ದಿನ ಭವಿಷ್ಯ: ಯೋಜನೆಯನ್ನು ಕಾರ್ಯರೂಪಕ್ಕೆ ತನ್ನಿ
Published 12 ಫೆಬ್ರುವರಿ 2026, 18:30 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ಸಣ್ಣ ಪುಟ್ಟ ವಿಚಾರಗಳನ್ನೂ ಉಪೇಕ್ಷಿಸದೆ ಮನೆಯವರೊಂದಿಗೆ ಮಾತನಾಡುವಿರಿ. ಸಾಧು ಸಂತರ ದರ್ಶನದಿಂದ ಮನಸ್ಸಿಗೆ ಸಮಾಧಾನ ಕಂಡುಬರಲಿದೆ. ಮನೆಯಲ್ಲಿ ಜವಾಬ್ದಾರಿ ಹೆಚ್ಚಲಿದೆ.
12 ಫೆಬ್ರುವರಿ 2026, 18:30 IST
ವೃಷಭ
ಬರಹಗಾರರಿಗೆ ತಮ್ಮ ಬರವಣಿಗೆಯ ಮೇಲೆ ಆಕ್ಷೇಪ ವ್ಯಕ್ತಪಡಿಸುವ ಜನರ ಮಧ್ಯದಲ್ಲಿ ಇರಬೇಕಾದ ಪರಿಸ್ಥಿತಿ ಎದುರಾಗಬಹುದು. ಸರಿ ತಪ್ಪುಗಳ ಬಗ್ಗೆ ತಿಳಿಯುವ ಪ್ರಯತ್ನವನ್ನು ಮಾಡಿ.
12 ಫೆಬ್ರುವರಿ 2026, 18:30 IST
ಮಿಥುನ
ಆದರ್ಶವಾದಿ ಗುಂಪಿನ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವುದರಿಂದ ವ್ಯಕ್ತಿತ್ವದಲ್ಲಿ ಒಳ್ಳೆಯ ಬದಲಾವಣೆಗಳಾಗುವುದು. ಫ್ಯಾಷನ್ ಡಿಸೈನರ್‌ಗಳು ಧನಲಾಭವನ್ನೂ ಪಡೆಯುವರು.
12 ಫೆಬ್ರುವರಿ 2026, 18:30 IST
ಕರ್ಕಾಟಕ
ವೃತ್ತಿಗೆ ಸಂಬಂಧಿಸಿದಂತೆ ಶತ್ರುಬಾಧೆ ಎದುರಾಗಲಿದೆ. ದೈಹಿಕ ಮತ್ತು ಧಾರ್ಮಿಕ ಪ್ರಯತ್ನದಿಂದ ಸುಧಾರಿಸಿಕೊಳ್ಳಬಹುದು. ರಾಜಕೀಯ ಸನ್ನಿವೇಶಗಳು ಅನುಕೂಲವಾಗಿರುವುದು.
12 ಫೆಬ್ರುವರಿ 2026, 18:30 IST
ಸಿಂಹ
ಮಕ್ಕಳ ಅಭಿವೃದ್ಧಿ ಅಥವಾ ಅವರ ಕೆಲಸಗಳ ಬಗ್ಗೆ ನೆರೆಯವರಿಂದ ಪ್ರಶಂಸೆಯ ಮಾತು ಕೇಳಿ ಬರುತ್ತದೆ. ಹೊಸ ವಿದ್ಯುತ್ ಉಪಕರಣಗಳನ್ನು ಅಳವಡಿಸುವಲ್ಲಿ ಅಧಿಕ ಬಂಡವಾಳ ಹೂಡುವಿರಿ.
12 ಫೆಬ್ರುವರಿ 2026, 18:30 IST
ಕನ್ಯಾ
ತಿಂಡಿ-ತಿನಿಸುಗಳ ವ್ಯಾಪಾರದಲ್ಲಿನ ಲಾಭ ಇನ್ನೊಂದು ವ್ಯವಹಾರದ ಅಭಿವೃದ್ಧಿಗೆ ಸಹಕಾರಿ . ಕೆಲಸದ ಒತ್ತಡವನ್ನು ಅಥವಾ ಒಂದು ಸಂಘ ಸಂಸ್ಥೆಯ ಹೊಣೆಗಾರಿಕೆ ನಿಭಾಯಿಸುವಂತಾಗುವುದು.
