅಲರ್ಜಿಯಾಗುವ ಸಾಧ್ಯತೆಗಳಿದೆ.  
ADVERTISEMENT
ADVERTISEMENT