ಶುಕ್ರವಾರ, 1 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ದಿನ
ವಾರ
ಮಾಸ
ವಾರ್ಷಿಕ
ದಿನ ಭವಿಷ್ಯ: ಲೇವಾದೇವಿ ವ್ಯವಹಾರದವರಿಗೆ ನಷ್ಟ
Published 24 ಸೆಪ್ಟೆಂಬರ್ 2023, 18:30 IST
ಪ್ರಜಾವಾಣಿ ವಿಶೇಷ
author
ಮೇಷ
ಹೂಡಿಕೆ ಅಥವಾ ಆಸ್ತಿ ಕೊಳ್ಳುವ ವಿಚಾರದಲ್ಲಿ ಮಡದಿಯೊಂದಿಗಿನ ಪ್ರಸ್ತಾಪ ಫಲಕಾರಿಯಾಗುತ್ತದೆ. ಧಾರ್ಮಿಕ ವಿಚಾರಗಳತ್ತ ಮನಸ್ಸು ಹರಿಯುವುದು. ಮನೆಯಲ್ಲಿ ಅತಿಥಿ ಸತ್ಕಾರದಂತಹ ಕಾರ್ಯ ಕೈಗೊಳ್ಳಬಹುದು.
ವೃಷಭ
ವಾಹನದ ಅನಿವಾರ್ಯತೆ ಹೆಚ್ಚಿರುವುದರಿಂದ ನೂತನ ವಾಹನ ಖರೀದಿ ಬಗ್ಗೆ ಗಮನಹರಿಸಿ. ಕಾನೂನು ಕಾಯಿದೆ ವಿಚಾರದಲ್ಲಿ ಹೋರಾಟ ನೆಡೆಸಿದರೆ ಜಯ ನಿಮ್ಮಪಾಲಿಗಿರುವುದು. ಬದುಕಿನಲ್ಲಿ ಸ್ಥಿರತೆ ಭಾವ ಇರುವುದು.
ಮಿಥುನ
ದೇವಿ ಕೃಪಾಕಟಾಕ್ಷಕ್ಕೆ ಪಾತ್ರರಾದ ಕಾರಣದಿಂದ ಬರಬೇಕಿದ್ದ ಹಣದಲ್ಲಿ ಅಸಲು ಮೊತ್ತ ಕೈ ಸೇರುವುದು. ಎಂಜಿನಿಯರಿಂಗ್‌ ವಿದ್ಯಾರ್ಥಿಗಳು ಉದ್ಯೋಗದ ಸಂದರ್ಶನಕ್ಕಾಗಿ ಬೇಕಾದ ಪೂರ್ವ ತಯಾರಿ ಮಾಡಿಕೊಳ್ಳಿರಿ.
ಕರ್ಕಾಟಕ
ವೃತ್ತಿಯಲ್ಲಿ ಸಮಸ್ಯೆ ಎದುರಾಗುವ ಪ್ರಸಂಗ ಬಂದರೂ ಧೈರ್ಯದಿಂದ ಎದುರಿಸಿ. ಲೇವಾದೇವಿ ವ್ಯವಹಾರದವರಿಗೆ ನಷ್ಟ ಸಂಭವಿಸಬಹುದು. ಕ್ರೀಡಾ ಸ್ಪರ್ಧೆಗಳಲ್ಲಿ ಭಾಗವಹಿಸಲು ಆಯ್ಕೆಗೊಳ್ಳುವಿರಿ.
ಸಿಂಹ
ದೂರ ದೃಷ್ಟಿ ಇಟ್ಟುಕೊಂಡು ಈಗಿನ ಪ್ರಪಂಚದ ಓಟಕ್ಕೆ ಸರಿಯಾಗಿ ಕಾರ್ಯ ಪ್ರವೃತ್ತರಾಗುವುದು ಉತ್ತಮ. ಮಹಿಳಾ ಉದ್ಯಮಿಗಳಿಗೆ ರಫ್ತು ಕ್ಷೇತ್ರದಲ್ಲಿ ಹೆಚ್ಚಿನ ಪ್ರೋತ್ಸಾಹ ದೊರೆಯುವುದು. ದೇವರಲ್ಲಿ ಶ್ರದ್ಧೆ ಹೆಚ್ಚುವುದು.
ಕನ್ಯಾ
ಎಲೆಕ್ಟ್ರಾನಿಕ್ ಕ್ಷೇತ್ರದಲ್ಲಿರುವವರಿಗೆ ವ್ಯಾಪಾರ ವ್ಯವಹಾರಗಳಲ್ಲಿ ನಿರೀಕ್ಷೆಗೂ ಮೀರಿದ ಆದಾಯ. ಸೇವಕ ವರ್ಗದವರಿಗೆ ಆದಾಯ ಹೆಚ್ಚಿದಂತೆ ಕೆಲಸದ ಪ್ರಮಾಣ ಹೆಚ್ಚುವುದು. ಸ್ವಂತ ವಿಷಯಗಳಿಗೆ ಮೊದಲ ಆದ್ಯತೆ ನೀಡಿ.
