ಭಾನುವಾರ, 24 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ದಿನ
ವಾರ
ಮಾಸ
ವಾರ್ಷಿಕ
ದಿನ ಭವಿಷ್ಯ | ಗುರುವಾರ, 01 ಜೂನ್ 2023
Published 31 ಮೇ 2023, 20:16 IST
ಕೆ.ಎಲ್.ವಿದ್ಯಾಶಂಕರ ಸೋಮಯಾಜಿ
ಮೇಷ
ಗೃಹ ಸಾಮಗ್ರಿ ವಸ್ತುಗಳ ಖರೀದಿಯಿಂದ ಅಧಿಕ ಖರ್ಚು ಬರುವುದು. ತೀರ್ಪುಗಳನ್ನು ನೀಡುವುದು ಅಥವಾ ಇನ್ನೊಬ್ಬರನ್ನು ಪರೀಕ್ಷಿ ಸುವ ಕೆಲಸ ಈ ದಿನ ನಿಮಗೆ ಸರಿಯಲ್ಲ. ಆಫೀಸಿನ ಕೆಲಸ ಕಾರ್ಯ ಹೆಚ್ಚೆನಿಸುವುದು.
ವೃಷಭ
ಇಂದಿನ ನಿಮ್ಮ ನಡವಳಿಕೆ ಸಮಾಜದಲ್ಲಿ ಎಲ್ಲರ ಕೇಂದ್ರ ಬಿಂದುವಾಗಲಿದೆ. ವಕೀಲರು, ನ್ಯಾಯಾಂಗ ಇಲಾಖಾ ಅಧಿಕಾರಿಗಳು ಹೆಚ್ಚಿನ ಪ್ರಗತಿ ಕಾಣುವರು. ಇತರರ ಭಾವನೆಗಳಿಗೆ ಆದ್ಯತೆ ನೀಡುವುದು ಅನಿವಾರ್ಯ.
ಮಿಥುನ
ಹಣಕಾಸಿನ ವಹಿವಾಟು ಉತ್ತಮವಾಗಿದ್ದು ಮಾರಾಟ ಕ್ಷೇತ್ರವನ್ನು ಹೆಚ್ಚಿಸಿಕೊಳ್ಳುವಿರಿ. ಖಾದ್ಯ ತೈಲಗಳ ಮಾರಾಟ ಉತ್ತಮವಾಗಿದ್ದು ಲಾಭಾಂಶ ಹೆಚ್ಚುವುದು. ಧೈರ್ಯ ಸಾಮರ್ಥ್ಯದಿಂದ ಉತ್ತೇಜನ ಪಡೆಯುವಿರಿ.
ಕರ್ಕಾಟಕ
ಹಲವು ಕಾರಣಗಳಿಗೆ ಸ್ನೇಹಿತರು ಮಾರ್ಗದರ್ಶನ, ಬೆಂಬಲ ಹಾಗೂ ಸಹಕಾರವನ್ನು ಅಪೇಕ್ಷಿಸುವಂತಾಗುವುದು. ಖಾದಿ ಉದ್ಯಮದವರಿಗೆ ಸರಕಾರದಿಂದ ಸಹಾಯ ಸೌಲಭ್ಯ ದೊರೆಯಲಿದೆ.
ಸಿಂಹ
ಅಕ್ಕ ಪಕ್ಕದವರಲ್ಲಿ ಅನವಶ್ಯಕ ಸಂಬಂಧವಿರದ ವಿಚಾರಕ್ಕೆ ಸಲಹೆ ಹೇಳಿದರೆ ನಿಷ್ಠುರವಾಗುವುದು ಖಚಿತ. ವ್ಯವಹಾರಗಳ ಬಗ್ಗೆ ಗಮನ ಹರಿಸುವುದು ಸರಿ ಎನಿಸಲಿದೆ. ಷೇರು ವ್ಯಾಪಾರ ಅದೃಷ್ಟದಾಯಕವಾಗಿರುತ್ತದೆ.
