ಕ್ರಿಸ್‌ಮಸ್ ಮುನ್ನಾದಿನವಾದ ಬುಧವಾರ ಆರಂಭವಾದ ವಿಜಯ್ ಹಜಾರೆ ಟ್ರೋಫಿ ಏಕದಿನ ಕ್ರಿಕೆಟ್ ಟೂರ್ನಿಯಲ್ಲಿ ರನ್‌ಗಳ ಹೊಳೆ ಹರಿಯಿತು. ದೇಶಿ ಕ್ರಿಕೆಟ್ ಇತಿಹಾಸದ ಪುಟದಲ್ಲಿ ದಾಖಲೆಗಳು ಸೇರಿದವು. 14ರ ಪೋರ ವೈಭವ್ ಸೂರ್ಯವಂಶಿ, ದಿಗ್ಗಜರಾದ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಅನುಭವಿ ಇಶಾನ್ ಕಿಶನ್ ಸೇರಿದಂತೆ ಹಲವರು ಶತಕ ಹೊಡೆದರು.