ತುಲಾ
ರಾಜಕಾರಣದಲ್ಲಿ ಹೆಚ್ಚಿನ ಸಮಯ ಕಳೆಯಬೇಕಾದ ಅನಿವಾರ್ಯತೆ ಉಂಟಾಗುವುದು. ವಿದ್ಯುತ್ ಇಲಾಖೆ ಸಿಬ್ಬಂದಿಗೆ ತುರ್ತು ಕೆಲಸಗಳ ನಿರ್ವಹಣೆ ಹೆಚ್ಚಾಗಲಿದೆ. ಅತಿಥಿಗಳ ಆಗಮನ ಸಂತಸವನ್ನು ತಂದೀತು.
ವೃಶ್ಚಿಕ
ಹೋಟೆಲ್ ಉದ್ಯಮದವರಿಗೆ ಮತ್ತು ಟ್ರಾವೆಲಿಂಗ್ ಏಜೆಂಟ್‌ಗಳಿಗೆ ನಿರೀಕ್ಷೆಗೂ ಮೀರಿದ ಆದಾಯ. ವಿವಾಹ ಸಂಬಂಧ ವಿಷಯದಲ್ಲಿ ಮಧ್ಯಸ್ಥಿಕೆ ವಹಿಸುವುದು ಸರಿಯಲ್ಲ. ದಳ್ಳಾಳಿಗಳಿಗೆ ಉತ್ತಮ ಆದಾಯವಿರುತ್ತದೆ.
ಧನು
ಉನ್ನತ ವ್ಯಾಸಾಂಗ ಮಾಡುತ್ತಿರುವವರಿಗೆ ಉದ್ಯೋಗದ ಬಗ್ಗೆ ಆಸಕ್ತಿ ಹೆಚ್ಚುವುದು, ಆದರೆ ವಿದ್ಯಾಭ್ಯಾಸ ನಿಲ್ಲಿಸುವುದು ಸರಿಯಲ್ಲ. ನಿಮಗಿರುವ ದೈವಾನುಗ್ರಹದಿಂದ ಕೆಲಸಗಳೆಲ್ಲ ನಿರಾತಂಕವಾಗಿ ನೆರೆವೇರುವುದು.
ಮಕರ
ಕೈಗಾರಿಕೆ ಹಾಗೂ ವಾಣಿಜ್ಯ ಉದ್ಯಮದ ಸುಧಾರಣೆಗೆ ಸಾಕಷ್ಟು ಅವಕಾಶ ಒದಗಿ ಬರುವುವು. ಸಂಸ್ಥೆಯ ಬೆಳವಣಿಗೆಯ ಜೊತೆಯಲ್ಲಿ ವೈಯುಕ್ತಿಕ ಬೆಳವಣಿಗೆಗೂ ಗಮನ ಕೊಡಿ. ಮುಂದಿನ ವ್ಯಾಸಂಗದ ಬಗ್ಗೆ ತೀರ್ಮಾನಿಸಿ.
ಕುಂಭ
ಬದುಕಿನ ಕವಲುದಾರಿಯಲ್ಲಿರುವ ನಿಮಗೆ ಸರಿಯಾದ ಮಾರ್ಗದರ್ಶನದ ಕೊರತೆ ಇದೆ. ಅದರಲ್ಲಿ ನಿಮಗೆ ಯಶಸ್ಸು ಖಚಿತವೆನಿಸಿದ್ದರೂ ಜಾಗ್ರತೆ ವಹಿಸುವುದು ಮೇಲು. ಉದರ ವ್ಯಾಧಿಯಂತಹ ಸಮಸ್ಯೆ ಎದುರಾಗಬಹುದು.
ಮೀನ
ಮಾತುಗಾರರಿಗೆ, ವಾಗ್ಮಿಗಳಿಗೆ, ಬೋಧಕ ವರ್ಗದವರಿಗೆ, ಸಾಂಸ್ಕೃತಿಕ ಕಲಾವಿದರಿಗೆ ವೃತ್ತಿಯಲ್ಲಿ ಮುಂಬಡ್ತಿ ಅಥವಾ ಸನ್ಮಾನ ದೊರಕಲಿದೆ. ಶ್ರಮಕ್ಕೆ ತಕ್ಕಂತಹ ಪ್ರತಿಫಲ ಸಿಗದಿರುವ ಕಾರಣವಾಗಿ ದುಃಖವಾಗಬಹುದು.