ಕನ್ಯಾ
ಸ್ವಯಂ ಸಾಮರ್ಥ್ಯದಿಂದ ಅವಕಾಶಗಳನ್ನು ಪಡೆದುಕೊಳ್ಳುವ ಹಾದಿ ನೋಡಿರಿ. ಜಗದ್ಗುರುವಿನ ಸೇವೆಯಿಂದ ಪುಣ್ಯ ಪ್ರಾಪ್ತಿಯಾಗುವುದರ ಜತೆಗೆ ಶುಭ ದೊರಕುವುದು. ನಾಯಕತ್ವದ ಗುಣಗಳನ್ನು ಪ್ರದರ್ಶಿಸುವುದರಿಂದಲಾಭ.
ತುಲಾ
ಹಲವು ಕಾಲದಿಂದ ನಿಂತು ಹೋಗಿದ್ದ ಕೆಲಸಗಳು ದೈವಾನುಗ್ರಹದಿಂದ ಆರಂಭವಾಯಿತೆಂದು ಸಂತೋಷ ಪಡುವಿರಿ. ಕೆಲಸದತ್ತ ಹೆಚ್ಚಿನ ಗಮನ ಹರಿಸುವಿರಿ. ವಿದ್ಯಾರ್ಥಿಗಳಿಗೆ ಇಂದು ಸಾಧನೆಗೆ ಪೂರಕವಾದ ದಿನವಾಗಿದೆ.
ವೃಶ್ಚಿಕ
ಯೋಜನೆಗಳ ಕುರಿತು ಸ್ಪಷ್ಟ ಮಾಹಿತಿಗಳನ್ನು ಕಲೆಹಾಕುವುದರಿಂದ ಮಾರ್ಗಮಧ್ಯದ ಅಡೆತಡೆಗಳು ನಿವಾರಣೆಯಾಗಲಿವೆ. ಭಾಷಾ ಅಧ್ಯಾಪಕರಿಗೆ ಮತ್ತು ನಾಟಕ ಕಲಾವಿದವರಿಗೆ ಹೆಚ್ಚಿನ ಮನ್ನಣೆ ಸಿಗುವುದು.
ಧನು
ಸೋದರನ ಆಗಮನದಿಂದ ಮನೆಯಲ್ಲಿ ಹೆಚ್ಚಿನ ಸಂಭ್ರಮದ ವಾತಾವರಣ ಇರುವುದು. ನಿಮ್ಮ ಚಾಣಾಕ್ಷತನದಿಂದ ಪ್ರತಿಸ್ಪರ್ಧಿಗಳು ದೂರಾಗುವರು.
ಮಕರ
ಕೋಪದ ಮತ್ತು ದಡ್ಡತನದ ತೀರ್ಮಾನದಿಂದ ಪಶ್ಚಾತಾಪ ಪಡುವಂತಹ ಘಟನೆ ನಡೆಯುವುದು. ಕೃಷಿಕರಿಗೆ ತೋಟದ, ಹೊಲದ ಕೆಲಸಗಳು ಸರಾಗವಾಗಿ ನಡೆಯುವಂತಾಗಲಿದೆ.
ಕುಂಭ
ಮನೆಯ ಪರಿಸ್ಥಿತಿಯು ಸುಧಾರಿಸುವುದು. ಹಣಕಾಸಿನ ಬಗ್ಗೆ ಚಿಂತಿಸುವ ಅಗತ್ಯವಿಲ್ಲ. ಹಿರಿಯರನ್ನು ನೋಡಿಕೊಳ್ಳುವ ಕರ್ತವ್ಯಗಳಿಂದ ತಪ್ಪಿಸಿಕೊಳ್ಳಬೇಡಿ. ನಿರ್ಣಯ ಕೈಗೊಳ್ಳುವ ಸಮಯದಲ್ಲಿ ಸಹನೆಯಿಂದ ಇರಿ.
ಮೀನ
ಎಲ್ಲರೊಂದಿಗೆ ಬೆರೆಯುವ ಹಾಗೂ ಸಾಮಾಜಿಕ ಚಟುವಟಿಕೆಗಳಲ್ಲಿ ಭಾಗಿಯಾಗುವ ಸಂದರ್ಭವೊಂದು ಬರಲಿದೆ. ಹಿರಿಯರ ಮಾತಿನಂತೆ ನಡೆದುಕೊಳ್ಳುವ ನಿರ್ಧಾರ ಶುಭಪ್ರದವಾಗುತ್ತದೆ.
ADVERTISEMENT
ADVERTISEMENT