12 ಫೆಬ್ರುವರಿ 2026, 18:30 IST
ತುಲಾ
ಸ್ವರ್ಣ, ಲೋಹ ಹಾಗೂ ಗೃಹೋಪಕರಣಗಳ ವ್ಯವಹಾರಗಳಲ್ಲಿ ಆದಾಯ ಸಿಗಲಿದೆ. ಮಗಳಿಗೆ ಹೊಸ ಕೆಲಸ ಸಿಕ್ಕಿ ಸಂತೋಷವಾಗುವುದು. ಸಾಮಾಜಿಕ ಕಾರ್ಯಕ್ರಮದಲ್ಲಿ ಭಾಗವಹಿಸುವಿರಿ.
12 ಫೆಬ್ರುವರಿ 2026, 18:30 IST
ವೃಶ್ಚಿಕ
ಶುಭಕಾರ್ಯಗಳಲ್ಲಿ ಹೆಚ್ಚಿನ ಜವಾಬ್ದಾರಿ ಮತ್ತು ಓಡಾಟವಿರುವುದು. ಸಮೀಪವರ್ತಿಗಳ ಸಹಾಯದಿಂದ ಬಾಕಿ ಇದ್ದ ಕೆಲಸಗಳನ್ನು ಪೂರ್ತಿಗೊಳಿಸುವಿರಿ. ಒಂಟಿತನದ ಚಿಂತೆ ಕಾಡಲಿದೆ.
12 ಫೆಬ್ರುವರಿ 2026, 18:30 IST
ಧನು
ಮುಕ್ತ ಮನಸ್ಸಿನ ಮಾತುಕತೆಗಳಿಂದ ಸರಿಪಡಿಸಿಕೊಳ್ಳಬಹುದು. ನವ ದಂಪತಿಗೆ ಹರ್ಷದ ಸಮಾಚಾರ ಕೇಳಿ ಬರುವುದರಿಂದ ನೆಮ್ಮದಿ ಇರುವುದು. ಯೋಜನೆಯನ್ನು ಕಾರ್ಯರೂಪಕ್ಕೆ ತನ್ನಿ.
12 ಫೆಬ್ರುವರಿ 2026, 18:30 IST
ಮಕರ
ಮಗಳ ಆರೋಗ್ಯದಲ್ಲಿನ ವ್ಯತ್ಯಾಸಗಳು ದುರ್ಬಲಗೊಳಿಸುವುದು. ಧೈರ್ಯದಿಂದ ಮಾತ್ರವೇ ಆಕೆ ಚೇತರಿಕೊಳ್ಳಲು ಸಾಧ್ಯ ಆದ್ದರಿಂದ ಹೊಸ ಸ್ಫೂರ್ತಿಯಿಂದ ಕಾರ್ಯನಿರ್ವಹಿಸಿ.
12 ಫೆಬ್ರುವರಿ 2026, 18:30 IST
ಕುಂಭ
ಆಡಳಿತಾತ್ಮಕ ವಿಚಾರದಲ್ಲಿ ಭಾರಿ ಬದಲಾವಣೆಗಳ ಅಗತ್ಯಗಳನ್ನು ಸಂಸ್ಥಾಪಕರಿಗೆ ಮನವರಿಕೆ ಮಾಡಿಕೊಡುವಿರಿ. ಹಿರಿಯರಿಂದ ತಿಳಿದುಕೊಂಡಿದ್ದ ಕೆಲ ವಿಷಯಗಳು ಉಪಯೋಗಕ್ಕೆ ಬರಲಿದೆ.
12 ಫೆಬ್ರುವರಿ 2026, 18:30 IST
ಮೀನ
ರಾಜಕೀಯ ರಂಗದಲ್ಲಿ ದಾಳ ಉರುಳಿದ್ದೇ ಗೊತ್ತಾಗದಂತೆ ವಿರುದ್ಧವಾಗಿ ಸಂಚು ನಡೆಯಲಿದೆ. ಅನಿರೀಕ್ಷಿತವಾಗಿ ರಾಜಕೀಯದಲ್ಲಿ ಸ್ಥಾನ ದೊರೆತು ರಾಜಕೀಯ ರಂಗದ ಉದ್ದ ಅಗಲದ ಅರಿವಾಗುತ್ತದೆ.
12 ಫೆಬ್ರುವರಿ 2026, 18:30 IST